ಚಾಮರಾಜನಗರ : ರಾಷ್ಟ್ರಕ್ಕಾಗಿ ಸರ್ವವನ್ನು ಅರ್ಪಿಸಿದ ದೀನ್ ದಯಾಳ್ ಉಪಾಧ್ಯಾಯರು(Deen Dayal) ಯುವಕರಿಗೆ ಮಾದರಿ. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಸಾಧನೆ ಮತ್ತು ಅಭಿವೃದ್ಧಿ ಮುಖ್ಯವಾಗಬೇಕು. ಒಳ್ಳೆಯ ಗುಣಗಳನ್ನು ಬೆಳಸಿಕೊಳ್ಳುವ ಮೂಲಕ ಸಮಾಜದ ಪ್ರತಿ ವ್ಯಕ್ತಿಗೂ ಗೌರವ, ಪ್ರೀತಿ, ವಿಶ್ವಾಸ ನೀಡುವ ಗುಣಬೆಳೆಸಿಕೊಳ್ಳಲು ಆದರ್ಶ ವ್ಯಕ್ತಿಗಳ ಇತಿಹಾಸದ ಅಧ್ಯಯನದಿಂದ ಸಾಧ್ಯವಿದೆ ಎಂದು ಜೈಹಿಂದ್ ಪ್ರತಿಷ್ಠಾನ ದ ಅಧ್ಯಕ್ಷರು,ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ (Suresh N Rigvedi) ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ (JaiHind Katte) ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರ ಚಿಂತಕ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಏಕಾತ್ಮ ಮಾನವ ವಾದದ ಮೂಲಕ ರಾಷ್ಟ್ರ,ಸಮಾಜ, ವ್ಯಕ್ತಿ ಸಮನ್ವಯದ ಮೂಲಕ ಅಭಿವೃದ್ಧಿ ಸಾಧಿಸಿ ರಾಷ್ಟ್ರಕ್ಕೆ ಕೊಡುಗೆ ನೀಡುವ ಅಗತ್ಯವಿದೆ. ಪ್ರತಿಯೊಬ್ಬರು ಸರಳ ಜೀವನವನ್ನು ಅನುಸರಿಸಿ ರಾಷ್ಟ್ರೀಯ ಮೌಲ್ಯಗಳು, ರಾಷ್ಟ್ರೀಯ ಚಿಂತನೆ ಮತ್ತು ಜನರ ಅಭಿವೃದ್ಧಿಗೆ ಶ್ರಮಿಸಬೇಕಿದೆ.
ಬಡವರು, ಅವಕಾಶ ವಂಚಿತರು ತಮ್ಮ ಸ್ವ ಶಕ್ತಿಯಿಂದ ಬೆಳೆದು ಉನ್ನತಿಯನ್ನು ಸಾಧಿಸಬೇಕು. ನಮ್ಮ ಸಾಧನೆ ಗುರಿಯಾಗಬೇಕು. ದೀನ್ ದಯಾಳ್ ಉಪಾಧ್ಯಾಯರು ಬಡತನದಲ್ಲಿ ಬೆಳೆದು, ತಮ್ಮ ಶಿಕ್ಷಣವನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಬೆಳೆದವರು.ಬಾಲ್ಯದಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬೋಧಿಸಿ, ಉನ್ನತ ಅಂಕವನ್ನು ತರುವಂತಹ ಕಾರ್ಯ ಮಾಡಿದ ಶ್ರೇಷ್ಠ ವ್ಯಕ್ತಿ. ಒಳ್ಳೆಯ ಗುಣ , ಸಂಸ್ಕಾರ ಜೀವನ ಪದ್ಧತಿಯನ್ನು ಬೆಳೆಸಿಕೊಂಡು ಭಾರತೀಯ ಸಂಸ್ಕೃತಿ, ಸ್ವದೇಶಿ ಚಿಂತನೆ, ಸಾಮಾಜಿಕ ನ್ಯಾಯ ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯ ವಿಚಾರಧಾರೆ ಇಂದು ತುಂಬಾ ಅಗತ್ಯವಿದೆ. ದೇಶ ಸೇವೆಯ ಗುಣ ಹೆಚ್ಚಾಗಬೇಕು.
ಭಾರತ ಒಂದು ಪುಣ್ಯಭೂಮಿ. ಭಾರತದ ಅಪಾರ ಜ್ಞಾನ ಶಕ್ತಿಯನ್ನು ಹಿರಿಮೆಯನ್ನು ಜಗತ್ತಿಗೆ ತಿಳಿಸುವ ಕಾರ್ಯವನ್ನು ಮಾಡಿದರು. ಪ್ರತಿಯೊಬ್ಬರಲ್ಲೂ ಸ್ವದೇಶಿ ಚಿಂತನೆ,ಸ್ವಾವಲಂಬನೆ, ಆತ್ಮಭಿಮಾನ, ರಾಷ್ಟ್ರಾಭಿ ಮಾನ, ಸಂಸ್ಕೃತಿ ಮತ್ತು ಪರಂಪರೆ, ಗೌರವ ಮತ್ತು ಸಾರ್ವಜನಿಕ ಬದುಕಿಗೆ ನಮ್ಮ ಕೈಲಾದ ಸೇವೆಯನ್ನು ಮಾಡುವುದು ಬಹಳ ಮುಖ್ಯವೆಂದು ತಿಳಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪತ್ರಿಕಾ ಕಾರ್ಯದರ್ಶಿ ಬಿಕೆ ಆರಾಧ್ಯ ಮಾತನಾಡಿ ದೀನ್ ದಯಾಳ್ ಉಪಾಧ್ಯಾಯರವರು ಸರಳ ಜೀವನ ನಡೆಸಿದ ಶ್ರೇಷ್ಠ ವ್ಯಕ್ತಿತ್ವ ಹೊಂದಿದ ಮಹಾನ್ ಪುರುಷರು . ಇಡೀ ತಮ್ಮ ಜೀವನವನ್ನು ರಾಷ್ಟ್ರದ ಸೇವೆಗೆ ಸಮರ್ಪಿಸಿದ ಮಹಾನ್ ವ್ಯಕ್ತಿ. ಇಂದು ದೇಶ ಪ್ರಗತಿ ಚಿಂತನೆಯಲ್ಲಿ ಸಾಗುತ್ತಿದೆ. ಸಾವಿರಾರು ದೇಶಭಕ್ತರಿಗೆ ಉಪಾಧ್ಯಾಯರಂತಹ ವ್ಯಕ್ತಿತ್ವದ ಪ್ರಭಾವವಿದೆ. ಜೈ ಹಿಂದ್ ಪ್ರತಿಷ್ಠಾನ ಸಾವಿರಾರು ದೇಶಭಕ್ತರ ಕಾರ್ಯಕ್ರಮವನ್ನು ರೂಪಿಸುತ್ತಿರುವುದು ನಗರದ ಹೆಮ್ಮೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕರಾದ ಕುಸುಮ ಋಗ್ವೇದಿ, ಭೋಜರಾಜ್, ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ, ಸಾನಿಕ, ಮಹೇಶ್ವರಿ, ಪೂಜಾ ಇತರರು ಇದ್ದರು.

