ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ಗಾಯಕಿ ಅರ್ಚನ ಉಡುಪ ರವರಿಗೆ ಸನ್ಮಾನ

ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಉಳಿಸಲು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಹಕಾರ, ಪ್ರೋತ್ಸಾಹ-ಎಸ್.ರಘುನಾಥ್

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯಿತ್ರಿ (Karnataka Brahmana Gayathri Mahasabha) ಭವನದಲ್ಲಿ ಎರಡು ದಿನಗಳ ಕಾಲ ಶ್ರೀ ವಿದ್ಯಾಗಣಪತಿ ಮಹೋತ್ಸವ (Sri Vidyaganapathi Mahotsava) ಕಾರ್ಯಕ್ರಮ ಮಹಾಮಂಗಳರತಿ, ವಿಶೇಷಪೂಜೆ ವಿಪ್ರ (Vipra) ಸಾಧಕರಿಗೆ ಸನ್ಮಾನ ಕಾರ್ಯಕ್ರಮ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಎಸ್.ರಘುನಾಥ್ ರವರು , ವಿಶೇಷ ಪೂಜೆ ಸಲ್ಲಿಸಿ ವಿಪ್ರ ಸಾಧಕರಿಗೆ ಸನ್ಮಾನಿಸಿದರು.
ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮೀಕಾಂತ್, ಖಜಾಂಚಿ ಸುಬ್ಬಣ್ಣ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಸಗೋಡು ಜಯಸಿಂಹ, ಬಿಜೆಪಿ ಮುಖಂಡ ಪ್ರಹ್ಲಾದ್ ಬಾಬು, ದತ್ತಾತ್ರಿರವರು ಮತ್ತು ರಾಮ್ ಪ್ರಸಾದ್ ರವರು ಉಪಸ್ಥಿತರಿದ್ದರು.

ಎಸ್.ರಘುನಾಥ್ ರವರು ಮಾತನಾಡಿ ಗಣೇಶ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸೇವೆಯ ಜೊತೆಯಲ್ಲಿ ನಾಡಿಗೆ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸಲಾಗುತ್ತಿದೆ. ಮಹಾಸಭಾದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ ಇಲ್ಲಿ ಕಲಾವಿದರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಭಾಂಗಣ ನೀಡಲಾಗುತ್ತಿದೆ.

ಪ್ರತಿ ತಿಂಗಳು ಕೊನೆಯ ಶುಕ್ರವಾರ ನಾಡಿನ ಸಾಧಕರಿಗೆ ಸನ್ಮಾನ ಮತ್ತು ಕಲಾವಿದರಿಗೆ ಸಂಗೀತ ಸೇವೆ ಅವಕಾಶ ನೀಡಲಾಗಿದೆ. ಬ್ರಾಹ್ಮಣ ಮಹಾಸಭಾ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ ಉಳಿಸಲು ಸಹಕಾರ, ಪ್ರೋತ್ಸಾಹ ನೀಡುತ್ತಿದೆ.

ಎಂ.ಕೆ.ವಿಶಾಲಾಕ್ಷಿರವರು ಮಾತನಾಡಿ ಮಂತ್ರಾಲಯದ ಗುರುರಾಯರ ಕೃಪೆ, ಪ್ರೇರಣೆಯಿಂದ ಸಾಧನೆ ಮಾಡಲು ಸಾಧ್ಯವಾಯಿತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರಿಗೆ ಪಕ್ಷಭೇಧ ಮರೆತು ಸಂವಿಧಾನತ್ಮಕ ಕೆಲಸ ಮಾಡುತ್ತೇನೆ. ವಿಧಾನಸಭೆಯಲ್ಲಿ ಕಾರ್ಯದರ್ಶಿಯಾಗಿ ಮೊದಲ ಮಹಿಳಾ ಕಾರ್ಯದರ್ಶಿಯಾಗಿದ್ದೇನೆ. ಆಡಳಿತ ಕುರಿತು ಮಾತನಾಡುವುದು ಸುಲಭ ಅದರೆ ಆಡಳಿತ ನಡೆಸಲು ಹಲವಾರು ಸಮಸ್ಯೆಗಳು ಎದುರಾಗುತ್ತದೆ. ನಾನು ವಿದ್ಯಾವಂತೆಯಾಗಲು, ಆಡಳಿತ ಸೇವೆ ಸಲ್ಲಿಸಲು ನನ್ನ ಕುಟುಂಬದವರ ಸಹಕಾರ ಇದೆ ಎಂದು ಹೇಳಿದರು.

ಗಣೇಶ ಮಹೋತ್ಸವ ಸಂದರ್ಭದಲ್ಲಿ ಈ ಕೆಳಕಂಡ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು ವಿದುಷಿ ಡಾ. ಹೆಚ್.ಜಿ. ಅಮೃತವರ್ಷಿಣಿರವರು
ವೇದಾಂತರತ್ನ, ವೇದಶ್ರೀ ಡಾ. ಬಿ.ಎನ್. ನಾಗರಾಜ್ ರವರು
ವೇದ ವಿದ್ವಾನ್ ಪಂ.ಡಾ. ಭೀಮಸೇನಾಚಾರ್ಯ ಅತನೂರುರವರು
ವೇದ ವಿದ್ವಾನ್‌ ಆಗಮಶಾಸ್ತ್ರ ಪ್ರವೀಣ ಶ್ರೀ ಬಿ.ಎಸ್. ಅನಂತ ಕೃಷ್ಣ ಭಟ್,
ವಿದ್ವಾನ್ ಡಾ. ಕೆ.ಎಸ್. ಅರುಣ್ ಕುಮಾರ್‌ಆಚಾರ್ಯರವರು
ಫಾಲಚಂದ್ರ ಶಾಸ್ತ್ರೀರವರು
ವೇದ ವಿದ್ವಾನ್‌ ಡಾ. ವೆಂಕಟೇಶಾಚಾ‌ರ್ ಬಿ.ಆರ್‌. ಅಡ್ಡಗದ್ದೆ ಕೃಷ್ಣಮೂರ್ತಿ ಭಟ್ಟರು, ಪ್ರಭಾಕರ್ ಶಾಸ್ತ್ರೀರವರು ಶ್ರೀಮತಿ ಅರ್ಚನ ಉಡುಪರವರು ಶ್ರೀಮತಿ ಎಂ.ಕೆ. ವಿಶಾಲಾಕ್ಷಿರವರು ಡಾ. ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರೀರವರು ರೈಸ್ ಗ್ರೈನ್ ವೆಂಕಟೇಶ್ ರವರು ವಿದುಷಿ ಶ್ರೀಮತಿ ಸುಮಾ ಕೃಷ್ಣಮೂರ್ತಿರವರು ವಿದ್ವಾನ್ ಶ್ರೀ ಎನ್. ರಾಜ್‌ ಕಮಲ್‌ ರವರು ವಿದ್ವಾನ್ ಗಾನಕಲಾ ಶ್ರೀ ಎಸ್.ಎನ್. ಸ್ವಾಮಿರವರು ವಿದೂಷಿ ಡಾ. ಲಕ್ಷ್ಮೀ ರೇಖಾ ಅರುಣ್‌ ರವರು

Hot this week

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Topics

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

ವಿ.ಕುಮಾರ್ ನಿರ್ದೇಶನದ ಹದಿನೆಂಟು ಎಕರೆ ಸಿನಿಮಾ ಲಕ್ಕಪ್ಪ

ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ...

Related Articles