ಬಂಡೆ ಒಡೆಯೋರಿಗೆ ರೈತರ ಕಷ್ಟ ತಿಳಿಯಲ್ಲ

ಬೆಂಗಳೂರು: ಕೃಷಿ ಮಾಡಿದವರಿಗೆ ಮಾತ್ರ ರೈತರ ಕಷ್ಟ ತಿಳಿಯುತ್ತೆ ಹೊರತು ಬಂಡೆ ಒಡೆಯುವವರಿಗೆ ರೈತರ ನೋವು ತಿಳಿಯುವುದಿಲ್ಲ (Stone Throwers do not Understand Farmers Suffering) ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayana Swamy)ಅವರು ಹೇಳಿದ್ದಾರೆ.
ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೌನ್‍ಶಿಪ್‍ಗೆ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಜಮೀನು ಫಲವತ್ತಾಗಿದೆ. ಇಲ್ಲಿನ ರೈತರನ್ನು ನೋಡಿದರೆ ಅವರು ಎಷ್ಟು ಕೆಲಸ ಮಾಡುತ್ತಾರೆ ಎಂದು ತಿಳಿಯುತ್ತದೆ ಎಂದರು.
ಟೌನ್‍ಶಿಪ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ನೀವು ಎಷ್ಟು ಉತ್ಸುಕರಾಗಿದ್ದೀರೋ ವಿರೋಧಿಸಲು ಭಾರತೀಯ ಜನತಾ ಪಕ್ಷವೂ ಸಹ ಉತ್ಸುಕವಾಗಿದೆ. ವಿರೋಧ ಪಕ್ಷದ ಎಲ್ಲ ನಾಯಕರೂ ನಿಮ್ಮ ರಕ್ಷಣೆಗೆ ಬಂದಿದ್ದೇವೆ. ಈ ಭಾಗದಲ್ಲಿ ಎಲ್ಲೂ ಕೂಡ ಅರ್ಧ ಎಕರೆ ಭೂಮಿ ಪಾಳು ಬಿದ್ದಿಲ್ಲ. ಆದರೆ ಇಂತಹ ಜಮೀನನ್ನು ಸರ್ಕಾರ ಒತ್ತಾಯವಾಗಿ ರೈತರಿಂದ ಕಸಿಯಲು ಮುಂದಾಗಿದೆ ಎಂದು ದೂರಿದರು.
ಈ ಭಾಗದಲ್ಲಿ ತೆಂಗು, ಅಡಿಕೆ, ಮಾವು ಬೆಳೆಯುತ್ತಾರೆ.

ಡೇರಿ ಉದ್ಯಮ ಇದೆ. ಇಂತಹ ರೈತರನ್ನು ಟೌನ್‍ಶಿಪ್ ನೆಪದಲ್ಲಿ ಒಕ್ಕಲೆಬ್ಬಿಸಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (D. K. Shivakumar)ಅವರು ಮುಂದಾಗಿದ್ದಾರೆ. ನೀವು ನಿಜವಾದ ರೈತನ ಮಗ ಆಗಿದ್ದರೆ ಈ ರೀತಿ ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದರು.
ಇಲ್ಲಿನ ರೈತರನ್ನು ಒಕ್ಕಲೆಬ್ಬಿಸಿ ಎಲ್ಲಿಗೆ ಕಳಿಸುತ್ತೀರಿ. ಹಣ ಇಟ್ಟುಕೊಂಡು ಅವರು ಕಾರು, ಬೈಕು ತಗೋಬಹುದು. ಆದರೆ ಹಣ ಎಲ್ಲ ಖರ್ಚಾದ ಮೇಲೆ ತಮ್ಮ ಜಮೀನಿನಲ್ಲಿ ನಿರ್ಮಿಸಿದ ಕಾರ್ಖಾನೆಗಳಲ್ಲಿ ಸೆಕ್ಯುರಿಟಿ ಗಾರ್ಡ್ ಆಗುತ್ತಾರೆ. ಆದ್ದರಿಂದ ಅವರನ್ನು ಬಿಟ್ಟುಬಿಡಿ. ರೈತರ ಶಾಪ ತಡೆಯುವ ಶಕ್ತಿ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಇಲ್ಲ ಎಂದು ಹೇಳಿದರು.
ಬಿಡದಿಯಲ್ಲಿ ಇಂತಹ ಟೌನ್‍ಶಿಪ್ ಬಿಟ್ಟು ಬೇರೆ ಕಡೆ ಮಾಡಲಿ. ಚಿಕ್ಕಬಳ್ಳಾಪುರ, ದೇವನಹಳ್ಳಿ ಕಡೆ ಸಾವಿರಾರು ಎಕರೆ ಬರಡು ಭೂಮಿ ಸಿಗುತ್ತದೆ. ಆಗ ಅಲ್ಲಿನ ಭೂಮಿಗೂ ಬೆಲೆ ಸಿಗಲಿದೆ ಎಂದು ನುಡಿದರು.
ಒತ್ತಾಯಪೂರ್ವಕವಾಗಿ ಭೂಮಿ ಕಸಿದು ರೈತರನ್ನು ಕಷ್ಟಕ್ಕೆ ಒಡ್ಡಬೇಡಿ. ರಿಯಲ್ ಎಸ್ಟೇಟ್ ಮಾಡಲು ಬೇರೆ ಮಾರ್ಗ ಇದೆ ಎಂದು ಹೇಳಿದರು.

Hot this week

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

Topics

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

Related Articles