ಅವೈಜ್ಞಾನಿಕ ಅಂಶ ಸರಕಾರಕ್ಕೆ ಶಿಫಾರಸ್ಸು ಪಟ್ಟಿ ನ್ಯಾ. ದಾಸ್ ಅವರಿಂದ ಬಿಡುಗಡೆ :

ಬೆಂಗಳೂರು : ಕೇಂದ್ರ ಸರ್ಕಾರದ(Central Government) ಅರಣ್ಯ ಇಲಾಖೆಯಿಂದ ಕಸ್ತೂರಿ ರಂಗನ್(Kasturi Rangan) ವರದಿಯ 7 ನೇ ಅಧಿಸೂಚನೆಗೆ ಆಕ್ಷೇಪಿಸಿ ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕ ಅಂಶ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರಾಜ್ಯ ಅರಣ್ಯ  ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ರಚಿಸಲಾದ ಶಿಫಾರಸ್ಸು ಪಟ್ಟಿಯನ್ನ ವಿಶ್ರಾಂತ ನ್ಯಾಯ ಮೂರ್ತಿ ಎಚ್ ಎನ್ ನಾಗಮೋಹನದಾಸ(H.N.Nagamohandas), ಅವರಿಂದ ಬಿಡುಗಡೆಗೊಳಿಸಿದ ನಂತರ  ಅರಣ್ಯ ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಹೋರಾಟಗಾರರ ನಿಯೋಗವು ಭೇಟಿಯಾಗಿ ಬೌತಿಕ ಸರ್ವೇ ಮತ್ತು ಗ್ರಾಮ ಸಭೆ ನಿರ್ಣಯಕ್ಕೆ ಆಗ್ರಹಿಸಿಸಲಾಯಿತು ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ(Raveendra) ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋರಾಟಗಾರರ ವೇದಿಕೆಯ ನಿಯೋಗವು ಇಂದು ಅರಣ್ಯ ಸಚಿವರ ಗೃಹ ಕಛೇರಿಯಲ್ಲಿ ಭೇಟಿಯಾಗಿ , ಕಸ್ತೂರಿ ರಂಗನ್ ವರದಿಯ ಅವೈಜ್ಞಾನಿಕ ಅಂಶವನ್ನು ಪ್ರಸ್ತಾಪಿಸಿದ್ದಲ್ಲದೇ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಆಕ್ಷೇಪಿಸಬೇಕಾದ ಶಿಫಾರಸ್ಸುಗಳ ಕುರಿತು ಚರ್ಚಿಸಲಾಯಿತು ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಅದರಂತೆ,  ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಕಾರ್ಯಾಲಯದಲ್ಲಿ ವಿಶ್ರಾಂತ ನ್ಯಾಯಮೂರ್ತಿ ದಾಸ್ ಅವರು ಶಿಫಾರಸ್ಸಿನ ಪಟ್ಟಿ ಬಿಡುಗಡೆಗೊಳಿಸಿದರು  ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ  ಅಂಶಗಳನ್ನು ಹೊಂದಿರುವುದಲ್ಲದೇ, ಪ್ರಾಯೋಗಿಕವಾಗಿ ಸಮಿತಿಯ ಸದಸ್ಯರು ಪಶ್ಚಿಮ ಘಟ್ಟದ ಹಳ್ಳಿಗಳಿಗೆ ಭೇಟಿ ನೀಡದೇ, ಕೇವಲ ಉಪಗೃಹ ಚಿತ್ರಗಳನ್ನ ಆಧಾರವಾಗಿ ಇಟ್ಟುಕೊಂಡು ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸುವುದು ಹಾಗೂ ಕೃಷಿ ಚಟುವಟಿಕೆಯ ಪ್ರದೇಶವನ್ನು ಸಹಿತ ನೈಸರ್ಗಿಕ ಅರಣ್ಯವೆಂದು ತಪ್ಪಾಗಿ ವರ್ಗಿಕರಿಸಲಾಗಿದೆ ಹಾಗೂ ಗ್ರಾಮದ ಕನಿಷ್ಠ 20 ಪ್ರತಿಷ್ಠಿತ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿ ಇಡೀ ಗ್ರಾಮವನ್ನೇ ಸೇರಿಸಿರುವುದು ಸಮರ್ಥನೀಯವಲ್ಲವೆಂದು ಸಚಿವರ ಗಮನಕ್ಕೆ ನೀಯೋಗವು ತರಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಸರ ರಕ್ಷಣಾ ವಲಯಗಳ ಸುತ್ತಲಿನ 10 ಕೀಮಿ ಪ್ರದೇಶಗಳನ್ನ ಭಫರ್ ವಲಯವೆಂದು ಗುರುತಿಸಿರುವುದು, ವರದಿ ತಯಾರಿಸುವಾಗ ಜನಪ್ರತಿನಿಧಿ ಮತ್ತು ಸ್ಥಳೀಯ ಸಂಸ್ಥೆಗಳ, ಜನಪ್ರತಿನಿಧಿಗಳ, ಗ್ರಾಮ ಸಭೆಗಳ ಮಾನ್ಯತೆ ನೀಡದೇ ಇರುವುದು ಅವೈಜ್ಞಾನಿಕ ವರದಿಗೆ ಕಾರಣವಾಗಿದೆ ಎಂದು ಹಾಗೂ ಸಮಿತಿಯು ಸಾರ್ವಜನಿಕ  ವಿಚಾರಣೆ ಜರುಗಿಸದೇ ಇರುವುದು ಕಸ್ತೂರಿ ರಂಗನ್ ವರದಿಯ ತಾಂತ್ರೀಕ ದೋಷಕ್ಕೆ ಕಾರಣವಾಗಿದೆ ಎಂದು ನಿಯೋಗದ ನೇತೃತ್ವವಹಿಸಿದ ರವೀಂದ್ರ ನಾಯ್ಕ ಅವೈಜ್ಞಾನಿಕ ವರದಿಯ ಕುರಿತು ಸಚಿವರಲ್ಲಿ ಪ್ರಸ್ತಾಪಿಸಿದರು.

ಈ ಹಿಂದೆ ರಾಜ್ಯ ಸರ್ಕಾರದ ಸಚಿವ ಸಂಪೂಟ ಉಪ ಸಮಿತಿ ರಚಿಸಿ ಸಚಿವ ಸಂಪೂಟ ಸಭೆಯಲ್ಲಿ ಅಕ್ಟೋಬರ್ 2015 ರಲ್ಲಿ ತೆಗೆದುಕೊಂಡ ನಿರ್ಣಯ, ಕರ್ನಾಟಕದ ಸೂಕ್ಷ್ಮ ಪ್ರದೇಶವೆಂದು 201668 ಇದ್ದು, ಅವುಗಳಲ್ಲಿ ಈಗಾಗಲೇ 16,632 ಸಂರಕ್ಷೀತ ಅರಣ್ಯವೆಂದು ಘೋಷಿಸಲ್ಲಟ್ಟಿದೆ. ಹೀಗಿರುವಾಗ ಹೆಚ್ಚಿನ ನಿರ್ಭಂಧ ಅವಶ್ಯವಿಲ್ಲವೆಂದು ರಾಜ್ಯ ಸರ್ಕಾರ ನಿಲುವು ಪ್ರಕಟಿಸಿದೆ. ಅಲ್ಲದೇ, ಜನ ಜೀವನ ಪ್ರದೇಶದಿಂದ ಸೂಕ್ಷ್ಮ ಪ್ರದೇಶದಿಂದ ಹೊರಗಿಡಬೇಕೇಂದು ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಆಕ್ಷೇಪಿಸಿದೆ ಎಂದು ನಿಯೋಗವು ಸಚಿವರ ಗಮನಕ್ಕೆ ತರಲಾಯಿತು ಎಂದು ಪ್ರಸ್ತಾಪಿಸಿದರು.
ಹೋರಾಟಗಾರರ ವೇದಿಕೆಯ ಸಚಿವರಿಗೆ ಸಲ್ಲಿಸಿದ ಶಿಫಾರಸ್ಸು ಪಟ್ಟಿಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಕ್ಕೆ ಡಿಸೆಂಬರ್ ೨೦೧೩ ಮತ್ತು ಮಾರ್ಚ 2014 ರಲ್ಲಿ ಗಡಿರೇಖೆ ವ್ಯತ್ಯಾಸದಲ್ಲಿ ಉಂಟಾಗಿರುವ ಸ್ಪಷ್ಟಿಕರಣಕ್ಕೆ ರಾಜ್ಯವು ಬೌತಿಕ ಪರಿಶೀಲನೆೆ (ಸರ್ವೆ) ಮೂಲಕ ನಿಯೋಜಿಸಲು ಸುತ್ತೋಲೆ ನೀಡಿದ್ದಾಗ್ಯೂ ಕೇರಳಾ ರಾಜ್ಯ ಮಾತ್ರ ಭೌತಿಕ ಪರಿಶೀಲನೆ (ಸರ್ವೆ) ಜರುಗಿಸಲಾಗಿತ್ತು ಎಂದು ಪ್ರಸ್ತಾಪಿಸಲಾಗಿದೆ ಎಂದು ನಿಯೋಗವು ಚರ್ಚೆಯ ಸಂಧರ್ಭದಲ್ಲಿ ಪ್ರಸ್ತಾಪಿಸಿತು.
ಹೋರಾಟಗಾರರ ವೇದಿಕೆಯ ರಾಜ್ಯ ಸಂಚಾಲಕಿ ರಂಜಿತಾ ರವೀಂದ್ರ ,  ಜಿಲ್ಲಾ ಸಂಚಾಲಕ ಮಹಭಲೇಶ್ವರ ನಾಯ್ಕ ಬೇಡ್ಕಣಿ, ಬಿಡಿ ನಾಯ್ಕ ಕುರಗೆತೋಟ,ಭಾಸ್ಕರ್ ಕುರಗೆತೋಟ,  ಶ್ರೀಧರ ಎಸ್ ಹೆಗಡೆ ಕೆರೆಮನೆ, ಜಗದೀಶ್ ನಾಯ್ಕ ಬಿಕ್ಕಳಸೆ, ಆರೀಫ್ ಶೇಖ ಬಿಸಲಕೊಪ್ಪ ನಿಯೋಗದಲ್ಲಿ ಉಪಸ್ಥಿತರಿದ್ದರು.

ಗಡಿರೇಖೆ ದೋಷ:
ಗಾಡ್ಗೀಳ್ ವರದಿಯಲ್ಲಿ ಗಡಿರೇಖೆ ಗುರುತಿಸುವಲ್ಲಿ  ದೋಷಗಳನ್ನು ಹೊಂದಿದೆ ಎಂದು ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.  ಇದರಿಂದ ಉಪಗ್ರಹ ಸಮಿತಿಯ ದೋಷದಿಂದಾಗಿ ಶತಮಾನಗಳಿಂದ ಜನರು ವಾಸಿಸುತ್ತೀರುವ ಜನವಸತಿ ಪ್ರದೇಶ, ಕೃಷಿ ಭೂಮಿ , ಗ್ರಾಮೀಣ ಮೂಲಕ ಸೌಕರ್ಯ  ಹಾಗೂ ಅರಣ್ಯವಾಸಿಗಳ ವಾಸಿಸುವ ಪ್ರದೇಶಗಳನ್ನು ಸಹಿತ ಪರಿಸರ ಸೂಕ್ಷ್ಮದೊಳಗೆ ಸೇರಿಸಲಾಗುವುದು ಅವೈಜ್ಞಾನಿಕವೆಂದು ಅರಣ್ಯ ಸಚಿವರ ಗಮನಕ್ಕೆ ತರಲಾಯಿತು ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ

ಕೇರಳಾ ಸರ್ಕಾರದ ಕ್ರಮ:
ಕಸ್ತೂರಿ ರಂಗನ್ ವರದಿಯನ್ನ ಮರು ಮೌಲ್ಯಮಾಪನ ಮಾಡಲು ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆ ,ಅಧ್ಯಯನ ವಿಶೇಷ ಸಮಿತಿ ರಚಿಸಿ, ಸೂಕ್ಷ್ಮ ಪ್ರದೇಶದ ಭೌತಿಕ ಪರಿಶೀಲನೆ ಮೂಲಕ ಜನವಸತಿ ಪ್ರದೇಶ ಗುರುತಿಸುವಿಕೆಯೊಂದಿಗೆ ಅರಣ್ಯ, ಖಾಸಗಿ ಮತ್ತು ಅರಣ್ಯೇತರ ಪ್ರದೇಶ ಬರ‍್ಪಡಿಸಿರುವುದು ಕೇರಳಾ ಸರ್ಕಾರದ ವಿಶೇಷ ಕಾರ್ಯವಾಗಿತ್ತು ಎಂದು ನಿಯೋಗವು ಸಚಿವರಿಗೆ ನೀಡಿದ ಶಿಫಾರಸ್ಸು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಕೇರಳಾ ರಾಜ್ಯಾದ್ಯಂತ ವರದಿಯ ಮೂಲ ಅಂಶ  ಮಳಿಯಾಳಂ ಆವೃತ್ತಿಯಲ್ಲಿ 10 ಸಾವಿರ ಪುಸ್ತಕ ಮುದ್ರಿಸಿತು. ಅಲ್ಲದೇ, ಮಾಹಿತಿಗಾಗಿ 24 ಗಂಟೆಗಾಗಿ ಸಹಾಯವಾಣಿ, ಪ್ರಚಾರಕ್ಕಾಗಿ ವೆಬ್ ಸೈಟ್ ಪ್ರಾರಂಭಿಸಿ ಕಸ್ತೂರಿ ರಂಗನ್ ಅಂಶದ ಕುರಿತು ವ್ಯಾಪಕವಾಗಿ ವಿಶೇಷ ಕಾರ್ಯ ಜರುಗಿಸಲಾಗಿರುವುದು ಅಲ್ಲೀಯ ಸರ್ಕಾರದ ಮಹತ್ವದ ಕಾರ್ಯವೆಂದು ಸಚಿವರಲ್ಲಿ ನಿಯೋಗವು ಪ್ರಸ್ತಾಪಿಸಿತು.  ವೈಜ್ಞಾನಿಕ ಹಿನ್ನಲೆಯಲ್ಲಿ ಕೇರಳಾ ಸರ್ಕಾರವು ಅಧ್ಯಯನದೊಂದಿಗೆ ಗಡಿ ಗುರುತಿಸಿ ವರದಿಯಲ್ಲಿನ ಅವೈಜ್ಞಾನಿಕ ಅಂಶವನ್ನ ಬಿಂಬಿಸುವದೊoದಿಗೆ ಕೇರಳಾದಲ್ಲಿ 13108 ಚ.ಕೀ ಪ್ರಥಮ ಅಧಿಸೂಚನೆಯಲ್ಲಿ ಪ್ರಕಟಿಸಿದ ಕ್ಷೇತ್ರವನ್ನು 9993.07 ಚ.ಕೀ ತಗ್ಗಿಸಲು ಕೇರಳಾ ಸರ್ಕಾರ ಕಾರ್ಯ ಶ್ಲಾಘನೀಯವೆಂದು ಸಚಿವರ ಗಮನಕ್ಕೆ ತರಲಾಯಿತು ಎಂದು ನಿಯೋಗವು ಸಚಿವರಲ್ಲಿ ಉಲ್ಲೇಖಿಸಿತು.ಸಚಿವರಿಂದ ಅಭಿನಂದನೆ:
ಅರಣ್ಯವಾಸಿಗಳ ಪರವಾಗಿ ನಿರಂತರ 3 ದಶಕಕ್ಕಿಂತಲೂ ಹೆಚ್ಚು ಹೋರಾಟ ಜರುಗಿಸಿದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ರವೀಂದ್ರ ನಾಯ್ಕ ಅವರಿಗೆ ಅರಣ್ಯ ಸಚಿವರಾದ ರಾಮಲಿಂಗ ರೆಡ್ಡಿ ಅವರು, ಸ್ಥಳದಲ್ಲಿ ಹಾಜರಿದ್ದ  ಜಗದ್ಗೂರು ಭಗೀರಥಾ ನಂದಪೂರಿ ಮಹಾಸ್ವಾಮಿ ಕಲಬುರಗಿ ಅವರಿಂದ ಸನ್ಮಾನಿಸಿ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ಹೇಳಿದರು.

ರಾಜ್ಯದ ಬರಪೀಡಿತ ತಾಲೂಕುಗಳ ರೈತರಿಗೆ ಬ್ಯಾಂಕಿಂಗ್ ಸಾಲ ಮರುಪಾವತಿಯಲ್ಲಿ ಭಾರಿ ವಿನಾಯಿತಿ ಘೋಷಣೆ

Hot this week

ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿ.ವೈ.ವಿಜಯೇಂದ್ರ

 ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು(Hot Work)...

ಪ್ರಜಾಸತ್ತಾತ್ಮಕ ವ್ಯವಸ್ಥೆ ದಮನ ಮಾಡುವ ಕೆಲಸ: ಎನ್.ರವಿಕುಮಾರ್

 ಬೆಂಗಳೂರು: ಗೋರಕ್ಷಣೆ, ಸಂಸ್ಕøತಿ ರಕ್ಷಿಸುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು...

ಇಂದು ದೇಶಾದ್ಯಂತ ಸಂವಿಧಾನ ದಿನಾಚರಣೆ: ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ಭಾರತದ ಸಂವಿಧಾನ ಅಂಗೀಕಾರಗೊಂಡ ಐತಿಹಾಸಿಕ ದಿನದ ಸ್ಮರಣಾರ್ಥ ಇಂದು (ನವೆಂಬರ್...

ಜಿಕೆವಿಕೆಯಲ್ಲಿ ನವೆಂಬರ್ 28ರಂದು “ರೈತ ಸಂತೆ”: ತಾಜಾ ಕೃಷಿ ಉತ್ಪನ್ನಗಳು, ಸಿರಿಧಾನ್ಯ ಹಾಗೂ ಸಾವಯವ ವಸ್ತುಗಳ ಮಾರಾಟ

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ (GKVK) ಆವರಣದಲ್ಲಿನ ಗಣಪತಿ ದೇವಸ್ಥಾನದ ಹತ್ತಿರ...

ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಬೆಳೆ ರೋಗಗಳ ಆರಂಭಿಕ ಪತ್ತೆ ಮತ್ತು ನಿಯಂತ್ರಣಕ್ಕೆ ಆಧುನಿಕ...

Topics

ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿ.ವೈ.ವಿಜಯೇಂದ್ರ

 ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು(Hot Work)...

ಪ್ರಜಾಸತ್ತಾತ್ಮಕ ವ್ಯವಸ್ಥೆ ದಮನ ಮಾಡುವ ಕೆಲಸ: ಎನ್.ರವಿಕುಮಾರ್

 ಬೆಂಗಳೂರು: ಗೋರಕ್ಷಣೆ, ಸಂಸ್ಕøತಿ ರಕ್ಷಿಸುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು...

ಜಿಕೆವಿಕೆಯಲ್ಲಿ ನವೆಂಬರ್ 28ರಂದು “ರೈತ ಸಂತೆ”: ತಾಜಾ ಕೃಷಿ ಉತ್ಪನ್ನಗಳು, ಸಿರಿಧಾನ್ಯ ಹಾಗೂ ಸಾವಯವ ವಸ್ತುಗಳ ಮಾರಾಟ

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ (GKVK) ಆವರಣದಲ್ಲಿನ ಗಣಪತಿ ದೇವಸ್ಥಾನದ ಹತ್ತಿರ...

ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಬೆಳೆ ರೋಗಗಳ ಆರಂಭಿಕ ಪತ್ತೆ ಮತ್ತು ನಿಯಂತ್ರಣಕ್ಕೆ ಆಧುನಿಕ...

ಬೆಂಗಳೂರು: ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ...

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ನಾಡಿನ ಜನತೆಗೆ ಅತೀ ಅಮೂಲ್ಯವಾದ ಪುಸ್ತಕಗಳನ್ನು...

ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

  ಬೆಂಗಳೂರು: ಬೆಂಗಳೂರಿನ ಎಂ.ಎಸ್. ಎಂಜಿನಿಯರಿಂಗ್(M.S.Engineering) ಕಾಲೇಜಿನಲ್ಲಿ ಇಂದು ಸಂವಿಧಾನ ದಿನವನ್ನು ಅತ್ಯಂತ...

Related Articles