ಬೆಂಗಳೂರು: ಜಿಬಿಎ ನೌಕರರ ಭವನ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಮತ್ತು ಪಾಲಿಕೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆರೋಗ್ಯಧಿಕಾರಿಗಳು, ಅಧಿಕ್ಷಕರು, ಆರೋಗ್ಯ ವೈದ್ಯಾಧಿಕಾರಿ, ವೈದ್ಯರಿಗೆ ಧನ್ವಂತರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.
ಮುಖ್ಯ ಆಯುಕ್ತರಾದ ಎಂ.ಮಹೇಶ್ವರರಾವ್ (M. Maheshwara Rao) ರವರು, ಆಯುಕ್ತರಾದ ಜಿ.ಜಗದೀಶ್ ರವರು, ವಿಶೇಷ ಆಯುಕ್ತರಾದ ಡಾ.ಆರ್.ವೆಂಕಟಚಲಪತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು,(Amruth Raj President of the Employees welfare Association) ಮುಖ್ಯ ಆರೋಗ್ಯಧಿಕಾರಿಗಳಾದ ಡಾ.ಸೈಯದ್ ಸಿರಾಜುದ್ದೀನ್ ಮದನಿ, ಡಾ.ನಿರ್ಮಲ ಬುಗ್ಗಿ, ಆರೋಗ್ಯಧಿಕಾರಿಗಳಾದ ಡಾ.ಎಂ.ಶಿವಕುಮಾರ್, ಡಾ.ಸಿದ್ದಪ್ಪಾಜಿರವರು ದೀಪ ಬೆಳಗಿಸಿ, ಡಾ||ಬಿಧಾನ್ ಚಂದ್ರರಾಯ್ ರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪ್ರಶಸ್ತಿ ಪ್ರಧಾನ ಮಾಡಿದರು.
ಮುಖ್ಯ ಆಯುಕ್ತರಾದ ಎಂ.ಮಹೇಶ್ವರರಾವ್ ರವರು ಮಾತನಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು. ಜನನ ಪ್ರಮಾಣ ಉತ್ತಮವಾಗಿರಬೇಕು, ಮರಣ ಪ್ರಮಾಣ ಕಡಿಮೆಯಾಗಬೇಕು ಎಂದರೆ ವೈದ್ಯಕೀಯ ವ್ಯವಸ್ಥೆ ಸಮರ್ಪಕವಾಗಿ ಇರಬೇಕು ಮತ್ತು ಆಹಾರ ಪದ್ದತಿ ಹಾಗೂ ಆಧುನಿಕ ಔಷಧಿಗಳ ಶೋಧನೆಯಾಗಬೇಕು.
ಉತ್ತಮ ವೈದ್ಯಕೀಯ ಸೌಲಭ್ಯ ನಾಗರಿಕರಿಗೆ ಸಿಗಬೇಕು. ನಮ್ಮ ಆಸ್ಪತ್ರೆಗಳು ಉತ್ತಮ ಗುಣಮಟ್ಟದಲ್ಲಿ ಇದೆ. ವೈದ್ಯರು ಸಹಕಾರ ಬೇಕು. ಪಂಚ ಪಾಲಿಕೆಗಳಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆ ಸತತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಆಯುಕ್ತರಾದ ಜಿ.ಜಗದೀಶ್ ರವರು ಮಾತನಾಡಿ ಡಾ.ಬಿಧಾನ್ ಚಂದ್ರರಾಯ್ ರವರ ಸವಿನೆಪಿನಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಚರಿಸಲಾಗುತ್ತಿದೆ. ಪ್ರಾಣದ ಪಣಕ್ಕಿಟ್ಟ ಕೊವಿಡ್ ಸಂದರ್ಭದಲ್ಲಿ ವೈದ್ಯರು ತುಂಬಾ ಒಳ್ಳೆಯ ಕೆಲಸ ಮಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಆಸ್ಪತ್ರೆಗಳನ್ನು ಹೈಟೆಕ್ ಆಸ್ಪತ್ರೆಗಳಾಗಿ ಮಾಡಲು ತಮ್ಮೆಲ್ಲರ ಸಹಕಾರ ಕೊಡಿ ಎಂದು ಹೇಳಿದರು.
ಆಯುಕ್ತರಾದ ಜಿ.ಜಗದೀಶ್ ರವರು ಮಾತನಾಡಿ ಡಾ.ಬಿಧಾನ್ ಚಂದ್ರರಾಯ್ ರವರ ಸವಿನನೆಪಿನಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಚರಿಸಲಾಗುತ್ತಿದೆ. ಪ್ರಾಣದ ಪಣಕ್ಕಿಟ್ಟ ಕೊವಿಡ್ ಸಂದರ್ಭದಲ್ಲಿ ವೈದ್ಯರು ತುಂಬಾ ಒಳ್ಳೆಯ ಕೆಲಸ ಮಾಡಿದರು.
ವೈದ್ಯ ವೃತ್ತಿ ಬಹಳ ಒಳ್ಳೆಯ, ಜನರ ಹೃದಯ ಮುಟ್ಟುವ ಕೆಲಸವಾಗಿದೆ.
ವಿಶೇಷ ಆಯುಕ್ತರಾದ ವೆಂಕಟಚಲಪತಿ ರವರು ಮಾತನಾಡಿ ವೈದ್ಯರು ದೇವರು ಇದ್ದಂತೆ. ಕೊವಿಡ್ ಸಂದರ್ಭದಲ್ಲಿ ವೈದ್ಯರು ಜೀವನ ಹಂಗು ತೊರೆದು ಕೆಲಸ ಮಾಡಿದರು ಅವರ ಜೊತೆಯಲ್ಲಿ ಕಾರ್ಯನಿರ್ವಹಿಸುವ ಸೌಭಾಗ್ಯ ನನ್ನದಾಗಿತ್ತು ಎಂದು ಹೇಳಿದರು.
ಕೆ.ಷಡಕ್ಷರಿ ವೈದ್ಯರಿಗೆ ಸಮಸ್ಯೆ, ಸಂಕಷ್ಟಗಳಿಗೆ ನೆರವು ನೀಡಲು ಜಿಬಿಎ-ಪಾಲಿಕೆಗಳ ಅಧಿಕಾರಿ, ನೌಕರರ ಕ್ಷೇಮಾಭಿವೃದ್ಧಿ ಸಂಘ ಶ್ರಮಿಸುತ್ತಿದೆ. ಪಹಲ್ಗಾಮ್ ನಲ್ಲಿ ಕನ್ನಡ ರಾಜ್ಯೋತ್ಸವ ಮಾಡಿ ಇಡೀ ರಾಜ್ಯವೇ ಪಾಲಿಕೆ ಸಂಘದ ಕಡೆ ನೋಡುವಂತಾಯಿತು.
ವೈದ್ಯರನ್ನ ದೇವರಂತೆ ಕಾಣು ಎಂಬ ಗಾದೆ ಮಾತು ಇದೆ .ಅದರಂತೆ ಕಾಯಕ ತತ್ವದಲ್ಲಿ ವೈದ್ಯರು ಕೆಲಸ ಮಾಡಬೇಕು, ತಮ್ಮ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಪ್ರಶಸ್ತಿಗಳು ಬರುವುದು ಇನ್ನು ಹೆಚ್ಚು ಸೇವೆ ಮಾಡುವಂತೆ ಸ್ಪೂರ್ತಿ, ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾತನಾಡಿ ಮೊದಲ ಬಾರಿಗೆ ಪಂಚ ಪಾಲಿಕೆ ವೈದ್ಯರು, ವೈದ್ಯಾಧಿಕಾರಿಗಳಿಗೆ ರಾಷ್ಟ್ರೀಯ ವೈದರ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಗುತ್ತಿದೆ.
ಅಧಿಕಾರಿ ಮತ್ತು ನೌಕರರ ಆರೋಗ್ಯ ರಕ್ಷಣೆ ಒಳಾಂಗಣ ವ್ಯಾಯಮ ಕೇಂದ್ರ ಮತ್ತು ಊಟ, ತಿಂಡಿಗಾಗಿ ಕೇಂದ್ರ ಕಛೇರಿ ಅವರಣದಲ್ಲಿ ಹೈಟೆಕ್ ಕ್ಯಾಂಟೀನ್ ಆರಂಭಸಲಾಗುತ್ತಿದೆ. ಅಧಿಕಾರಿ ಮತ್ತು ನೌಕರರ ಆರೋಗ್ಯವಂತರಾಗಿ ಇದ್ದಾಗ ಹುಮಸ್ಸಿನಿಂದ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಧನ್ವಂತರಿ ಪ್ರಶಸ್ತಿ ಪುರಸ್ಕೃತರು
1) ಡಾ.ಮನೋರಂಜನ್ ಹೆಗ್ಡೆ, ಆರೋಗ್ಯಧಿಕಾರಿ
1)ಡಾ.ಲತಾ ಎಫ್ ಜೆ, ವೈದ್ಯಕೀಯ ಅಧೀಕ್ಷಕರು,
3)ಡಾ.ಟಿ.ವೆಂಕಟೇಶ್ , ಆರೋಗ್ಯ ವೈದ್ಯಾಧಿಕಾರಿ
4) ಡಾ.ಮಂಜುಳ ಡಿ., ವೈದ್ಯಕೀಯ ಅಧೀಕ್ಷಕರು.
5) ಡಾ.ಕೋಮಲ ಕೆ.ಆರ್., ಆರೋಗ್ಯ ವೈದ್ಯಾಧಿಕಾರಿ
6) ಡಾ.ಲಲಿತಾ, ವೈದ್ಯಕೀಯ ಅಧೀಕ್ಷಕರು
7)ಡಾ.ಮಂಜುಳ ಡಿ, ಆರೋಗ್ಯ ವೈದ್ಯಾಧಿಕಾರಿ
8) ಡಾ.ಭಾರತಿ ಜೆ.ಪಿ.ವೈದ್ಯಕೀಯ ಅಧೀಕ್ಷಕರು.
9) ಡಾ.ನವೀನ್ ಕುಮಾರ್ , ವೈದ್ಯಾಧಿಕಾರಿ
10) ಡಾ.ರಾಜೇಶ್ ಎನ್, ವೈದ್ಯಾಧಿಕಾರಿ
11)ಡಾ.ಅನುಪಮಾ ಜಿ.ವೈದ್ಯಾಧಿಕಾರಿ
12) ಡಾ.ಅನುಪಮಾ ಸಿ.ವಿ ಅರವಳಿಕೆ ತಜ್ಞರು.
13) ಡಾ.ಸುಜಾತ, ನಗರ ಆರೋಗ್ಯ ಪ್ರಾಥಮಿಕ ಕೇಂದ್ರ.
14) ಡಾ.ವಿ.ಜಿ.ನವೀನ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ

