ಮೂರು ಪಾತ್ರಗಳ ತ್ರಿಕಾರಂ ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ

’ತ್ರಿಕಾರಂ’(Trikaaram) ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ(Release Programme) ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಮಾಸ್ ಟ್ರೇಲರ್, ನವಿರಾದ ಪ್ರೇಮಗೀತೆ, ಮೊನ್ನೆಯಷ್ಟೇ ಹೊಸದುರ್ಗದಲ್ಲಿ 50 ಅಡಿ ಕಟ್‌ಔಟ್ ಅನಾವರಣ ಕಾರ್ಯಕ್ರಮ ಮತ್ತು ಸಾಹಸ ದೃಶ್ಯ ಮಾಡುವಾಗ ಬೆಂಕಿ ಅವಘಡದಿಂದ ನಾಯಕ, ನಾಯಕಿ ಪಾರಾದ ತುಣುಕುಗಳು ದೊಡ್ಡ ಪರದೆ ಮೇಲೆ ಬಿತ್ತರಗೊಂಡಿತು. ’ಇದು ಸ್ಮಶಾನ ಅಲ್ಲ’ ಎಂಬ ಕ್ಯಾಚಿ ಅಡಿಬರಹ ಇರಲಿದೆ. ರಾಜಕೀಯ ಮುಖಂಡ ರವೀಂದ್ರ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

ನಾಟಕ ಪ್ರೇಮಿ ಜಿ.ಗಣೇಶ್ ಮೂರ್ತಿ ಅವರು ಸದ್ಗುರು ಸಿನಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುವುದರ ಜತೆಗೆ ಖತರ್‌ನಾಕ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಅಜ್ಜಂಪುರದ ದಿಲೀಪ್ ಕುಮಾರ್.ಜೆ.ಆರ್ ಬಡ್ತಿ ಎನ್ನುವಂತೆ ರಚಿಸಿ, ಆಕ್ಷನ್ ಕಟ್ ಹೇಳಿದ್ದಾರೆ.

ಹರ್ಷವರ್ಧನ್ ಕೇಸರಿ ನಾಯಕ. ನಿಶ್ಚಿತಶೆಟ್ಟಿ ನಾಯಕಿ. ಉಳಿದಂತೆ ನಾಗೇಂದ್ರಅರಸು, ಬಲರಾಜವಾಡಿ, ಮಂಜುಪಾವಗಡ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಹೊನ್ನಾಳಿ ಯಾಸಿನ್, ಸಂಕಲನ ಸತೀಶ್ ಚಂದ್ರಯ್ಯ, ಸಾಹಸ ಚಂದ್ರುಬಂಡೆ, ನ್ಯೃತ್ಯ ಹೈಟ್‌ಮಂಜು-ಕಂಬಿರಾಜ್, ಡಾ.ವಿ.ನಾಗೇಂದ್ರಪ್ರಸಾದ್-ಭರ್ಜರಿ ಚೇತನ್‌ಕುಮಾರ್-ಪ್ರಮೋದ್ ಮರವಂತೆ-ಕೇಶವ-ಹರ್ಷವರ್ಧನ್ ಸಾಹಿತ್ಯ, ಡಿಜಿಟಲ್ ಪ್ರಚಾರ್ ಪವನ್‌ಕುಮಾರ್ ಅವರದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ನಾಯಕ,ನಾಯಕಿ ಹಾಗೂ ವಿಲನ್ ಮೂರು ಪಾತ್ರಗಳ ಸುತ್ತ ಕಥೆ ಸಾಗುವುದರಿಂದ ಇದೇ ಶೀರ್ಷಿಕೆ ಇಡಲಾಗಿದೆ. ಇವು ಯಾವ ಕಾರಣಕ್ಕೆ ಜತೆಯಾಗ್ತದೆ ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು. ದೈವ ಮತ್ತು ದುಷ್ಟ ನಡುವಿನ ಹೋರಾಟ. ಮುಗಿಯದ ಕರ್ಮ ಧರ್ಮದ ಲೆಕ್ಕಚಾರ. ಇವೆಲ್ಲಾ ಸನ್ನಿವೇಶಗಳು ಸೆಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ. ಸಂಪೂರ್ಣ ಚಿತ್ರೀಕರಣವನ್ನು ಹೊಸದುರ್ಗ, ಮಾರಿಕಣಿವೆಯಲ್ಲಿ ದೊಡ್ಡ ದೊಡ್ಡ ಸೆಟ್ ಹಾಕಿ ನಡೆಸಲಾಗಿದೆ. ಎಲ್ಲರ ಪ್ರೋತ್ಸಾಹ ಬೇಕೆಂದು ದಿಲೀಪ್ ಕುಮಾರ್.ಜೆ.ಆರ್ ಮಾಧ್ಯಮದವರನ್ನು ಕೋರಿಕೊಂಡರು.
ಮುಗ್ದ ಹಾಗೂ ರುದ್ರನಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ನಾವುಗಳು ನೋವು ಅನುಭವಿಸಿ ಖುಷಿಯಿಂದ ನಟಿಸಿದ್ದೇವೆ. ಸಹ ನಿರ್ದೇಶಕನಾಗಲು ಬಂದದವನಿಗೆ ಹೀರೋ ಅವಕಾಶ ನೀಡಿದರು. ಅದಕ್ಕಾಗಿ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಚಿರಋಣಿ ಆಗಿದ್ದೇನೆಂದು ಹರ್ಷವರ್ಧನ್ ಕೇಸರಿ ಭಾವುಕರಾಗಿ ಹೇಳಿದರು.
ಜಂಬದಹುಡುಗಿ, ಮೃದು ಸ್ವಭಾವದವಳಾಗಿ ಇರುತ್ತೇನೆ. ಹಗಲುಹೊತ್ತು ಆತನೊಂದಿಗೆ ಜಗಳವಾಡುತ್ತಾ, ಕತ್ತಲಾದರೆ ಅವನ ಹಿಂದೆ ಓಡಾಡುತಿರುತ್ತೇನೆ. ಅದು ಯಾಕೆ ಎಂಬುದಕ್ಕೆ ಫಿಲಂ ನೋಡಿ ಎಂಬುದು ನಾಯಕಿ ನಿಶ್ಚಿತಶೆಟ್ಟಿ  ನುಡಿ.
ಚಿಕ್ಕವಯಸ್ಸಿನಿಂದಲೂ ಸಿನಿಮಾ ಮಾಡುವ ಆಸೆ ಇದರಿಂದ ನೆರವೇರಿದೆ. ಖಳನಾಗಿ ಅಬ್ಬರಿಸಿದ್ದೇನೆ. ಅದು ಹೇಗಿರುತ್ತದೆಂದು ನೀವುಗಳು ಹೇಳು ಬೇಕು ಅಂತಾರೆ ನಿರ್ಮಾಪಕ ಜಿ.ಗಣೇಶ್ ಮೂರ್ತಿ.
ಅಂದ ಹಾಗೆ ಚಿತ್ರವು ಅಕ್ಟೋಬರ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ಶಂಕರ್ ಗುರು’ ಚಿತ್ರ

Hot this week

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Topics

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

ವಿ.ಕುಮಾರ್ ನಿರ್ದೇಶನದ ಹದಿನೆಂಟು ಎಕರೆ ಸಿನಿಮಾ ಲಕ್ಕಪ್ಪ

ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ...

Related Articles