ಮಸ್ಕಿ (ರಾಯಚೂರು): ಭಾರತೀಯ ಜನತಾ ಪಾರ್ಟಿ(BJP) ಆರಂಭಿಸಿರುವ ಪಾದಯಾತ್ರೆಯು ಆಡಳಿತ ಪಕ್ಷ ಕಾಂಗ್ರೆಸ್ಸಿಗೆ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(CM D K Shiva Kumar) ಅವರಿಗೆ ಭಯ ಹುಟ್ಟಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B Y Vijayendra) ಅವರು ಹೇಳಿದ್ದಾರೆ.
ದಲಿತ ಸಮುದಾಯದ ನಾಯಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ಮೊದಲಿಗೆ ಬರಪೀಡಿತ 101 ತಾಲೂಕುಗಳನ್ನು ಘೋಷಣೆ ಮಾಡಿದ್ದ ಸರ್ಕಾರ ಈಗ ಎರಡನೇ ಪಟ್ಟಿಯಲ್ಲಿ ಇನ್ನಷ್ಟು ತಾಲೂಕುಗಳನ್ನು ಸೇರಿಸಿ ಘೋಷಣೆ ಮಾಡಲು ಸಿದ್ಧವಾಗಿದೆ ಉತ್ತರ ಕರ್ನಾಟಕ ಎಲ್ಲಿದೆ ಎಂದೇ ಮರೆತಿದ್ದ ಸಿಎಂ, ಬೆಂಗಳೂರಿನ ಎಸಿ ಛೇಂಬರ್‍ನಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡುತ್ತಿದ್ದರು. ಅವರು ಬರಪೀಡಿತ ಸ್ಥಳಗಳಿಗೆ ಭೇಟಿ ಸಹ ನೀಡಿರಲಿಲ್ಲ. ಬಿಜೆಪಿ ಪಾದಯಾತ್ರೆ ಆರಂಭಿಸಿದ್ದೇ ತಡ ಸರ್ಕಾರಕ್ಕೆ ಹೆದರಿಕೆ ಶುರುವಾಯಿತು. ಎರಡನೇ ಹಂತದಲ್ಲಿ ಇನ್ನಷ್ಟು ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಎಂಟುನೂರು ಕೋಟಿ ಬಿಡುಗಡೆ…
ದಲಿತ ಸಮಯದಾಯಗಳಿಗೆ ಬಿಜೆಪಿ ಸರ್ಕಾರ ಸುಮಾರು ಎಂಟುನೂರು ಕೋಟಿಯಷ್ಟು ಹಣವನ್ನು ಬಿಡುಗಡೆ ಮಾಡಿತ್ತು. ಆದರೆ ದಲಿತರ ಹೆಸರು ಹೇಳಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಕೇವಲ ಅದರ ಅರ್ಧದಷ್ಟು ಮಾತ್ರ ನೀಡಿದ್ದಾರೆ ಎಂದು ದೂರಿದರು.
ದೇವರಾಜು ಅರಸು ಅಭಿವೃದ್ಧಿ ನಿಗಮ, ಅಂಬಿಗೆ ಚೌಡಯ್ಯ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಹೀಗೆ ಹಲವು ನಿಗಮ ಮತ್ತು ಮಂಡಳಿಗಳಿಗೆ ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಶೇ 50 ರಷ್ಟು ಹಣವನ್ನು ಮಾತ್ರ ನೀಡಿದ್ದಾರೆ. ಬಜೆಟ್‍ನಲ್ಲಿ ಘೋಷಣೆ ಮಾಡುವುದು ಒಂದು ಮೊತ್ತ, ಬಿಡುಗಡೆ ಮಾಡುವುದು ಒಂದು ಮೊತ್ತ ಎಂದು ಆರೋಪಿಸಿದರು.
ಗ್ಯಾರಂಟಿಗಳಿಗೆ ದಲಿತರ ಹಣ ಬಳಕೆ….
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ದಲಿತರ ಕಲ್ಯಾಣಕ್ಕೆ ಮೀಸಲಾದ ಹಣವನ್ನು ಬಳಕೆ ಮಾಡಿತು. ಎಸ್‍ಸಿಪಿ/ಟಿಎಸ್‍ಪಿಯ ಸಾವಿರಾರು ಕೋಟಿ ಹಣವನ್ನು ಗ್ಯಾರಂಟಿ ಅನುμÁ್ಠನಕ್ಕೆ ಬಳಸಿ ದಲಿತರಿಗೆ ಅನ್ಯಾಯ ಮಾಡಿತು. ಅನ್ಯ ಉದ್ದೇಶಕ್ಕೆ ಹಣ ಬಳಸಿದ್ದನ್ನು ನಾವು ಪ್ರಶ್ನಿಸಿದ್ದೇವೆ. ದಲಿತ ಸಮುದಾಯಕ್ಕೆ ಸಹ ಇದರ ಬಗ್ಗೆ ಅರಿವು ಮೂಡಬೇಕು, ಜಾಗೃತಿ ಮೂಡಿಸಬೇಕು. ಈ ಸರ್ಕಾರ ಎರಡೂವರೆ ಲಕ್ಷ ಉದ್ಯೋಗ ನೀಡುತ್ತೇವೆ ಎಂದಿತು. ಆದರೆ ಮೀಸಲಾತಿಯನ್ನು ಸರಿಯಾಗಿ ಅನುμÁ್ಠನ ಮಾಡದೆ ನೆಪ ಹೇಳಿದರು. ಪರಿಶಿಷ್ಟ ಜಾತಿ/ಪಂಗಡ ಮತ್ತು ಅಲೆಮಾರಿ ಸಮುದಾಯಗಳಿಗೆ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಮೀಸಲಾತಿಯನ್ನು ಕಾಂಗ್ರೆಸ್ ನೀಡಲಿಲ್ಲ. ಅವರಿಗೂ ಅನ್ಯಾಯ ಮಾಡಿತು. ಹೈಕೋರ್ಟ್‍ನಲ್ಲಿ ಮೀಸಲಾತಿ ಸಂಬಂಧ ಸರಿಯಾದ ವಾದ ಮಾಡಲಿಲ್ಲ. ಈ ಎಲ್ಲದರ ಬಗ್ಗೆ ನಾವು ಪಾದಯಾತ್ರೆಯಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ವಿವರಿಸಿದರು.
ಶೋಷಿತರು, ಪೀಡಿತರ ಧ್ವನಿಯಾಗಿ ಪಾದಯಾತ್ರೆಯಲ್ಲಿ ಹೋರಾಟ ಮಾಡುತ್ತೇವೆ. ದಲಿತ, ಹಿಂದುಳಿದ ಸಮುದಾಯಗಳಿಗೆ ಕೇಂದ್ರದಲ್ಲಿನ ನರೇಂದ್ರ ಮೋದಿ ಅವರ ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ. ಈ ಹಿಂದೆ ಅಧಿಕಾರ ನಡೆಸಿದ ಬಿ ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಅನುಕೂಲ ಕಲ್ಪಿಸಿದ್ದರು ಎಂದು ನೆನಪಿಸಿದರು.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಉಪಸ್ಥಿತರಿದ್ದರು.



