ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ವಾಸಿಸುವವರು ಅರಣ್ಯವನ್ನು ಉಳಿಸುವವರೆ ಹೊರತು ಅರಣ್ಯವನ್ನು ಹಾಳು ಮಾಡುವವರಲ್ಲ. ಅರಣ್ಯವನ್ನು ಹಾಳು ಮಾಡುವವರು ಯಾರು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅರಣ್ಯವನ್ನು ಹಾಳು ಮಾಡುವವರು ದೊಡ್ಡ ದೊಡ್ಡ ಕಂಪೆನಿಗಳು. ಅಂತಹ ಕಂಪೆನಿಗಳ ಮೇಲೆ ನಿಗಾ ವಹಿಸಬೇಕು. ಅರಣ್ಯದಲ್ಲಿ ವಾಸಿಸುವವರು ಅರಣ್ಯವನ್ನು ಉಳಿಸುವವರು. ಅವರ ಬದುಕು ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳಬೇಕಾದದು ಸರ್ಕಾರದ ಕರ್ತವ್ಯ(Government’s Duty) ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್(H.K.Patil) ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಡಾ: ಕಸ್ತೂರಿ ರಂಗನ್ ಸಮಿತಿಯ ವರದಿಯ ಕುರಿತು ವಿಧಾನಸಭೆಯ ವಿಶೇಷ ಅಧಿವೇಶನದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರವಾರ ಜಿಲ್ಲೆಯನ್ನು ಗಣನೆಗೆ ತೆಗೆದುಕೊಂಡರೆ ಎಲ್ಲಾ ಸಂಸ್ಕøತಿಯ ಜನ ಕಾರವಾರದಲ್ಲಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಒಟ್ಟು 14 ಲಕ್ಷ ಜನರಲ್ಲಿ ಕಾರವಾರ ಜಿಲ್ಲೆಯೊಂದರಲ್ಲಿ 4-5ಲಕ್ಷ ಜನರ ಮಾನವ ಹಕ್ಕುಗಳು ಉಳಿಯುವುದಿಲ್ಲ. ಯಾವುದೇ ಜನರ ಜೀವನದ ಹಕ್ಕು ಕಸಿದುಕೊಳ್ಳಬಾರದು, ಆಸ್ತಿ ನಶಿಸಿ ಹೋಗಬಾರದು. ಸಾಂಸ್ಕøತಿಕ ಬದುಕು, ಸಾಂಪ್ರದಾಯಿಕ ಜೀವನಶೈಲಿ, ಕೃಷಿಪದ್ದತಿ ಉಳಿಯೋದಿಲ್ಲ.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಿದೆ. ಎಲ್ಲಾ ಸಲಹೆಗಳನ್ನು ಪಡೆದು ರೆಸೂಲೇಷನ್ ನ್ನು ಕೇಂದ್ರಸರ್ಕಾರಕ್ಕೆ ಕಳುಹಿಸಿಕೊಟ್ಟರೆ ಯಾವುದೇ ಪ್ರಯೋಜನವಿರುವುದಿಲ್ಲ. ಪರಿಸರ ಸೂಕ್ಷ್ಮ ಹಳ್ಳಿಗಳು, ಉದ್ಯೋಗ ರಹಿತ ಕುಟುಂಬಕ್ಕೆ ಹೇಗೆ ರಕ್ಷಣೆ ಕೊಡಬೇಕು ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ಹೊಂದಿರುಬೇಕು ಎಂದು ತಿಳಿಸಿದರು.
ಕರ್ನಾಟಕಕ್ಕೆ ಸಂಬಂಧಿಸಿದಂತೆ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶವನ್ನು ಇSಂ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದೆ. ರಾಜ್ಯದ 10 ಜಿಲ್ಲೆಗಳ 1,449 ಗ್ರಾಮಗಳು ಈ ಪ್ರಸ್ತಾವನೆಯಲ್ಲಿ ಸೇರಿವೆ. ಗ್ರಾಮಗಳನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕಿದೆ. 2012 ರಿಂದ ಈವರೆಗೆ ಸಮಯ ವ್ಯರ್ಥ ಆಗಿದೆ. ಭೌತಿಕ ಸರ್ವೆ ಮಾಡಿರುವುದಿಲ್ಲ. ಭೌತಿಕ ಸರ್ವೆ ಮಾಡಿಸಲು ಸಮಯವನ್ನು ಕೇಳಬೇಕಾಗುತ್ತದೆ ಎಂದರು.
ವಕೀಲರಾದ ರವೀಂದ್ರನಾಯಕ್ ಅವರು ಡಾ: ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ ಮಾಡಿದ್ದರು. ಡಾ: ಕಸ್ತೂರಿ ರಂಗನ್ ವರದಿ ವಿರುದ್ಧ ಪ್ರತಿಯೊಂದು ಕುಟುಂಬ ಪತ್ರ ಬರೆದಿದೆ. ಜನ ಚಳುವಳಿ ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿಲ್ಲ. ಡಾ: ಕಸ್ತೂರಿ ರಂಗನ್ ವರದಿ ವಿರುದ್ಧ ರಾಜ್ಯ ಸರ್ಕಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಮೂಲಕ ಅವರಿಂದಲೂ ಸಲಹೆ ಸೂಚನೆ ಪಡೆದುಕೊಳ್ಳಬೇಕು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಎನ್.ಜಿ.ಟಿಗೆ ಅರ್ಜಿ ಹಾಕಬೇಕು ಎಂದು ಸದನದಲ್ಲಿ ತಿಳಿಸಿದರು.
ಡಾ: ಕಸ್ತೂರಿ ರಂಗನ್ ವರದಿ ಬಗ್ಗೆ ಕೇವಲ ಪಶ್ಚಿಮಘಟ್ಟದ ವಿಷಯವಲ್ಲ, ಇಡೀ ರಾಜ್ಯದ ವಿಷಯ- ಉಪ ಸಭಾಧ್ಯಕ್ಷ ಮಂಕಾಳ್ ವೈದ್ಯ

