ವಿಧಾನ ಪರಿಷತ್ ಚುನಾವಣೆ: ಅರ್ಹ ಮತದಾರರಿಗೆ ‘ವಿಶೇಷ ಸಾಂದರ್ಭಿಕ ರಜೆ’ ಘೋಷಣೆ

ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ (Legislative Council) ಅಕ್ಟೋಬರ್ 23 ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ಮತದಾನ (Voting) ಮಾಡಲು ಅರ್ಹ ಮತದಾರರಿಗೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆ (Casual Leave)ಯನ್ನು ಘೋಷಣೆ ಮಾಡಲಾಗಿದೆ.

ಸಂಬಂಧಪಟ್ಟ ಕ್ಷೇತ್ರಗಳ ಅರ್ಹ ಪದವೀಧರ ಹಾಗೂ ಶಿಕ್ಷಕ ಮತದಾರರಿಗೆ ಮಾತ್ರ ಮತ ಚಲಾಯಿಸಲು ಅನುಕೂಲವಾಗುವಂತೆ ಈ ರಜೆ ನೀಡಲಾಗಿದೆ.

ಮತದಾರರು ಸೂಕ್ತ ಹಾಗೂ ಅಧಿಕಾರವುಳ್ಳ ಪ್ರಾಧಿಕಾರಗಳಿಂದ ಪೂರ್ವಾನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

Topics

ಬೆಂಗಳೂರು: ರಾಜ್ಯದಲ್ಲಿ ವಿಜ್ಞಾನ ಆಧಾರಿತ ಪರಿಸರ ಪುನರುಜ್ಜೀವನ ಮತ್ತು ಪರಿಸರ ಸಾಕ್ಷರತೆಯನ್ನು...

Related Articles