ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತನ್ನ ನೇರ ನೇಮಕಾತಿ-2025 ರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಲಮಂಡಳಿಯ ದಿನಾಂಕ 15-11-2025 ಹಾಗೂ 20-05-2026 ರ ನೇರ ನೇಮಕಾತಿ ಅಧಿಸೂಚನೆಗಳನ್ವಯ, ‘ಬಿ’ ದರ್ಜೆಯ ಸಹಾಯಕ ಅಭಿಯಂತರರ (Assistant Engineer – Grade B) ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 1:5 ಅನುಪಾತದಲ್ಲಿ 2026 ನೇ ಅಕ್ಟೋಬರ್ 12 ರಿಂದ 14 ರವರೆಗೆ ಮೂಲ ದಾಖಲಾತಿಗಳ ಪರಿಶೀಲನೆಗೆ (Document Verification) ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ತಮಗೆ ನಿಗದಿಪಡಿಸಲಾದ ದಿನಾಂಕ ಹಾಗೂ ಸಮಯದಂದು ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳು ಹಾಗೂ ಪೂರಕ ದಾಖಲೆಗಳೊಂದಿಗೆ ಹಾಜರಾಗುವುದು.
ದಾಖಲೆಗಳ ಪರಿಶೀಲನೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ, ಅವರಿಗೆ ನಿಗದಿಯಾಗಿರುವ ದಿನಾಂಕ, ಸಮಯ, ಸ್ಥಳ ಹಾಗೂ ಇತರ ಸಂಪೂರ್ಣ ವಿವರಗಳಿಗಾಗಿ ಬೆಂಗಳೂರು ಜಲಮಂಡಳಿಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಜಲಮಂಡಳಿಯ ವೆಬ್ ಸೈಟ್ www.bwssb.gov.in ಅನ್ನು ವೀಕ್ಷಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
