ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ (Parappana Agrahara) ಬೆಂಗಳೂರು ಕೇಂದ್ರ ಕಾರಾಗೃಹದ, (Central Jail) ಅಧೀಕ್ಷಕರು (ಪ್ರಭಾರ) ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ನ್ಯಾಯಾಲಯದ ಆದೇಶ ನಕಲು ಮಾಡಿ ಶಿಕ್ಷಾ ಬಂದಿ ಶಂಕರ್.ಎ ಎಂಬಾತನು ಬಿಡುಗಡೆಯಾಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು, ತನಿಖಾ ಕಾಲದಲ್ಲಿ ಆರೋಪಿ ಶಿಕ್ಷಾ ಬಂದಿ ಶಂಕರ್. ಎ ಈತನು ಚಿಕ್ಕಪೇಟೆ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಗೌ॥ ತ್ವರಿತ ವಿಲೇವಾರಿ ನ್ಯಾಯಾಲಯ-1 ರಲ್ಲಿ ವಿಚಾರಣೆ ಮಾಡಿ ಜೀವಾವಧಿ ಶಿಕ್ಷೆ ಮತ್ತು ₹ 10,000/- ದಂಡ ವಿಧಿಸಿರುತ್ತದೆ.
ಆರೋಪಿ ಉಚ್ಚ ನ್ಯಾಯಾಲಯದಲ್ಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಶಿಕ್ಷೆ ರದ್ದು ಪಡಿಸುವಂತೆ ಮೇಲ್ಮನವಿ ಸಲ್ಲಿಸಿದ್ದರೂ ಸಹ, ಆರೋಪಿತನಿಗೆ ಘನ ವಿಚಾರಣಾ ನ್ಯಾಯಾಲಯವು ನೀಡಿರುವ ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶ ಮಾಡಲಾಗಿರುತ್ತದೆ. ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ಎಸ್, (ಅಂದಿನ ಎಸ್.ಡಿ.ಎ) ಪ್ರಸ್ತುತ ಎಫ್.ಡಿ.ಎ, ನನ್ನು ಶಿಕ್ಷಾ ಬಂದಿಯಾದ ಶಂಕರ್ ಎ ಈತನ ಸರ್ವೋಚ್ಚ ನ್ಯಾಯಾಲಯದ ಕ್ರಿಮಿನಲ್ ಅಪೀಲು, ದಿನಾಂಕ:02/11/2018 ರಂದು ಬಿಡುಗಡೆ ಆದೇಶವಾಗಿರುವ ಹಾಗೇ ಪ್ರತಿಯನ್ನು ನಕಲು ಮಾಡಿ, ದಿನಾಂಕ:13/11/2018 ರಂದು ಶಿಕ್ಷಾ ಬಂದಿ ಶಂಕರ್ ಎ ಈತನನ್ನು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಿರುವುದು ತನಿಖಾ ಕಾಲದಲ್ಲಿ ತಿಳಿದು ಬಂದಿರುತ್ತದೆ. ಶಿಕ್ಷಾ ಬಂದಿಯ ಪತ್ನಿಯನ್ನು ವಿಚಾರಣೆ ಮಾಡಲಾಗಿ, ಅಂದಿನ ಮುಖ್ಯ ಅಧೀಕ್ಷಕರೂ ಸಹ ತನ್ನ ಗಂಡನನ್ನು ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳಿಸಲು ಸಹಕರಿಸಿದ್ದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ತನಿಖೆ ಮುಂದುವರೆದಿರುತ್ತದೆ.
ಪ್ರಕರಣದ ಇಬ್ಬರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಮುಂದುವರೆದ0ತೆ, ಈ ಪ್ರಕರಣದಲ್ಲಿ ಡಿ.ಐ.ಜಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಅಂದಿನ ಮುಖ್ಯ ಅಧೀಕ್ಷಕರು, ಪ್ರಕರಣದ ವಿಚಾರಣಾ ವೇಳೆಯಲ್ಲಿ ತನಿಖೆಗೆ ಸಹಕರಿಸದೆ ಪ್ರಕರಣದ ಮಾಹಿತಿಯನ್ನು ಮರೆಮಾಚಿದ ಕಾರಣಕ್ಕಾಗಿ ದಿನಾಂಕ:04/10/2026 ರಂದು ವಶಕ್ಕೆ ಪಡೆದುಕೊಂಡು, ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಬಂಧನಕ್ಕೆ ಪಡೆದು ವಿಚಾರಣೆ ಕೈಗೊಂಡಿರುತ್ತದೆ. ತನಿಖೆ ಮುಂದುವರೆದಿರುತ್ತದೆ.
ಈ ಕಾರ್ಯಾಚರಣೆಯನ್ನು ಎಲೆಕ್ಟಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ. ನಾರಾಯಣ. ಐ.ಪಿ.ಎಸ್., ರವರ ಮಾರ್ಗದರ್ಶನದಲ್ಲಿ, ಎಲೆಕ್ಟಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸತೀಶ್.ಕೆ.ಎಂ ರವರ ನೇತೃತ್ವದಲ್ಲಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

