157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ (ರಿ) ಸಂಸ್ಥಾಪಕಿ ಅಂಬಿಕಾ. ಸಿ(Ambika.C) ಮತ್ತು ಸಂಸ್ಥೆಯವರು ಸ್ವಾವಲಂಬನೆ, ಸ್ವದೇಶಿ ವಸ್ತುಗಳ ಬಳಕೆ ಕುರಿತಾದ ಜನಜಾಗೃತಿ.

” ಚರಕ ಕಾರ್ಯಗಾರ “(Charakha Workshop) ಶಾಲಾ ಕಾಲೇಜಿನ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಚರಕದಿಂದ ನೂಲು ತೆಗೆಯುವ ವಿಧಾನ, ಕುರಿತಾದ ಕಾರ್ಯಗಾರ ಮತ್ತು ಮಹಾತ್ಮ ಗಾಂಧೀಜಿಯವರ ಆದರ್ಶ ವಿಚಾರಧಾರೆಗಳ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಚರಕ ಕಾರ್ಯಗಾರವನ್ನು ಜೆಮ್ ಸ್ಕೂಲ್ ಮತ್ತು ಈಜಿ ಎಜುಕೇಶನ್ ಕಾಲೇಜಿನ ವಿದ್ಯಾರ್ಥಿಗಳಿಗೆ , ದಿನಾಂಕ 1 ಅಕ್ಟೋಬರ್ 2026 ರಂದು ಬೆಂಗಳೂರಿನ ಜೆಸಿ ರಸ್ತೆಯ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು . ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಆರ್ ಟಿ ನಗರದ ಈಜಿ ಎಜುಕೇಶನ್ ಕಾಲೇಜಿನ ನಿರ್ದೇಶಕಿ ಶ್ರೀಮತಿ ಸೈದಾ ರುಬಿನ ಕೌಸರ್, ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷರು – ಡಾ. ಎಚ್ ಕೆ ಎಸ್ ಸ್ವಾಮಿ (ಹಿರಿಯ ಚರಕ ತರಬೇತುದಾರ) ರವರುಗಳೊಂದಿಗೆ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿಶೇಷವಾಗಿ ಮಹಾತ್ಮ ಗಾಂಧಿ ಯವರನ್ನು ಹೊಲುವ ವೇಷ ಭೂಷಣ ದಾರಿಗಳಾದ ಮಕ್ಕಳು ವಿದ್ಯಾರ್ಥಿಗಳು ಗಾಂಧೀಜಿ ಅವರ ತತ್ವಗಳ ಬಗ್ಗೆ ತಿಳಿದರು ಹಾಗೂ ಬಹಳ ಕೌತುಕದಿಂದ ಆಸಕ್ತಿಯುತವಾಗಿ ಚರಕದಿಂದ ಸ್ವತಃ ನೂಲು ತೆಗೆಯುವ ಕಲೆಯನ್ನು ಅರಿತು, ಅನುಭವಿಸಿ ಸಂತಸ ವ್ಯಕ್ತಪಡಿಸಿದರು.
ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

