ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯು(BWSSB) ಗ್ರಾಹಕರ ಕುಂದುಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ಉದ್ದೇಶದಿಂದ 2026 ನೇ ಅಕ್ಟೋಬರ್ 01 ರ ಗುರುವಾರದಂದು ಬೆಳಿಗ್ಗೆ 9:30 ರಿಂದ 11:00 ಗಂಟೆಯವರೆಗೆ ನಗರದ ವಿವಿಧ ಉಪವಿಭಾಗಗಳಲ್ಲಿ ‘ನೀರಿನ ಅದಾಲತ್'(Water Adalat) ಅನ್ನು ಆಯೋಜಿಸಿದೆ.
ಈ ಅದಾಲತ್ನಲ್ಲಿ ಸಾರ್ವಜನಿಕರು ನೀರಿನ ಬಿಲ್ಲು ವ್ಯತ್ಯಾಸ, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ, ಗೃಹ ಬಳಕೆಯ ಸಂಪರ್ಕವನ್ನು ಗೃಹೇತರ ಬಳಕೆಯ ಸಂಪರ್ಕವಾಗಿ ಪರಿವರ್ತಿಸುವಲ್ಲಿನ ವಿಳಂಬ ಹಾಗೂ ಇತರ ನೀರು ಸರಬರಾಜಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದಾಗಿದೆ.
ಅದಾಲತ್ ನಡೆಯುವ ಉಪವಿಭಾಗಗಳು ಮತ್ತು ವಿವರಗಳು:
ಪೂರ್ವ ವಲಯ:
ಪೂರ್ವ-1-1: ಹೊರಮಾವು ಅಗರಕೆರೆ ಹತ್ತಿರ, ಜಲಮಂಡಳಿ ಕಚೇರಿ. ಸೇವಾಠಾಣೆಗಳು: ಭೈರತಿ, ಹೊರಮಾವು, ಆಗರ; ದೂರವಾಣಿ: 9538333466.
ಪೂರ್ವ-2-1: ಕೆ.ಆರ್.ಪುರಂನ ದೇವಸಂದ್ರ ಎಕ್ಸ್ಟೆನ್ಷನ್, 2ನೇ ಅಡ್ಡರಸ್ತೆ ಕಚೇರಿ ಸೇವಾಠಾಣೆಗಳು: ದೇವಸಂದ್ರ, ಬಸವನಪುರ; ದೂರವಾಣಿ: 9845444118
.
ಪೂರ್ವ-3-1: ಕುಂದಲಹಳ್ಳಿ ಮುಖ್ಯರಸ್ತೆಯ ಬಿ.ಇ.ಎಮ್.ಎಲ್. ಲೇಔಟ್ ನೆಲಮಹಡಿ ಕಚೇರಿ ಸೇವಾಠಾಣೆಗಳು: ಎ.ಇ.ಸಿ.ಎಸ್. ಲೇಔಟ್, ಹೂಡಿ; ದೂರವಾಣಿ: 9845411488.
ಪೂರ್ವ-4-1: ಮಾರತ್ತಹಳ್ಳಿ ರಿಂಗ್ ರಸ್ತೆಯ ಕಾಡಬೀಸನಹಳ್ಳಿ ಎಸ್ಟಿಪಿ ಕಚೇರಿ ಸೇವಾಠಾಣೆಗಳು: ಗರುಡಾಚಾರ್ಪಾಳ್ಯ, ದೊಡ್ಡನಕುಂದಿ, ಮಾರತ್ತಹಳ್ಳಿ, ಯಮಲೂರು, ಅಶ್ವತ್ತನಗರ; ದೂರವಾಣಿ: 9902249333.
ಪಶ್ಚಿಮ ವಲಯ:
ಪಶ್ಚಿಮ-1-1: ಮಲ್ಲೇಶ್ವರಂ ಮಾರ್ಗೋಸ ರಸ್ತೆಯ ಸುವರ್ಣಭವನ, 1ನೇ ಮಹಡಿ, ಕೊಠಡಿ ಸಂ. 115 ಸೇವಾಠಾಣೆಗಳು: ಮಲ್ಲೇಶ್ವರಂ, ನ್ಯೂ ಬಿಇಎಲ್, ಶ್ರೀರಾಮಪುರ, ಕೆ.ಜಿ.ಟವರ್; ದೂರವಾಣಿ: 9538897735.
ಪಶ್ಚಿಮ-2-1: ಪೀಣ್ಯ 3ನೇ ಹಂತ, ಭಟ್ಟರ ಹೋಟೆಲ್ ಹಿಂಭಾಗದ ಕಚೇರಿ ಸೇವಾಠಾಣೆಗಳು: ಪೀಣ್ಯ, ಪೀಣ್ಯ ದಾಸರಹಳ್ಳಿ; ದೂರವಾಣಿ: 9632349063.
ಪಶ್ಚಿಮ-3-1: ವಿಜಯನಗರ ವಾಟರ್ ಟ್ಯಾಂಕ್ ಎದುರು, 8ನೇ ಮುಖ್ಯರಸ್ತೆ ಕಚೇರಿ ಸೇವಾಠಾಣೆಗಳು: ಚಂದ್ರ ಲೇಔಟ್-1&2, ವಿಜಯನಗರ ಓ.ಹೆಚ್.ಟಿ., ಮೂಡಲಪಾಳ್ಯ; ದೂರವಾಣಿ: 9980421461.
ಪಶ್ಚಿಮ-4-1: ರಾಜರಾಜೇಶ್ವರಿನಗರ ಬಿ.ಇ.ಎಮ್.ಎಲ್. ಲೇಔಟ್, 5ನೇ ಹಂತದ ಕಚೇರಿ ಸೇವಾಠಾಣೆಗಳು: ಕೆಂಗೇರಿ, ಐಡಿಯಲ್ ಹೋಮ್ಸ್, ಬಿ.ಇ.ಎಮ್.ಎಲ್ ಲೇಔಟ್, ನಾಗದೇವನಹಳ್ಳಿ; ದೂರವಾಣಿ: 9591987962.
ಉತ್ತರ ವಲಯ:
ಉತ್ತರ-1-1: ಜಕ್ಕೂರು ಶಿವರಾಂಕಾರಂತ್ ನಗರ ರೈಲ್ವೆ ಟ್ರ್ಯಾಕ್ ಹಿಂಭಾಗದ ಕಚೇರಿ ಸೇವಾಠಾಣೆಗಳು: ಸಹಕಾರನಗರ, ಕೆಂಪಾಪುರ ,(ದಾಸರಹಳ್ಳಿ); ದೂರವಾಣಿ: 9845444123.
ಉತ್ತರ-2-1: ಫ್ರೇಜರ್ಟೌನ್ ನೇತಾಜಿ ರಸ್ತೆ ಕಚೇರಿ ಸೇವಾಠಾಣೆಗಳು: ಫ್ರೇಜರ್ಟೌನ್, ಮಚಲಿಬೆಟ್ಟ, ಪಿಳ್ಳಣ್ಣಗಾರ್ಡನ್ 1&2; ದೂರವಾಣಿ: 9845444053.
ಉತ್ತರ-3-1: ಯಲಹಂಕ ಪಿನಾಕಿನಿ ಭವನ, 1ನೇ ಮಹಡಿ ಕಚೇರಿ ಸೇವಾಠಾಣೆಗಳು: ಯಲಹಂಕ ನ್ಯೂಟೌನ್, ಸಿಂಗಾಪುರ; ದೂರವಾಣಿ: 9740984166.
ಉತ್ತರ-4-1: ಹೆಸರಘಟ್ಟ ರಸ್ತೆ, ಎಂ.ಇ.ಐ. ಲೇಔಟ್, 7ನೇ ಮುಖ್ಯರಸ್ತೆ ನೆಲಮಹಡಿ ಕಚೇರಿ ಸೇವಾಠಾಣೆಗಳು: ಎಂ.ಇ.ಐ. ಲೇಔಟ್, ಟಿ. ದಾಸರಹಳ್ಳಿ; ದೂರವಾಣಿ: 9686448013.
ಸಾರ್ವಜನಿಕರು ಈ ಅದಾಲತ್ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳವುದು. ಅಲ್ಲದೆ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಮಂಡಳಿಯ ಸಹಾಯವಾಣಿ ಸಂಖ್ಯೆ 1916 ಗೆ ಕರೆ ಮಾಡಿ ಅಥವಾ ವಾಟ್ಸ್ಆಪ್ ಸಂಖ್ಯೆ 8762228888 ಗೆ ಸಂದೇಶ ಕಳುಹಿಸುವ ಮೂಲಕವೂ ದೂರುಗಳನ್ನು ದಾಖಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
