ಬೆಂಗಳೂರು ನಗರದ ಬೊಮ್ಮನಹಳ್ಳಿ, (Bommanahalli), ಸಿಟಿ ಮಾರ್ಕೆಟ್, ಡಿ.ಜೆ.ಹಳ್ಳಿ (DJ Halli) ಹಾಗೂ ಬೈಯಪ್ಪನಹಳ್ಳಿ (Bayappanahalli) ಪೊಲೀಸ್ ಠಾಣಾ ಸರಹದ್ದುಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ದೊರೆತು, ಅವುಗಳನ್ನಾಧರಿಸಿ ಠಾಣೆಗಳಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಾತ್ಮೀದಾರರು ತಿಳಿಸಿದ ಸ್ಥಳಗಳ ಮೇಲೆ ದಾಳಿ ಮಾಡಿ, ಹೊರ ರಾಜ್ಯದ ಮೂವರು ಹಾಗೂ ಸ್ಥಳೀಯ ಮೂವರು ವ್ಯಕ್ತಿಗಳು ಸೇರಿದಂತೆ 6 ಮಂದಿಯನ್ನು ವಶಕ್ಕೆ (Arrest) ಪಡೆದುಕೊಳ್ಳಲಾಗಿರುತ್ತದೆ.

ಅವರನ್ನು ವಿಚಾರಣೆಗೊಳಪಡಿಸಲಾಗಿ, ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಹೊರ ರಾಜ್ಯ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾರೆೆ. ನಿಷೇಧಿತ ಮಾದಕ ವಸ್ತುಗಳಾದ 25 ಕೆಜಿ 370 ಗ್ರಾಂ ಗಾಂಜಾ, 20 ಗ್ರಾಂ ಎಂ.ಡಿ.ಎA.ಎ ಮತ್ತು 07 ಗ್ರಾಂ ಹೈಡ್ರೋಗಾಂಜಾವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಮೌಲ್ಯ₹ 14,94,000/- (ಮಾರುಕಟ್ಟೆ ಮೌಲ್ಯ ₹ 29.88 ಲಕ್ಷ).
ಈ ಪ್ರಕರಣದ ಆರೋಪಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳು ಪ್ರಗತಿಯಲ್ಲಿರುತ್ತವೆ. ಈ ಕಾರ್ಯಾಚರಣೆಗಳನ್ನು ಉಪ ಪೊಲೀಸ್ ಆಯುಕ್ತರುಗಳಾದ ಆಗ್ನೇಯ ವಿಭಾಗದ ಮೊಹಮ್ಮದ್ ಸುಜೀತ.ಎಂ.ಎಸ್, ಐಪಿಎಸ್, ಪಶ್ಚಿಮ ವಿಭಾಗದ ಯತೀಶ್.ಎನ್, ಐಪಿಎಸ್ ಹಾಗೂ ಪೂರ್ವ ವಿಭಾಗದ ಡಾ:ವಿಕ್ರಮ್ ಅಮಟೆ, ಐಪಿಎಸ್ ರವರುಗಳ ಮಾರ್ಗದರ್ಶನದಲ್ಲಿ, ಮೈಕೋಲೇಔಟ್, ಚಿಕ್ಕಪೇಟೆ, ಕೆ.ಜಿ.ಹಳ್ಳಿ ಹಾಗೂ ಹಲಸೂರು ಉಪ ವಿಭಾಗಗಳ ಸಹಾಯಕ ಪೊಲೀಸ್ ಆಯುಕ್ತರುಗಳ ನೇತೃತ್ವದಲ್ಲಿ, ಬೊಮ್ಮನಹಳ್ಳಿ, ಸಿಟಿ ಮಾರ್ಕೆಟ್, ಡಿ.ಜೆ.ಹಳ್ಳಿ ಹಾಗೂ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

