ಕರ್ನಾಟಕ ವಿಧಾನಪರಿಷತ್ತಿನ 4 ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ಘೋಷಣೆ: ಅಕ್ಟೋಬರ್ 23ಕ್ಕೆ ಮತದಾನ

ಬೆಂಗಳೂರು: ಕರ್ನಾಟಕ ವಿಧಾನಪರಿಷತ್ತಿನ( Karnataka Legislative Council) ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಒಟ್ಟು ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ (ECI) ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
ಹಾಲಿ ಸದಸ್ಯರ ನಿವೃತ್ತಿಯಿಂದ ತೆರವಾಗಲಿರುವ ಈ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ಮತದಾನ ನಡೆಯಲಿದೆ.
ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಶಶೀಲ್ ಜಿ. ನಮೋಶಿ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಶ್ರೀ ಪುಟ್ಟಣ್ಣ, ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚಿದಾನಂದ ಎಂ. ಗೌಡ ಹಾಗೂ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಎಸ್‌ವಿ ಸಂಕನೂರ ಅವರ ಅಧಿಕಾರಾವಧಿಯು 2026ರ ನವೆಂಬರ್ 11ರಂದು ಮುಕ್ತಾಯಗೊಳ್ಳಲಿದೆ.
ಚುನಾವಣಾ ವೇಳಾಪಟ್ಟಿ ಮುಖ್ಯಾಂಶಗಳು :
ಚುನಾವಣಾ ಅಧಿಸೂಚನೆಯು 2026ರ ಸೆಪ್ಟೆಂಬರ್ 29ರ ಮಂಗಳವಾರದಂದು ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು 2026ರ ಅಕ್ಟೋಬರ್ 6 ಕೊನೆಯ ದಿನವಾಗಿದ್ದು, ಅಕ್ಟೋಬರ್ 7ರಂದು ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂತೆಗೆದುಕೊಳ್ಳಲು 2026ರ ಅಕ್ಟೋಬರ್ 9 ಕೊನೆಯ ದಿನವಾಗಿದೆ.
ಅಕ್ಟೋಬರ್ 23ರ ಶುಕ್ರವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ತದನಂತರ ಅಕ್ಟೋಬರ್ 27ರ ಮಂಗಳವಾರದಂದು ಎಣಿಕೆ ಕಾರ್ಯ ನಡೆಯಲಿದ್ದು, ಅಕ್ಟೋಬರ್ 31ರ ಒಳಗಾಗಿ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಚುನಾವಣೆ ಘೋಷಣೆಯಾಗಿರುವ ಕ್ಷೇತ್ರಗಳಾದ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಜಿಲ್ಲೆಗಳಾದ  ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ತುಮಕೂರು; ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಜಿಲ್ಲೆಗಳದ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ; ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಜಿಲ್ಲೆಗಳಾದ ಬಳ್ಳಾರಿ, ಬೀದರ್, ಗುಲ್ಬರ್ಗ (ಕಲಬುರಗಿ), ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ  ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಸಂಪೂರ್ಣ ಬಿ.ಬಿ.ಎಂ.ಪಿ (BBMP) ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Hot this week

ಪೌರಾಣಿಕ ಹಿನ್ನೆಲೆಯ ಅಪೂರ್ವ ತಾಣ! ಒಡಿಶಾದ ಗಂಧಮಾರ್ದನ ಪರ್ವತ ಶ್ರೇಣಿ – ಔಷಧೀಯ ಸಸ್ಯಸಂಪತ್ತು

ಒಡಿಶಾ (Odisha) ರಾಜ್ಯದ ಬರ್ಗಢ್ ಮತ್ತು ಬಲಾಂಗೀರ್ (Balangeer) ಜಿಲ್ಲೆಗಳ ನಡುವೆ...

ಕರ್ನಾಟಕದ ಸರ್ಕಾರಿ ಸೇವೆಗಳಿಗೆ ಬಹುಭಾಷಾ ಮತ್ತು ಧ್ವನಿ ಆಧಾರಿತ ಪ್ರವೇಶದ ಯೋಜನೆ

ಕರ್ನಾಟಕ ಸರ್ಕಾರವು ಸಾರ್ವಜನಿಕ ಸೇವೆಗಳನ್ನು ಜನರಿಗೆ ಅವರ ಆಯ್ಕೆಯ ಭಾಷೆಯಲ್ಲಿ ಸುಲಭವಾಗಿ...

ಕೆನಡಾದ ಲೇಖಕಿ ಆನ್ ಕಾರ್ಸನ್‌ಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ

ಕೆನಡಾದ ಕವಯಿತ್ರಿ, ಪ್ರಬಂಧಕಾರ್ತಿ ಮತ್ತು ಅನುವಾದಕಿ ಆನ್ ಕಾರ್ಸನ್ ಅವರಿಗೆ ಸಾಹಿತ್ಯ...

ಕರ್ನಾಟಕದಲ್ಲಿ ಬರ ಪರಿಹಾರದ ವೆಚ್ಚ ಹೆಚ್ಚಳ: ಸರ್ಕಾರದ ಹಣಕಾಸಿಗೆ ಒತ್ತಡ

ಕರ್ನಾಟಕದಲ್ಲಿ ಬರ ಪರಿಹಾರದ ವೆಚ್ಚ ಹೆಚ್ಚಳ: ಸರ್ಕಾರದ ಹಣಕಾಸಿಗೆ ಒತ್ತಡ ಕರ್ನಾಟಕದಲ್ಲಿ ಬರ...

ಆಂಧ್ರಪ್ರದೇಶದಲ್ಲಿ ತೀವ್ರ ಬರ: 21 ಜಿಲ್ಲೆಗಳ 388 ಮಂಡಲಗಳು ಬಾಧಿತ

ಆಂಧ್ರಪ್ರದೇಶ ಸರ್ಕಾರವು 21 ಜಿಲ್ಲೆಗಳ 388 ಮಂಡಲಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ...

Topics

ಹಿರಿಯ ನಟ ನಾನಾ ಪಾಟೇಕರ್ ನಿಧನ: ಚಿತ್ರರಂಗದಲ್ಲಿ ಶೋಕ

ಮುಂಬೈ: ಭಾರತೀಯ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ಸಾಂಸ್ಕೃತಿಕ ಐಕಾನ್...

ಜಿಎಸ್‌ಟಿ ಅಧಿಕಾರಿಗಳ ಬಂಧನಾಧಿಕಾರ ರದ್ದು; ಪ್ರಾಸಿಕ್ಯೂಷನ್ ಮಿತಿ ₹1 ಕೋಟಿಯಿಂದ ₹5 ಕೋಟಿಗೆ ಏರಿಕೆ!

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ...

ನಿತ್ಯ ಪಂಚಾಂಗ 09.10.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.10.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA.. ಆಯಣ: ದಕ್ಷಿಣಾಯನ AYANA:...

Related Articles