ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR-2026) ಕಾರ್ಯಕ್ರಮದಡಿಯಲ್ಲಿ ನೀಡಿರುವ ನೋಟೀಸ್‌ಗಳಿಗೆ ಸಂಬಂಧಿಸಿದಂತೆ, ಸದರಿ ಮತದಾರರ ಪರವಾಗಿ ಅವರ ಕುಟುಂಬದ ಯಾವುದೇ ಪ್ರಾಪ್ತವಯಸ್ಕ (Adult) ಸದಸ್ಯರು ಚುನಾವಣಾ ನೋಂದಣಾಧಿಕಾರಿಗಳು (ERO) ಅಥವಾ ಸಹಾಯಕ ಚುನಾವಣಾ ನೋಂದಣಾಧಿಕಾರಿಗಳ (AERO) ಮುಂದೆ ಖುದ್ದಾಗಿ ಹಾಜರಾಗಲು ಆಯೋಗವು ಸಮ್ಮತಿ ನೀಡಿದೆ.
ಪ್ರಮುಖ ಮುಖ್ಯಾಂಶಗಳು:
ಕುಟುಂಬದ ಸದಸ್ಯರ ಹಾಜರಾತಿಗೆ ಅವಕಾಶ:
ಹಿರಿಯ ನಾಗರಿಕರು, ವಿಕಲಚೇತನರು, ರೋಗಿಗಳು ಹಾಗೂ ವಿದೇಶದಲ್ಲಿರುವ ಮತದಾರರು ತಮಗೆ ಬಂದ ನೋಟೀಸ್‌ಗಳಿಗೆ ಉತ್ತರಿಸಲು ಖುದ್ದಾಗಿ ಬರಬೇಕಾದ ಅಗತ್ಯವಿಲ್ಲ. ಅವರ ಪರವಾಗಿ ಕುಟುಂಬದ ಪ್ರಾಪ್ತವಯಸ್ಕ ಸದಸ್ಯರು ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ERO/AERO ಅವರಿಗೆ ಸಲ್ಲಿಸಬಹುದು.
ಪರಿಶೀಲನೆ ಮತ್ತು ವಿಲೇವಾರಿ:
ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿ ನೋಟೀಸ್‌ಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಾರದ ಸಭೆಗಳಲ್ಲಿ ಸ್ಪಷ್ಟನೆ:
ನೋಟೀಸ್ ಜಾರಿಗೊಳಿಸುವ ಮತ್ತು ವಿಲೇವಾರಿ ಮಾಡುವ ಪ್ರಕ್ರಿಯೆಯ ಕುರಿತು ಪ್ರತಿ ವಾರ ನಡೆಯುವ ರಾಜಕೀಯ ಪಕ್ಷಗಳ ಸಭೆಯಲ್ಲಿ ಸ್ಪಷ್ಟ ವಿವರಣೆ ನೀಡುವಂತೆ ERO ಮತ್ತು AERO ಗಳಿಗೆ ನಿರ್ದೇಶಿಸಲಾಗಿದೆ.
ಈ ಕುರಿತು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಜಿಲ್ಲಾ ಚುನಾವಣಾಧಿಕಾರಿಗಳು, ಉಪ ಆಯುಕ್ತರು ಹಾಗೂ ಇಆರ್‌ಒ/ಎಇಆರ್‌ಒಗಳಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
