ಹನೂರು ಕಗ್ಗೊಲೆಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಿ – KPRS ಆಗ್ರಹ

ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ  ಹನೂರು(Hanoor Tq) ತಾಲ್ಲೂಕಿನ ಮರಿಮಂಗಳ ಅರಣ್ಯ ಬೀಟ್ (Araya Beat) ನಲ್ಲಿ  ಕಾಡಂಚಿನ ಗ್ರಾಮದ ತೋಮಿಯಾರ್ ಪಾಳ್ಯದ (Thomiar Palya) ಮೂವರು  ರೈತರನ್ನು  ಎನ್ಕೌಂಟರ್ ಹೆಸರಿನಲ್ಲಿ  ಕಗ್ಗೊಲೆಗಳನ್ನು ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ ಮತ್ತು ತಕ್ಷಣವೆ ಕಗ್ಗೊಲೆಗೆ ಕಾರಣವಾದ ಎಲ್ಲರನ್ನು ಬಂಧಿಸುವಂತೆ ಒತ್ತಾಯಿಸುತ್ತದೆ.
ಕಾಡಂಚಿನಲ್ಲಿ ವಾಸಿಸುವ ಜನಗಳು ಹೇಗೆಲ್ಲಾ ಅರಣ್ಯ ಇಲಾಖೆಯ ಮೂಲಕ ಎಂತಹ ಪೈಶಾಚಿಕ ರೀತಿಯ ದಬ್ಬಾಳಿಕೆಗೊಳಗಾಗುತ್ತಿದ್ದಾರೆ ಎಂಬುದುಕ್ಕೆ ಇದು ಸ್ಪಷ್ಢ ನಿದರ್ಶನವಾಗಿದೆ.
ರಾಜ್ಯ ಸರಕಾರ ತನ್ನ ಅಧೀನದ ಕಂದಾಯ ಅಧಿಕಾರಿಗಳ ನೇತೃತ್ವದ  ಮ್ಯಾಜೆಸ್ಟ್ರೇಟ್ ತನಿಖೆಯನ್ನು ವಾಪಾಸು ಪಡೆದು ಈ ಕೂಡಲೆ ಹೈಕೋರ್ಟ್ ನ್ಯಾಯಾಧೀಶರ   ನ್ಯಾಯಾಂಗದ  ಸ್ವತಂತ್ರ ತನಿಖೆಗೆ ಅಗತ್ಯ ಕ್ರಮ ವಹಿಸಬೇಕು.
ಕಗ್ಗೊಲೆಗೀಡಾದ ಕುಟುಂಬಗಳಿಗೆ ಕನಿಷ್ಠ 5 ಕೋಟಿ ರೂಗಳ ಪರಿಹಾರವನ್ನು ಘೋಷಿಸಬೇಕು, ಎನ್ ಕೌಂಟರ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ನಿರ್ದೇಶನ ನೀಡಿರುವಂತೆ ಕೊಲೆ ಮೊಕದ್ದಮೆ ದಾಖಲಿಸಿ ಕಾನೂನು ಪ್ರಕಾರ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ.
ಅಖಿಲ ಭಾರತ ಕಿಸಾನ್ ಸಭಾ (AIKS) ರಾಷ್ಟ್ರೀಯ ಸಹ ಕಾರ್ಯದರ್ಶಿ ಕಾಮ್ರೇಡ್ ಡಿ ರವೀಂದ್ರನ್ , ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ.ಯಶವಂತ ಟಿ ನೇತೃತ್ವದಲ್ಲಿ ರೈತ ಸಂಘದ ಉನ್ನತ ಮಟ್ಟದ ನಿಯೋಗ  ಮೃತ ರೈತ  ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ವ್ಯಕ್ತಪಡಿಸಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದೆ. ಇಡೀ ದೇಶವೇ ಬೆಚ್ಚಿ ಬೀಳುವ ಇಂತಹ ಘೋರ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ರಾಷ್ಟ್ರೀಯ ಗಮನ ಸೆಳೆದು ಕುಟುಂಬಗಳಿಗೆ ನ್ಯಾಯ ಒದಗಿಸಲು ಹೋರಾಟ ಮುಂದುವರೆಸಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ತಿಳಿಸುತ್ತದೆ.

Hot this week

25 ಕೆಜಿ 370 ಗ್ರಾಂ ಗಾಂಜಾ, 20 ಗ್ರಾಂ MDMA, 07 ಗ್ರಾಂ ಹೈಡ್ರೋಗಾಂಜಾ ವಶ- 6 ಮಂದಿ ARREST

ಬೆಂಗಳೂರು ನಗರದ ಬೊಮ್ಮನಹಳ್ಳಿ, (Bommanahalli), ಸಿಟಿ ಮಾರ್ಕೆಟ್, ಡಿ.ಜೆ.ಹಳ್ಳಿ (DJ Halli)...

ಐಷಾರಾಮಿ ಕಾರುಗಳ ಕಳವು ಮಾಡುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರ ಬಂಧನ

ತಮಿಳುನಾಡಿನ ಚೆನ್ನೆನಲ್ಲಿ (Chennai) ವಾಸವಿರುವ ಪರ‍್ಯಾದುದಾರರು ಟೊಯೋಟಾ (Toyota) ಫಾರ್ಚುನರ್ (Car)...

ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಯಿಂದ ಶಿಕ್ಷಕರಿಗೆ ಆರ್ಥಿಕ ಹೊರೆಯಾಗುವುದಿಲ್ಲ. 

ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಯಿಂದ ಶಿಕ್ಷಕರಿಗೆ ಆರ್ಥಿಕ ಹೊರೆಯಾಗುವುದಿಲ್ಲ.  ಮೊಟ್ಟೆ ದರ ನಿಗಧಿ...

ಹನೂರು ವನ್ಯಜೀವಿ ವಲಯದಲ್ಲಿ ನಡೆಸಲಾದ ಕಳ್ಳಬೇಟೆ ಕಾರ್ಯಾಚರಣೆಯ ಕುರಿತ ವರದಿ

 15.08.2026 ರಂದು ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ನಡೆಸಲಾದ...

Topics

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಆಕ್ಷೇಪಾರ್ಹ ವಿಷಯಗಳ ಪ್ರಸಾರಕ್ಕೆ ಕಡಿವಾಣ ಹಾಕಿ

ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕರ್ನಾಟಕ ವರ್ಕಿಂಗ್ ಡಿಜಿಟಲ್ ಅಂಡ್ ಸೋಶಿಯಲ್ ಮೀಡಿಯಾ...

ಗ್ರ್ಯಾಂಡ್ ಕಪ್ 2026ರಲ್ಲಿ ಮಿಂಚಿದ ಭಾರತದ ಉದಯೋನ್ಮುಖ ಕರಾಟೆ ಪ್ರತಿಭೆಗಳು

ಬೆಂಗಳೂರು: ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕರಾಟೆ ಪಟುಗಳು, (Karate) ತರಬೇತುದಾರರು,...

ಭಾರತೀಯ ರಾಯಭಾರ ಕಚೇರಿಯ ಡಾ. ಈಶ್ ಸಿಂಘಾಲ್ ರಿಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ, ಕತಾರ್ — ಕತಾರ್‌ನಲ್ಲಿ (Qatar) ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ...

Related Articles