‘ಸ್ವರ್ಣ ಗೌರಿ’ ವ್ರತ- ಪೂಜೆ- ಕಥೆ ಕುರಿತು ಸರಳ ಮಾಹಿತಿ

ಈ ಸಲ ಭಾದ್ರಪದ ಮಾಸದ ತದಿಗೆ,ಈ ಸಲ ಸೋಮವಾರ ‘ಗೌರಿ- ಗಣಪತಿ ಹಬ್ಬ ಒಂದೇ ದಿನ ಬಂದಿದೆ’. ಈ ವ್ರತವನ್ನು ಮದುವೆ ಯಾದ ಮಹಿಳೆಯರು, ಮತ್ತು ವಿವಾಹ ವಾಗುವ ಹೆಣ್ಣು ಮಕ್ಕಳು, ಮಾಡುವ ವ್ರತ. ‘ಸ್ವರ್ಣ ಗೌರಿ’ ಈ ಹೆಸರೇ ಸೂಚಿಸು ವಂತೆ ಸಂಪಧ್ಭರಿತ, ಅಷ್ಟೈಶ್ವರ್ಯ ಕೊಡುವ ಸ್ವರ್ಣ ಗೌರಿ. ಅರಿಶಿನ ಬಣ್ಣದಿಂದ ಕೂಡಿರುತ್ತಾಳೆ. ಶಿವನ ಅರ್ಧಾಂಗಿ. ಶುಭ ಪ್ರದ ‘ಗೌರಿ’ ವ್ರತ ವ್ರತ ಪದ್ಧತಿ ಇದ್ದವರು ಕ್ರಮವಾಗಿ ಮಾಡಬೇಕು. ಹಾಗೆ ಮಾಡುವವರು ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆ, ಅರ್ಚನೆ, ನೈವೇದ್ಯ ,ಮಂಗಳಾರತಿ ಮಾಡಬೇಕು. ಸಂಸಾರದಲ್ಲಿ ಸುಖ ಸಂತೋಷ, ಸಮೃದ್ಧಿ, ಅಷ್ಟೈಶ್ವರ್ಯ ತುಂಬುತ್ತದೆ (ಅಷ್ಟೈಶ್ವರ್ಯ ಅಂದರೆ, ಧನ -ಕನಕ, ಆರೋಗ್ಯ -ಭಾಗ್ಯ, ಸತಿ- ಪತಿ, ಗಂಡು- ಹೆಣ್ಣು ಮಕ್ಕಳು. ಸುಖ -ಸಂತೋಷ, ವಿದ್ಯೆ ಬುದ್ಧಿ , ಆಯಸ್ಸು ಶ್ರೇಯಸ್ಸು ಗೃಹ ಸುಖ, ಎಲ್ಲವೂ ಸೇರುತ್ತೆ)

ಹಬ್ಬದ ತಯಾರಿ : – ಹಬ್ಬದ ಎರಡು ದಿನ ಮೊದಲೇ ಪಾಡ್ಯದ ದಿನ ಎಣ್ಣೆ ಹಚ್ಚಿ ತಲೆಗೆ ಎರೆದುಕೊಂಡು, ಎರಡು ಕೈಗಳಿಗೆ ಹೊಸ ಬಳೆ ಹಾಕಬೇಕು.( ಪಾಡ್ಯದ ದಿನ ಎಣ್ಣೆ ಹಚ್ಚಿ ಎರೆದು ಕೊಳ್ಳುವುದು- ಬಿದಿಗೆ ದಿನ ಬಳೆ ಹಾಕಿಕೊಳ್ಳುವುದು- ತದಿಗೆ ದಿನ ಪೂಜೆಗೆ ಕೂರುವುದು, ಈ ರೀತಿ ಶಾಸ್ತ್ರ. ಬೆಸ ಮತ್ತು ಸರಿ ಸಂಖ್ಯೆ ಬಲಗೈಗೆ 9, ಎಡ ಕೈಗೆ 8,) ಹಬ್ಬದ ಹಿಂದಿನ ದಿನ, ಪೂಜೆಗೆ ಉಡುವ ಸೀರೆ, ಹೂ, ಒಡವೆ, ಎಲ್ಲ ಜೋಡಿಸಿ, ಹಬ್ಬದ ದಿನ ಮುಂಜಾನೆಯೇ ಸ್ನಾನ- ಪೂಜೆ ಮಾಡಿದರೆ ಅನುಕೂಲ. ಗೌರಿ ಮುಂದೆ ರಂಗೋಲಿ ಹಾಕಿ ಮನೆ ಮುಂದಿನ ಹೊಸ್ತಿಲಿಗೆ ರಂಗೋಲಿ, ಮುಂಬಾಗಿಲಿಗೆ ಮಾವಿನ ತೋರಣ ಕಟ್ಟಬೇಕು.‌ ಕೆನ್ನೆಗೆ ಅರಿಶಿನ, ಹಣೆಗೆ ಕುಂಕು ಮ, ರೇಷ್ಮೆ ಸೀರೆ, ಆಭರಣ ಧರಿಸಿ, ತಲೆಗೆ ಹೂ ಮುಡಿದು ಪೂಜೆಗೆ ಸಿದ್ಧವಾಗಬೇಕು. ಹೆಣ್ಣು ಮಕ್ಕಳಿಗೆ ಗೌರಿ ಪೂಜೆ ಎಂದರೆ ಸಂಭ್ರಮ ಈ ಹಬ್ಬದಲ್ಲಿ( ಶ್ರಾವಣ ಮಾಸವೇ ಹಾಗೆ) ಗೌರಿಯಂತೆ ಸಿಂಗಾರ ಮಾಡಿಕೊಂಡು ವ್ರತ ಮಾಡುವುದು ಹಬ್ಬದ ವಿಶೇಷ. (ಕಿವಿಗೆ ಜುಮ್ಕಿ ಬೆಂಡೋಲೆ, ಮಾಟಿ, ಮುತ್ತಿನ ಬೈತಲೆ, ಸೊಂಟದ ಪಟ್ಟಿ, ರೇಷ್ಮೆ ಸೀರೆ, ಕುಸುರಿ ಬ್ಲೌಸ್, ವಂಕಿ, ನಾಗಮುರಿ ಗೆ, ಪಿಲ್ಲಿ ಕಾಲುಂಗುರ, ಕಾಲ್ಬಳೆ, ಗೆಜ್ಜೆ, ಜಡೆಗೆ ನಾಗರ, ಕುಚ್ಚು, ತಿರುಪಿನ ಹೂವು, ಬಂಗಾರದ ಮಲ್ಲಿಗೆ ಮೊಗ್ಗು, ಮುಡಿತುಂಬ ಮಲ್ಲಿಗೆ, ಹೂವಿನ ಜಡೆ, ಕಣ್ಣಿಗೆ ಕಾಡಿಗೆ, ಸುಗಂಧ, ಕುಂಕುಮ ಕೆಳಗೆ ಬೊಟ್ಟು, ಬೆರಳಿಗೆ ಉಂಗುರ, ಕೈಗೆ ಕಡಗ,) ಹೀಗೆ ವರ್ಷಕ್ಕೊಮ್ಮೆ ಬರುವ ಗೌರಿ ಹಬ್ಬದಲಿ ಅಲಂಕಾರ ಮಾಡಿಕೊಂಡು ಪೂಜೆಗೆ ಕೂರುವುದೇ ಗೌರಿ ಹಬ್ಬದ ಸುವರ್ಣಾವಕಾಶ

ಪೂಜೆಗೆ ಕೂರುವ ಮೊದಲು ಮನೆ ದೇವರ ದೀಪ ಹಚ್ಚಿ, ಹೂ ಏರಿಸಿ ಪೂಜೆ ಮಾಡಿ ಪೂಜೆನ ಕಡ್ಡಿ ನೈವೇದ್ಯ ಮಂಗಳಾರತಿ ಮಾಡಿ, ಹಾಗೆ ತುಳಸಿ ಪೂಜೆ ಮಾಡಿ ಹಿರಿಯರಿಗೆ ನಮಸ್ಕಾರಿಸಿ ಗೌರಿ ಪೂಜೆಗೆ ಕೂರಬೇಕು. (ಪುರೋಹಿತರನ್ನು ಕರೆಸುವವರು ಸರಿ) ಉಳಿದಂತೆ ಗೌರಿ ಪೂಜೆಯ ಸೀಡಿಗಳನ್ನು ಹಿಂದಿನ ದಿನವೇ ನೋಡಿಕೊಂಡಿರಬೇಕು. ಪೂಜೆಗೆ ಕುಳಿತ ಮೇಲೆ ನಡುವೆ ಏಳಬಾ ರದು ಏನಾದರೂ ಬೇಕಾದರೆ ಬೇರೆಯವರ ಹತ್ತಿರ ಹೇಳಬೇಕು, ಟಿ,ವಿ ಅಥವಾ ಟೇಪ್ ರೆಕಾರ್ಡರ್ಗೆ ಗೌರಿ ಹಬ್ಬದ ರೆಕಾರ್ಡ್ ಹಾಕಿಕೊಂಡು (ಎರಡು ದಿನ ಮೊದಲೇ, ಸೀಡಿ,ಟಿ,ವಿ ಎಲ್ಲಾ ಸರಿ ಇದೆಯಾ ನೋಡಿರ ಬೇಕು) ಪುರೋಹಿತರ ಮಂತ್ರಗಳು ಸ್ಪಷ್ಟ ವಾಗಿ ಕೇಳಿಸಬೇಕು. ಕೆಲವರು ಮೊದಲು ಜೋರಾಗಿ “ಸರ್ವ ಮಂಗಳ ಮಾಂಗಲ್ಯೇ” ಇದು ಕೇಳುತ್ತದೆ. ಅಕ್ಷತೆ ಹೂವು ತೆಗೆದು ಕೊಳ್ಳಿ ಉದ್ದರಣೆ ನೀರು ಹಾಕಿಕೊಳ್ಳಿ ಇವು ಕೆಲವೊಮ್ಮೆ ಅರ್ಥವೇ ಆಗುವುದಿಲ್ಲ) ಇನ್ನು ಕೆಲವರು ಪೂಜಾ ವಿಧಾನ ಹೇಳುವ ರೀತಿ ಕೇಳಿಸುವುದಿಲ್ಲ. ಮತ್ತೆ ಕೆಲವು ಮ್ಯೂಸಿಕ್ಕು – ಘಂಟೆ ಶಬ್ದವೇ ಜಾಸ್ತಿ ಇರುತ್ತದೆ. ನಮಗೆ ಮಂತ್ರೋಚ್ಛಾರಣೆ, ಪೂಜೆ ಮಾಡುವ ವಿಧಾನ, ಸ್ಪಷ್ಟ ವಾದ ಕಂಠದಲ್ಲಿ ಹೇಳಿದ್ದು ಕೇಳುವಂತಿರಬೇಕು. ಏಕೆಂದರೆ ಅಷ್ಟೆಲ್ಲಾ ಸಡಗರಿಸಿ, ಸವರಿಸಿ, ಅನುಕೂಲ ಮಾಡಿ ಕೊಂಡು ಪೂಜೆಗೆ ಕುಳಿತಾಗ, ಸೀಡಿಗಳಲ್ಲಿ ಕರಕರ ಶಬ್ದ ಬರು ವುದು, ಬಿಟ್ಟು ಬಿಟ್ಟು ಕೇಳುವುದು ಹೀಗೆ ಯಾವ ತೊಡಕಿಲ್ಲದಂತೆ, ಸ್ಪಷ್ಟ ವಾಗಿ ಕಿವಿಗೆ ಕೇಳುವ ಮತ್ತು ಹೇಳುವ ರೀತಿ ಚೆನ್ನಾಗಿರುವ ಕ್ಯಾಸೆಟ್ ಗಳನ್ನು ಹಾಕಿ ಪೂಜೆಗೆ ಕುಳಿತುಕೊಳ್ಳಿ. ಸಂಕಲ್ಪ ದಿಂದ ಹಿಡಿದು, ಪೂಜೆ, ವ್ರತದ ಕಥೆ, ಹಾಗೂ ವಿಸರ್ಜನೆ ಮಂತ್ರದ ವರೆಗೂ ಚೆನ್ನಾಗಿ ಕೇಳಿಕೊಂಡು ಸಂತೋಷದಿಂದ, ಪೂಜೆ ಮಾಡಿ.

ಗೌರಿ ಕೂರಿಸುವುದು:- ಗೌರಿ ಕೂರಿಸುವ ಜಾಗವನ್ನು ಒಂದು ದಿನ ಮೊದಲೇ ಸ್ವಚ್ಛ ಮಾಡಿಕೊಂಡು. ರಂಗೋಲಿ ಬರೆದು, ಗೌರಿ ಇಡಲು ಪೀಠ ಅಥವಾ ಕುರ್ಚಿ- ಮಣೆ -ಟಿಪಾಯಿ ಇಟ್ಟು, ಇದರ ಮೇಲೆ 8 ದಳದ ಪದ್ಮ ರಂಗೋಲಿ ಬರೆದು, ಪೀಠ ಇಟ್ಟು ಪೀಠದ ಮೇಲೆ ಗಣಪತಿ ಮಂಡಲ ಬರೆದು ಅದರ ಮೇಲೆ, ( ಮಣ್ಣಿನ ಗೌರಿ ಇಡುವ ಪದ್ಧತಿ ಇದ್ದರೆ ಅದನ್ನು ಇಡಬಹುದು) ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಬೆಳ್ಳಿ ಅಥವಾ ಹಿತ್ತಾಳೆ – ವೈಟ್ ಮೆಟಲ್- ಕಂಚು ತಂಬಿಗೆಯ ಮಧ್ಯ ಭಾಗಕ್ಕೆ ಸುಣ್ಣದ ಬಟ್ಟು ಸುತ್ತಲೂ ಎಳೆದು ನಡುವೆ ಅರಿಶಿನ ಕುಂಕುಮ ಹಚ್ಚಿ, ತಂಬಿಗೆ ಒಳಗೆ ಐದು ಹಿಡಿ ಅಕ್ಕಿ, ಬೆಟ್ಟಡಿಕೆ ಅಥವಾ ಎರಡು ಬಟ್ಟಲಡಿಕೆ, ಅರಿಶಿಣ ಕೊಂಬು, ಕೊಂಬಿನ ಮೇಲೆ ಎರಡು ಮೂರು ಕಡೆ ರೆಂಬೆಗಳಿರುವ( ಮಕ್ಕಳು ಎನ್ನುತ್ತಾರೆ) ನೆಟ್ಟಗಿರುವ ಒಂದೇ ಅರಿಶಿನ ಕೊಂಬು ಇಡಬಾರದು, ಅರಿಶಿನ ಕುಂಕುಮದ ಸಣ್ಣ ಪಟ್ಟಣ, ಒಂದು ನಾಣ್ಯ, ಉಂಗುರ, ಪುಟ್ಟ ಗೌರಿ ಕಪ್ಪು ಬಳೆ ಬಿಚ್ಚೋಲೆ, ( ಬೇಕಾದರೆ ಡ್ರೈ ಫ್ರೂಟ್ಸ್ ಏಲಕ್ಕಿ ಹಾಕಬಹುದು) ತಂಬಿಗೆಯ ಕಂಠಕ್ಕೆ ಅರಿಶಿನ ಬೇರು ಅಥವಾ ಕರಿಮಣಿ ಮಾಂಗಲ್ಯ ಕಟ್ಟ ಬೇಕು. ಜುಟ್ಟು – ನಾರು ಇರುವ ಚೆನ್ನಾಗಿರುವ ತೆಂಗಿನಕಾಯಿ ಯನ್ನೆ ಆರಿಸಿ ಜುಟ್ಟು ಮೇಲೆ ಬರುವಂತೆ ತಂಬಿಗೆಯ ಮೇಲೆ ಇಡಬೇಕು( ತೆಂಗಿನಕಾಯಿ ತುಂಬಾ ನಾರುಗಳು ಇದ್ದರೆ ಗೆಜ್ಜೆ ವಸ್ತ್ರ ಚೆನ್ನಾಗಿ ನಿಲ್ಲುತ್ತದೆ) ಎರಡು ಕಡೆ ಅರಿಶಿನ ಮಧ್ಯದಲ್ಲಿ ಕುಂಕುಮ ಹಚ್ಚಿ. ಪೂಜೆಗೆ ಕೂರುವ ಮುನ್ನ ಕಾಯಿ ಜುಟ್ಟಿಗೆ ಮಲ್ಲಿಗೆ ದಂಡೆ ಸುತ್ತಿ ಮೇಲೆ (ಸೇವಂತಿ ಗೆ ತಾವರೆ, ದಾಸವಾಳ, ಗುಲಾಬಿ ಒಂದು)ಹೂವನ್ನು ಸಿಕ್ಕಿಸಬೇಕು. ತೆಂಗಿನಕಾ ಯಿ ಮುಂಭಾಗಕ್ಕೆ ಬೆಳ್ಳಿಯ ಗೌರಿ ಮುಖವಾಡ ಹಾಕುತ್ತಾರೆ.

ಗೌರಿ ಮುಂದೆ ಗಂಗೆ ಇಡಬೇಕು. ಒಂದು( ಭಾಗೀರಥಿ ಪುಟ್ಟ ಗಿಂಡಿ) ಲೋಟಕ್ಕೆ ಮಧ್ಯದಲ್ಲಿ ಸುತ್ತಲೂ ಸುಣ್ಣದ ಬಟ್ಟು ಎಳೆದು ನಡುವೆ ಅರಿಶಿನ ಕುಂಕುಮ ಇಟ್ಟು, ಲೋಟದೊಳಗೆ ಎರಡು ವೀಳ್ಯದೆಲೆ ಆ ಕಡೆ ಈ ಕಡೆ ನಿಲ್ಲಿಸಬೇಕು. ಎರಡು ಅಡಿಕೆ ಒಂದು ಕಾಯಿನ್ ಹಾಕಿ ಸ್ವಲ್ಪ ನೀರು ಹಾಕಿ ಎರಡು ವೀಳ್ಯದೆಲೆ ನಡುವೆ ದೊಡ್ಡ ಹೂವು ಇಡಬೇಕು. ಪೂಜೆ ಸಮಯದಲ್ಲಿ ಪುರೋಹಿತರು ಹೇಳಿದಂತೆ ನೀರು ಹಾಕಿ ಗೆಜ್ಜೆ ವಸ್ತ್ರ ಏರಿಸಿ ಪೂಜೆ ಮಾಡಬೇಕು.‌

ಬಾಳೆ ಕಂಬ,ಮಾವಿನ ತೋರಣ ಕಟ್ಟುತ್ತಾರೆ. ಮುಂದೆ ಶಂಖ ಚಕ್ರ ಪದ್ಮ ಗೋಪಾದ ಸಹಿತ ರಂಗೋಲಿ ಬರಿಯಬೇಕು. ಪೂಜೆಗೆ ಕೂರುವವರು ಪೂಜೆ ಕೈಗೆ ಸಿಗುವಂತೆ ಶಂಖ- ಚಕ್ರ ಗೋಪಾದ ಹಾಕಿ 16 ಪದ್ಮವನ್ನು ಬರೆದು ನಿಮ್ಮ ಮುಂದೆ ( ಚಿಕ್ಕದಾಗಿ) ಬರೆದುಕೊಳ್ಳಿ. ಇದಕ್ಕೂ ಜೋಡಿ ಗೆಜ್ಜೆ ವಸ್ತ್ರ, ಅರಿಶಿಣ ಕುಂಕುಮ, ಹೂ ಎಲ್ಲ ಏರಿಸಬೇಕು. ಗೌರಿಗೆ ಮಾಡುವ ಎಲ್ಲಾ ಪೂಜೆಯನ್ನು ಕುಳಿತಲ್ಲೇ ಈ ರಂಗೋಲಿಗೆ ಮಾಡಬೇಕು, ಅಲಂಕಾರದ 16 ಎಳೆ ಗೆಜ್ಜೆ ವಸ್ತ್ರ ಏರಿಸುವಾಗ ಮಾತ್ರ ಮೇಲೆ ಎದ್ದು ಗೌರಮ್ಮಗೆ ಗೆಜ್ಜೆ ವಸ್ತ್ರ, ಅರಿಶಿನ ಕುಂಕುಮ, ಚಂದ್ರ ಬುಕ್ಕಿಟ್ಟು ಗಂಧ ಹೂವು ಕಾಡಿಗೆ ಕನ್ನಡಿ ಬಳೆ ಬಿಚ್ಚೋಲೆ, ಎಲ್ಲಾ ಅರ್ಪಿಸಬೇಕು.

ಆಮೇಲೆ ಕುಳಿತಲ್ಲೇ ಒಂದು ತಟ್ಟೆಯಲ್ಲಿ ಲಕ್ಷ್ಮಿ ಅಥವಾ ಗೌರಿ ವಿಗ್ರಹ ಇಟ್ಕೊಂಡು ಪುರೋಹಿತರು ಹೇಳುವ ಹೂವು ಪತ್ರೆ, ಅರಿಶಿಣ ಕುಂಕುಮ ಕುಂಕುಮಾರ್ಚನೆ, ಮಂತ್ರ ಪೂರ್ವಕ ಎಲ್ಲಾ ಪೂಜೆಯನ್ನು ಇಲ್ಲೇ ಮಾಡಬಹುದು. ಅಲಂಕಾರಗಳನ್ನು ಮಾತ್ರ
ಕುಳಿತಲ್ಲಿಂದ ಎದ್ದು ಪೀಠದಲ್ಲಿ ಕೂರಿಸಿದ ಕಲಶ ಅಥವಾ ಗೌರಿ ಮುಖವಾಡ ಹಾಗಿದ್ದರೆ ಇದಕ್ಕೆ ಮಾಡ ಬೇಕು.

ಗೌರಿ ಮುಂದೆ ಎರಡು ಕಾಲ್ದೀಪ ಇಡಬೇಕು. ಒಂದು ದೀಪಕ್ಕೆ 16 ಎಳೆ ಬತ್ತಿ ಹಾಕಬೇಕು. ( ಹತ್ತಿ ಕೈಯಲ್ಲಿ ಹಿಡಿದು ತೆಳ್ಳಗೆ ಎಳೆ ಎಳೆದು 16 ಬತ್ತಿ ಆಗುವಂತೆ ಮಡಚಿ ಬತ್ತಿ ಹೊಸೆಯಬೇಕು). ಗೌರಿ ಪ್ರತಿಷ್ಠಾಪನೆ ಆದಮೇಲೆ, ಗೌರಿದಾರವನ್ನು ಬಲಭಾಗದಲ್ಲಿ ಇಟ್ಟ ನಂತರ, ಅಗತ್ಯ ಇರುವುದಕ್ಕೆ ಮಾತ್ರ ಎದ್ದು, ಬಾಕಿಯಂತೆ ಹೇಳುವ ಮಂತ್ರ ಪೂಜಾ ವಿಧಾನಗಳನ್ನು ಕುಳಿತಲ್ಲೇ 16 ಪದ್ಮದ ರಂಗೋಲಿಗೆ ಹೇಳುವ ಎಲ್ಲಾ ಪೂಜೆಯನ್ನು ಮಾಡಬಹುದು. ರೇಷ್ಮೆ ಸೀರೆ ಉಟ್ಟಿರುತ್ತೇವೆ, ಸುತ್ತಲೂ ದೀಪ ಇರುತ್ತದೆ. ಒಂದು ಒಂದೂವರೆ ಗಂಟೆಯ ವ್ರತವಾದುದರಿಂದ ನಿಧಾನವಾಗಿ ಹುಷಾ ರಾಗಿ ಪೂಜೆ ಮಾಡಬೇಕು. ದೀಪದ ಕಂಬಗಳನ್ನು ಕೈಗೆ ತಗುಲ ದಂತೆ ದೂರ ಇಡಬೇಕು. ನಾವು ಹತ್ತಿಯ ಗೆಜ್ಜೆ ವಸ್ತ್ರಗಳನ್ನು ಜಾಸ್ತಿ ಏರಿಸಿರುತ್ತೇವೆ. ಆದುದರಿಂದ ದೀಪದ ಬಗ್ಗೆ ಬಹಳ ಎಚ್ಚರಿಕೆ ಬೇಕು. ನೀವು ಪೂಜೆ ಮಾಡುವ ಮುಂದೆ ಸಣ್ಣ ನೀಲಾಂಜನದಲ್ಲಿ ದೀಪ ಹಚ್ಚಿಕೊಂಡಿದ್ದರೆ ಮಂಗಳಾರತಿ ಬತ್ತಿ ಹಚ್ಚಲು, ಊದಿನ ಕಡ್ಡಿ ಹಚ್ಚಲು ಸರಾಗ ವಾಗುತ್ತದೆ.

ಪೂಜೆಗೆ ಬೇಕಾಗುವ ಸಲಕರಣೆ:- ಸಾಕಷ್ಟು ಬಿಡಿ ಹೂವು, ಪತ್ರೆಗಳು ಗೌರಿ ಪೂಜೆಗೆ ಎಲ್ಲವೂ 16 ಇರಬೇಕು. (ಇದ್ದಷ್ಟೇ
ಆದರೂ ಸಾಕು. ಉಳಿದದ್ದಕ್ಕೆಲ್ಲ ಅಕ್ಷತೆ ಹಾಕಿ. ತಯಾರಾದ ಗೆಜ್ಜೆ ವಸ್ತ್ರ ಗಳು, ನಾಲ್ಕೈದು ತರದ ಹಣ್ಣುಗಳು ಬಾಳೆಹಣ್ಣು ಜಾಸ್ತಿ, ಐದು ತೆಂಗಿನ ಕಾಯಿ, ಅಭಿಷೇಕ ಮಾಡಲು ದೇವರ ಮುಂದಿರುವ ಪುಟ್ಟ ಗಣಪತಿ ಗೌರಿ ಅಥವಾ ಲಕ್ಷ್ಮಿ,ಅನ್ನಪೂರ್ಣೇ ಇಟ್ಟುಕೊಳ್ಳಿ. ಹಾಲು ತುಪ್ಪ ಸಕ್ಕರೆ ಬಾಳೆಹಣ್ಣು ಜೇನುತುಪ್ಪ, ಎಲ್ಲವನ್ನು ಒಂದೇ ಬಟ್ಟಲಿನಲ್ಲಿ ಹಾಕಿ ಇಟ್ಟುಕೊಂಡರೆ, ಅಭಿಷೇಕದ ಮಂತ್ರ ಹೇಳು ದಾಗ ಕ್ಷೀರಂ ಸಮರ್ಥಯಾಮಿ, ಶರ್ಕರಂ ಸಮರ್ಪಯಮಿ, ಮಧು ಪರ್ಕಂ ಸಮರ್ಪಯಾಮಿ, ಒಂದೊಂದು ಹೇಳಿದಂತೆ ಹೂವಿನಿಂದ ಪ್ರೋಕ್ಷಿಸಿ. ನೈವೇದ್ಯ ಇಡಲು ತಟ್ಟೆಗಳು, ವಿಳ್ಳೇದೆಲೆ, ಅಡಿಕೆಗಳು, 16 ಗಂಟು ಹಾಕಿರುವ ಗೌರಿ ದಾರ, ಹೆಣ್ಣು ಮಕ್ಕಳಿಗೆ 8 ಎಳೆ ಇನ್ನೂ ಚಿಕ್ಕ ಮಕ್ಕಳಿಗೆ 5 ಎಳೆ, ಕಾಯಿ ಒಡೆಯಲು ಕಾಯಿ ಕೊಳ, ನಿರ್ಮಾಲ್ಯ ನೈವೇದ್ಯ, ಕಾಯಿ ಹೊಡೆಯಲು ಒಂದು ಅಗಲ ಪಾತ್ರೆ ಬದಿಯಲ್ಲಿ ಇರಲಿ. 16 ಪತ್ರೆ 16 ಪುಷ್ಪ, ಅರ್ಚನೆಗೆ ಒಂದು ತಟ್ಟೆ ಕುಂಕುಮಾರ್ಚನೆಗೆ ಪುಟ್ಟ ಬಟ್ಟಲು, ಕೂರುವ ಮಣೆ

ಕೆಳಗೆ ಹಸೆ ಬರೆಯಬೇಕು. ನೆನೆಸಿದ ಇಡೀ ಕಡಲೆ, ಎಣ್ಣೆಯಲ್ಲಿ ಅದ್ದಿಟ್ಟ ಮಂಗಳಾರತಿ ಬತ್ತಿಗಳು, ಅರಿಶಿಣ ಕುಂಕುಮ ಹಚ್ಚಿದ ಹೊಸ ಮರದಲ್ಲಿ ಜೋಡಿಸಿಟ್ಟುಕೊಂಡ ಬಾಗಿನಗಳು. ( ಕುಡಿ ಬಾಳೆ ಎಲೆ ಅಥವಾ ಪೇಪರ್ ಹಾಕಿ, ಅರಿಶಿನ ಕುಂಕುಮ ಪೊಟ್ಟ ಣ, ಕೈಗೆ ತೊಡುವ ಬಳೆ, ಐದು ಬಗೆ ಧಾನ್ಯ ಹೆಸರು, ಉದ್ದು, ಕಡಲೆ, ತೊಗರಿ ಬೇಳೆಗಳು, ರವೆ, ಬೆಲ್ಲ, ಅಕ್ಕಿ, ಗೌರಿದಾರ ಗೆಜ್ಜೆ ವಸ್ತ್ರ ,ಮಂಗಳಾರತಿ ಬತ್ತಿ, ಹೂಬತ್ತಿ, ಬಳೆ ಬಿಚ್ಚೋಲೆ ಸಾಮಗ್ರಿ, ತೆಂಗಿನಕಾಯಿ, ಬಾಳೆಹಣ್ಣು, ವಿಳ್ಳೆದೆಲೆ ಅಡಿಕೆ, ಬ್ಲೌಸ್ ಬಟ್ಟೆ, ದಕ್ಷಿಣೆ) ಮುತ್ತೈದೆ ಕೈಯ್ಯಿಗೆ ಅರಿಶಿಣ ಕೊಟ್ಟು ಅದನ್ನು ಹಾಕಲು ಜೊತೆಗೆ ಒಂದು ಪೇಪರು ಕೊಡಬೇಕು, ಕುಂಕುಮ ಹೂವು ಕೊಡಬೇಕು.( ಗೌರಿದಾರ ಕೈಗೆ ಕಟ್ಟಿಸಿ ಕೊಳ್ಳುವವರು ಕೈಯ್ಯಲ್ಲಿ ಕಾಯಿ ಹೋಳು ಹಿಡಿದುಕೊಂಡು, ಮುತ್ತೈದೆ ಕೈಯಲ್ಲಿ ಗೌರಿ ದಾರ ಕಟ್ಟಿಸಿ ಕೊಳ್ಳಬೇಕು. ನಂತರ ಕಾಯಿ ಹೋಳನ್ನು ಅವರಿಗೆ ಕೊಟ್ಟು ಅರಿಶಿನ ಕುಂಕುಮ ಹೂ, ವಿಳ್ಳೇದೆಲೆ ಹಣ್ಣು ದಕ್ಷಿಣೆ ಕೊಟ್ಟು ನಮಸ್ಕರಿಸಿ) ಪುನಃ ಅರಿಶಿನ ಕುಂಕುಮ ಹೂವು, ಕೊಟ್ಟು ಬಾಗಿನ ಕೊಡಬೇಕು. ಬಾಗಿನ ಕೊಡುವಾಗ ಮುತ್ತೈದೆ ಮುತ್ತೈದೆ ಬಾಗಿನ ತಗೋ ಸಾವಿತ್ರಿ ಸಾವಿತ್ರಿ ಬಾಗಿನ ಕೊಡು. ಇದನ್ನು ಮೂರು ಸಲ ಹೇಳಿ ಸೆರಗು ಮುಚ್ಚಿಕೊಂಡು ಮೊರವನ್ನು ಅಲುಗಾಡಿಸಿ ಕೊಡುವಾಗ ಮೇಲೆ ಮುಚ್ಚಿದ ಮೊರ ತೆಗೆದು ಅವರಿಗೆ ತೋರಿಸಬೇಕು. ನಂತರ ಅಕ್ಷತೆ ಕೊಟ್ಟು ನಮಸ್ಕಾರ ಮಾಡಬೇಕು.

ಪೂಜೆ ತಯಾರಿ:- ಗೌರಿ ಪೂಜೆಗೆ ಬಹಳ ಮುಖ್ಯವಾದದ್ದು ಗೆಜ್ಜೆ ವಸ್ತ್ರ, 18 ಗೆಜ್ಜೆಯ (18 ಮೊಳದ ಸೀರೆ ಅಂತ ಅರ್ಥ) 16 ಎಳೆ, ಇದಕ್ಕೆ ಮೇಲೆ ಕಲರ್ ಪೇಪರ್ ಅಂಟಿಸಿದ ವಸ್ತ್ರ ( ರವಿಕೆ) ಇದು ಮದುವೆಯಾದ ಮಹಿಳೆಯರಿಗೆ, ಮದುವೆಯಾಗದ ಹುಡುಗಿಯರಿಗೆ ಎಂಟು ಎಳೆ, ಚಿಕ್ಕ ಮಕ್ಕಳಿಗೆ ಐದು ಎಳೆ ಗೆಜ್ಜೆ ವಸ್ತ್ರ, ಪೂಜೆ ಮಾಡುವಾಗ ಕುಂಕುಮ ಹಚ್ಚಿದ ಬಿಡಿ ಗೆಜ್ಜೆ ವಸ್ತ್ರಗಳು, ಅನುಕೂ ಲ ತಟ್ಟೆಯಲ್ಲಿ, ಅರಿಶಿನ -ಕುಂಕುಮ- ಅಕ್ಷತೆ,ಚಂದ್ರ,ಬುಕ್ಕಿಟ್ಟು, ಗಂಧ,ಅಡಿಕೆ, ಚಿಲ್ಲರೆ, ವಿಳೇದೆಲೆ, ಕರ್ಪೂರ, ಹಲಗಾರ್ತಿ ಊದಿನ ಕಟ್ಟಿ, ಪಂಚ ಪಾತ್ರೆ ಉದ್ಧರಣೆ, ಅರ್ಘ್ಯದ ಪಾತ್ರೆ , ಸೊಡ್ಲಾರತಿ ತಟ್ಟೆ ಜೋಡಿ ಹೂ ಬತ್ತಿಗೆ ತುಪ್ಪ ಹಾಕಿ ನೆನೆಸಟ್ಟಿರುವ 16 ಆರತಿ ತಟ್ಟೆ ಇಲ್ಲದಿದ್ದರೆ ( ಗೋಧಿ ಹಿಟ್ಟಿನಿಂದಲೂ 16 ಪುಟ್ಟ ಪುಟ್ಟ ಬಟ್ಟಲು ಮಾಡುತ್ತಾರೆ).‌ ಘಂಟೆ, ಊದಿನ ಕಡ್ಡಿ ಸಿಕ್ಕಿಸಲು ಒಂದು ಲೋಟದಲ್ಲಿ ಅರ್ಧ ಮರಳು ಅಥವಾ ಅಕ್ಕಿ ಹಾಕಿದ ಲೋಟವನ್ನು ತಟ್ಟೆ ಮೇಲೆ ಇಟ್ಟುಕೊಂಡರೆ ಹರಡಲ್ಲ ಕೈ ಒರಿಸಲು ಎರಡು ವಸ್ತ್ರ, ಪೂಜೆಗೆ ಕುಳಿತುಕೊಳ್ಳಲು ಮಣೆ ಅಥವಾ ಚಾಪೆ ಇದನ್ನು ( ನೇರವಾಗಿ ನೆಲದ ಮೇಲೆ ಹಾಕದೆ ರಂಗೋಲಿ ಹಸೆ ಬರೆದು ಹಾಕಿಕೊಳ್ಳಬೇಕು). ಎಲ್ಲಾ ತಯಾರಿಯೊಂದಿಗೆ ಪೂಜೆಗೆ ಕುಳಿತರೆ ಹುಡುಕಾಡುವ ಅಗತ್ಯ ಇರುವುದಿಲ್ಲ. ಪೂಜೆಗೆ ಕುಳಿತ ಮೇಲೆ ಮುಗಿಯುವ ತನಕ ಏಳದೆ ಶ್ರದ್ಧೆಯಿಂದ ಮಾಡಿ

ಇನ್ನು ಅಡಿಗೆ ಮನೆಯಲ್ಲಿ:- ಗೌರಿ ಹಬ್ಬದ ದಿನ ಬೆಳಗಿನ ತಿಂಡಿಗೆ ಉಪ್ಪಿಟ್ಟು ಅಥವಾ ಅವಲಕ್ಕಿಗೆ ಸ್ವಲ್ಪ ತಯಾರಿ ಮಾಡಿಕೊಂಡಿದ್ದರೆ ಮಾಡುವುದು ಸುಲಭ. ಸ್ವೀಟ್ ಬೇಕಿದ್ರೆ ಮುಂಚಿತವಾಗಿ ಮಾಡಿರಬೇಕು. ಗಣೇಶನ ಹಬ್ಬದ ದಿನ ಗಂಡಸರ ಪೂಜೆ ಆದ್ದರಿಂದ, ಅಂದು ಕಡಬು ಚಟ್ನಿ ತುಪ್ಪ, ಇಡ್ಲಿ ಏನು ಬೇಕಾದರೂ ಮಾಡಬಹುದು.

ಹಿಮಗಿರಿ ತಾನಯೇ ಹೇಮಲತೆ ಅಂಬ
ಈಶ್ವರಿ ಶ್ರೀ ಲಲಿತೆ ಮಾಮವ!!
ರಮಾ ವಾಣಿ ಸಂಸೇವಿತ ಸಕಲೇ
ರಾಜರಾಜೇಶ್ವರಿ ರಾಮ ಸಹೋದರಿ!!
ಪಾಶಾಂಕುಶೇಶು ದಂಡಕರೇ ಅಂಬ
ಪರತ್ಪರೆ ನಿಜ ಭಕ್ತಪರೇ
ಆಚಾಂಬರೆ ಹರಿಕೇಶ ವಿಲಾಸೇ
ಆನಂದ ರೂಪೇ ಅಮಿತ ಪ್ರತಾಪೆ !!

ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
ನಾನು ಮಾಡುವ ಕ್ರಮದಲ್ಲಿ ಪ್ರಮುಖವಾದದ್ದನ್ನು ಮಾತ್ರ ಬರೆದಿದ್ದೇನೆ..

Source : What’sApp

ನಿತ್ಯ ಪಂಚಾಂಗ 12.09.2026 SATURDAY.ಶನಿವಾರ

Hot this week

ವಂದೇ ಮಾತರಂ ಗೀತೆ ಮೊಟಕು ವಿರುದ್ಧ ಪಾದಯಾತ್ರೆ, ಅಧಿಕಾರಿಗಳಿಗೆ ಮನವಿ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಬಿಜೆಪಿ(BJP) ಮತ್ತು ಸಾರ್ವಜನಿಕರು ಇದೇ 15ರಿಂದ 5 ದಿನಗಳ ಕಾಲ...

ಸರ್. ಎಂ. ವಿಶ್ವೇಶ್ವರಯ್ಯ ಕೋ -ಆಪರೇಟಿವ್ ಬ್ಯಾಂಕ್ ನ ಪ್ರತಿಭಾ ಪುರಸ್ಕಾರ ಸಮಾರಂಭ

ಇಂದು ಚಂದ್ರಶೇಖರ ಭಾರತಿ(ChandraShekar Bharathi) ಸಭಾಂಗಣದಲ್ಲಿ ನೆಡೆದ ಸರ್ ಎಂ ವಿಶ್ವೇಶ್ವರಯ್ಯ...

ಗೌರಿ ಬಾಗಿನ ಕೊಡುವ ಸರಿಯಾದ ವಿಧಾನ

1. ಗೌರಿ ಬಾಗಿನ ಎಂದರೇನು? ಗೌರಿದೇವಿಯು ತವರಿಗೆ ಬಂದ ಮಗಳಂತೆ ಭಾವಿಸಿ, ಮುತ್ತೈದೆ...

ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ್ಯ ಪ್ರತಿಭೆಯನ್ನು ಸಮಾಜ, ರಾಷ್ಟ್ರದ ಹಿತಕ್ಕಾಗಿ ಬಳಸಿಕೊಳ್ಳಬೇಕು: ಗೆಹ್ಲೋಟ್

ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ನಿರ್ಣಾಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ್ಯ ಮತ್ತು ಪ್ರತಿಭೆಯನ್ನು...

ಸರ್.‌ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ 2026 ರ ಬ್ಯಾಚ್‌ ನ “ಆರಂಭ – 2026” ಗೆ ಚಾಲನೆ

ಬೆಂಗಳೂರು: ದೇಶ(Country) ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಮೂಲಕ 4.0 ಕೈಗಾರಿಕಾ ಕ್ರಾಂತಿಯತ್ತ(Industrial...

Topics

ವಂದೇ ಮಾತರಂ ಗೀತೆ ಮೊಟಕು ವಿರುದ್ಧ ಪಾದಯಾತ್ರೆ, ಅಧಿಕಾರಿಗಳಿಗೆ ಮನವಿ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಬಿಜೆಪಿ(BJP) ಮತ್ತು ಸಾರ್ವಜನಿಕರು ಇದೇ 15ರಿಂದ 5 ದಿನಗಳ ಕಾಲ...

ಸರ್. ಎಂ. ವಿಶ್ವೇಶ್ವರಯ್ಯ ಕೋ -ಆಪರೇಟಿವ್ ಬ್ಯಾಂಕ್ ನ ಪ್ರತಿಭಾ ಪುರಸ್ಕಾರ ಸಮಾರಂಭ

ಇಂದು ಚಂದ್ರಶೇಖರ ಭಾರತಿ(ChandraShekar Bharathi) ಸಭಾಂಗಣದಲ್ಲಿ ನೆಡೆದ ಸರ್ ಎಂ ವಿಶ್ವೇಶ್ವರಯ್ಯ...

ಗೌರಿ ಬಾಗಿನ ಕೊಡುವ ಸರಿಯಾದ ವಿಧಾನ

1. ಗೌರಿ ಬಾಗಿನ ಎಂದರೇನು? ಗೌರಿದೇವಿಯು ತವರಿಗೆ ಬಂದ ಮಗಳಂತೆ ಭಾವಿಸಿ, ಮುತ್ತೈದೆ...

ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ್ಯ ಪ್ರತಿಭೆಯನ್ನು ಸಮಾಜ, ರಾಷ್ಟ್ರದ ಹಿತಕ್ಕಾಗಿ ಬಳಸಿಕೊಳ್ಳಬೇಕು: ಗೆಹ್ಲೋಟ್

ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ನಿರ್ಣಾಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ್ಯ ಮತ್ತು ಪ್ರತಿಭೆಯನ್ನು...

ಸರ್.‌ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ 2026 ರ ಬ್ಯಾಚ್‌ ನ “ಆರಂಭ – 2026” ಗೆ ಚಾಲನೆ

ಬೆಂಗಳೂರು: ದೇಶ(Country) ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಮೂಲಕ 4.0 ಕೈಗಾರಿಕಾ ಕ್ರಾಂತಿಯತ್ತ(Industrial...

ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್‌ಗೆ Rs.1.10 ಕೋಟಿ ನಿವ್ವಳ ಲಾಭ – ಡಿ.ಆರ್. ವಿಜಯ ಸಾರಥಿ  

ಬೆಂಗಳೂರು: ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 2025-26ನೇ ಸಾಲಿನಲ್ಲಿ Rs.1.10...

14-09-2026 – ಒಂದೇ ದಿನ ಶ್ರೀಸ್ವರ್ಣಗೌರಿ ವ್ರತ ಹಾಗೂ ಶ್ರೀವರಸಿದ್ಧಿ ವಿನಾಯಕ ವ್ರತ

ಸಾಮಾನ್ಯವಾಗಿ ಭಾದ್ರಪದ ಮಾಸದ ತದಿಗೆಯಂದು ಹಸ್ತಾ ನಕ್ಷತ್ರ(Hastha Nakshatra) ವಿರುವ ದಿನ,...

ನಾಳೆ ಸಂಜೆ ದೇವಿ ತತ್ತ್ವ,ಭರತನಾಟ್ಯದ ಮನಮೋಹಕ ಕಾರ್ಯಕ್ರಮ

ಬೆಂಗಳೂರು: ವೇದಾಂತ ಮಾಲಾ ಕಲಾ ಕುಟೀರವು ದೇವಿ ತತ್ತ್ವ,ಭರತನಾಟ್ಯದ ಮನಮೋಹಕ ಸಂಜೆಯನ್ನು...

Related Articles