ಬೆಂಗಳೂರು: ಕರ್ನಾಟಕದ ಅಮೂಲ್ಯ ನೈಸರ್ಗಿಕ ಸಂಪತ್ತು(Natural Wealth), ಪ್ರಮುಖ ನದಿಗಳ ಉಗಮ ಸ್ಥಾನವಾಗಿರುವ ಪಶ್ಚಿಮ ಘಟ್ಟಗಳ ಪರಿಸರ ಮತ್ತು ಜೀವವೈವಿದ್ಯದ ವಿಷಯವು ಕೇವಲ ಪಶ್ಚಿಮಘಟ್ಟದ ವಿಷಯವಲ್ಲ- ಇಡೀ ರಾಜ್ಯದ ವಿಷಯವಾಗಿರುವುದರಿಂದ ಈ ವಿಷಯದ ಕುರಿತು ಇಡೀ ರಾಜ್ಯ ಮಾತನಾಡಬೇಕು ಎಂದು ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ್ ವೈದ್ಯ(Mankal Vaidya) ತಿಳಿಸಿದರು.
ಇಂದು ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಡಾ: ಕಸ್ತೂರಿ ರಂಗನ್ ಸಮಿತಿಯ ವರದಿಯ ಕುರಿತು ವಿಧಾನಸಭೆಯ ವಿಶೇಷ ಅಧಿವೇಶನದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಅರಣ್ಯ ಉಳಿಯಬೇಕು. ಡಾ: ಕಸ್ತೂರಿ ರಂಗನ್ ಅವರ ವರದಿಯನ್ನು ನೋಡಿದರೆ ಮನುಷ್ಯರೇ ಉಳಿಯಬಾರದು ಎಂಬಂತಿದೆ. 2010ರಲ್ಲಿ ಗಾಡ್ಗಿಲ್ ವರದಿ ಸರಿ ಇಲ್ಲವೆಂದು ಡಾ: ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಡಾ: ಕಸ್ತೂರಿ ರಂಗನ್ ವರದಿಯಿಂದ ಅತಿ ಹೆಚ್ಚು ಜನರಿಗೆ ತೊಂದರೆಯಾಗಿದೆ.
ಈಗಾಗಲೇ Sea-Bird -ಗೆ 21000 ಎಕರೆ ಜಮೀನು ನೀಡಲಾಗಿದೆ. ಅರಣ್ಯ ಪ್ರದೇಶಕ್ಕೆ ಬಿಟ್ಟುಕೊಡಲಾಗಿದೆ. ಡಾ: ಕಸ್ತೂರಿ ರಂಗನ್ ವರದಿ ಅನುಸಾರ 80% ಜಮೀನು ಬಿಡಬೇಕಾಗುತ್ತದೆ. ಅರಣ್ಯದ ಪ್ರದೇಶದಲ್ಲಿ ಈಗಾಗಲೇ ಜನರು ಜೀವನವನ್ನು ರೂಪಿಸಿಕೊಂಡಿದ್ದಾರೆ. ವರದಿ ಪ್ರಕಾರ 626ಹಳ್ಳಿ ಸೇರಿಕೊಂಡಿದೆ. ಯಾವುದೇ ಜಾಗ ಉಳಿಯುವುದಿಲ್ಲ. 85000 ಕುಟುಂಬಗಳಿಗೆ ಜಿ.ಪಿ.ಎಸ್ ಮಾಡಿಕೊಟ್ಟಿದೆ. ಅವರೆಲ್ಲ ಎಲ್ಲಿ ಹೋಗಿ ಜೀವನ ನಡೆಸಬೇಕು. ಇದಕ್ಕೆ ಏನು ಮಾಡಿದರೆ ಪರಿಹಾರ ಸಿಗುತ್ತೆ ಎಂಬ ಬಗ್ಗೆ ಯೋಚಿಸಬೇಕಿದೆ. ಯಾವುದೇ ಕಾರಣಕ್ಕೂ ಡಾ: ಕಸ್ತೂರಿ ರಂಗನ್ ವರದಿಯನ್ನು ಪುನರ್ ಪರಿಶೀಲಿಸಲು ಅವಕಾಶ ಕೊಡದೇ ತಿರಸ್ಕರಿಸಲು ಸರ್ಕಾರ ಯೋಚಿಸಬೇಕಿದೆ. ಈ ನಿಟ್ಟಿನಲ್ಲಿ ಕೇವಲ ಸರ್ಕಾರವಲ್ಲದೇ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನರು ಹೋರಾಟ ನಡೆಸಬೇಕಿದೆ ಎಂದರು.
ಡಾ: ಕಸ್ತೂರಿ ರಂಗನ್ ನೇತೃತ್ವದ ತಂಡ ನೀಡಿರುವ ವರದಿಗೆ ವಿರೋಧ ಪಕ್ಷಗಳ ಸದಸ್ಯರ ಪ್ರತಿರೋಧ- ಸಲಹೆ
ಡಾ: ಕಸ್ತೂರಿ ರಂಗನ್ ವರದಿ ಕುರಿತು ವಿರೋಧ ಪಕ್ಷದ ಸದಸ್ಯರಾದ ವಿ. ಸುನಿಲ್ ಕುಮಾರ್, ಅರಬೈಲ್ ಶಿವರಾಮ್ ಹೆಬ್ಬಾರ್, ಭಾಗೀರಥಿ, ಸುರೇಶ್ ಕುಮಾರ್, ಚನ್ನಬಸಪ್ಪ ಅವರುಗಳು ವರದಿಗೆ ಪ್ರತಿರೋಧ ವ್ಯಕ್ತಪಡಿಸಿ ಸದನದಲ್ಲಿ ಮಾತನಾಡಿ ತಮ್ಮ ಸಲಹೆಗಳನ್ನು ನೀಡಿದರು.
ವಿ. ಸುನಿಲ್ ಕುಮಾರ್ ರವರು ಮಾತನಾಡಿ, ಕೇವಲ ರೆಸೂಲೇಷನ್ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ ಯಾವುದೇ ಪ್ರಯೋಜನ ಇಲ್ಲ. ಇದು ಕೇವಲ 10-11 ಜಿಲ್ಲೆಗಳಿಗೆ ಲಾಭ ಅಲ್ಲ ಇಡೀ ರಾಜ್ಯದ ಜನ ಫಲಾನುಭವಿಗಳು. ರಾಜ್ಯದ ಜನ ಪಶ್ಚಿಮಘಟ್ಟದ ಜನರು ಎದುರಿಸುತ್ತಿರುವ ನಷ್ಟದ ಬಗ್ಗೆ ಯೋಜಿಸಬೇಕಿದೆ, ಪರಿಸರ ಉಳಿಯಬೇಕು-ಪಶ್ಚಿಮಘಟ್ಟ ಉಳಿಯಬೇಕು. 5-5-2014ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕ್ಯಾಬಿನೆಟ್ ನಲ್ಲಿ 34 ಅಂಶಗಳನ್ನು ಪ್ಯಾರಾವೈಸ್ ರಿಮಾರ್ಕ್ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು, ಸದರಿ ವರದಿಯಲ್ಲಿನ ಅಂಶಗಳನ್ನು ಪುನರ್ ಪರಾಮರ್ಶಿಸಬೇಕು ಎಂದರು.
ಕರಡು ತಿದ್ದುಪಡಿಗೆ 27-9-2026 ಕೊನೆಯ ದಿನಾಂಕವಾಗಿರುತ್ತದೆ. ಕಾನೂನು ಸಡಿಲ ಮಾಡಲು ಅವಕಾಶವಿದೆ, ಸಮಯವನ್ನು ತೆಗೆದುಕೊಂಡು ಈ ಕುರಿತು ಚರ್ಚಿಸಿ ವೈಜ್ಞಾನಿಕವಾಗಿ ಭೌತಿಕ ಸರ್ವೆ ಮಾಡಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮೈಸೂರು ದಸರಾ-2026 ‘ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳಕ್ಕೆ – ಅರ್ಜಿ ಆಹ್ವಾನ

