ಬೆಂಗಳೂರು: ರಾಜ್ಯದ ಪ್ರಮುಖ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರು ಆಸ್ಪತ್ರೆ, ಸೌತ್ ಎಂಡ್ ಸರ್ಕಲ್ನಲ್ಲಿ(South End Circle) ಅತ್ಯಾಧುನಿಕ ವೈದ್ಯಕೀಯ ಸೇವೆಗಳೊಂದಿಗೆ ಮತ್ತಷ್ಟು ಬಲಿಷ್ಠವಾಗಿ ಸಜ್ಜಾಗಿದೆ. ಆಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗಿದ್ದು, ಆಧುನಿಕ ವೈದ್ಯಕೀಯ ತಂತ್ರಜ್ಞಾನ, ಅತ್ಯಾಧುನಿಕ ಉಪಕರಣಗಳು ಹಾಗೂ ವಿವಿಧ ವಿಭಾಗಗಳ ಪರಿಣಿತ ವೈದ್ಯರ ಸೇವೆಯನ್ನು ಒಂದೇ ಸೂರಿನಡಿ ಒದಗಿಸಲಾಗುತ್ತಿದೆ. ಹೃದಯ ಸಂಬಂಧಿತ ಕಾಯಿಲೆಗಳ ತ್ವರಿತ ಪತ್ತೆ ಮತ್ತು ಚಿಕಿತ್ಸೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, 640 ಸ್ಲೈಸ್ ಕಾರ್ಡಿಯಾಕ್ ಸಿಟಿ ಸ್ಕ್ಯಾನಿಂಗ್ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಹೃದಯಾಘಾತದ ಅಪಾಯ, ಹೃದಯ ರಕ್ತನಾಳಗಳ ಸ್ಥಿತಿ ಹಾಗೂ ರಕ್ತ ಪರಿಚಲನೆಯಲ್ಲಿನ ಸಮಸ್ಯೆಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಈ ವ್ಯವಸ್ಥೆ ನೆರವಾಗಲಿದೆ. ಖ್ಯಾತ ಹೃದ್ರೋಗ ತಜ್ಞ ಹಾಗೂ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರ ಸಲಹೆ ಮತ್ತು ಮಾರ್ಗದರ್ಶನವೂ ಆಸ್ಪತ್ರೆಯ ವೈದ್ಯಕೀಯ ಸೇವೆಗಳಿಗೆ ಮತ್ತಷ್ಟು ಬಲ ನೀಡುತ್ತಿದೆ. ತುರ್ತು ಹೃದಯ ಚಿಕಿತ್ಸೆ ಸೇರಿದಂತೆ ವಿವಿಧ ವಿಶೇಷ ಚಿಕಿತ್ಸಾ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಉದ್ದೇಶದಿಂದ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಬೆನ್ನುಮೂಳೆ ಚಿಕಿತ್ಸೆಗೆ ಅತ್ಯಾಧುನಿಕ ಸೌಲಭ್ಯ ಆಸ್ಪತ್ರೆಯ ಸ್ಪೈನ್ ಸರ್ಜನ್ ಡಾ. ಅಭಿಷೇಕ್ ಮನ್ನೆಮ್ ಅವರು ಬೆನ್ನುಮೂಳೆ ಸಮಸ್ಯೆಗಳಿಗೆ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳನ್ನು ಒದಗಿಸುತ್ತಿದ್ದಾರೆ. ಬೆನ್ನುನೋವು, ಬೆನ್ನುಮೂಳೆಯ ವಿವಿಧ ಕಾಯಿಲೆಗಳು ಹಾಗೂ ಸಂಕೀರ್ಣ ಬೆನ್ನುಮೂಳೆ ಸಮಸ್ಯೆಗಳಿಗೆ ಆಧುನಿಕ ಶಸ್ತ್ರಚಿಕಿತ್ಸಾ ತಂತ್ರಜ್ಞಾನ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ. ಅಭಿಷೇಕ್ ಮನ್ನೆಮ್ ಅವರು ಸ್ಪೈನ್ ಸರ್ಜರಿಯಲ್ಲಿ ಭಾರತ ಸೇರಿದಂತೆ ಹಾಂಗ್ ಕಾಂಗ್ ಮತ್ತು ಫ್ರಾನ್ಸ್ನಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ. ಜಯನಗರ ಮತ್ತು ಕೆಂಗೇರಿ ಶಾಖೆಗಳಲ್ಲಿಯೂ ಪರಿಣಿತ ವೈದ್ಯರ ತಂಡದೊಂದಿಗೆ ಸಮಗ್ರ ವೈದ್ಯಕೀಯ ಸೇವೆಗಳು ಲಭ್ಯವಿವೆ. ಬೆಂಗಳೂರು ಆಸ್ಪತ್ರೆಯಲ್ಲಿ 24×7 ತುರ್ತು ಸೇವೆ, ಐಸಿಯು, ಕ್ಯಾಥ್ ಲ್ಯಾಬ್, ಕಾರ್ಡಿಯಾಕ್ ಸಿಟಿ ಸ್ಕ್ಯಾನ್, ಎಂಆರ್ಐ, ಶಸ್ತ್ರಚಿಕಿತ್ಸಾ ವಿಭಾಗ ಸೇರಿದಂತೆ ವಿವಿಧ ವಿಶೇಷ ವೈದ್ಯಕೀಯ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಮ್ಮವಾರು ಸಂಘದ ಅಧ್ಯಕ್ಷ ಆರ್. ರಾಜ್ ಗೋಪಾಲ್ ನಾಯ್ಡು ಮಾತನಾಡಿ, ಒಂದು ಕಾಲದಲ್ಲಿ ಅತ್ಯುತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಆಸ್ಪತ್ರೆಯನ್ನು ಮತ್ತೆ ಅದೇ ವೈಭವಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಸಹಭಾಗಿತ್ವಕ್ಕೆ ಮುಂದಾಗಿದ್ದೇವೆ. ಬಡವರು ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಕಮ್ಮ ಸಂಘದ ಸದಸ್ಯರ ಉಪಸ್ಥಿತಿಯನ್ನು ಬೆಂಗಳೂರು ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಗೌರವದಿಂದ ಸ್ವಾಗತಿಸಿದರು. ಆಸ್ಪತ್ರೆಯ ಸೇವೆಗಳು, ಸೌಲಭ್ಯಗಳು ಹಾಗೂ ಆರೋಗ್ಯ ಸೇವೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಯಿತು. ಬೆಂಗಳೂರು ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ. ಕೃಷ್ಣಪ್ರಸಾದ್ ಸುರಪಾನೆನಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಲಹರಿ, ವೈದ್ಯಕೀಯ ಅಧೀಕ್ಷಕ ಹಾಗೂ ಸ್ಪೈನ್ ಸರ್ಜನ್ ಡಾ. ಅಭಿಷೇಕ್ ಮನ್ನೆಮ್, ಕಮ್ಮವಾರು ಸಂಘದ ಅಧ್ಯಕ್ಷ ಆರ್. ರಾಜ್ ಗೋಪಾಲ್ ನಾಯ್ಡು, ಕಮ್ಮವಾರು ಸಂಘದ ಹಾಗು ಕಮ್ಮವಾರಿ ಕ್ರೆಡಿಟ್ ಕೋ ಆಪರ್ಟಿವ್ ಬ್ಯಾಂಕ್ ಪದಾಧಿಕಾರಿಗಳು, ಪರಿಣಿತ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು. ಬೆಂಗಳೂರು ಆಸ್ಪತ್ರೆ – ಅತ್ಯಾಧುನಿಕ ತಂತ್ರಜ್ಞಾನ, ಪರಿಣಿತ ವೈದ್ಯರು ಮತ್ತು ಸಮಗ್ರ ವೈದ್ಯಕೀಯ ಸೇವೆಗಳು ಒಂದೇ ಸೂರಿನಡಿ.
Hot this week
ಕರ್ನಾಟಕ
ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಬಂಡಾಯದ ಧ್ವನಿ
ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ, ವ್ಯಂಗ್ಯ, ವಿಡಂಬನೆ ಹಾಗೂ ಬಂಡಾಯದ ಮನೋಧರ್ಮ...
ಕರ್ನಾಟಕ
ಪದಕ ವಿಜೇತೆ ಶ್ರೀಮತಿ ಪೂವಮ್ಮ ಅವರಿಗೆ ಎಚ್ ಡಿ ಕುಮಾರಸ್ವಾಮಿ ಅವರಿಂದ ಗೌರವ
ಬೆಂಗಳೂರು: ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತೆಯಾದ ಶ್ರೀಮತಿ ಪೂವಮ್ಮ ಅವರನ್ನು...
ಧಾರ್ಮಿಕ
ತರ್ಪಣ ವಿಧಿ ಆಚರಣೆಗೆ ಶಾಸ್ತ್ರೀಯ ಅರಿವು ಅಗತ್ಯ: ವೀರೇಶಾನಂದ ಸರಸ್ವತಿ ಸ್ವಾಮೀಜಿ
ಬೆಂಗಳೂರು: ಪಿತೃಕಾರ್ಯಗಳ ಪ್ರಮುಖ ಅಂಗವಾಗಿರುವ ತರ್ಪಣ ವಿಧಿಯನ್ನು ಕೇವಲ ಸಂಪ್ರದಾಯದ ಆಚರಣೆಯಾಗಿ...
ರಾಷ್ಟ್ರೀಯ ಸುದ್ದಿಗಳು
ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ 8 ಅಭ್ಯರ್ಥಿಗಳ ಘೋಷಣೆ
ಮುಂಬರುವ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಗೆ ಉತ್ತರ ಪ್ರದೇಶದಿಂದ ಬಿಜೆಪಿ (BJP) ಎಂಟು...
ಗ್ರೇಟರ್ ಬೆಂಗಳೂರು
ಇಂಧನ ಬೆಲೆ ಏರಿಕೆ: ಇಂಡಿಗೋ ವಿಮಾನ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ
ಜಾಗತಿಕ ಮಾರುಕಟ್ಟೆಯಲ್ಲಿ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ,...
Topics
ಕರ್ನಾಟಕ
ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಬಂಡಾಯದ ಧ್ವನಿ
ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ, ವ್ಯಂಗ್ಯ, ವಿಡಂಬನೆ ಹಾಗೂ ಬಂಡಾಯದ ಮನೋಧರ್ಮ...
ಕರ್ನಾಟಕ
ಪದಕ ವಿಜೇತೆ ಶ್ರೀಮತಿ ಪೂವಮ್ಮ ಅವರಿಗೆ ಎಚ್ ಡಿ ಕುಮಾರಸ್ವಾಮಿ ಅವರಿಂದ ಗೌರವ
ಬೆಂಗಳೂರು: ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತೆಯಾದ ಶ್ರೀಮತಿ ಪೂವಮ್ಮ ಅವರನ್ನು...
ಧಾರ್ಮಿಕ
ತರ್ಪಣ ವಿಧಿ ಆಚರಣೆಗೆ ಶಾಸ್ತ್ರೀಯ ಅರಿವು ಅಗತ್ಯ: ವೀರೇಶಾನಂದ ಸರಸ್ವತಿ ಸ್ವಾಮೀಜಿ
ಬೆಂಗಳೂರು: ಪಿತೃಕಾರ್ಯಗಳ ಪ್ರಮುಖ ಅಂಗವಾಗಿರುವ ತರ್ಪಣ ವಿಧಿಯನ್ನು ಕೇವಲ ಸಂಪ್ರದಾಯದ ಆಚರಣೆಯಾಗಿ...
ರಾಷ್ಟ್ರೀಯ ಸುದ್ದಿಗಳು
ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ 8 ಅಭ್ಯರ್ಥಿಗಳ ಘೋಷಣೆ
ಮುಂಬರುವ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಗೆ ಉತ್ತರ ಪ್ರದೇಶದಿಂದ ಬಿಜೆಪಿ (BJP) ಎಂಟು...
ಗ್ರೇಟರ್ ಬೆಂಗಳೂರು
ಇಂಧನ ಬೆಲೆ ಏರಿಕೆ: ಇಂಡಿಗೋ ವಿಮಾನ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ
ಜಾಗತಿಕ ಮಾರುಕಟ್ಟೆಯಲ್ಲಿ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ,...
ಗ್ರೇಟರ್ ಬೆಂಗಳೂರು
ಮತದಾರರ ಪಟ್ಟಿ ಬದಲಾವಣೆ ವಿರೋಧಿಸಿ ದೆಹಲಿ, ಮುಂಬೈನಲ್ಲಿ ಪ್ರತಿಭಟನೆ
ದೆಹಲಿ(Delhi) ಮತ್ತು ಮುಂಬೈನಲ್ಲಿ(Mumbai) ಸಾವಿರಾರು ಯುವಕರು ಹಾಗೂ ವಿರೋಧ ಪಕ್ಷಗಳ ಬೆಂಬಲಿಗರು...
ಗ್ರೇಟರ್ ಬೆಂಗಳೂರು
ಮಾರುಕಟ್ಟೆ ಮತ್ತು ವ್ಯವಹಾರ ನವೀಕರಣಗಳು
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳ (PSU Banks) ಷೇರುಗಳು...
ಗ್ರೇಟರ್ ಬೆಂಗಳೂರು
ಮಹರ್ಷಿ ವಾಲ್ಮೀಕಿ ಜಯಂತಿ: ಅಕ್ಟೋಬರ್ 26ಕ್ಕೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು: 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ...

