ದಿವಾಳಿ ಅಂಚಿಗೆ ತಲುಪಿದ ರಾಜ್ಯ ಸರಕಾರ: ವಿಜಯೇಂದ್ರ

ಮುಖ್ಯಾಂಶಗಳು
• ಕೃಷಿ ಸಾಲ ಮನ್ನಾ ಮಾಡಲು ಒತ್ತಾಯ
• 7-8 ಗಂಟೆ ತ್ರಿಫೇಸ್ ವಿದ್ಯುತ್ ಕೊಡಿ
• ಹೈನುಗಾರಿಕೆ ಸಹಾಯಧನ ಹೆಚ್ಚಿಸಿ
• ಸಾರಿಗೆ ಇಲಾಖೆಗೂ ಹಣ ಕೊಟ್ಟಿಲ್ಲ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು(Congress Government) ಸಾಲದ ಸುಳಿಯಲ್ಲಿ ಸಿಲುಕಿ ದಿವಾಳಿಯ ಅಂಚಿಗೆ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B.Y.Vijayendra) ಅವರು ಆರೋಪಿಸಿದ್ದಾರೆ.
ವಿಧಾನಸೌಧದ ಬಿಜೆಪಿ ಕಚೇರಿ ಸಂಖ್ಯೆ 101ರಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಹಾರಾಷ್ಟ್ರ ಸರ್ಕಾರ 26 ಸಾವಿರ ಕೋಟಿ ರೂಪಾಯಿ ಎಂದರೆ ಸುಮಾರು ಎರಡು ಲಕ್ಷವರೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ರೈತರ ಕೃಷಿ ಸಾಲವನ್ನು ಮನ್ನಾ ಮಾಡಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಕೂಡ 5 ಲಕ್ಷ ರೂಪಾಯಿ ವರೆಗೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಪ್ರತಿ ಹೆಕ್ಟೇರಿಗೆ 50,000 ರೂಪಾಯಿ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಸಂಕಷ್ಟಕ್ಕೆ ಸ್ಪಂದಿಸಿ..

ಏಳು ತಾಸುಗಳ ತ್ರಿಫೇಸ್ ವಿದ್ಯುತ್ತನ್ನು ಕೊಡೋದಕ್ಕೆ ರಾಜ್ಯ ಸರ್ಕಾರದ ಕಡೆಯಿಂದ ಆಗುತ್ತಿಲ್ಲ. ಇದರಿಂದ ರೈತರು ಇವತ್ತು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹಿಂದೆ ಕಡಿಮೆ ದರಕ್ಕೆ ಸಿಗುತ್ತಿದ್ದ ವಿದ್ಯುತ್, ಇದೀಗ ಯೂನಿಟ್ಟಿಗೆ 14 ರೂಪಾಯಿ 15 ರೂಪಾಯಿ ಕೊಟ್ಟು ಖರೀದಿ ಮಾಡುವ ಸ್ಥಿತಿ ಇದೆ ಎಂದು ಗಮನ ಸೆಳೆದರು. ರಾಜ್ಯ ಸರ್ಕಾರವೇ ಇಂಥ ಸ್ಥಿತಿ ನಿರ್ಮಾಣ ಮಾಡಿಕೊಂಡಿದೆ ಎಂದು ಟೀಕಿಸಿದರು. ರಾಜ್ಯದ ರೈತರ ಸಂಕಷ್ಟವನ್ನ ಸದನದಲ್ಲಿ ಚರ್ಚೆ ಮಾಡಬೇಕು. ಕೇವಲ ಚರ್ಚೆ ಮಾಡುವಂತದ್ದು ಅμÉ್ಟೀ ಅಲ್ಲ ಸಂಕಷ್ಟದಲ್ಲಿ ಇರುವಂತ ರೈತರಿಗೆ ಪರಿಹಾರವನ್ನು ಕೊಡಿಸಬೇಕು ಎಂದು ಆಗ್ರಹಿಸಿದರು.
ರೈತರ ಸಾಲ ಮನ್ನಾ ಇರಬಹುದು, ಪ್ರತಿ ಹೆಕ್ಟೇರಿಗೆ 50,000 ರೂಪಾಯಿ ಪರಿಹಾರ ಕೊಡುವಂತದ್ದು ಆಗಲಿ ನಿರಂತರವಾಗಿ ಮೂರು ತ್ರೀಫೇಸ್ ವಿದ್ಯುತ್ತನ್ನು ಏಳೆಂಟು ತಾಸುಗಳ ಕಾಲ ಕೊಡಬೇಕು. ರೈತರಿಗೆ ಹೈನುಗಾರಿಕೆ ಸಹಾಯಧನ ಕೊಡಬೇಕು. ಇವತ್ತು 5 ರೂಪಾಯಿ ಕೊಡುತ್ತಿದ್ದು, ಹಳೆ ಬಾಬ್ತನ್ನೂ ರೈತರಿಗೆ ಕೊಡಬೇಕು. 5 ರೂಪಾಯಿ ಇರುವುದನ್ನು ಎಂಟು ರೂಪಾಯಿಗೆ ಏರಿಸಬೇಕು ಎಂದು ಒತ್ತಾಯವನ್ನು ಮುಂದಿಟ್ಟರು.

ಮೆಕ್ಕೆ ಜೋಳದ ಬಾಕಿ ಕೊಡಿ..

ಉತ್ತರ ಕರ್ನಾಟಕದಲ್ಲಿ ಏನು ಎಂ.ಎಸ್.ಪಿ ದರದಲ್ಲಿ ಮೆಕ್ಕೆಜೋಳ ಖರೀದಿ ಮಾಡಿದೆ ರಾಜ್ಯ ಸರ್ಕಾರ ಅದು ನೂರಾರು ಕೋಟಿ ರೂಪಾಯಿಗಳು ಬಾಕಿ ಉಳಿಸಿಕೊಂಡಿದೆ. ರಾಯಚೂರು ಜಿಲ್ಲೆಯಲ್ಲಿಯೇ ಸುಮಾರು 100-150 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಗಮನ ಸೆಳೆದರು. ಅದನ್ನು ನೀಡುವಂತೆ ಒತ್ತಾಯವನ್ನು ಮುಂದಿಟ್ಟರು.

ಕುಸಿದಿದೆ ಆರ್ಥಿಕ ಪರಿಸ್ಥಿತಿ..

ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮುಖ್ಯಮಂತ್ರಿಗಳು ಮೊನ್ನೆ ದಕ್ಷಿಣ ಕನ್ನಡಕ್ಕೆ ಹೋಗಿ 32 ಸಾವಿರ ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದರು. ಆದರೆ ಎಲ್ಲಿಂದ ದುಡ್ಡು ತರಿಸುತ್ತೇವೆ ಅಂತ ಎಲ್ಲೂ ಕೂಡ ಮುಖ್ಯಮಂತ್ರಿಗಳು ಹೇಳಲಿಲ್ಲ ಎಂದು ಟೀಕಿಸಿದರು. ಸದ್ಯ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾಗಿದೆ. ಬಜೆಟ್‍ನಲ್ಲಿ ಸೇರಿಸಿದ ಮತ್ತು ಹಣವನ್ನು ಮೀಸಲಿಡದ ಸಾವಿರಾರು ಕೋಟಿ ರೂಪಾಯಿಗಳ ಬೇಡಿಕೆ ಇರುವ ಯೋಜನೆಯನ್ನು ಪ್ರಾರಂಭಿಸುವುದರಿಂದ ನಗದು ಹರಿವು ಮತ್ತು ವಿತ್ತೀಯ ನಿರ್ವಹಣೆಯಲ್ಲಿ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಹಣಕಾಸು ಇಲಾಖೆ ತಿಳಿಸಿದ್ದನ್ನು ಗಮನಕ್ಕೆ ತಂದರು.

ಸಾಲದ ಸಾಮಥ್ರ್ಯ ಸಂಪೂರ್ಣ ಬಳಕೆ

ಇವತ್ತು ಇವತ್ತು ಬಜೆಟ್ ಘೋಷಣೆಗಳನ್ನು ಪೂರೈಸಲು ಕರ್ನಾಟಕದ ರಾಜ್ಯವು ತನ್ನ ಸಾಲ ಮಾಡುವ ಸಾಮಥ್ರ್ಯವನ್ನು ಈಗಾಗಲೇ ಸಂಪೂರ್ಣವಾಗಿ ಬಳಸಿಕೊಂಡಿದೆ. ಆದ್ದರಿಂದ ಈ ಪ್ರಮಾಣದ ಹೊಸ ಯೋಜನೆಗಳಿಗೆ ಹಣಕಾಸು ಒದಗಿಸಲು ರಾಜ್ಯಕ್ಕೆ ಹೆಚ್ಚು ಸಾಲ ಮಾಡುವ ಅವಕಾಶವೇ ಇಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದ್ದಾಗಿ ವಿವರಿಸಿದರು.
ರಾಜ್ಯ ಸರ್ಕಾರವು 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಬಾಕಿ ಉಳಿದಿರುವ ಕಾಮಗಾರಿಗಳ ವೆಚ್ಚವನ್ನು ಕೂಡ ಇವತ್ತು ಹೊಂದಿದೆ. ಆರ್ಥಿಕ ಇಲಾಖೆಯವರು ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಸ್ತಾವನೆಗಳಿಗೆ ಅಗತ್ಯವಿರುವ ನಿಧಿಯ ಒಂದು ಭಾಗವನ್ನರಿಸಬೇಕಾದರೂ ಇದು ಇಲಾಖೆಗೆ ನಿಗದಿಪಡಿಸಿದ ಹಂಚಿಕೆಗಳಲ್ಲಿ ಕಡಿತಗೊಳಿಸಲು ದಾರಿ ಮಾಡಿಕೊಡುತ್ತಿದೆ. ಇತರ ಕೆಲಸಗಳು ವಿಳಂಬ ಆಗಲಿದೆ ಅಥವಾ ನಿಂತು ಹೋಗಲಿದೆ ಎಂದು ತಿಳಿಸಿದೆ ಎಂದರು.

ಪತ್ರ ಲೀಕ್ ಮಾಡಿದ ಸಚಿವರು ಯಾರು?

ಸರಕಾರವು ಸಂಪೂರ್ಣ ದಿವಾಳಿಯತ್ತ ನಡೆದಿದೆ ಎಂಬುದು ಆರ್ಥಿಕ ಇಲಾಖೆ ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದಿರತಕ್ಕÀ ಪತ್ರದಿಂದ ಗೊತ್ತಾಗುತ್ತದೆ. ಯಾವ ಸಚಿವರು ಈ ಪತ್ರವನ್ನು ಮಾಧ್ಯಮಗಳಿಗೆ ಲೀಕ್ ಮಾಡಿದರು ನಮಗೆ ಲೀಕ್ ಮಾಡಿದರು ಎಂಬುದನ್ನು ಉಲ್ಲೇಖ ಮಾಡಿದರೆ ಮುಖ್ಯಮಂತ್ರಿಗಳಿಗೆ ನೋವಾಗುತ್ತದೆ ಎಂದು ವ್ಯಂಗ್ಯವಾಡಿದರು.

ಕೇಂದ್ರಕ್ಕೆ ಪತ್ರ ಬರೆಯುವ ಷಡ್ಯಂತ್ರ..
ಒಂದು ಕಡೆ ಭೀಕರ ಬರ ಇದೆ. ಭೀಕರ ಬರದ ಸಂದರ್ಭದಲ್ಲಿ ಪರಿಹಾರ ಕೊಡಬೇಕಿದೆ. ಆದರೆ, ಮುಖ್ಯಮಂತ್ರಿಗಳು ಕೇವಲ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೈ ತೊಳದುಕೊಳ್ಳತಕ್ಕಂತÀ ಷಡ್ಯಂತ್ರ ಕುತಂತ್ರ ಮಾಡುವಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪರಿಹಾರದ ವಿಷಯದಲ್ಲಿ ಯಡಿಯೂರಪ್ಪನವರು ಮಾದರಿ…

ಹಿಂದೆ ಬಿ.ಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ತುರ್ತು ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಒಂದು ಕುಟುಂಬಕ್ಕೆ 10,000 ರೂ. ಪರಿಹಾರ ಘೋಷಣೆ ಮಾಡಿದ್ದರೋ ಅದೇರೀತಿ ಪರಿಹಾರ ಕೊಡಬೇಕು. ಬಡವರು ಮನೆ ಕಳೆದುಕೊಂಡಾಗ ಕೇಂದ್ರ ಸರ್ಕಾರಕ್ಕೆ ಕಾಯ 5 ಲಕ್ಷ ಘೋಷಣೆ ಮಾಡಿದರು ಅದೇರೀತಿ ಮುಖ್ಯಮಂತ್ರಿಗಳೂ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಭೀಕರ ಬರಗಾಲದ ಸಂದರ್ಭದಲ್ಲಿ ನಾಟಕ ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ. ರೈತರಿಗೆ ಪರಿಹಾರ ಕೊಡಲೇಬೇಕು ಎಂದು ಒತ್ತಾಯಿಸಿದರು.
ಸಾಲ ಮನ್ನಾವನ್ನೂ ಕೂಡ ಮಾಡಬೇಕಾಗುತ್ತದೆ. ವಿದ್ಯುತ್ ಕೊಡಬೇಕು ಅಂತ ಹೇಳಿದ್ರೆ ಛತ್ತೀಸ್‍ಗಡದಿಂದ ವಿದ್ಯುತ್ ಖರೀದಿ ಮಾಡ್ತಾರೋ ಎಷ್ಟು ರೇಟಿಗೆ ಖರೀದಿ ಮಾಡ್ತಾರೋ ನಮಗೆ ಅದು ಗೊತ್ತಿಲ್ಲ. ಆದರೆ ಸಂಕಷ್ಟದಲ್ಲಿ ಇರತಕ್ಕಂತಹ ರೈತರಿಗೆ ಇವತ್ತು ಆ ವಿದ್ಯುತ್ ಖರೀದಿ ಮಾಡಿ ನೀಡಬೇಕು. ಅದೇ ರೀತಿ ಹಾಲಿಗೆ ಸಹಾಯಧ£, ಹಿಂದಿನ ಬಾಕಿ ಕೂಡ ಕೊಡಬೇಕು. ಅದನ್ನು ಹೆಚ್ಚು ಮಾಡಬೇಕು ಎಂದು ಆಗ್ರಹಿಸಿದರು.

ರಸ್ತೆ ಅಭಿವೃದ್ಧಿಯೂ ಮರೀಚಿಕೆ..

ಮುಖ್ಯಮಂತ್ರಿಗಳು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ ಪಡಿಸುತ್ತೇವೆ ಅಂತ ಹೇಳಿದ್ದರು. ಇದು ಕೂಡ ಆಗುವ ಭರವಸೆ ಇಲ್ಲ. ಮುಖ್ಯಮಂತ್ರಿಗಳೇ ನಿಮಗೆ ಯಾವುದೇ ಹೊಸ ಯೋಜನೆಗಳಿಗೆ ನಾವು ಹಣ ಕೊಡೋದಕ್ಕೆ ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಪದೇ ಪದೇ ಬಹಳ ಸ್ಪಷ್ಟವಾಗಿ ಹೇಳುತ್ತಿದೆ ಎಂದರು.

ಕಾಂಗ್ರೆಸ್ಸಿನದು ಬಾಕಿಗಳ ಸರ್ಕಾರ…

ರಾಜ್ಯ ಸರ್ಕಾರ ಸಾರಿಗೆ ಇಲಾಖೆಗೆ ಸರಕಾರವು ಆರು ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ ಇದರ ಪರಿಣಾಮ ಏನು ಅಂತ ಹೇಳಿದ್ರೆ ಬಸ್ ಡ್ರೈವರ್ ಗಳಿಗೆ ಸಂಬಳ ಕೊಡೋದಕ್ಕೆ ಆಗುತ್ತಿಲ್ಲ ಕ್ಲೀನರ್ ಗಳಿಗೆ ಸಂಬಳ ನೀಡಲು ಆಗುತ್ತಿಲ್ಲ. ಒಟ್ಟಾರೆಯಾಗಿ ಈ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಾಕಿಗಳನ್ನು ಉಳಿಸಿಕೊಂಡ ಸರ್ಕಾರ ಎಂದು ಟೀಕಿಸಿದರು.

ಮಾಜಿ ಗೃಹ ಸಚಿವ ಮತ್ತು ಶಾಸಕ ಅರಗ ಜ್ಞಾನೇಂದ್ರ, ವಿಧಾನಸಭೆಯ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್. ಪಾಟೀಲ್, ಶಾಸಕರಾದ ಬಿ. ಸುರೇಶ್ ಗೌಡ, ಡಾ. ವೈ. ಭರತ್ ಶೆಟ್ಟಿ, ಮಹೇಶ್ ಟೆಂಗಿನಕಾಯಿ ಅವರು ಭಾಗವಹಿಸಿದ್ದರು.

 

ಆರ್ಥಿಕ ಇಲಾಖೆ ಪತ್ರವೇ ಸರ್ಕಾರದ ದಿವಾಳಿತನದ ಕನ್ನಡಿ: ಜನರ ಕಣ್ಣಿಗೆ ಮಣ್ಣೆರಚುವುದನ್ನು ಮುಖ್ಯಮಂತ್ರಿ ನಿಲ್ಲಿಸಲಿ – ಬಿ.ವೈ. ವಿಜಯೇಂದ್ರ

Hot this week

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

Topics

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

Related Articles