ರಾಷ್ಟ್ರೀಯ ಸಮೂಹ ಕಲಾ ಪ್ರದರ್ಶನ

Bengaluru : ಈ ಕಲಾ ಪ್ರದರ್ಶನದ ಹೆಸರೇ ಹೇಳುವಂತೆ ರೋಮಾಂಚಕ ದೃಷ್ಠಿಯನ್ನು ಇದು ಹೊಂದಿದೆ. ದೇಶದ ವಿವಿಧ ರಾಜ್ಯಗಳಿಂದ ಬಂದ ಚಿತ್ರಕಲಾವಿದರು ಹಾಗೂ ಶಿಲ್ಪಗಾರರು (Sculptors) ತಮ್ಮ ಕಲಾಕೃತಿ(Artwork) ಗಳನ್ನು ನಮ್ಮಲ್ಲಿನ ಕಲಾಸಕ್ತರಿಗೆ ಪರಿಚಯಿಸಿದ್ದಾರೆ. ಈ ದಿನಮಾನದಲ್ಲಿನ ಕಲಾ ಪಯಣಕ್ಕೆ ಇದು ಪ್ರತಿಬಿಂಬದಂತಿದೆ. ಈ ಪ್ರದರ್ಶನವು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ (Chitrakala Parishat) ಗ್ಯಾಲರಿಗಳಲ್ಲಿ  ಉದ್ಘಾಟನೆಗೊಂಡಿದೆ, ನ.೨೨ ರವರೆಗೆ ನಡೆಯಲಿದ್ದು ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.

ನಾಡಿನ ಹಿರಿಯ ಕಲಾವಿದರೂ ಹಾಗೂ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆದ ಚಿ ಸು ಕೃಷ್ಣಶೆಟ್ಟಿ ಅವರು ಪ್ರದರ್ಶನವನ್ನು ಉದ್ಘಾಟಿಸಿ ಮಾತಾಡುತ್ತಾ ದೇಶದ ವಿವಿಧ ಭಾಗಗಳ ಹದಿನೇಳು ಕಲಾವಿದರನ್ನು ಇದು ಒಟ್ಟುಗೂಡಿಸಿದ್ದು ರಾಷ್ಟ್ರೀಯ ಪ್ರದರ್ಶನವಾಗಿದೆ. ಕೋಲ್ಕತ್ತಾ ಮತ್ತು ಬೆಂಗಳೂರಿನ ನಡುವೆ ಬೆಳೆಯುತ್ತಿರುವ ಕಲಾತ್ಮಕ ಸಂಬಂಧವನ್ನು ಶ್ಲಾಘಿಸಿದರು. ಇದು ಭಾಷೆ, ಪ್ರದೇಶ ಮತ್ತು ರಾಷ್ಟ್ರೀಯತೆಗಳನ್ನು ಮೀರಿದೆ ಎಂದರು. ಎಲ್ಲ ಕಲಾವಿದರ ಕಲಾಕೃತಿಗಳ ಬಗ್ಗೆ ಮೆಚ್ಚುಗೆಯ ಮಾತಾಡಿದರು.

ಅತಿಥಿಗಳಾದ ಹಿರಿಯ ಕಲಾವಿದರಾದ ಬಾಬು ಜತ್ತಕರ್ ಅವರು ಮಾತನಾಡಿ ವೆಸ್ಟ್ ಬೆಂಗಾಲ್, ಮಹಾರಾಷ್ಟ್ರ ಒಡಿಸ್ಸಾ ಹಾಗೂ ಹರಿಯಾಣಗಳಿಂದ ರಾಷ್ಟ್ರಮಟ್ಟದ ಕಲಾವಿದರು ಇಲ್ಲಿ ನಮ್ಮ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ. ಅವರ ಶ್ರಮ ಹಾಗೂ ಸಹಕಾರವು ಶ್ಲಾಘನೀಯ ಎಂದರು.

ಅತಿಥಿಗಳಾದ ನಾಗರಾಜ್ ಕುಂಬಾರ್ ಅವರು ಮಾತನಾಡಿ ಸಮಯ ಮತ್ತು ತಾಳ್ಮೆಯ ಕೊರತೆಯ ಈ ದಿನಗಳಲ್ಲಿ ತಮ್ಮ ಕಲಾಕೃತಿಗಳನ್ನು ಜನರು ನೋಡಲಿ, ಮೆಚ್ಚಲಿ ಎಂದರು. ಎಲ್ಲಾ ಕಲಾವಿದರನ್ನು ಅಭಿನಂದಿಸಿದರು.

ಉದ್ಘಾಟನೆಯಲ್ಲಿದ್ದ ಜ್ಞಾನೇಶ್ ಮಿಶ್ರಾ ಅವರು ಮಾತಾಡಿ ಕಲಾವಿದರು ನಮ್ಮ ಜೀವನದ ಭಾಗವೇ ಆಗಿದ್ದಾರೆ ಎಂದರಲ್ಲದೇ ಎಲ್ಲಾ ಕಲಾವಿದರನ್ನು ಅಭಿನಂದಿಸಿದರು. ಕಲಾವಿದರಾದ ಉಷಾ ಮಿಶ್ರಾ ಹಾಗೂ ಧನಂಜಾಯ್ ದಾಸ್ ಅವರು ಉಪಸ್ಥಿತರಿದ್ದರು. ನಾಡಿನ ಹಲವಾರು ಹಿರಿಯ ಕಲಾವಿದರು ಸಾಕ್ಷಿಯಾಗಿದ್ದರು.

ನೀಲಕಂಠ ಮಂಡಲ್ ಅವರು ನಿಸರ್ಗ ಚಿತ್ರಗಳನ್ನು ತಮ್ಮದೇ ಛಾಪಲ್ಲಿ ಚಿತ್ರಿಸಿದ್ದಾರೆ. ಪ್ರಖರ ಬಣ್ಣಗಳಲ್ಲೂ ಪ್ರಖರತೆ ಕಾಣದಂತೆ ರಚಿಸಿದ್ದಾರೆ. ದೇಬಾಶಿಸ್ ಮೈಟಿ ಅವರು ಸಮುದ್ರ ಹಾಗೂ ಅಲ್ಲಿಯ ತೀರವನ್ನು ತೆಳು ಬಣ್ಣದ ಹರಡುವಿಕೆಯೊಂದಿಗೆ ರಚಿಸಿದ್ದಾರೆ. ಮಾಸ್ಟರ್ ಸ್ಟ್ರೋಕ್‌ಗಳು ನಿಖರತೆಯಿಂದ ಕೂಡಿವೆ.

ಸುಧಿ ರಂಜನ್ ಮಹಾರಥ ಅವರ ಸರಣಿಯ ಉಬ್ಬು ಚಿತ್ರಗಳು, ನರೇಂದ್ರ ಅವರ ಬಣ್ಣವೇ ಇರದ ಗೂಸುಂಬೆಗಳು ಬಣ್ಣನೆಯ ಚಿತ್ರಗಳು. ಪ್ರೀತಮ್ ಬಾಸಕ್ ಅವರ ಬಲ ಪ್ರಯೋಗ ಬಿತ್ತರಿಸುವ ಚಲನಶೀಲತೆಯ ಚಿತ್ರಗಳು. ಬೆಕ್ಕಿನ ಬಾಲದ ಮೇಲೆ ಹಕ್ಕಿ, ಗೂಬೆಯ ಇಲಿ ಬೇಟೆ, ಮಹಿಳಾ ಗೋಲ್ಡೆನ್ ಶೂ, ಧೂಮಪಾನ ಒಳಿತಲ್ಲ ಎಂಬ ಸಂದೇಶವನ್ನು ಶಿಲ್ಪದ ಮೂಲಕ ಎಸ್ಕೆ ಇಕ್ಬಾಲ್ ಹುಸೇನ್ ಅಭಿವ್ಯಕ್ತ ಪಡಿಸಿದ್ದಾರೆ.

ವಿಶ್ವಾಸ್ ಸಹಾನಿ ಅವರ ಪ್ರಬಲವಾದ ರೇಖೆಗಳಿಂದ ರಚಿಸಿದ ಸಮೂಹ ವ್ಯಕ್ತಿ ಚಿತ್ರಗಳು, ಬಿಸ್ವಜಿತ್ ಜನ ಅವರು ಕಾಲ್ಪನಿಕತೆಯ ನಿಸರ್ಗ ಚಿತ್ರಗಳು ನೈಜತೆಯ ಆಚೆಯಲ್ಲಿ ಕಾಡುತ್ತೆ. ನರೋತಮ್ ದಾಸ್ ಅವರ ಶಿಲ್ಪಕಲೆಗಳಲ್ಲಿ ಹೆಚ್ಚಿನ ವಿಚಾರಗಳಿವೆ. ಪ್ರತಿ ಶಿಲ್ಪದಲ್ಲೂ ಸೂಕ್ಷ ವಿಷಯಗಳನ್ನು ಇಟ್ಟಿದ್ದಾರೆ. ಸೋಫೈಯ ಯಸ್ಮಿನ್ ಅವರ `ಹ್ಯೂಮನ್ ಸ್ಕೇಪ್” ಎಂಬ ಹೊಸ ಆಯಾಮದ ಪ್ರಯತ್ನವಿದೆ. ಸೋನು ಡಿ ಗುಪ್ತಾ ಅವರು ಮುಖವಾಡಗಳು ನೀರವತೆಯಲ್ಲಿ ಹೊಸತೇನನ್ನೋ ಕಟ್ಟಿ ಕೊಟ್ಟಿದ್ದಾರೆ.

ಜಾಹ್ನವಿ ಶರ್ಮ ಅವರು ಕಟ್ಟು ಕಟ್ಟಳೆಯ ಆಚೆಗೂ ಪ್ರೀತಿಯನ್ನೂ ಅಭಿವ್ಯಕ್ತ ಪಡಿಸಿದ್ದಾರೆ. ಮುಗ್ಧ ಮಕ್ಕಳ ಮನಸ್ಥಿತಿಯನ್ನು ಪ್ರಚುರ ಪಡಿಸಿದ್ದಾರೆ. ಸ್ನೇಹಂಗ್ಶು ದಾಸ್ ಅವರು ಮಾನವನ ಹಲವು ಸ್ತರಗಳ ಅಭಿವ್ಯಕ್ತಿಯನ್ನು ಇಲ್ಯೂಶನ್ ತಂತ್ರದೊಂದಿಗೆ ಸಮ್ಮಿಲನಗೊಳಿಸಿದ್ದಾರೆ. ಅವಿಜಿತ್ ಚಟರ್ಜಿ ಅವರು ವಾಟರ್ ಸ್ಕೇಪ್‌ನಲ್ಲಿ ಬಾತುಕೋಳಿಗಳ ಜೀವನ ಚಿತ್ರಣವಿದೆ. ಸೀಸ್ಕೇಪ್ ಕೂಡ ಇವೆ. ಸುರಂಜಿತ್ ಗಿರಿ ಅವರು ಮನದಾಳದ ಗ್ರಹಗತಿಯನ್ನು ಸೂಕ್ಷ್ಮ ಗೆರೆಗಳಲ್ಲಿ ಕೊರೆದಿದ್ದಾರೆ. ಪ್ರಣಬ್ ಕುಮಾರ್ ಮಲ್ಲಿಕ್ ಅವರು ಕಾಷ್ಟ ಹಾಗೂ ಕಲ್ಲಿನ ಕಲೆಯ ನೈಪುಣ್ಯತೆ ಮೆಚ್ಚಲರ್ಹ. ಹಿಮಾಂಶು ಮೊಹಂತ ಅವರ ಸೆರಾಮಿಕ್ ಹಾಗೂ ಗ್ರಾನೆಟ್ಟಿನ ಪುರಾತನ ಪುಸ್ತಕಗಳೂ, ಕ್ಯಾರಿ ಬ್ಯಾಗು ಮುಟ್ಟಿ ಅನುಭವಿಸಬೇಕಾದ ಶಿಲ್ಪಗಳಿವು.

ಒಂದೇ ಭೇಟಿಯಲ್ಲಿ ರಾಷ್ಟ್ರದ ಎಲ್ಲಾ ವಿಧಧ ಕಲಾಪ್ರಕಾರಗಳನ್ನು ಈ ಹದಿನೇಳು ಕಲಾವಿದರ ಸಮೂಹ ಕಲಾ ಪ್ರದರ್ಶನದಲ್ಲಿ ಅನುಭವಿಸಬಹುದಾಗಿದೆ. ಶೀರ್ಷಿಕೆಯೇ ಹೇಳುವಂತೆ ರೋಮಾಚನವನ್ನು ಉಂಟು ಮಾಡುತ್ತದೆ. ನೋಟ ಉಚಿತ, ರಮ್ಯ ಅನುಭವ ಖಚಿತ!

Hot this week

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

Topics

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

ಬೆಂಗಳೂರು: ರಾಜ್ಯದಲ್ಲಿ ವಿಜ್ಞಾನ ಆಧಾರಿತ ಪರಿಸರ ಪುನರುಜ್ಜೀವನ ಮತ್ತು ಪರಿಸರ ಸಾಕ್ಷರತೆಯನ್ನು...

Related Articles