ಪುರುಷರ ಹಾಕಿ ಫೈನಲ್‌ಗೆ ಲಗ್ಗೆ, ಪದಕ ಖಚಿತ: ಪಾಕಿಸ್ತಾನದ ತೀವ್ರ ಹೋರಾಟದ ನಡುವೆಯೂ ಭಾರತ ಗೆಲುವು;

ಜಪಾನ್‌ನ (Japan) ಕಕಮಿಗಹಾರಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ (Asian Games) 2026ರ ಪುರುಷರ ಹಾಕಿ  (Men’s Hockey) ಸೆಮಿಫೈನಲ್‌ನಲ್ಲಿ (Semi Final) ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-3 ಗೋಲುಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಭಾರತ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದೆ.

ಭಾರತ ಆರಂಭದಲ್ಲೇ ಪ್ರಾಬಲ್ಯ ಸಾಧಿಸಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ 5ನೇ ಮತ್ತು 13ನೇ ನಿಮಿಷಗಳಲ್ಲಿ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸಿ ಭಾರತಕ್ಕೆ 2-0 ಮುನ್ನಡೆ ನೀಡಿದರು. 23ನೇ ನಿಮಿಷದಲ್ಲಿ ಸುಖಜೀತ್ ಸಿಂಗ್ ಫೀಲ್ಡ್ ಗೋಲು ದಾಖಲಿಸಿ ಭಾರತದ ಮುನ್ನಡೆಯನ್ನು 3-0ಕ್ಕೆ ವಿಸ್ತರಿಸಿದರು.

ಆದರೆ ದ್ವಿತೀಯಾರ್ಧದಲ್ಲಿ ಪಾಕಿಸ್ತಾನ ಭರ್ಜರಿ ಪುಟಿದೇಳಿತು. ಅಬು ಮಹಮೂದ್, ಹನ್ನಾನ್ ಶಾಹಿದ್ ಮತ್ತು ವಹೀದ್ ಅಶ್ರಫ್ ರಾಣಾ ಗೋಲುಗಳ ಮೂಲಕ ಪಾಕಿಸ್ತಾನ 3-3ರಿಂದ ಪಂದ್ಯವನ್ನು ಸಮಬಲಕ್ಕೆ ತಂದಿತು.

ಪಂದ್ಯ ಮುಗಿಯಲು ಕೇವಲ 49.2 ಸೆಕೆಂಡ್‌ಗಳು ಬಾಕಿಯಿದ್ದಾಗ ಅಭಿಷೇಕ್ ಹೊಡೆದ ಚೆಂಡು ಪಾಕಿಸ್ತಾನದ ಆಟಗಾರನ ಸ್ಟಿಕ್‌ಗೆ ತಾಗಿ ಗೋಲು ಬಲೆಗೆ ಸೇರಿತು. ಇದರೊಂದಿಗೆ ಭಾರತ 4-3ರ ರೋಚಕ ಗೆಲುವು ಸಾಧಿಸಿತು.

ಈ ಗೆಲುವಿನಿಂದ ಹಾಲಿ ಚಾಂಪಿಯನ್ ಭಾರತ ಫೈನಲ್‌ಗೆ ಪ್ರವೇಶಿಸಿದ್ದು, ಅಕ್ಟೋಬರ್ 3ರಂದು ಚಿನ್ನದ ಪದಕಕ್ಕಾಗಿ ಹೋರಾಡಲಿದೆ. ಎದುರಾಳಿ ದಕ್ಷಿಣ ಕೊರಿಯಾ–ಮಲೇಷ್ಯಾ ಸೆಮಿಫೈನಲ್‌ನ ವಿಜೇತರಾಗಿರುತ್ತಾರೆ.

Hot this week

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

Topics

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

Related Articles