ಬೆಂಗಳೂರು: ಶ್ರೀ ಗಣೇಶ್ ನಾಚಿಕೇತು(Shri Ganesh Nachiketu) ಎಂಬುವವರನ್ನು ಸರ್ಕಾರದಿಂದ “ರಾಜ್ಯ ಪಿ.ಆರ್. ಮತ್ತು ಕಮ್ಯುನಿಕೇಶನ್ ಹೆಡ್ (State Head – PR & Communication)” ಆಗಿ ನೇಮಕ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಗಳು ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.
ಈ ಕುರಿತು ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ಸ್ಪಷ್ಟಪಡಿಸುವುದೇನೆಂದರೆ, ಶ್ರೀ ಗಣೇಶ್ ನಾಚಿಕೇತು ಎಂಬುವವರನ್ನು ಸರ್ಕಾರವು ಯಾವುದೇ ರೀತಿಯ ಹುದ್ದೆಗೆ ನೇಮಕ ಮಾಡಿಲ್ಲ. ಹಾಗೂ ಇವರು ಸರ್ಕಾರದಲ್ಲಾಗಲಿ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಹುದ್ದೆಯಲ್ಲಾಗಲಿ ಕಾರ್ಯನಿರ್ವಹಿಸುತ್ತಿಲ್ಲ.
ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಈ ಕುರಿತು ಯಾವುದೇ ರೀತಿಯ ಗೊಂದಲಗಳಿಗೆ ಒಳಗಾಗಬಾರದೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಎಂ.ಎನ್. ಅನುಚೇತ್ ಐ.ಪಿ.ಎಸ್. ಸ್ಪಷ್ಟಪಡಿಸಿದ್ದಾರೆ.

