ಪದ್ಮನಾಭನಗರದಲ್ಲಿ ಧಾರ್ಮಿಕ ಜಾಗೃತಿ ಮೆರವಣಿಗೆ

ಬೆಂಗಳೂರು: ಸುರಭಾರತಿ ಸಾಂಸ್ಕೃತಿಕ ಪ್ರತಿಷ್ಠಾನ, (SuraBharathi Cultural Prathistana) ಹೊರಮಾವು (Horamavu) ವತಿಯಿಂದ ಪದ್ಮನಾಭನಗರದ ಶ್ರೀ ವಿಶ್ವನಾಥ ಶಾಸ್ತ್ರಿ (Shri Vishwanath Shastri)ಅವರ ನಿವಾಸದ ಆವರಣದಲ್ಲಿ ಇಂದು ಗುರುಪಾದುಕೆ ಪೂಜೆ, ಶೃಂಗೇರಿ ಶ್ರೀಗಳ ಪೂಜೆ ಹಾಗೂ ಭಜನಾ (Bhajana) ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಪದ್ಮನಾಭನಗರದ ಪ್ರಮುಖ ರಸ್ತೆಗಳಲ್ಲಿ ಪೂಜ್ಯರ ಭಾವಚಿತ್ರದ ಮೆರವಣಿಗೆ, ಭಜನೆ ಹಾಗೂ ವೇದಘೋಷಗಳೊಂದಿಗೆ ಧಾರ್ಮಿಕ ಜಾಗೃತಿ ಕಾರ್ಯಕ್ರಮ ನಡೆಯಿತು. ನಂತರ ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ಆಯೋಜಿಸಲಾಗಿದ್ದು, ಸುರಭಾರತಿ ಸಂಸ್ಕೃತ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಗೌರವನ್ವಿತ ಅಧ್ಯಕ್ಷರಾದ ಮತ್ತು ಸಂಸ್ಕೃತ ಭಾಷೆ, ಸನಾತನ ಧರ್ಮದ ಅಭಿವೃದ್ಧಿಗೆ ಟಂಕ ಕಟ್ಟಿರುವ ಪೂಜ್ಯ ವಿದ್ವಾನ್ ಕೆ.ಎಲ್. ಶ್ರೀನಿವಾಸ್(Vidwan K.L. Srinivas)  ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಸುಮಾರು 500ಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಭಕ್ತಾದಿಗಳಿಗೆ ಉಪಹಾರ ಹಾಗೂ ಪ್ರಸಾದ ವಿತರಿಸಲಾಯಿತು.
ಸುರಭಾರತಿ ಸಂಸ್ಕೃತ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ 2027ರ ಜುಲೈ ತಿಂಗಳಲ್ಲಿ ಬೆಂಗಳೂರಿನ ಹೊರಮಾವಿನಲ್ಲಿ ಒಂದು ಲಕ್ಷ ಜನರಿಂದ  ಲಲಿತಾ ಸಹಸ್ರನಾಮ ಪಾರಾಯಣ ಮಹಾಯಜ್ಞವನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಈ ಮಹತ್ವದ ಕಾರ್ಯಕ್ರಮದ ಕುರಿತು ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಹಾಗೂ ಧಾರ್ಮಿಕ ಮನೋಭಾವವುಳ್ಳವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಶೃಂಗೇರಿ ಜಗದ್ಗುರುಗಳ ಆಶೀರ್ವಾದದೊಂದಿಗೆ ವಿವಿಧ ಪ್ರದೇಶಗಳಲ್ಲಿ ಭಜನೆ, ವೇದಘೋಷ ಹಾಗೂ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ವಿದ್ವಾನ್ ಕೆ.ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.
ಇಂದಿನ ಕಾರ್ಯಕ್ರಮವನ್ನು ಶ್ರೀ ವಿಶ್ವನಾಥ ಶಾಸ್ತ್ರಿ ಹಾಗೂ ಶ್ರೀಮತಿ ಸೀತಾಲಕ್ಷ್ಮೀ ದಂಪತಿಗಳು ವ್ಯವಸ್ಥಿತವಾಗಿ ನಡೆಸಿಕೊಟ್ಟರು.

Hot this week

ಬಂಡೆ ಒಡೆಯೋರಿಗೆ ರೈತರ ಕಷ್ಟ ತಿಳಿಯಲ್ಲ

ಬೆಂಗಳೂರು: ಕೃಷಿ ಮಾಡಿದವರಿಗೆ ಮಾತ್ರ ರೈತರ ಕಷ್ಟ ತಿಳಿಯುತ್ತೆ ಹೊರತು ಬಂಡೆ...

ವೈದ್ಯರು ಕಣ್ಣಿಗೆ ಕಾಣುವ ದೇವರು, ಜನರ ನಂಬಿಕೆ ಉಳಿಸಿಕೊಳ್ಳಿ : ಡಿ.ಕೆ. ಶಿವಕುಮಾರ್

ವೈದ್ಯರು ಕಣ್ಣಿಗೆ ಕಾಣುವ ದೇವರು. (Doctors are Gods) ಕಷ್ಟ ಇದ್ದರೂ...

ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ, ಕರುಣೆ, ಸೇವಾ ಮನೋಭಾವ ಅತ್ಯಗತ್ಯ: ರಾಜ್ಯಪಾಲ ಗೆಹ್ಲೋಟ್

ವೈದ್ಯಕೀಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸೇವೆ ಮತ್ತು ಕರುಣೆಯ ಕ್ಷೇತ್ರವಾಗಿದ್ದು,...

ಕುಡಿತಿನಿ ಪ್ರದೇಶದ ಭೂಸ್ವಾಧಿನದಲ್ಲಿ ಭಾರೀ ಮೋಸ: ಜೂ. 18 – ಬಳ್ಳಾರಿ ಸಂಪೂರ್ಣ ಬಂದ್

Bellary : ಭಾರೀ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದು ಬಳ್ಳಾರಿ ಜಿಲ್ಲೆಯ ಕುಡಿತಿನಿ...

Topics

ಬಂಡೆ ಒಡೆಯೋರಿಗೆ ರೈತರ ಕಷ್ಟ ತಿಳಿಯಲ್ಲ

ಬೆಂಗಳೂರು: ಕೃಷಿ ಮಾಡಿದವರಿಗೆ ಮಾತ್ರ ರೈತರ ಕಷ್ಟ ತಿಳಿಯುತ್ತೆ ಹೊರತು ಬಂಡೆ...

ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ, ಕರುಣೆ, ಸೇವಾ ಮನೋಭಾವ ಅತ್ಯಗತ್ಯ: ರಾಜ್ಯಪಾಲ ಗೆಹ್ಲೋಟ್

ವೈದ್ಯಕೀಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸೇವೆ ಮತ್ತು ಕರುಣೆಯ ಕ್ಷೇತ್ರವಾಗಿದ್ದು,...

ಕುಡಿತಿನಿ ಪ್ರದೇಶದ ಭೂಸ್ವಾಧಿನದಲ್ಲಿ ಭಾರೀ ಮೋಸ: ಜೂ. 18 – ಬಳ್ಳಾರಿ ಸಂಪೂರ್ಣ ಬಂದ್

Bellary : ಭಾರೀ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದು ಬಳ್ಳಾರಿ ಜಿಲ್ಲೆಯ ಕುಡಿತಿನಿ...

ನಿತ್ಯ ಪಂಚಾಂಗ 17.06.2026 ಬುಧವಾರ WEDNESDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 17.06.2026 ಬುಧವಾರ WEDNESDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ:...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳು/ಮಾಧ್ಯಮ ಸಂಸ್ಥೆಗಳಲ್ಲಿ...

ವಿವಿಧ ದೇಶಗಳ ಗೌರವಾನ್ವಿತ ರಾಯಭಾರಿಗಳ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಿರಣ್ ಮಜುಂದಾರ್ ಶಾ, ಸುರೇಶ್, ಗೀತಾಂಜಲಿ...

Related Articles