ಸೆಪ್ಟೆಂಬರ್ 28ರಿಂದ 30ರವರೆಗೆ ನಡೆಯಬೇಕಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ (Nation Wide Strike) ಮುಷ್ಕರವನ್ನು ಅಧಿಕೃತವಾಗಿ ಮುಂದೂಡಲಾಗಿದೆ. (Postponed) ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ವಿವಿಧ ಸಂಘಟನೆಗಳು ಕರೆ ನೀಡಿದ್ದ ಮುಷ್ಕರದಿಂದಾಗಿ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇತ್ತು. ಆದರೆ ಮುಷ್ಕರ (Strike) ಮುಂದೂಡಿಕೆಯಾಗಿರುವುದರಿಂದ ಗ್ರಾಹಕರಿಗೆ ಸದ್ಯಕ್ಕೆ ನಿರಾಳತೆ ದೊರೆತಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಶಾಖೆಗಳ ಕಾರ್ಯಾಚರಣೆ, ನಗದು ವಹಿವಾಟು, ಚೆಕ್ ಕ್ಲಿಯರಿಂಗ್, ಬ್ಯಾಂಕ್ ಸಂಬಂಧಿತ ಇತರೆ ಸೇವೆಗಳ ಮೇಲೆ ಪರಿಣಾಮ ಬೀರುವ ಆತಂಕವಿತ್ತು. ಮುಷ್ಕರ ಮುಂದೂಡಿಕೆಯಿಂದ ಈ ಅವಧಿಯಲ್ಲಿ ಬ್ಯಾಂಕ್ಗಳ ಸಾಮಾನ್ಯ ಕಾರ್ಯಚಟುವಟಿಕೆಗಳು ಮುಂದುವರಿಯುವ ನಿರೀಕ್ಷೆಯಿದೆ.
ಆದಾಗ್ಯೂ, ಸೆಪ್ಟೆಂಬರ್ 28ರಿಂದ 30ರ ಅವಧಿಯಲ್ಲಿ ರಾಜ್ಯವಾರು ರಜೆಗಳು ಅಥವಾ ಸ್ಥಳೀಯ ಬ್ಯಾಂಕ್ ರಜೆಗಳು ಇದ್ದಲ್ಲಿ, ಆಯಾ ಪ್ರದೇಶಗಳಲ್ಲಿ ಶಾಖೆಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸವಾಗಬಹುದು. ಗ್ರಾಹಕರು ತಮ್ಮ ಬ್ಯಾಂಕ್ ಶಾಖೆಯ ಕಾರ್ಯಾವಧಿಯನ್ನು ಮುಂಚಿತವಾಗಿ ಪರಿಶೀಲಿಸುವುದು ಸೂಕ್ತ.
ಮುಷ್ಕರವನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಸಂಘಟನೆಗಳು ಮತ್ತು ಸಂಬಂಧಪಟ್ಟ ವಲಯಗಳ ನಡುವಿನ ಮುಂದಿನ ಬೆಳವಣಿಗೆಗಳತ್ತ ಇದೀಗ ಗಮನ ಹರಿದಿದೆ. ಮುಂದಿನ ದಿನಗಳಲ್ಲಿ ಹೊಸ ಮುಷ್ಕರದ ದಿನಾಂಕ ಅಥವಾ ಯಾವುದೇ ಪರ್ಯಾಯ ಕ್ರಮದ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆಯೇ ಎಂಬುದು ನಂತರ ಸ್ಪಷ್ಟವಾಗಲಿದೆ.

