ಸಿಂಧನೂರಿನ ಅಂಬೇಡ್ಕರ್ ವೃತ್ತದಿಂದ ತಿಡಿಗೋಳ ಗ್ರಾಮಕ್ಕೆ ಬೃಹತ್ ಜಾಥ-ದಾದ ಸಾಹೇಬ್ ಡಾ||ಎನ್.ಮೂರ್ತಿ

ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ದಲಿತ (Dalitha) ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನವೆಂಬರ್ 8ರಂದು ಬೆಳಗ್ಗೆ 9 ಗಂಟೆಗೆ ತಿಡಿಗೋಳ (Tidigola Chalo) ಚಲೋ ಸಿಂಧನೂರಿನ (Sindhoor) ಅಂಬೇಡ್ಕರ್ ವೃತ್ತದಿಂದ (Ambedkar Circle) ತಿಡಿಗೋಳ ಗ್ರಾಮದವರೆಗೆ ಬೃಹತ್ ಬೈಕ್ ಜಾಥ ಕಾರ್ಯಕ್ರಮ ಇದರ ಕುರಿತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ(RPI) ರಾಷ್ಟ್ರೀಯ ರಾಷ್ಟ್ರಾಧ್ಯಕ್ಷರು, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ದಾದ ಸಾಹೇಬ್ ಡಾ||ಎನ್.ಮೂರ್ತಿ ರವರು ಮಾಧ್ಯಮ ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದ 79ವರ್ಷವಾದರು ಅಸ್ಪೃಶ್ಯತೆ ಇನ್ನು ಜೀವಂತವಾಗಿದೆ. ದಲಿತರ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಸಿಂಧನೂರಿನ ತಿಡಿಗೋಳ ಗ್ರಾಮದಲ್ಲಿ ಆಂಜನೇಯ ಮಾರುತೇಶ್ವರ ಜಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ ಎಂಬ ಕಾರಣಕ್ಕೆ 400ಕ್ಕೂ ಹೆಚ್ಚು ಮೇಲ್ಜಾತಿ ಪುಂಡ ಯುವಕರು 100ಕ್ಕೂ ಹೆಚ್ಚು ದಲಿತರ ಮೇಲೆ ಮಾರಕಾಸ್ತ್ರಗಳಿಂದ ಅಮಾನುಷವಾಗಿ ದಾಳಿ ಮಾಡಿದ್ದಾರೆ.

ದಲಿತ ಹೆಣ್ಣು ಮಕ್ಕಳ ಸೀರೆ, ರವಿಕೆ ಹರಿದಿದ್ದಾರೆ. ದಲಿತರ ಮೇಲೆ ಹಲ್ಲೆ ಮಾಡಿ ಅಟ್ಟಹಾಸ ಮೆರದಿದ್ದಾರೆ. ತುರ್ವಿಹಾಳ ಪೂಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಹೋದ ದಲಿತರ ಮೇಲೆಯೆ ಕೇಸ್ ಹಾಕಿದ್ದಾರೆ. ತಿಡಿಗೋಳ ಗ್ರಾಮದ ಮೇಲ್ಜಾತಿ ಜನರು ಪರಿಶಿಷ್ಟ ಜಾತಿಯವರನ್ನು ಮಾತನಾಡಿಸುವಂತಿಲ್ಲ, ಆಹಾರ ಧಾನ್ಯ ಕೊಡುವಂತಿಲ್ಲ, ಕ್ಷೌರ ಮಾಡುವಂತಿಲ್ಲ, ಕುಡಿಯುವ ನೀರು ಹಿಡಿಯುವಂತಿಲ್ಲ ದಲಿತರ ಜೊತೆ ಮಾತನಾಡಿದರೆ 5000ಸಾವಿರ ದಂಡ ವಿಧಿಸುತ್ತಾರೆ.

ದಲಿತರ ಮೇಲೆ ದೌರ್ಜನ್ಯ, ಹಲ್ಲೆ ಅತ್ಯಾಚಾರ ದೊಡ್ಡ ದೊಡ್ಡ 15ಕ್ಕೂ ಪ್ರಕರಣ ದಾಖಲಾಗಿದೆ ಯಾವುದೇ ಕ್ರಮವಾಗಿಲ್ಲ.
ದಲಿತರ ಸಮಾಜಕ್ಕೆ ಧೈರ್ಯ ಆತ್ಮಸ್ಥೈರ್ಯ ತುಂಬಲು, ಅರಿವು ಮೂಡಿಸಲು ನವೆಂಬರ್ 8 ಬೃಹತ್ ಬೈಕ್ ಜಾಥ ಮಾಡಲಾಗುತ್ತಿದೆ ಸಾವಿರಾರು ದಲಿತ ಸಮುದಾಯದ ಮುಖಂಡರು ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಗೃಹ ಸಚಿವರಾದ ಪ್ರಿಯಾಂಕ ಖರ್ಗೆರವರು ಕೊಡಲೇ ಗಮನಹರಿಸಿ, ದಲಿತರ ಸೂಕ್ತ ರಕ್ಷಣೆ, ನ್ಯಾಯ ಒದಗಿಸಬೇಕಾಗಿ ವಿನಂತಿ ಎಂದು ಡಾ||ಎನ್.ಮೂರ್ತಿ ರವರು ಹೇಳಿದರು.

Hot this week

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

Topics

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

ಬೆಂಗಳೂರು: ರಾಜ್ಯದಲ್ಲಿ ವಿಜ್ಞಾನ ಆಧಾರಿತ ಪರಿಸರ ಪುನರುಜ್ಜೀವನ ಮತ್ತು ಪರಿಸರ ಸಾಕ್ಷರತೆಯನ್ನು...

Related Articles