ಯದುವೀರ್‌ ಒಡೆಯರ್‌ 2 ದಿನ ಟಿಐಎ ಶೃಂಗಸಭೆ 2026 ಚಾಲನೆ : ತಂತ್ರಜ್ಞಾನ, ಸಹಭಾಗಿತ್ವ ಅಂತಾರಾಷ್ಟ್ರೀಯ ಸಹಕಾರಕ್ಕೆ ಅದ್ಯತೆ

*ಬೆಂಗಳೂರು ಮಹಾನಗರಕ್ಕೆ ಮೈಸೂರು ಬೆಂಬಲಿತ ಆಧಾರ ಸ್ತಂಭ: ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ ಅಗತ್ಯ – ಯದುವೀರ್‌ ಒಡೆಯರ್‌*

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲಾ ವಲಯಗಳಲ್ಲೂ ಮುಂಚೂಣಿಯಲ್ಲಿರುವ ಬೆಂಗಳೂರು(Bangalore) ಮಹಾನಗರಕ್ಕೆ ಮೈಸೂರು(Mysore) ನಗರ ಬೆಂಬಲಿತ ಆಧಾರ ಸ್ತಂಭವಾಗಲಿದ್ದು, ಬೆಂಗಳೂರು ಹೊರತುಪಡಿಸಿ ಉಳಿದ ಪ್ರದೇಶಗಳ ಅಭ್ಯುದಯಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Odeyar) ಹೇಳಿದ್ದಾರೆ.

ನಗರದಲ್ಲಿಂದು ಹತ್ತು ದೇಶಗಳಿಗೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದ “ಇಂಡಿಯಾ ಅಡ್ವಾಂಟೇಜ್‌ ಸಮ್ಮಿಟ್‌ – 2026 ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರಿನ ಸಂಸ್ಕೃತಿ, ಪರಂಪರೆ ಉಳಿಸಲು ಆರ್ಥಿಕ ಶಕ್ತಿ ಅಗತ್ಯವಾಗಿದೆ. ಮೈಸೂರು ಪ್ರವಾಸೋದ್ಯಮದಿಂದ ಮಾತ್ರ ಶಾಶ್ವತ ಆದಾಯ ಗಳಿಕೆಗೆ ಸೀಮಿತವಾಗಬಾರದು. ಮೈಸೂರು ವಿಭಾಗ ಬೆಳೆವಣಿಗೆಯಾಗಬೇಕು ಎಂಬುದು ತಮ್ಮ ಹೆಬ್ಬಯಕೆಯಾಗಿದೆ. ಮೈಸೂರಿನಲ್ಲಿ ಉತ್ತಮ ವಾತಾವರಣವಿದ್ದು, ಕೃತಕ ಬುದ್ದಿಮತ್ತೆ, ಜಿಟಿಟಲ್‌ ತಂತ್ರಜ್ಞಾನ, ಸೈಬರ್‌ ಭದ್ರತೆ, ಕ್ಲೌಡ್‌ ಕಂಪ್ಯೂಟಿಂಗ್‌ ಹೀಗೆ ನಾನಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಮೈಸೂರಿಗೆ ಅವಕಾಶವಿದೆ.

ಭಾರತದ ಬೆಳವಣಿಗೆಯಲ್ಲಿ ತಂತ್ರಜ್ಞಾನ ಅತ್ಯಂತ ಮಹತ್ವದ್ದಾಗಿದೆ. ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವುದು ಜನಪ್ರತಿನಿಧಿಗಳ ಗುರಿಯಾಗಿದ್ದು, ಬರುವ 2047 ರ ವೇಳೆಗೆ ಸಮಗ್ರ, ಸಂಪೂರ್ಣ ಗುರಿ ಸಾಧನೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಧ್ಯೇಯವಾಗಿದೆ. ಕೈಗಾರಿಕಾ ವಲಯ ಇದಕ್ಕೆ ಕೈಜೋಡಿಸಬೇಕು ಎಂದರು.

ಟಿಐಎ ಸಮ್ಮಿಟ್‌ ಮತ್ತು ಫ್ಯೂಚರ್‌ ಐಸಿಟಿ ಫೋರಂ ಅಧ್ಯಕ್ಷ ಜೋಸ್ ಜೇಕಬ್ ಕೆ ಶೃಂಗಸಭೆಯನ್ನು ಉದ್ಘಾಟಿಸಿ, ವಿದ್ಯಾನ್‌ ಎಐ ಕೃತಕ ಬುದ್ದಿಮತ್ತೆ ವೇದಿಕೆ ಲೋಕಾರ್ಪಣೆ ಮಾಡಿ ಮಾತನಾಡಿ, “ತಂತ್ರಜ್ಞಾನದ ಭವಿಷ್ಯ ಕೇವಲ ಸ್ಮಾರ್ಟ್ ಆಗಿರುವುದಷ್ಟೇ ಸಾಲದು; ಅದು ಮಾನವಕೇಂದ್ರಿತವಾಗಿರಬೇಕು, ಕೃತಕ ಬುದ್ಧಿಮತ್ತೆ ಆಧಾರಿತವಾಗಿರಬೇಕು ಮತ್ತು ಫಲಿತಾಂಶಕೇಂದ್ರಿತವಾಗಿರಬೇಕು” ಎಂದು ಹೇಳಿದರು.

ಹೋಚ್‌ಶುಲೆ ಹೋಫ್, ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್‌ನ ಅಧ್ಯಕ್ಷ ಪ್ರೊ. ಡಾ. ಡಾ. ಹಿ.ಸಿ. ಜುರ್ಗೆನ್ ಲೆಹ್‌ಮನ್ ಮಾತನಾಡಿ, ಡಿಜಿಟಲೀಕರಣದ ವೇಗ ವೃದ್ಧಿಸುತ್ತಿರುವ, ಜಾಗತಿಕ ಸಹಭಾಗಿತ್ವಗಳಲ್ಲಿ ಬದಲಾವಣೆ ಹಾಗೂ ಮೂಲಸೌಕರ್ಯ, ಸಂಪನ್ಮೂಲಗಳ ಮೇಲಿನ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ ತಾಂತ್ರಿಕ ಸಾಮರ್ಥ್ಯ ಹಾಗೂ ಅಂತಾರಾಷ್ಟ್ರೀಯ ಸಹಕಾರವನ್ನು ವಿಸ್ತರಿಸಲು ಆರ್ಥಿಕ, ಪರಿಸರ ಹಾಗೂ ಸಾಮಾಜಿಕ ಫಲಿತಾಂಶಗಳಾಗಿ ಪರಿವರ್ತಿಸುವುದು ಅಗತ್ಯವಾಗಿದೆ ಎಂದರು.

ಬವರೇಯನ್‌ ಸಂಸದೆ ಉಲ್ರಿಕೆ ಮುಲ್ಲರ್‌ ಮಾತನಾಡಿ, ಕರ್ನಾಟಕ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ವಿಪುಲ ಅವಕಾಶಗಳಿವೆ. ಹವಾಮಾನ ಬದಲಾವಣೆ, ಪ್ರಾಕೃತಿಕ ವಿಕೋಪಗಳಿಗೆ ಸೂಕ್ತ ಪರಿಹಾರ ರೂಪಿಸಲು ಪರಸ್ಪರ ಕೈಜೋಡಿಸದರೆ ಎರಡೂ ದೇಶಗಳಿಗೆ ಅನುಕೂಲವಾಗಲಿದೆ ಎಂದರು.

ಜಿಎಬಿ ಶೃಂಗಸಭೆಯ ಸಂಚಾಲಕ ಅನಿಲ್‌ ಕುಮಾರ್‌ ತಲ್ಲಂ ಮಾತನಾಡಿ, ಡಿಸೆಂಬರ್‌ 25 ರಿಂದ ಮೂರು ದಿನಗಳ ಕಾಲ ಜಿಜಬಿ ಶೃಂಗಶಭೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಸಮ್ಮೇಳನ ಉದ್ಘಾಟಿಲಿದ್ದಾರೆ. ಕೇಂದ್ರ ಸರ್ಕಾರದ ಆರು ಮಂದಿ ಸಚಿವರು, ಐದು ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಜರ್ಮನಿ ರಾಯಬಾರಿ ಡಾ. ಕ್ರಿಸ್ಟೋಫ್‌ ದೋರ್ಸ್‌ ಚೆಫೆಲ್ಡಟ್‌, ಬವೇರಿಯಾದ ಜಿಲ್ಲಾ ಗೌರ್ನರ್‌ ಡಾ. ಒಲಿವರ್‌ ಬಾರ್‌, ಬೆಂಗಳೂರಿನಲ್ಲಿ ಡೆನ್ಮಾರ್ಕ್‌ ರಾಯಭಾರಿ ಪೀಟರ್‌ ವಿಂಥೆರ್‌ ಸ್ಚುಮಿಡ್ಟ್‌, ಬೆಂಗಳೂರಿನಲ್ಲಿ ಇಟಲಿ ರಾಯಬಾರಿ ಜಿಂಡೋಮೆನಿಕೋ ಮಿಲಾನೋ, ಸಿಜ್ಜರ್‌ ಲ್ಯಾಂಡ್‌ ರಾಯಭಾರಿ ಡಾ. ಅಂಗೇಲ ಹೊನೆಗ್ಗೆರ್‌, ದಕ್ಷಿಣ ಭಾರತದಲ್ಲಿ ಇಸ್ರೇಲ್‌ ರಾಯಬಾರಿ ಒರ್ಲಿ ವೇಟ್ಜ್ ಮ್ಯಾನ್‌ ಮತ್ತಿತರೆ ರಾಯಬಾರಿ ಕಚೇರಿ ಹಿರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.

Hot this week

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

Topics

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

Related Articles