ವಿದ್ಯುತ್ ಮಸೂದೆ ಕೈಬಿಡಲು ಆಗ್ರಹ: ಟಾಟಾ ಪವರ್‌ಗೆ ಸಮಾನಾಂತರ ವಿತರಣಾ ಪರವಾನಗಿ ನೀಡದಂತೆ ನಿರ್ಣಯ

ವಿದ್ಯುತ್ ವಲಯವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿರುವ ವಿದ್ಯುತ್ (ತಿದ್ದುಪಡಿಮಸೂದೆ ಯನ್ನು ತೀವ್ರವಾಗಿ ವಿರೋಧಿಸಿರುವ *ಅಖಿಲ ಭಾರತ ವಿದ್ಯುತ್ ಇಂಜಿನಿಯರ್ಗಳ ಒಕ್ಕೂಟ (ಎಐಪಿಇಎಫ್), (All India Power Engineers Federation) ಈ ಮಸೂದೆಯನ್ನು  ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದೆ. ನಗರದಲ್ಲಿ ನಡೆದ 21 ರಾಜ್ಯಗಳ  ಪ್ರತಿನಿಧಿಗಳು ಭಾಗವಹಿಸಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಕರ್ನಾಟಕದಲ್ಲಿ ಟಾಟಾ ಪವರ್  (TATA Power Company) ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆ ಹಾಗೂ ಹಳೇ ಪಿಂಚಣಿ ಯೋಜನೆ (OPS) ಮರುಸ್ಥಾಪನೆ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಖಾಸಗೀಕರಣದಿಂದ ಸಾರ್ವಜನಿಕ ಡಿಸ್ಕಾಂಗಳಿಗೆ ಆತಂಕ

ಸಭೆಯನ್ನುದ್ದೇಶಿಸಿ ಮಾತನಾಡಿದ ಎಐಪಿಇಎಫ್ ಅಧ್ಯಕ್ಷ ಶೈಲೇಂದ್ರ ದುಬೆ, “ವಿದ್ಯುತ್ ಕ್ಷೇತ್ರದ ಖಾಸಗೀಕರಣವು ಇಡೀ ವಲಯದ ವಿಭಜನೆಗೆ ಕಾರಣವಾಗಲಿದೆ. ಒಂದೇ ಪ್ರದೇಶದಲ್ಲಿ ಬಹು ವಿತರಣಾ ಪರವಾನಗಿದಾರರಿಗೆ ಅವಕಾಶ ಕಲ್ಪಿಸುವ ಈ ಮಸೂದೆಯು, ಕೇವಲ ಲಾಭದಾಯಕ ಗ್ರಾಹಕರನ್ನು ಮಾತ್ರ ಆರಿಸಿಕೊಳ್ಳುವ (Cherry- picking) ಪ್ರವೃತ್ತಿಗೆ ಖಾಸಗಿ ಕಂಪನಿಗಳಿಗೆ ಮುಕ್ತ ಅವಕಾಶ ನೀಡುತ್ತದೆ,” ಎಂದು ಆತಂಕ ವ್ಯಕ್ತಪಡಿಸಿದರು.

ಇದರಿಂದ ಸಾರ್ವಜನಿಕ ವಿದ್ಯುತ್ ಸರಬರಾಜು ಕಂಪನಿಗಳು (ಡಿಸ್ಕಾಂಗಳು) ಆರ್ಥಿಕವಾಗಿ ದುರ್ಬಲಗೊಳ್ಳಲಿದ್ದು, ರೈತರು ಹಾಗೂ ಸಾಮಾನ್ಯ ಗ್ರಾಹಕರ ಮೇಲಿನ ವಿದ್ಯುತ್ ದರದ ಹೊರೆ ತೀವ್ರವಾಗಿ ಹೆಚ್ಚಾಗಲಿದೆ. ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಿದರೆ, ರಾಷ್ಟ್ರವ್ಯಾಪಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದರು.

ಟಾಟಾ ಪವರ್ಗೆ ಪರವಾನಗಿ ನೀಡಲು ತೀವ್ರ ವಿರೋಧ

ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ಬರುವ 19 ಜಿಲ್ಲೆಗಳಲ್ಲಿ ಸಮಾನಾಂತರ ವಿದ್ಯುತ್ ವಿತರಣೆಗಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ದ ಮುಂದೆ ಟಾಟಾ ಪವರ್ ಸಲ್ಲಿಸಿರುವ ಅರ್ಜಿಯನ್ನು ಒಕ್ಕೂಟವು ಕಟುವಾಗಿ ವಿರೋಧಿಸಿದೆ. ಖಾಸಗಿ ಕಂಪನಿಗಳು ಕೇವಲ ಹೆಚ್ಚಿನ ಆದಾಯ ತರುವ ಗ್ರಾಹಕರನ್ನು ಸೆಳೆಯುವುದರಿಂದ, ಗೃಹ ಬಳಕೆದಾರರು, ರೈತರು ಮತ್ತು ದುರ್ಬಲ ವರ್ಗಗಳಿಗೆ ಕೈಗೆಟುಕುವ ದರದಲ್ಲಿ ವಿದ್ಯುತ್ ಪೂರೈಸುವುದು ಅಸಾಧ್ಯವಾಗುತ್ತದೆ. ಆದ್ದರಿಂದ, ಈ ಅರ್ಜಿಯನ್ನು ಕೂಡಲೇ ತಿರಸ್ಕರಿಸಬೇಕು ಎಂದು ಆಗ್ರಹಿಸಲಾಯಿತು. ಇದೇ ರೀತಿ ಹರಿಯಾಣದಲ್ಲಿ ಎಲೆವನ್ ಪವರ್ ಲಿಮಿಟೆಡ್‌ಗೆ ಪರವಾನಗಿ ನೀಡುವ ಪ್ರಸ್ತಾವವನ್ನೂ ಸಭೆ ಖಂಡಿಸಿತು.

 

ಸಭೆಯಲ್ಲಿ ಕೈಗೊಂಡ ಇತರೆ ಪ್ರಮುಖ ನಿರ್ಣಯಗಳು:

– ಪ್ರತ್ಯೇಕ ಕೃಷಿ ಡಿಸ್ಕಾಂಗಳಿಗೆ ವಿರೋಧ: ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಪ್ರತ್ಯೇಕ ಕೃಷಿ ಡಿಸ್ಕಾಂಗಳನ್ನು ರಚಿಸುವ ಪ್ರಸ್ತಾವವು ಅವೈಜ್ಞಾನಿಕವಾಗಿದೆ. ಇದು ಕೃಷಿ ಸಬ್ಸಿಡಿ ವ್ಯವಸ್ಥೆಯನ್ನು ಬುಡಮೇಲು ಮಾಡಲಿದ್ದು, ಏಕೀಕೃತ ಸಾರ್ವಜನಿಕ ವಿದ್ಯುತ್ ಸಂಸ್ಥೆಗಳ ಮಾದರಿಗೆ ಹಾನಿಕಾರಕವಾಗಿದೆ.

– ಎಐ ದತ್ತಾಂಶ ಕೇಂದ್ರದ ನೀತಿಗೆ ಖಂಡನೆ: ಆಂಧ್ರಪ್ರದೇಶದಲ್ಲಿ ಗೂಗಲ್‌ನ ಎಐ ದತ್ತಾಂಶ ಕೇಂದ್ರ ಕ್ಕೆ ತಾರತಮ್ಯದಿಂದ ಕೂಡಿದ “ಡೀಮ್ಡ್ ಡಿಸ್ಟ್ರಿಬ್ಯೂಷನ್ ಲೈಸೆನ್ಸ್” (Deemed Distribution License) ನೀಡಲು ಮುಂದಾಗಿರುವುದು ಸಾರ್ವಜನಿಕ ಡಿಸ್ಕಾಂಗಳ ಆರ್ಥಿಕ ಸ್ಥಿರತೆಗೆ ಮಾರಕವಾಗಿದೆ.

– ಖಾಸಗೀಕರಣದ ವಿರುದ್ಧ ಬೆಂಬಲ: ಲಡಾಖ್ ವಿದ್ಯುತ್ ಅಭಿವೃದ್ಧಿ ಇಲಾಖೆಯ ಕಾರ್ಪೊರೇಟೀಕರಣ ಹಾಗೂ ಉತ್ತರ ಪ್ರದೇಶದ ಪೂರ್ವಾಂಚಲ್ ಮತ್ತು ದಕ್ಷಿಣಾಂಚಲ್ ವಿದ್ಯುತ್ ವಿತರಣಾ ನಿಗಮಗಳ ಖಾಸಗೀಕರಣದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಒಕ್ಕೂಟವು ತನ್ನ ಸಂಪೂರ್ಣ ಬೆಂಬಲ ಸೂಚಿಸಿದೆ.

ಹಳೇ ಪಿಂಚಣಿ ಯೋಜನೆ (OPS) ಮರುಸ್ಥಾಪನೆಗೆ ಪಟ್ಟು

“ವಿದ್ಯುತ್ ಎನ್ನುವುದು ಕೇವಲ ವಾಣಿಜ್ಯ ಸರಕಲ್ಲ, ಅದು ಅತ್ಯಗತ್ಯ ಸಾರ್ವಜನಿಕ ಸೇವೆಯಾಗಿದೆ. ಪ್ರಾಣಾಪಾಯದ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ವಿದ್ಯುತ್ ನೌಕರರು ಮತ್ತು ಇಂಜಿನಿಯರ್‌ಗಳ ಸಾಮಾಜಿಕ ಭದ್ರತೆಗಾಗಿ ದೇಶಾದ್ಯಂತ ಹಳೇ ಪಿಂಚಣಿ ಯೋಜನೆ (OPS) ಯನ್ನು ಮರುಸ್ಥಾಪಿಸಬೇಕು” ಎಂದು ಎಐಪಿಇಎಫ್ ಪ್ರಧಾನ ಕಾರ್ಯದರ್ಶಿ ಪಿರತ್ನಾಕರ ರಾವ್ಕೆಇಬಿ ಇಂಜಿನಿಯರ್ಗಳ ಸಂಘದ ಅಧ್ಯಕ್ಷ ಬಸವಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ದೇಸಾಯಿ ಅವರು ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಿದರು.

Hot this week

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ತೇಜಸ್ವಿ ಸೂರ್ಯ

ಬೆಂಗಳೂರು: ದೇಶದಲ್ಲೇ ಉತ್ತಮ ಹವಾಮಾನ ಹೊಂದಿರುವ ಉದ್ಯಾನ ನಗರಿ ಬೆಂಗಳೂರನ ಪರಿಸರ...

ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan - Maharaj Park) ಭಾನುವಾರ...

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಎರಡು ದಿನಗಳ ವೈಭವದ ಜ್ಞಾನ-ಭಕ್ತಿ ಮಹೋತ್ಸವ ಭಾರತೀಯ ತತ್ತ್ವಶಾಸ್ತ್ರ, ದ್ವೈತ ವೇದಾಂತ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

Topics

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ತೇಜಸ್ವಿ ಸೂರ್ಯ

ಬೆಂಗಳೂರು: ದೇಶದಲ್ಲೇ ಉತ್ತಮ ಹವಾಮಾನ ಹೊಂದಿರುವ ಉದ್ಯಾನ ನಗರಿ ಬೆಂಗಳೂರನ ಪರಿಸರ...

ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan - Maharaj Park) ಭಾನುವಾರ...

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಎರಡು ದಿನಗಳ ವೈಭವದ ಜ್ಞಾನ-ಭಕ್ತಿ ಮಹೋತ್ಸವ ಭಾರತೀಯ ತತ್ತ್ವಶಾಸ್ತ್ರ, ದ್ವೈತ ವೇದಾಂತ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ...

ವಿಕಸಿತ ಭಾರತ ಸಂಕಲ್ಪ ಸಮಾವೇಶ – ನಿರ್ಮಲಾ ಸೀತಾರಾಮನ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರ ಸರ್ಕಾರವು 12...

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹತ್ವ ಹೆಚ್ಚುತ್ತಿದೆ: ರಾಜ್ಯಪಾಲ ಗೆಹ್ಲೋಟ್

ದಾವಣಗೆರೆ / Davanagere: ಜೀವನಶೈಲಿ ಸಂಬಂಧಿತ ರೋಗಗಳು, ಮಾನಸಿಕ ಒತ್ತಡ ಮತ್ತು...

Related Articles