ರಾಜ್ಯದಲ್ಲಿ ಮೊಟ್ಟ ಮೊದಲ ‘ರೈತ ಸಿರಿ’ ಮಳಿಗೆ ಉದ್ಘಾಟನೆ: ಸಚಿವ ಪಿ.ಎಂ. ನರೇಂದ್ರ ಸ್ವಾಮಿ

ಬೆಂಗಳೂರು: ರೈತರ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರ್ಯಾಂಡಿಂಗ್ ವ್ಯವಸ್ಥೆ(Unified Branding System) ರೂಪಿಸಲಾಗಿದೆ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ(P.M.Narendra Swamy) ತಿಳಿಸಿದರು.

ಮಲ್ಲೇಶ್ವರಂನಲ್ಲಿಂದು  ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ರೈತ ಉತ್ಪಾದಕರ ಸಂಸ್ಥೆಗಳ ಸಹಕಾರ ಸಂಘದ ಏಕೀಕೃತ ಬ್ರ್ಯಾಂಡ್ “ರೈತಸಿರಿ”ಯ ಮೊದಲ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಮಾರುಕಟ್ಟೆಗೆ ತಾವು ಬೆಳೆದಂತಹ ಪದಾರ್ಥಗಳನ್ನು ತರಬೇಕಾದರೆ ಮಧ್ಯವರ್ತಿಗಳು ಅದರ ಲಾಭ ಪಡೆಯುತ್ತಿದ್ದರು. ಆದರೆ ಈಗ ರೈತರೇ ಎಫ್‍ಪಿಓ ಸ್ಥಾಪನೆ ಮಡಿಕೊಂಡು, ನೇರವಾಗಿ ಗ್ರಾಹಕರನ್ನು ತಲುಪುವಂತಹ ನೂತನ ವ್ಯವಸ್ಥೆಯನ್ನು ಅವರೇ ಕಂಡುಕೊಂಡು ಸಹಕಾರ ತತ್ವದ ಅಡಿಯಲ್ಲಿ ಮಾಡುತ್ತಿರುವ ಈ ವಿನೂತನವಾದ ಒಂದು ಪ್ರಯತ್ನದಿಂದ ರೈತರಿಗೆ ಲಾಭ ಸಿಗುತ್ತಿದೆ ಎಂದರು.

ರಾಜ್ಯ ಸರ್ಕಾರ 2023-24ರ ಆಯವ್ಯಯದಲ್ಲಿ ರೂ.10 ಕೋಟಿ ಘೋಷಿಸಿತ್ತು. ಅದರಂತೆ ಫೆಬ್ರವರಿ 2024ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ಸಂಘ ನೋಂದಣಿಯಾಯಿತು. ನಂತರ “ರೈತಸಿರಿ” ಬ್ರ್ಯಾಂಡ್ ಅನುಮೋದನೆಗೊಂಡ ನಂತರ raithasiri.co.in ಜಾಲತಾಣ ಆರಂಭವಾಯಿತು. ರೈತ ಉತ್ಪಾದಕರ ಸಂಸ್ಥೆಗಳ ಉತ್ಕøಷ್ಟತಾ ಕೇಂದ್ರವು ಸಂಘಕ್ಕೆ ಸಲಹಾ ಸಂಸ್ಥೆಯಾಗಿ ಮಾರ್ಗದರ್ಶನ ನೀಡುತ್ತಿದೆ ಎಂದರು.

ರೈತರದೇ ಸಂಸ್ಥೆ ಪ್ರಸ್ತುತ ಸಂಘದಲ್ಲಿ 162 ರೈತ ಉತ್ಪಾದಕ ಸಂಸ್ಥೆಗಳು ಸದಸ್ಯರಾಗಿದ್ದು, ಇವುಗಳ ಮೂಲಕ 52,000 ಕ್ಕೂ ಹೆಚ್ಚು ರೈತ ಷೇರುದಾರರು ಸಂಘದ ಭಾಗವಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಎಲ್ಲಾ ರೈತ ಉತ್ಪಾದಕರ ಸಂಸ್ಥೆಗಳನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗುವುದು. ಸಂಘವು ರೈತ ಉತ್ಪಾದಕರ ಸಂಸ್ಥೆಗಳ ಸಂಘಟಿತ ಶಕ್ತಿಯಾಗಿ, ಅವುಗಳು ಎದುರಿಸುತ್ತಿರುವ ಮಾರುಕಟ್ಟೆ, ಬಂಡವಾಳ, ಪರವಾನಗಿ ಮತ್ತು ಮೂಲಸೌಕರ್ಯದ ಸವಾಲುಗಳನ್ನು ಪರಿಹರಿಸಲು ಕಾರ್ಯನಿರ್ವಹಿಸಲಿದೆ.

ರೈತ ಉತ್ಪಾದಕರ ಸಂಸ್ಥೆಗಳ ವ್ಯವಹಾರವನ್ನು ವಿಸ್ತರಿಸಿ, ಅವುಗಳನ್ನು ಸ್ವಾವಲಂಬಿಗಳನ್ನಾಗಿಸುವುದರ ಜೊತೆಗೆ ಲಾಭದಾಯಕ ಸಂಸ್ಥೆಗಳನ್ನಾಗಿ ಬೆಳೆಸುವುದು “ರೈತಸಿರಿ”ಯ ಮುಖ್ಯ ಗುರಿ. ರಾಜ್ಯದಲ್ಲಿ ಗ್ರಾಮೀಣ ಸಮೃದ್ಧಿ ಸಾಧಿಸುವ ಪ್ರಮುಖ ಮಾರ್ಗವಾಗಿ ರೈತ ಉತ್ಪಾದಕರ ಸಂಸ್ಥೆಗಳನ್ನು ಬಲಪಡಿಸಲಾಗುವುದು. ರಾಜ್ಯದ ರೈತ ಉತ್ಪಾದಕರ ಸಂಸ್ಥೆಗಳ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರು ಹಾಗೂ ಕರ್ನಾಟಕ ರಾಜ್ಯ ರೈತ ಉತ್ಪಾದಕರ ಸಂಸ್ಥೆಗಳ ಸಹಕಾರ ಸಂಘದ ಅಧ್ಯಕ್ಷರಾದ ಉಪೇಂದ್ರ ಪ್ರತಾಪ್ ಸಿಂಗ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಗಾಯತ್ರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

 

ಪಿ ಬಿ ಶ್ರೀನಿವಾಸ್ ಜನ್ಮದಿನ ಹಾಗೂ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಶ್ರೀ ಅನಂತನಾಗ್ ರವರ ಅಭಿನಂದನಾ ಸಮಾರಂಭ

Hot this week

ಬೆಂಗಳೂರಿನಲ್ಲಿ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ವನ್ನು ಅನಾವರಣಗೊಳಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ಮಹಾತ್ಮ ಗಾಂಧೀಜಿಯವರು(Mahatma Gandhiji) ಕರ್ನಾಟಕದಲ್ಲಿ ಭೇಟಿ ನೀಡಿದ್ದ ವಿವಿಧ 87...

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ

ಬೆಂಗಳೂರು: 157 ನೇ ಗಾಂಧಿ ಜಯಂತಿ(Gandhi Jayanthi) ಅಂಗವಾಗಿ ವಾರ್ತಾ ಮತ್ತು...

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

Topics

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ

ಬೆಂಗಳೂರು: 157 ನೇ ಗಾಂಧಿ ಜಯಂತಿ(Gandhi Jayanthi) ಅಂಗವಾಗಿ ವಾರ್ತಾ ಮತ್ತು...

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

Related Articles