ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಕುಮಾರಿ ವರ್ಷಿಣಿ: ರಾಜ್ಯತಂಡ ಪ್ರತಿನಿಧಿಸಲು ಸಜ್ಜು

ಬೆಂಗಳೂರು: ಪ್ರತಿಭಾವಂತ ಯೋಗ ಕ್ರೀಡಾಪಟು ಕುಮಾರಿ ವರ್ಷಿಣಿ. ಜೆ (Ms. Varshini. J) ಅವರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲು ಹೆಮ್ಮೆಯ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ (KSYSA) ವತಿಯಿಂದ ಆಯೋಜಿಸಲಾಗಿರುವ ಪ್ರತಿಷ್ಠಿತ 7ನೇ NYSF ರಾಷ್ಟ್ರ ಮಟ್ಟದ ಯೋಗಾಸನ(Yogasana Sports Championship) ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಎಸ್‌ಎಸ್‌ಎಂ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾದ ಇವರು ಅತ್ಯುನ್ನತ ಅರ್ಹತೆ ಪಡೆದಿದ್ದಾರೆ.
ವರ್ಷಿಣಿ ಅವರು ಎಚ್. ಎಸ್. ರಮ್ಯಾ ಹಾಗೂ ಆರ್. ಜಗದೀಶ್ ದಂಪತಿಯ ಹೆಮ್ಮೆಯ ಪುತ್ರಿಯಾಗಿದ್ದು, ರಾಷ್ಟ್ರೀಯ ವೇದಿಕೆಯಲ್ಲಿ ರಾಜ್ಯಕ್ಕೆ ಕೀರ್ತಿ ತರಲು ಸಜ್ಜಾಗಿದ್ದಾರೆ. ಇವರ ಈ ಅದ್ಭುತ ಸಾಧನೆಯ ಹಿಂದೆ ಯೋಗ ತರಬೇತುದಾರರಾದ ದೀಪಕ್ ಮತ್ತು ಅಭಿಷೇಕ್ ಟಿ. ಅವರ ಪರಿಣಿತ ಮಾರ್ಗದರ್ಶನ, ಕಠಿಣ ತರಬೇತಿ ಹಾಗೂ ವರ್ಷಿಣಿ ಅವರ ನಿರಂತರ ಶ್ರಮ ಅಡಗಿದೆ.
ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ವರ್ಷಿಣಿ ಅವರ ಈ ಮಹೋನ್ನತ ಮೈಲಿಗಲ್ಲಿಗೆ ಶಾಲೆಯ ಆಡಳಿತ ಮಂಡಳಿ, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದು, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಜಯಭೇರಿ ಬಾರಿಸಲಿ ಎಂದು ಶುಭ ಹಾರೈಸಿದ್ದಾರೆ….

Hot this week

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಭಾರತದ ಪ್ರಥಮ ಶಿಕ್ಷಣ ಸಚಿವರಾದ...

Topics

ಇ-20 ಎಥನಾಲ್ ಪ್ರಮಾಣ ಪರೀಕ್ಷೆ – ಕರ್ನಾಟಕ ಸರ್ಕಾರವು ಗ್ರಾಹಕರ ಹಿತರಕ್ಷಣೆಗೆ ಬದ್ಧ : ಸಚಿವ ರಿಜ್ವಾನ್ ಅರ್ಷದ್ 

ಬೆಂಗಳೂರು: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣಕ್ಕೆ (E20) ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪರೀಕ್ಷಾ...

ಬೆಂಗಳೂರು: ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ...

ನ್ಯೂಜಿಲೆಂಡ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮೇಲೆ ಟೀಂ ಇಂಡಿಯಾ ಕಣ್ಣು: ಹ್ಯಾಮಿಲ್ಟನ್ ಪಂದ್ಯಕ್ಕೆ ಮಳೆ ಭೀತಿ!

ಹ್ಯಾಮಿಲ್ಟನ್: ನ್ಯೂಜಿಲೆಂಡ್(New Zealand) ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ(Cricket Team) ಇದೀಗ...

Related Articles