ಕುಡಿತಿನಿ ಪ್ರದೇಶದ ಭೂಸ್ವಾಧಿನದಲ್ಲಿ ಭಾರೀ ಮೋಸ: ಜೂ. 18 – ಬಳ್ಳಾರಿ ಸಂಪೂರ್ಣ ಬಂದ್

Bellary : ಭಾರೀ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದು ಬಳ್ಳಾರಿ ಜಿಲ್ಲೆಯ ಕುಡಿತಿನಿ (Kudithini) ಪ್ರದೇಶದ ಏಳು ಗ್ರಾಮಗಳ 12,875.09 ಎಕರೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ನ್ಯಾಯಯುತ (Land Acquisition) ಭೂಬೆಲೆ ನಿಗದಿ ಮಾಡದೇ ವಂಚಿಸಿರುವುದನ್ನು ಹಾಗೂ 16 ವರ್ಷಗಳು ಕಳೆದರೂ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡದಿರುವುದರಿಂದ ತಮ್ಮ ಭೂಮಿಯನ್ನು ವಾಪಾಸು ಮಾಡಬೇಕೆಂದು ಈ ಭಾಗದ ರೈತರು ಹಾಗೂ ವಿವಿಧ ಜನ ಸಂಘಟನೆಗಳು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯದ ಧೋರಣೆಯನ್ನು ಖಂಡಿಸಿ ಇದೇ 2026 ಜೂನ್ 18 ರಂದು ಬಳ್ಳಾರಿ ಜಿಲ್ಲೆಯ (Bellary Bundh) ಸಂಪೂರ್ಣ ಬಂದ್ ಸ್ವರೂಪದ ಹರತಾಳ ನಡೆಸಲು ಕರೆ ನೀಡಿವೆ.
ಜಿಲ್ಲೆಯ ಎಲ್ಲಾ ತಾಲೂಕುಗಳು ಸಂಪೂರ್ಣ ಬಂದ್ ಹರತಾಳ ನಡೆಸಲಿವೆ.


ಕಳೆದ 13 ವರ್ಷಗಳಿಂದಲೂ ವಿವಿಧ ರೀತಿಯ ಹೋರಾಟಗಳನ್ನು ಮಾಡಿರುವ ಕುಡಿತಿನಿ ಪ್ರದೇಶದ ಭೂ ಸಂತ್ರಸ್ತರ ಹೋರಾಟ ಸಮಿತಿ 2022 ಡಿಸೆಂಬರ್ 18 ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ- ಕೆ.ಐ.ಡಿ.ಬಿ.ಯು ಬಲವಂತವಾಗಿ 800 ಎಕರೆ ಭೂಮಿಯನ್ನು ಜಿಂದಾಲ್‌ಗೆ ಪರಭಾರೆ ಮಾಡಿದ್ದನ್ನು ವಿರೋಧಿಸಿ ಸರದಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿ, ಇಂದಿಗೆ 1276 ದಿನಗಳಾಗುತ್ತಿವೆ.

ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಎರಡು ಬಾರಿ ಉನ್ನತ ಮಟ್ಟದ ಸಭೆ ನಡೆದು ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಈ ನಡುವೆ ಮಿತ್ತಲ್ ಕಂಪನಿಗೆ ಸ್ವಾಧೀನ ಪಡಿಸಿದ ಭೂಮಿಗೆ ಬೆಲೆ ಕಡಿಮೆ ನಿಗದಿಯಾಗಿ ಮೋಸ ಮಾಡಿದ್ದು ಇದನ್ನು ಪ್ರಶ್ನಿಸಿ ಕೇಸ್ ಸುಪ್ರಿಂ ಕೋರ್ಟ್ ರೈತರ ಪರವಾದ ತೀರ್ಪು ನೀಡಿ ಎಕರೆಗೆ ಒಟ್ಟು 1 ಕೋಟಿ 23 ಲಕ್ಷ ರೂ.ಗಳಿಂದ ಒಂದೂವರೆ ಕೋಟಿ ರೂ.ಗಳವರೆಗೆ ಪರಿಹಾರ ನೀಡಿದೆ.
ಸ್ವಾಧೀನ ಪಡಿಸಿಕೊಂಡ ಜಮೀನಿಗೆ ನ್ಯಾಯಯುತ ಬೆಲೆ ನೀಡಬೇಕು, ಘೋಷಿತ ಉದ್ದೇಶಕ್ಕೆ ಬಳಸದೇ ಅನ್ಯ ಉದ್ದೇಶಕ್ಕೆ ಬಳಸಕೂಡದು, ನ್ಯಾಯಯುತ ಪರಿಹಾರ ನೀಡದಿದ್ದಲ್ಲಿ ತಮ್ಮ ಭೂಮಿ ವಾಪಾಸು ಕೊಡಬೇಕು ಎಂದು ಆಗ್ರಹ ಪಡಿಸಲಾಗಿದೆ.
ಆದ್ದರಿಂದ ಸರ್ಕಾರ ರೈತರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲು ಸಭೆ ನಿಗದಿ ಮಾಡಬೇಕೆಂದು ಒತ್ತಾಯಿಸಲಾಗಿದೆ.

Hot this week

ಬಂಡೆ ಒಡೆಯೋರಿಗೆ ರೈತರ ಕಷ್ಟ ತಿಳಿಯಲ್ಲ

ಬೆಂಗಳೂರು: ಕೃಷಿ ಮಾಡಿದವರಿಗೆ ಮಾತ್ರ ರೈತರ ಕಷ್ಟ ತಿಳಿಯುತ್ತೆ ಹೊರತು ಬಂಡೆ...

ಪದ್ಮನಾಭನಗರದಲ್ಲಿ ಧಾರ್ಮಿಕ ಜಾಗೃತಿ ಮೆರವಣಿಗೆ

ಬೆಂಗಳೂರು: ಸುರಭಾರತಿ ಸಾಂಸ್ಕೃತಿಕ ಪ್ರತಿಷ್ಠಾನ, (SuraBharathi Cultural Prathistana) ಹೊರಮಾವು (Horamavu)...

ವೈದ್ಯರು ಕಣ್ಣಿಗೆ ಕಾಣುವ ದೇವರು, ಜನರ ನಂಬಿಕೆ ಉಳಿಸಿಕೊಳ್ಳಿ : ಡಿ.ಕೆ. ಶಿವಕುಮಾರ್

ವೈದ್ಯರು ಕಣ್ಣಿಗೆ ಕಾಣುವ ದೇವರು. (Doctors are Gods) ಕಷ್ಟ ಇದ್ದರೂ...

ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ, ಕರುಣೆ, ಸೇವಾ ಮನೋಭಾವ ಅತ್ಯಗತ್ಯ: ರಾಜ್ಯಪಾಲ ಗೆಹ್ಲೋಟ್

ವೈದ್ಯಕೀಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸೇವೆ ಮತ್ತು ಕರುಣೆಯ ಕ್ಷೇತ್ರವಾಗಿದ್ದು,...

Topics

ಬಂಡೆ ಒಡೆಯೋರಿಗೆ ರೈತರ ಕಷ್ಟ ತಿಳಿಯಲ್ಲ

ಬೆಂಗಳೂರು: ಕೃಷಿ ಮಾಡಿದವರಿಗೆ ಮಾತ್ರ ರೈತರ ಕಷ್ಟ ತಿಳಿಯುತ್ತೆ ಹೊರತು ಬಂಡೆ...

ಪದ್ಮನಾಭನಗರದಲ್ಲಿ ಧಾರ್ಮಿಕ ಜಾಗೃತಿ ಮೆರವಣಿಗೆ

ಬೆಂಗಳೂರು: ಸುರಭಾರತಿ ಸಾಂಸ್ಕೃತಿಕ ಪ್ರತಿಷ್ಠಾನ, (SuraBharathi Cultural Prathistana) ಹೊರಮಾವು (Horamavu)...

ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ, ಕರುಣೆ, ಸೇವಾ ಮನೋಭಾವ ಅತ್ಯಗತ್ಯ: ರಾಜ್ಯಪಾಲ ಗೆಹ್ಲೋಟ್

ವೈದ್ಯಕೀಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸೇವೆ ಮತ್ತು ಕರುಣೆಯ ಕ್ಷೇತ್ರವಾಗಿದ್ದು,...

ನಿತ್ಯ ಪಂಚಾಂಗ 17.06.2026 ಬುಧವಾರ WEDNESDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 17.06.2026 ಬುಧವಾರ WEDNESDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ:...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳು/ಮಾಧ್ಯಮ ಸಂಸ್ಥೆಗಳಲ್ಲಿ...

ವಿವಿಧ ದೇಶಗಳ ಗೌರವಾನ್ವಿತ ರಾಯಭಾರಿಗಳ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಿರಣ್ ಮಜುಂದಾರ್ ಶಾ, ಸುರೇಶ್, ಗೀತಾಂಜಲಿ...

Related Articles