‘ದಾಸ ನೃತ್ಯಾರ್ಚನೆ’ಯಲ್ಲಿ ಗಮನ ಸೆಳೆದ ಬಾಲಪ್ರತಿಭೆ ಪೂರ್ವಿ ಎಂ.ಎಸ್. ಕಲಾಪ್ರದರ್ಶನ

ಬೆಂಗಳೂರು: ಹರಿದಾಸರ ಭಕ್ತಿಸಾಹಿತ್ಯದ ತಾತ್ತ್ವಿಕ ಸಂದೇಶ, ಭಕ್ತಿಭಾವ ಮತ್ತು ಸಂಗೀತಮಾಧುರ್ಯವನ್ನು ಭರತನಾಟ್ಯದ ಮೂಲಕ ಅಭಿವ್ಯಕ್ತಿಸಿದ ‘ದಾಸ ನೃತ್ಯಾರ್ಚನೆ’ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.

ಬಾಲನೃತ್ಯಪ್ರತಿಭೆ ಪೂರ್ವಿ ಎಂ.ಎಸ್. ಅವರ ಭರತನಾಟ್ಯ ರಂಗಪ್ರವೇಶದ ಅಂಗವಾಗಿ ಅ. 31ರಂದು ಶನಿವಾರ ಸಂಜೆ ನಗರದ ದೊಡ್ಡಕಲ್ಲಸಂದ್ರದ ಕನಕಪುರ ಮುಖ್ಯ ರಸ್ತೆಯ ಮೀನಾಕ್ಷಿ ರಂಗಮಂಚದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸಂಗೀತ ವಿದ್ವಾಂಸ ವಿದ್ವಾನ್ ಪಟ್ಟಾಭಿರಾಮ ಪಂಡಿತ್ ಟಿ.ಎಸ್. ಮತ್ತು ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ ವಿದುಷಿ ಅಪರ್ಣಾ ಕೆ. ಶರ್ಮಾ ಅವರು, ಭಾರತೀಯ ಶಾಸ್ತ್ರೀಯ ಕಲೆಗಳು ಕೇವಲ ಮನರಂಜನೆಯ ಮಾಧ್ಯಮಗಳಲ್ಲ; ಅವು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಜೀವನಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಬಲ ಸಾಧನಗಳಾಗಿವೆ. ಬಾಲ್ಯದಲ್ಲಿಯೇ ಇಂತಹ ಕಲಾಸಾಧನೆಗೆ ತೊಡಗಿಸಿಕೊಳ್ಳುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಗೌರವಾನ್ವಿತ ಅತಿಥಿಗಳಾಗಿದ್ದ ಖ್ಯಾತ ನೃತ್ಯಗುರು ಹಾಗೂ ದೂರದರ್ಶನ ಕಲಾವಿದೆ ವಿದುಷಿ ಡಾ. ಪ್ರಿಯಾ ಗಣೇಶ್ ಅವರು, ರಂಗಪ್ರವೇಶ ಎನ್ನುವುದು ಕಲಿಕೆಯ ಅಂತಿಮ ಹಂತವಲ್ಲ, ಬದಲಾಗಿ ಕಲಾವಿದೆಯ ಮುಂದಿನ ಕಲಾಪಯಣಕ್ಕೆ ನಾಂದಿ. ನಿರಂತರ ಅಭ್ಯಾಸ, ಶಿಸ್ತು, ಗುರುಭಕ್ತಿ ಮತ್ತು ಕಲೆಯ ಬಗೆಗಿನ ಬದ್ಧತೆಯಿಂದ ಮಾತ್ರ ಉತ್ತಮ ಕಲಾವಿದೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.

ದಾಸಸಾಹಿತ್ಯದ ನೃತ್ಯವೈಭವ: ಕಾರ್ಯಕ್ರಮದಲ್ಲಿ ಪುಷ್ಪಾಂಜಲಿಯೊಂದಿಗೆ ಕನಕದಾಸರ ‘ನಮ್ಮಮ್ಮ ಶಾರದೆ’, ಶ್ರೀಪಾದರಾಜರ ‘ಭೂಷಣಕೆ ಭೂಷಣ’, ಪುರಂದರದಾಸರ ‘ಆಡಪೋದಲ್ಲೆ ಮಕ್ಕಳು’, ವಿಜಯದಾಸರ ‘ಕುನಿಕುನಿಯುತ ಬಾರೋ’, ಜಗನ್ನಾಥದಾಸರ ‘ಆವ ರೂಪವ ನೋಡಿ’ ನಿಂದಾಸ್ತುತಿ ಮತ್ತು ಉಗಾಭೋಗ, ಗೋಪಾಲದಾಸರ ಸಾಹಿತ್ಯವಿರುವ ತಿಲ್ಲಾನ ಹಾಗೂ ಹರಪನಹಳ್ಳಿ ಭೀಮವ್ವ ಅವರ ಮಂಗಳ ಸೇರಿದಂತೆ ಎಂಟು ಕೃತಿಗಳನ್ನು ಪೂರ್ವಿ ನೃತ್ಯರೂಪದಲ್ಲಿ ಪ್ರಸ್ತುತಪಡಿಸಿದರು. ಹರಿದಾಸರ ಕೃತಿಗಳ ಭಾವಾರ್ಥಕ್ಕೆ ತಕ್ಕ ಅಭಿನಯ, ಮುದ್ರೆಗಳು ಮತ್ತು ಲಯಬದ್ಧ ಹೆಜ್ಜೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ಆರನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಕೆ ಆರಂಭಿಸಿದ ಪೂರ್ವಿ, ವಿದುಷಿ ಪದ್ಮಗಂಧಿನಿ ರಾವ್ ಹುಲಿಕಲ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಜೂನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ಶೇ. 91 ಅಂಕ ಗಳಿಸಿರುವುದು ಅವರ ಕಲಾಸಕ್ತಿಗೆ ಸಾಕ್ಷಿಯಾಗಿದೆ.

ವಿದುಷಿ ಹರ್ಷಿತಾ ವಿದ್ಯಾ ಗಾಯನ, ಪದ್ಮಗಂಧಿನಿ ರಾವ್ ಹುಲಿಕಲ್ ನಟುವಾಂಗ, ವಿದ್ವಾನ್ ಶ್ರೀಹರಿ ರಂಗಸ್ವಾಮಿ ಮೃದಂಗ, ವಿದ್ವಾನ್ ತುಮಕೂರು ಬಿ. ಶಶಿಶಂಕರ್ ಘಟಂ ಹಾಗೂ ವಿದ್ವಾನ್ ನರಸಿಂಹ ಮೂರ್ತಿ ಕೊಳಲಿನಲ್ಲಿ ಸಹಕರಿಸಿದರು. ಶ್ರೀಮತಿ ಸುಷ್ಮಾ ಡಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

ಮಾನಸ ಸಂದೀಪ್ ಮತ್ತು ಸಂದೀಪ್ ಎಂ.ಆರ್. ದಂಪತಿಯ ಪುತ್ರಿಯಾದ ಪೂರ್ವಿಯ ಕಲಾಸಾಧನೆಗೆ ಪೋಷಕರು ಹಾಗೂ ಗುರುಗಳ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಬೆನ್ನೆಲುಬಾಗಿದೆ. ಶಾಸ್ತ್ರೀಯ ನೃತ್ಯದ ಸೌಂದರ್ಯದೊಂದಿಗೆ ಕನ್ನಡ ದಾಸಸಾಹಿತ್ಯದ ಭಕ್ತಿವೈಭವವನ್ನು ಪರಿಚಯಿಸಿದ ಈ ರಂಗಪ್ರವೇಶವು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

Hot this week

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಭಾರತದ ಪ್ರಥಮ ಶಿಕ್ಷಣ ಸಚಿವರಾದ...

Topics

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಭಾರತದ ಪ್ರಥಮ ಶಿಕ್ಷಣ ಸಚಿವರಾದ...

ಇ-20 ಎಥನಾಲ್ ಪ್ರಮಾಣ ಪರೀಕ್ಷೆ – ಕರ್ನಾಟಕ ಸರ್ಕಾರವು ಗ್ರಾಹಕರ ಹಿತರಕ್ಷಣೆಗೆ ಬದ್ಧ : ಸಚಿವ ರಿಜ್ವಾನ್ ಅರ್ಷದ್ 

ಬೆಂಗಳೂರು: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣಕ್ಕೆ (E20) ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪರೀಕ್ಷಾ...

ಬೆಂಗಳೂರು: ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ...

ನ್ಯೂಜಿಲೆಂಡ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮೇಲೆ ಟೀಂ ಇಂಡಿಯಾ ಕಣ್ಣು: ಹ್ಯಾಮಿಲ್ಟನ್ ಪಂದ್ಯಕ್ಕೆ ಮಳೆ ಭೀತಿ!

ಹ್ಯಾಮಿಲ್ಟನ್: ನ್ಯೂಜಿಲೆಂಡ್(New Zealand) ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ(Cricket Team) ಇದೀಗ...

Related Articles