ವಿಶ್ವ ಬ್ಯಾಂಕ್ ನೆರವಿನ 148 ಎಂಎಲ್‌ಡಿ ಸಾಮರ್ಥ್ಯದ 9 ಎಸ್‌ಟಿಪಿ ಕಾಮಗಾರಿಗಳನ್ನು ಚುರುಕುಗೊಳಿಸಿ: ಬಿಡಬ್ಲೂಎಸ್‌ಎಸ್‌ಬಿ ಅಧ್ಯಕ್ಷೆ ಡಾ. ಎನ್. ಮಂಜುಳ 

ಎಸ್‌ಟಿಪಿ ಹಾಗೂ ಒಳಚರಂಡಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚನೆ
ಬೆಂಗಳೂರು: ವಿಶ್ವ ಬ್ಯಾಂಕ್(Vishwa Bank) ನೆರವಿನಡಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಒಟ್ಟು 148 ಎಂಎಲ್‌ಡಿ(MLD) ಸಾಮರ್ಥ್ಯದ ಒಂಬತ್ತು ತ್ಯಾಜ್ಯನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳ(Dr.N.Manjula) ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾವೇರಿ ಭವನದಲ್ಲಿ ನಡೆದ ವಿಶ್ವ ಬ್ಯಾಂಕ್ ಮತ್ತು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ನೆರವಿನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್‌ಟಿಪಿ ನಿರ್ಮಾಣ, ಒಳಚರಂಡಿ ಜಾಲ, ತ್ಯಾಜ್ಯನೀರು ಸಂಸ್ಕರಣೆ ಮತ್ತು ನೀರು ಸರಬರಾಜು ಕಾಮಗಾರಿಗಳ ಪ್ರಗತಿಯನ್ನು ಯೋಜನೆವಾರು ಪರಿಶೀಲಿಸಿದರು.
ವಿಶ್ವ ಬ್ಯಾಂಕ್ ನೆರವಿನಲ್ಲಿ ನಿರ್ಮಾಣವಾಗುತ್ತಿರುವ ಎಸ್‌ಟಿಪಿಗಳು:
ಇಬ್ಬಲೂರು – 5 ಎಂಎಲ್‌ಡಿ, ಅಬ್ಬಿಗೆರೆ – 5 ಎಂಎಲ್‌ಡಿ, ಯು.ಎಂ. ಕಾವಲ್ – 10 ಎಂಎಲ್‌ಡಿ, ಕೊಗಿಲು – 15 ಎಂಎಲ್‌ಡಿ, ಅಂಜನಾಪುರ – 35 ಎಂಎಲ್‌ಡಿ, ಚನ್ನಸಂದ್ರ – 20 ಎಂಎಲ್‌ಡಿ, ಸೌಲ್‌ಕೆರೆ – 28 ಎಂಎಲ್‌ಡಿ, ಹುಳಿಮಾವು – 15 ಎಂಎಲ್‌ಡಿ, ಚಿಕ್ಕ ಬೇಗೂರು – 15 ಎಂಎಲ್‌ಡಿ
ಒಟ್ಟು ಸಾಮರ್ಥ್ಯ: 148 ಎಂಎಲ್‌ಡಿ:
ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಬ್ಯಾಟರಾಯನಪುರ, ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳಲ್ಲಿ ನಡೆಯುತ್ತಿರುವ ಎಸ್‌ಟಿಪಿ ಹಾಗೂ ಒಳಚರಂಡಿ ಕಾಮಗಾರಿಗಳ ಕುರಿತು ಡಾ. ಎನ್. ಮಂಜುಳ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಎಲ್ಲ ಕಾಮಗಾರಿಗಳಿಗೆ ಸ್ಪಷ್ಟವಾದ ಕಾಲಮಿತಿ ನಿಗದಿಪಡಿಸಿ, ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ಅನುಷ್ಠಾನದ ವೇಳೆ ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದರೊಂದಿಗೆ ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಜೈಕಾ ನೆರವಿನಲ್ಲಿ ಪ್ರಸ್ತಾವಿಸಲಾದ ಕಾವೇರಿ ನೀರು ಸರಬರಾಜು ಯೋಜನೆಯ 6ನೇ ಹಂತಕ್ಕೆ ಅಂತಿಮ ರೂಪ ನೀಡಲಾಗಿದ್ದು, ಸಾಲ ಮಂಜೂರಾತಿಗೆ ಸಂಬಂಧಿಸಿದ ಅಂತಿಮ ಹಂತದ ಮಾತುಕತೆಯನ್ನೂ ಸಭೆಯಲ್ಲಿ ನಡೆಸಲಾಯಿತು.
ಯೋಜನೆಗೆ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ದೊರೆತಿದ್ದು, ಅಗತ್ಯ ಪೂರ್ವಸಿದ್ಧತೆಗಳನ್ನು ಆರಂಭಿಸಲಾಗಿದೆ. ಬೆಂಗಳೂರು ನಗರದ ಕೆಲವು ಭಾಗಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಭವಿಷ್ಯದ ಕುಡಿಯುವ ನೀರಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸುವಂತೆ ಡಾ. ಎನ್. ಮಂಜುಳ ಸೂಚಿಸಿದರು.
ವಿನ್ಯಾಸ ಮತ್ತು ನಿರ್ಮಾಣ ಕಾಮಗಾರಿಗಳು, ತ್ಯಾಜ್ಯನೀರು ಸಂಸ್ಕರಣಾ ಘಟಕಗಳು, ಒಳಚರಂಡಿ ಜಾಲ ಹಾಗೂ ನೀರು ಸರಬರಾಜು ಕಾಮಗಾರಿಗಳ ಪ್ರಗತಿಯನ್ನು ಅಭಿಯಂತರರು ಮತ್ತು ಗುತ್ತಿಗೆದಾರರೊಂದಿಗೆ ಪರಿಶೀಲಿಸಲಾಯಿತು.
ಜೈಕಾ ಯೋಜನೆಯಡಿ ನಡೆಯುತ್ತಿರುವ ಇತರ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಗಳು ಸ್ಥಗಿತಗೊಳ್ಳದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರು ನಿರ್ದೇಶನ ನೀಡಿದರು.
ಸಭೆಯಲ್ಲಿ ನವೀನ ಯೋಜನೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ಅಭಿಯಂತರ ಸುಧೀರ್, ವಿವಿಧ ಯೋಜನಾ ವಿಭಾಗಗಳ ಅಭಿಯಂತರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Hot this week

ಡೈವ್‌ಆಗರ್ ಕಡಲತೀರದಲ್ಲಿ 8 ವಿದ್ಯಾರ್ಥಿಗಳು ಮುಳುಗಿ ಸಾವು; ಪುಣೆಯ ಕೋಚಿಂಗ್ ಅಕಾಡೆಮಿ ಸೀಲ್

ಪುಣೆ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಡೈವ್‌ಆಗರ್ ಕಡಲತೀರದಲ್ಲಿ(Daivagar Beach) ಪ್ರವಾಸಕ್ಕೆ ತೆರಳಿದ್ದ...

ಬಾಕ್ಸ್ ಆಫೀಸ್‌ನಲ್ಲಿ ‘ದೃಶ್ಯಂ 3’ ಅಬ್ಬರ: ₹95 ಕೋಟಿ ಗಡಿ ದಾಟಿದ ಅಜಯ್ ದೇವಗನ್ ಚಿತ್ರ

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್(Actor Ajay Devagan) ಅಭಿನಯದ ಬಹುನಿರೀಕ್ಷಿತ...

ದೆಹಲಿ ಹೋಟೆಲ್‌ನಲ್ಲಿ ನೆಸ್ಲೆ ಇಂಡಿಯಾದ ಡೈರಿ ವೈಟನರ್ ಮಾರಾಟಕ್ಕೆ FSSAI ನಿಷೇಧ

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ,...

ಖಾರಿಫ್ ಬರ ಪರಿಸ್ಥಿತಿ ಅಧ್ಯಯನ: ರಾಜ್ಯಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಖಾರಿಫ್(Kaarif) ಬರದ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲು ಮತ್ತು...

ಶಾಸಕರ ಭವನದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ತಪೋವನ ಅಭಿವೃದ್ಧಿಗೆ ನಿರ್ಧಾರ

ಬೆಂಗಳೂರು: ವಿಧಾನಸೌಧದ(Vidhanasoudha) ಬಳಿ ಶಾಸಕರ ಭವನದ ಮುಂಭಾಗದಲ್ಲಿ ವಾಲ್ಮೀಕಿ ಪ್ರತಿಮೆ(Valmeeki Statue) ಇರುವ...

Topics

ನಯಾರಾ ಎನರ್ಜಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಸ್ಥಳೀಯ ಆರ್ಥಿಕತೆಗೆ ಆತಂಕ

ನಯಾರಾ ಎನರ್ಜಿ(Nayara Energy) ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ₹5 ಹಾಗೂ...

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು:  ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ (KCCDC) ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ...

Related Articles