ಒಡಿಶಾ (Odisha) ರಾಜ್ಯದ ಬರ್ಗಢ್ ಮತ್ತು ಬಲಾಂಗೀರ್ (Balangeer) ಜಿಲ್ಲೆಗಳ ನಡುವೆ ಹರಡಿಕೊಂಡಿರುವ ಗಂಧಮಾರ್ದನ ಬೆಟ್ಟಗಳು (ಗಂಧಮಾರ್ದನ ಪರ್ವತ) (GandhaMardhana Hills) ಪ್ರಕೃತಿ ಸೌಂದರ್ಯ, ಜೀವವೈವಿಧ್ಯ, ಔಷಧೀಯ ಸಸ್ಯಸಂಪತ್ತು ಹಾಗೂ ಧಾರ್ಮಿಕ ಮಹತ್ವದಿಂದ ಪ್ರಸಿದ್ಧವಾಗಿವೆ. ಹಸಿರಿನಿಂದ ಕಂಗೊಳಿಸುವ ಈ ಪರ್ವತ ಶ್ರೇಣಿಯು ಪೂರ್ವ ಭಾರತದ (East India) ಪ್ರಮುಖ ನೈಸರ್ಗಿಕ ಸಂಪನ್ಮೂಲ ಪ್ರದೇಶಗಳಲ್ಲಿ ಒಂದಾಗಿದೆ.
ಬರ್ಗಢ್ ಜಿಲ್ಲೆಯ ಪೈಕ್ಮಲ್ ಸಮೀಪವಿರುವ ಈ ಐತಿಹಾಸಿಕ ದೇವಾಲಯವು ಭಗವಾನ್ ನೃಸಿಂಹನಿಗೆ ಸಮರ್ಪಿತವಾಗಿದೆ. ಗಂಧಮಾರ್ದನ ಪರ್ವತದ ಉತ್ತರದ ಇಳಿಜಾರಿನಲ್ಲಿರುವ ಈ ಕ್ಷೇತ್ರವು ಪ್ರಮುಖ ಯಾತ್ರಾಸ್ಥಳವಾಗಿದೆ.
1. ಔಷಧೀಯ ಸಸ್ಯಗಳ ಅಮೂಲ್ಯ ಭಂಡಾರ
ಗಂಧಮಾರ್ದನ ಪರ್ವತವು ಔಷಧೀಯ ಸಸ್ಯಗಳ ಸಮೃದ್ಧಿಯಿಂದಾಗಿ ವಿಶೇಷ ಗುರುತನ್ನು ಪಡೆದಿದೆ. ಭಾರತದ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಈ ಪ್ರದೇಶದಲ್ಲಿ 1,055 ಸಸ್ಯ ಪ್ರಭೇದಗಳು ಮತ್ತು ಸುಮಾರು 500 ಪ್ರಾಣಿ ಪ್ರಭೇದಗಳು ದಾಖಲಾಗಿವೆ. ಅಪರೂಪದ ಸಸ್ಯಗಳು, ಜರೀಗಿಡಗಳು, ಶಿಲೀಂಧ್ರಗಳು ಹಾಗೂ ವಿವಿಧ ಪಕ್ಷಿ ಮತ್ತು ವನ್ಯಜೀವಿಗಳು ಇಲ್ಲಿನ ಪರಿಸರ ಸಂಪತ್ತಿನ ಭಾಗವಾಗಿವೆ.
3. ಜೀವವೈವಿಧ್ಯ ಸಂರಕ್ಷಣೆಗೆ ವಿಶೇಷ ಮಾನ್ಯತೆ
ಗಂಧಮಾರ್ದನ ಪರ್ವತ ಪ್ರದೇಶದ ಪರಿಸರ ಮಹತ್ವವನ್ನು ಪರಿಗಣಿಸಿ, ಒಡಿಶಾ ಸರ್ಕಾರವು 2023ರ ಮಾರ್ಚ್ನಲ್ಲಿ ಇದನ್ನು ಜೈವಿಕ ಪರಂಪರೆಯ ತಾಣ (Biodiversity Heritage Site) ಎಂದು ಘೋಷಿಸಿತು. ಸುಮಾರು 18,963.9 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ ಈ ತಾಣವು ಅಪರೂಪದ ಜೀವಸಂಪತ್ತಿನ ಸಂರಕ್ಷಣೆಗೆ ಮಹತ್ವದ್ದಾಗಿದೆ.
ಅರಣ್ಯ ಸಂಪತ್ತಿನ ಸಂರಕ್ಷಣೆ, ಔಷಧೀಯ ಸಸ್ಯಗಳ ರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನವನ್ನು ಉಳಿಸುವುದು ಈ ಪ್ರದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.
ಬಲಾಂಗೀರ್ ಜಿಲ್ಲೆಯಲ್ಲಿರುವ ಈ ಪ್ರಸಿದ್ಧ ಕ್ಷೇತ್ರವು ಶಿವ ಮತ್ತು ವಿಷ್ಣುವಿನ ಆರಾಧನೆಯೊಂದಿಗೆ ಸಂಬಂಧ ಹೊಂದಿದೆ. ಇಲ್ಲಿನ ನೈಸರ್ಗಿಕ ಜಲಪಾತ ಮತ್ತು ಹಸಿರು ಪರಿಸರ ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಗಂಧಮಾರ್ದನ ಬೆಟ್ಟಗಳ ಸುತ್ತಮುತ್ತಲಿನ ಅರಣ್ಯಗಳು, ಜಲಪಾತಗಳು, ಬೆಟ್ಟದ ಹಾದಿಗಳು ಮತ್ತು ದೇವಾಲಯಗಳು ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತವೆ. ವಿಶೇಷವಾಗಿ ಅಕ್ಟೋಬರ್ನಿಂದ ಮಾರ್ಚ್ವರೆಗಿನ ಅವಧಿಯನ್ನು ಹರಿಶಂಕರ ಕ್ಷೇತ್ರಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದು ಒಡಿಶಾ ಪ್ರವಾಸೋದ್ಯಮ ಇಲಾಖೆ ಸೂಚಿಸುತ್ತದೆ.

