ಬೆಂಗಳೂರು: ರಾಜ್ಯದ ಪ್ರಸ್ತುತ ಬರಗಾಲದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ(Central Government) ಪರಿಹಾರಕ್ಕಾಗಿ ಸದನದ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ದನಿ ಎತ್ತಬೇಕು. ಎಲ್ಲಾ ಸಂಸದರುಗಳಿಗೂ ಈ ವಿಷಯ ಮುಟ್ಟಿಸಬೇಕು. ರೈತರ ಪರಿಸ್ಥಿತಿ ಕುರಿತು ಚರ್ಚೆ ಮಾಡಬೇಕು, ರೈತರ ಸಾಲ ಮನ್ನಾ ಮಾಡುವ ಬಗ್ಗೆ ಯೋಚಿಸಬೇಕಿದೆ. ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸದಸ್ಯರ ನಿಯೋಗ ಕೇಂದ್ರ ಸರ್ಕಾರಕ್ಕೆ ಹೋಗಿ ಪರಿಸ್ಥಿತಿಯನ್ನು ವಿವರಿಸಬೇಕು ಎಂದು ನವಲಗುಂದ ಶಾಸಕ ಕೋನಾರೆಡ್ಡಿ(Navalagundi MLA Kona Reddy) ಹೇಳಿದರು.
ಇಂದು ವಿಧಾನಸಭೆಯ ಅಧಿವೇಶನದಲ್ಲಿ ಬರಗಾಲ ಕುರಿತು ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು ಈಗಾಗಲೇ 178 ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಉಳಿದ ತಾಲ್ಲೂಕುಗಳನ್ನು ಹಂತ ಹಂತವಾಗಿ ಘೋಷಣೆ ಮಾಡಲು ಸರ್ಕಾರ ಕ್ರಮ ವಹಿಸುತ್ತಿದೆ. ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲು ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳಲ್ಲಿ ಬದಲಾವಣೆ ಆಗಬೇಕಿದೆ. ಈ ಕುರಿತು ರಾಜ್ಯ ಸರ್ಕಾರದಿಂದ ಈಗಾಗಲೇ 7-8 ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಬರೆಯಲಾಗಿದೆ ಎಂದರು.
ಬೆಳೆವಿಮೆ: ರೈತರಿಗೆ ಬೆಳೆ ವಿಮೆ ಸೇರುವಲ್ಲಿ ಮಧ್ಯವರ್ತಿಗಳು ಮೂಗುತೂರಿಸಿ ನಿಜವಾದ ರೈತನಿಗೆ ಬೆಳೆವಿಮೆ ತಲುಪುತ್ತಿಲ್ಲ. ಬೆಳೆವಿಮೆಯ ಮೊತ್ತವು ಖಾಸಗಿ ಕಂಪೆನಿಗಳ ಕೈಸೇರುತ್ತಿವೆ. ಬೆಳೆವಿಮೆಯು ರೈತನಿಗೆ ಸಿಗಲು ಸದನದಲ್ಲಿ ಚರ್ಚೆ ಆಗಬೇಕು. ಬರಗಾಲ ಪರಿಸ್ಥಿತಿ ಗಂಭೀರವಾಗಿರುವುದರಿಂದ ಪಕ್ಷಾತೀತವಾಗಿ ರೈತರ ಬಗ್ಗೆ ದನಿ ಎತ್ತಬೇಕು. ಮೂರು ಪಕ್ಷದ ಸದಸ್ಯರು ಬರಗಾಲ ಕುರಿತು. ರೈತರ ಸಮಸ್ಯೆ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ರಾಜ್ಯ ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ರೈತರ ಸಮಸ್ಯೆಗೆ ಕೇವಲ ಸರ್ಕಾರ ಕ್ರಮ ವಹಿಸುವುದಲ್ಲ- ಶಾಸಕ ಆರ್.ಬಿ ತಿಮ್ಮಾಪುರ

