ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಗೇಮ್‌ಅಥಾನ್ 8.0’ ಜಾಗತಿಕ ಗೇಮ್ ಡೆವಲಪ್‌ಮೆಂಟ್ ಸ್ಪರ್ಧೆ

ಬೆಂಗಳೂರು: ನಗರದ ಜ್ಯೋತಿ ತಾಂತ್ರಿಕ (Jyothi Institute of Technology) ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ (Science & Engineering) ವಿಭಾಗದ ವತಿಯಿಂದ ‘ಬಿಟ್ಸ್ ಆ್ಯಂಡ್ ಬೈಟ್ಸ್ × ಎಸಿಎಂ ಸ್ಟೂಡೆಂಟ್ ಚಾಪ್ಟರ್’ (Bits & Bytes ACM Sudent Chapter)ಸಹಯೋಗದಲ್ಲಿ ‘ಗೇಮ್‌ಅಥಾನ್ 8.0 – ಎ ಗ್ಲೋಬಲ್ ಕಂಟೆಸ್ಟ್’ ಎಂಬ 24 ಗಂಟೆಗಳ ಗೇಮ್ ಡೆವಲಪ್‌ಮೆಂಟ್ ಸ್ಪರ್ಧೆಯನ್ನು (Game Development Competition) ಅಕ್ಟೋಬರ್ 23 ಮತ್ತು 24ರಂದು ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಸಿಎಸ್‌ಐಆರ್–ಎನ್‌ಐಡಿಎಸ್‌ಎಯ ನಿರ್ದೇಶಕರಾದ ಡಾ. ಗೋಪಾಲ್ ಕೃಷ್ಣ ಪಾತ್ರ ಮುಖ್ಯ ಅತಿಥಿಗಳಾಗಿ ಹಾಗೂ ಅರಿಸ್ಟಾ ನೆಟ್‌ವರ್ಕ್ಸ್‌ನ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀ ಶಾಶ್ವತ ಮಿತ್ರ ಜಿ.ಬಿ. ಗೌರವ ಅತಿಥಿಗಳಾಗಿ ಭಾಗವಹಿಸಿದರು. ಮಹಾವಿದ್ಯಾಲಯದ ಟ್ರಸ್ಟಿಗಳು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಲ್ಲಿ ಗೇಮ್ ಡೆವಲಪ್‌ಮೆಂಟ್ ಕೌಶಲ, ಸೃಜನಶೀಲತೆ, ತಾಂತ್ರಿಕ ಜ್ಞಾನ ಮತ್ತು ನವೀನ ಚಿಂತನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸೈಬರ್‌ಪಂಕ್ ಥೀಮ್ ಆಧಾರಿತ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನಾಲ್ಕು ವಿಭಿನ್ನ ಸಮಸ್ಯಾ ಹೇಳಿಕೆಗಳನ್ನು ನೀಡಲಾಗಿತ್ತು. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ಆಯ್ದ ವಿಷಯಕ್ಕೆ ಅನುಗುಣವಾಗಿ ತಮ್ಮದೇ ಆದ ವಿಡಿಯೋ ಗೇಮ್ ಅನ್ನು ಅಭಿವೃದ್ಧಿಪಡಿಸುವ ಸವಾಲನ್ನು ನೀಡಲಾಗಿತ್ತು.

ನಾಲ್ಕು ವಿಭಿನ್ನ ಪರಿಕಲ್ಪನೆಗಳಾದ ‘ದಿ ನೋಮ್ಯಾಡ್ – ಸರ್ವೈವ್ ದಿ ವೇಸ್ಟ್‌ಲ್ಯಾಂಡ್ಸ್’, ‘ದಿ ಸ್ಟ್ರೀಟ್‌ಕಿಡ್ – ರೂಲ್ ದಿ ಸ್ಟ್ರೀಟ್ಸ್’, ‘ದಿ ಮ್ಯಾಟ್ರಿಕ್ಸ್ – ಬ್ರೇಕ್ ದಿ ಸಿಮ್ಯುಲೇಶನ್’ ಮತ್ತು ‘ದಿ ರೇಸರ್ – ಓನ್ ದಿ ನೈಟ್’ ಎಂಬ ವಿಷಯಗಳ ಆಧಾರದ ಮೇಲೆ ವಿದ್ಯಾರ್ಥಿಗಳು ಆಟಗಳನ್ನು ರೂಪಿಸಿದರು. ಪ್ರತಿಯೊಂದು ವಿಷಯವೂ ವಿಭಿನ್ನ ಸವಾಲು ಮತ್ತು ಸೃಜನಶೀಲತೆಗೆ ಅವಕಾಶ ನೀಡುವಂತೆ ವಿನ್ಯಾಸಗೊಳಿಸಲಾಗಿತ್ತು.

24 ಗಂಟೆಗಳ ಅವಧಿಯಲ್ಲಿ ಸ್ಪರ್ಧಾರ್ಥಿಗಳು ಆಟದ ಪರಿಕಲ್ಪನೆ, ವಿನ್ಯಾಸ, ಪಾತ್ರಗಳ ರಚನೆ, ಆಟದ ಹಂತಗಳು ಮತ್ತು ಆಟದ ಕಾರ್ಯವೈಖರಿಯನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ತಮ್ಮ ತಾಂತ್ರಿಕ ಕೌಶಲ, ಕಲ್ಪನಾಶಕ್ತಿ ಮತ್ತು ತಂಡದ ಸಹಕಾರವನ್ನು ಬಳಸಿಕೊಂಡು ಆಯ್ದ ವಿಷಯಕ್ಕೆ ತಕ್ಕಂತೆ ಆಟಗಳನ್ನು ರೂಪಿಸಿ, ಅವುಗಳನ್ನು ಕಾರ್ಯಗತಗೊಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು 2,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತವನ್ನು ಘೋಷಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಗೇಮ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಪಡೆಯಲು, ಹೊಸ ತಂತ್ರಜ್ಞಾನಗಳನ್ನು ಕಲಿಯಲು ಮತ್ತು ತಮ್ಮ ಸೃಜನಶೀಲ ಆಲೋಚನೆಗಳನ್ನು ಡಿಜಿಟಲ್ ಆಟಗಳ ರೂಪದಲ್ಲಿ ಸಾಕಾರಗೊಳಿಸಲು ಈ ಸ್ಪರ್ಧೆ ಉತ್ತಮ ವೇದಿಕೆಯಾಯಿತು.

ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗಗಳ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮಕ್ಕೆ ವಿವಿಧ ಸಂಸ್ಥೆಗಳು ಸಹಭಾಗಿತ್ವ ನೀಡಿದ್ದವು. ಕಾರ್ಯಕ್ರಮದ ಆಯೋಜನೆಯಲ್ಲಿ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಕಿಶೋರ್ ಜಿ.ಆರ್. ಅವರು ಪ್ರಮುಖ ಪಾತ್ರ ವಹಿಸಿದರು.

Hot this week

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

Topics

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

ಬೆಂಗಳೂರು: ರಾಜ್ಯದಲ್ಲಿ ವಿಜ್ಞಾನ ಆಧಾರಿತ ಪರಿಸರ ಪುನರುಜ್ಜೀವನ ಮತ್ತು ಪರಿಸರ ಸಾಕ್ಷರತೆಯನ್ನು...

Related Articles