ಬೆಂಗಳೂರು: ಇಂದಿನ ಬರಗಾಲ ಪರಿಸ್ಥಿತಿಯಲ್ಲಿ(Drought Situation) ರೈತರ ವಿಚಾರದಲ್ಲಿ ಅನ್ಯಾಯ ಆಗಬಾರದು ಎಂದು ವಿಧನಪರಿಷತ್‍ನ ವಿರೋಧಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ(Chalavaadi Narayana Swamy) ತಿಳಿಸಿದರು.
ಅವರು ಇಂದು ವಿಧಾನಪರಿಷತ್‍ನ ವಿಶೇಷ ಅಧಿವೇಶನದಲ್ಲಿ ರೈತರ ಸಮಸ್ಯೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆ ಕುರಿತು ಸದನಸಲ್ಲಿ ಮಾತನಾಡಿದ ಅವರು, ಎಲ್ಲಾ ಕಡೆ ರೈತರ ಬೆಳೆ ನಾಶವಾಗಿದೆ. ಗಾದೆ ಮಾತಿನಂತೆ ಕೈಗೆ ಬಂದಿದ್ದು, ಬಾಯಿಗೆ ಬರಲಿಲ್ಲ ಅಂತಹ ಪರಿಸ್ಥಿತಿ ಒದಗಿಬಂದಿದೆ. ರೈತರ ಪರವಾಗಿ ಪಕ್ಷಾತೀತವಾಗಿ, ಯಾವುದೇ ರಾಜಕಾರಣ ಮಾಡದೆ ಪರಿಹಾರ ನಿಡಬೇಕು. ಇಂತಹ ಸಂದರ್ಭದಲ್ಲಿ ಸರ್ಕಾರ ಆಸಕ್ತಿ ವಹಿಸಿ ರೈತರಿಗೆ ಪರಿಹಾರ ಕಂಡು ಹಿಡಿಯುವ ಬಗ್ಗೆ ಚರ್ಚೆ ಮಾಡೋಣ ಎಂದು ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.
ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಪ್ರಸ್ತಾಪ ಮಾಡುವಾಗ 1976ರ ನಂತರ ಇಂತಹ ತೀವ್ರ ಬರಗಾಲ ಪರಿಸ್ಥಿತಿ ಬಂದಿದೆ ಎಂದು ಹೇಳಿದರು. ಅದು ಸತ್ಯ. ಎಲ್ ನಿನೊ ಮುನ್ಸೂಚನೆ ಬಂದಿತ್ತು, ಈ ಬಗ್ಗೆ ಹವಾಮಾನ ಇಲಾಖೆ 4-5 ತಿಂಗಳ ಹಿಂದೆ ಗಮನಕ್ಕೆ ತಂದಿದ್ದರು ಸಹ ಸರ್ಕಾರ ಯಾಕೆ ಮೌನವಾಗಿತ್ತು. ಸರ್ಕಾರ ಈ ವಿಷಯ ಗಮನಕ್ಕೆ ಬಂದ ತಕ್ಷಣ ಕಾರ್ಯೋನ್ಮುಖವಾಗ ಬೇಕಿತ್ತು ಎಂದರು.
ಎಲ್ಲಾ ಕಡೆ ಮೇವಿಗೆ ಬರ ಇದೆ. ಎಲ್ಲೂ ಬೆಳೆ ಇಲ್ಲ. ಮೇವು ಸಿಗುತ್ತಿಲ್ಲ. ನೀರಿನ ಮೂಲಗಳು ಬತ್ತಿ ಹೋಗುತ್ತಿದೆ. ಕಾವೇರಿ ಬತ್ತಿ ಹೋದರೆ ಬೆಂಗಳೂರು ಬತ್ತಿ ಹೋಗುತ್ತದೆ. ಎಚ್ಚರವಾಗಿರುವ ಸಂದರ್ಭದಲ್ಲಿ ಮೌನವಾಗಿದ್ದರೆ ಹೇಗೆ? ಎಂದರು.
ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಪ್ರತಿ ಜಿಲ್ಲೆಗೆ 5 ಕೋಟಿ ರೂ. ಹಾಗೂ ಶಾಕರುಗಳಿಗೆ 1 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಗೆ ಈ ಅನುದಾನವನ್ನು ಉಪಯೋಗಿಸಿರುವ ಕುರಿತು ಮಾನಿಟರಿಂಗ್ ಮಾಡಬೇಕು ಎಂದರು.
ಮಳೆ ಸಂಪೂರ್ಣ ಹೋದರೆ ಬೋರವೆಲ್‍ಗಳಲ್ಲಿ ನೀರು ಸಿಗುವುದಿಲ್ಲ. ಪ್ರಸ್ತುತ ರಾಜ್ಯದಲ್ಲಿ ಎಷ್ಟು ಬೋರ್‍ವೆಲ್ ಕೊರೆಯಲಾಗಿದೆ ಎಂಬ ಮಾಹಿತಿ ನೀಡಬೇಕು. ಇಡೀ ರಾಜ್ಯದಲ್ಲಿ ಕೊಳವೆ ಬಾವಿ ಕೊರೆಯುವುದು ಹೆಚ್ಚಾಗಿದೆ. ಇದರಿಂದ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದೆ. ಜಲಮೂಲ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಬುದ್ದಿವಂತಿಕೆಯಿಂದ ಸೃಷ್ಟಿ ಮಾಡಬೇಕು ಎಂದು ಸದನದಲ್ಲಿ ತಿಳಿಸಿದರು
ಡಾ: ಕಸ್ತೂರಿ ರಂಗನ್ ವರದಿ ಪರಿಸರದ ಬಗ್ಗೆ ಬರೆದ ಮರಣ ಶಾಸನ – ಶಾಸಕ ಟಿ.ಡಿ. ರಾಜೇಗೌಡ

