ಬೆಂಗಳೂರು: ಕರ್ನಾಟಕದ(Karnataka) 16ನೇ ವಿಧಾನಸಭೆಯ 10ನೇ ಅಧಿವೇಶನದ ಮುಂದುವರಿದ ಉಪವೇಶನವನ್ನು (ವಿಶೇಷ ಅಧಿವೇಶನ) 21ನೇ ಸೆಪ್ಟೆಂಬರ್ 2026, ಸೋಮವಾರದಂದು ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ(Bangalore) ವಿಧಾನ ಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ.
ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಬಿಡುಗಡೆ:
ಸೆಪ್ಟೆಂಬರ್ 21 (ಸೋಮವಾರ), ಸೆಪ್ಟೆಂಬರ್ 22 (ಮಂಗಳವಾರ), ಮತ್ತು ಸೆಪ್ಟೆಂಬರ್ 23 (ಬುಧವಾರ) ರಂದು ಮೂರು ದಿನಗಳ ಕಾಲ ರೈತರ ಪ್ರಮುಖ ಸಮಸ್ಯೆಗಳು, ಡಾ.ಕೆ.ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡ ನೀಡಿರುವ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರವು ದಿನಾಂಕ 27.07.2026ರಂದು ಹೊರಡಿಸಿರುವ ಕರಡು ಅಧಿಸೂಚನೆಯ ಕುರಿತು ಚರ್ಚೆ ನಡೆಯಲಿದೆ ಎಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.