‘ವಿಶ್ವ ಉರ್ದು ದಿನ’(World Urdu Day) ವೆಂದು (ಕವಿ ಮತ್ತು ತತ್ವಜ್ಞಾನಿ ಅಲ್ಲಮ ಮುಹಮ್ಮದ್ ಇಕ್ಬಾಲ್ ಜನಿಸಿದ ದಿನ) ಆಚರಿಸಲಾಗುವ ನವೆಂಬರ್ 9 ರಂದು ವಿಧಾನಸೌಧದ(Vidhanasoudha) ಮೆಟ್ಟಿಲುಗಳ ಮೇಲೆ ‘ಉರ್ದು ಉತ್ಸವ’ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ಉರ್ದು ಸಂಸ್ಕೃತಿ , ಪುಸ್ತಕ, ಆಹಾರ ಮತ್ತು ವಿವಿಧ ಕಲಾ ಪ್ರಕಾರಗಳನ್ನು ಭವ್ಯ ವೇದಿಕೆಯ ಮೇಲೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ ಸುದ್ಧಿ ಓದಿದಾದಾಗ ತಟ್ಟನೆ ನೆನಪಾದದ್ದು ಬೆಂಗಳೂರು ದೂರದರ್ಶನದ 1994ರ ಉರ್ದು ವಾರ್ತೆ ಪ್ರಸಾರ ಪ್ರಕರಣ.
ಉರ್ದು ವಾರ್ತೆಯನ್ನು ಪ್ರಸಾರ ಮಾಡುವಂತೆ ಉರ್ದು ಭಾಷಿಕರಾಗಲಿ, ಬೇರೆ ಯಾರೂ ಕೇಳಿರಲಿಲ್ಲ. ಆದರೆ, ರಾಜ್ಯ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರನ್ನು ಓಲೈಸಲು ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕನ್ನಡ ಪ್ರಸಾರಾವಧಿಯನ್ನು ಮೊಟಕುಗೊಳಿಸಿ. ಉರ್ದು ವಾರ್ತೆ ಪ್ರಸಾರ ಮಾಡಲು ಪ್ರಾರಂಭಿಸಿತು. ಅಕ್ಷರಶಃ ಬೆಂಗಳೂರು ಬೆಂಕಿಯಲ್ಲಿಹತ್ತಿ ಉರಿಯಿತು. ಆಸ್ತಿ-ಪಾಸ್ತಿಗಳ ಲೂಟಿಯಾದದ್ದರ ಜೊತೆಗೆ 25ಕ್ಕೂ ಹೆಚ್ಚ ಅಮಾಯಕರು ಪ್ರಾಣತೆತ್ತರು. ಉರ್ದು ವಾರ್ತೆ ನಿಲ್ಲಲು ಅಷ್ಟೆಲ್ಲ ಅನಾಹುತ ಆಗಬೇಕಾಯಿತು. ಸ್ವಾರ್ಥಕ್ಕೆ ತುಷ್ಟೀಕರಣ ರಾಜಕಾರಣ ಮಾಡಲು ಹೊರಟಿರುವ ಸಚಿವ ಯು.ಟಿ. ಖಾದರ್ ನಡೆಯನ್ನು ನಾವು ಖಂಡಿಸುತ್ತೇವೆ.
ಉರ್ದು ಹಬ್ಬ ಓಲೈಕೆಯೇ ಹೊರೆತು ಬೆರಿನ್ನೇನು ಇಲ್ಲ. ಕನ್ನಡ ಈ ನಾಡಿನ ಅಧಿಕೃತ ಭಾಷೆ ಅದರ ಹಬ್ಬ ಮಾಡೋದ್ರಲ್ಲಿ ಅರ್ಥ ಇದೆ. ವಿಧಾನಸೌಧದಲ್ಲಿ ಉರ್ದು ಹಬ್ಬಕ್ಕೆ ಅವಕಾಶ ನೀಡಿದರೆ, ಮುಂದಿನ ದಿನಗಳಲ್ಲಿ ತಮಿಳು, ತೆಲುಗು ಅಥವಾ ಹಿಂದಿ ಭಾಷೆಯ ಉತ್ಸವಗಳನ್ನೂ ಅಲ್ಲಿಯೇ ಮಾಡಲು ಬೇಡಿಕೆಗಳುಬಂದು ಗೊಂದಲ ಸೃಷ್ಟಿಯಾಗಬಹುದು ನಮಗೆ ಅಧಿಕಾರವಿದೆ ಏನು ಮಾಡಿದರೂ ನಡೆಯುತ್ತದೆ ಎಂಬ ದುರಹಂಕಾರದ ನಡೆಯನ್ನು ಪ್ರಜಾಪ್ರಭೂತ್ವದಲ್ಲಿ ಒಪ್ಪಲಾಗದು.
ನಾವು ಉರ್ದು ಸೇರಿದಂತೆ ಯಾವುದೇ ಭಾಷೆಯ ವಿರೋಧಿಗಳಲ್ಲ. ಉರ್ದು ಹಬ್ಬ ಮಾಡಲು ಬೆಂಗಳೂರಿನಲ್ಲಿ ಬೇಕಾದಷ್ಟು ಜಾಗಗಳಿವೆ. ನಾಡಿನ ಶಕ್ತಿಸೌಧ ವಿಧಾನಸೌಧವೇ ಬೇಕಾಗಿಲ್ಲ. ‘ವಿಶ್ವ ಕನ್ನಡ ದಿನ’ ಆಚರಿಸಲು ಕೇಂದ್ರ ಸರ್ಕಾರದ ಮೂಲಕ ಯುನೆಸ್ಕೊಗೆ ಒತ್ತಾಯಿಸ ಬೇಕಾದವರು ‘ವಿಶ್ವ ಉರ್ದು ದಿನ’ ಆಚರಿಸಲು ಹೊರಟಿರುವುದು ನಾಚಗೇಡಿನ ಸಂಗತಿ

