ಕುಡತಿನಿ: (Kudathini) ಮುಖ್ಯಮಂತ್ರಿಗಳೇ, ಕಾಲ ಮಿಂಚಿದೆ, ಕಾಲ ಮಿಂಚಿ ಹೋಗ್ತಾ ಇದೆ. ರಾಜ್ಯದಲ್ಲಿ ಜನರ ಬಗ್ಗೆ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದ್ದೀರಾ. ನೀವು ಎಷ್ಟು ದಿನ ಮುಖ್ಯಮಂತ್ರಿಗಳಾಗಿ (Chief Minister) ಆ ಕುರ್ಚಿಯಲ್ಲಿ ಕೂರ್ತೀರಿ ಅನ್ನೋದು ಮುಖ್ಯ ಅಲ್ಲ, ಇದ್ದ ಸಂದರ್ಭದಲ್ಲಿ ಇವತ್ತು ಬಡವರ ಪರವಾಗಿ, ರೈತರ ಪರವಾಗಿ, ಯುವ ಜನತೆಯ ಪರವಾಗಿ ಒಳ್ಳೆ ಕೆಲಸಗಳನ್ನ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ತಿಳಿಸಿದ್ದಾರೆ.
ಇಂದು ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನ ದಂಗೆ ಏಳುವ ಮುಂಚಿತವಾಗಿ, ರಾಜ್ಯದಲ್ಲಿ ಇವತ್ತು ರೈತರು, ಬಡವರು ಸರ್ಕಾರದ ವಿರುದ್ಧ ದಂಗೆ ಏಳುವ ದಂಗೆ ಏಳುವ ಸ್ಥಿತಿ ಇದೆ. ಜನರು ದಂಗೆ ಏಳುವ ಮುಂಚಿತವಾಗಿ ಗೌರವಯುತವಾಗಿ ವಿಧಾನಸಭೆ ವಿಸರ್ಜನೆ ಮಾಡಿ. ಜನರ ಬಳಿಗೆ ಹೋಗೋಣ, ಜನರ ಆಶೀರ್ವಾದ ಯಾರಿಗೆ ಮಾಡ್ತಾರೆ ಅವರ ಸರ್ಕಾರ ನಡೀಲಿ ಎಂದು ಸಲಹೆ ನೀಡಿದರು. ನಿಮ್ಮ ಯೋಗ್ಯತೆಗೆ ಸರ್ಕಾರ ನಡೆಸೋದಕ್ಕೆ ಆಗೊಲ್ಲ ಅಂತ ಹೇಳಿದ್ರೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋಣ ಅಂತ ಹೇಳಿದರು.
ಹೋರಾಟಕ್ಕೆ ಜನಬೆಂಬಲ..
ನಮ್ಮ ಹೋರಾಟಕ್ಕೆ ಇವತ್ತು ಸಾಕಷ್ಟು ಜನಬೆಂಬಲ ಸಿಗುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ರೈತರು, ಕೂಲಿ ಕಾರ್ಮಿಕರು, ತಾಯಂದಿರು ಎಲ್ಲರೂ ಇವತ್ತು ಬಹಳ ದೊಡ್ಡ ಸಂಖ್ಯೆಯಲ್ಲಿ ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಅನೇಕ ಮುಖಂಡರು ಹೋರಾಟಕ್ಕೆ ಇವತ್ತು ಶಕ್ತಿ ತುಂಬುವಂತ ಕೆಲಸ ಮಾಡುತ್ತಿದ್ದಾರೆ ಎಂದು ನುಡಿದರು.
ನಮ್ಮ ಹೋರಾಟ ಹತ್ತಿಕ್ಕುವಂತ ಕೆಲಸ..
ಭಾರತೀಯ ಜನತಾ ಪಾರ್ಟಿಯ ನಮ್ಮ ಹೋರಾಟ ಹತ್ತಿಕ್ಕುವಂತ ಕೆಲಸ ಇವತ್ತು ಕಾಂಗ್ರೆಸ್ ಸರ್ಕಾರ, ಮಾನ್ಯ ಮುಖ್ಯಮಂತ್ರಿಗಳು, ಡಿ.ಕೆ. ಶಿವಕುಮಾರ್ ಅವರು ಮಾಡ್ತಾ ಇದ್ದಾರೆ ಎಂದು ಟೀಕಿಸಿದರು. ಮೊನ್ನೆ ದಿನ ಸಂಜೆ ಬಿಜೆಪಿ ಪಾದಯಾತ್ರೆ ಬಂದಾಗ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ವಿದ್ಯುತ್ ಕಡಿತ ಮಾಡಿದ್ದಾರೆ ಎಂದು ಟೀಕಿಸಿದರು.
ನಾಡಿದ್ದು ಬಳ್ಳಾರಿನಲ್ಲಿ ನಮ್ಮ ಸಮಾವೇಶ ಇದೆ. ಸನ್ಮಾನ್ಯ ಯಡಿಯೂರಪ್ಪನವರು ಆದಿಯಾಗಿ ರಾಜ್ಯದ ಎಲ್ಲಾ ಹಿರಿಯ ನಾಯಕರು ಬರುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹಾಕಿ, ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಾರ್ಟಿಯ ಹೋರಾಟಕ್ಕೆ ಸ್ಥಳ ಕೊಡಬಾರದು ಅಂತ ಹೇಳಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರ ನಮಗೆ ಅನುಮತಿ ಕೊಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲೇ ನಮ್ಮ ಹೋರಾಟ ಮುಂದುವರಿಸುತ್ತೇವೆ ಅಂತ ಹೇಳಿದೆವು. ಬಳಿಕ ನಮ್ಮ ಹೋರಾಟಕ್ಕೆ, ನಮ್ಮ ಒತ್ತಡಕ್ಕೆ ಮಣಿದು ಇವತ್ತು ಸಂಜೆ ನಮಗೆ ಅನುಮತಿ ನೀಡಿದ್ದಾರೆ. ನಾಡಿದ್ದು ಬಳ್ಳಾರಿನಲ್ಲಿ ಒಂದು ಬೃಹತ್ ಸಮಾವೇಶ ನಡೆಯಲಿದೆ ಎಂದು ವಿವರಿಸಿದರು.
ನಿಮ್ಮ ಸಾಧನೆ ಏನು?
ಶಿವಕುಮಾರ್ ಅವರೇ 100 ದಿನದ ನಿಮ್ಮ ಆಡಳಿತ ಅವಧಿಯಲ್ಲಿ ರಾಜ್ಯದಲ್ಲಿ ಇವತ್ತು ರೈತರು ಬದುಕಿದ್ದಾರಾ, ಸತ್ತಿದ್ದಾರಾ ಕೇಳುವಂತಹ ವ್ಯವಧಾನ ನಿಮ್ಮ ಸರ್ಕಾರಕ್ಕೆ ಇರಲಿಲ್ಲ. ದುಡಿಯುವಂತಹ ಕೈಗಳಿಗೆ ಒಂದು ಕೆಲಸವನ್ನ ಕೊಡೋದಕ್ಕೆ ನಿಮ್ಮ ಸರ್ಕಾರದಿಂದ ಇವತ್ತಿಗೂ ಕೂಡ ಆಗಿಲ್ಲ. ಗ್ರಾಮೀಣ ಭಾಗದಲ್ಲಿ ನಮ್ಮ ಬಡವರಿಗೆ ಒಂದು ಮನೆಯನ್ನು ಕೂಡ ಕಳೆದ ಮೂರೂಕಾಲು ವರ್ಷದಲ್ಲಿ ಕೊಡೋದಕ್ಕೆ ಸಾಧ್ಯ ಆಗಿಲ್ಲ, ಒಂದು ಗಂಗಾ ಕಲ್ಯಾಣ ಯೋಜನೆಯನ್ನು ಕೂಡ ಕೊಡೋದಕ್ಕೆ ಸಾಧ್ಯ ಆಗಿಲ್ಲ ಎಂದು ಟೀಕಿಸಿದರು.
ಬೆಲೆ ಏರಿಕೆಯೇ ಇವರ ಸಾಧನೆ
ಮೂರು-ಕಾಲು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರತಕ್ಕಂತ ಸಾಧನೆ ಏನಪ್ಪಾ ಅಂತ ಹೇಳಿದ್ರೆ, ಬೆಲೆ ಏರಿಕೆ, ಬೆಲೆ ಏರಿಕೆ, ಬೆಲೆ ಏರಿಕೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನ ಮಾಡಿ, ಪೆಟ್ರೋಲ್-ಡೀಸೆಲ್ ಮೇಲೆ ನಾಲ್ಕೈದು ಬಾರಿ ದರವನ್ನ ಜಾಸ್ತಿ ಮಾಡಿದರು. ಅಗತ್ಯ ವಸ್ತುಗಳ ಮೇಲೆ ಬೆಲೆ ಜಾಸ್ತಿ ಮಾಡಿ, ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಅಂತ ಹೇಳಿಕೊಂಡರು. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳತಕ್ಕಂತ ಕೆಲಸ ಮಾಡುತ್ತಿದ್ದಾರೆ ಎಂದು ದಊರಿದರು. ಒಂದು ಕಡೆ ಗೃಹಲಕ್ಷ್ಮಿ ಅಂತ ಹೇಳಿ 2000 ರೂಪಾಯಿ ಕೊಡುವುದರ ಬಗ್ಗೆ ಮಾತನಾಡಿದರೆ, ಮತ್ತೊಂದು ಕಡೆ ಇಡೀ ರಾಜ್ಯದಲ್ಲಿ ದಿನಸಿ, ಅಕ್ಕಿ, ಬೇಳೆ ಕೂಡ ದರವನ್ನು ಜಾಸ್ತಿ ಮಾಡಿ ಬಡ ಕುಟುಂಬವನ್ನು ಬೀದಿಗೆ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದುಆಕ್ಷೇಪಿಸಿದರು.
ಇಸ್ಪೀಟ್ ದಂಧೆ, ಡ್ರಗ್ ಮಾಫಿಯ
ಯಾವುದೇ ಜಿಲ್ಲೆಗೆ ಹೋದ್ರು ಕೂಡ ಸ್ಥಳೀಯ ಶಾಸಕರು, ಆಡಳಿತ ಪಕ್ಷದ ಶಾಸಕರು, ಸಚಿವರ ಬೆಂಬಲದಿಂದ ಇವತ್ತು ಎಲ್ಲಾ ತಾಲೂಕುಗಳಲ್ಲಿ, ಎಲ್ಲಾ ಜಿಲ್ಲೆಗಳಲ್ಲಿ ಇಸ್ಪೀಟ್ ದಂಧೆ ಮಾಡೋದಕ್ಕೂ ಕೂಡ ಈ ಕಾಂಗ್ರೆಸ್ ಸರ್ಕಾರ ಇವತ್ತು ಪೆÇ್ರೀತ್ಸಾಹ ಕೊಟ್ಟಿದೆ. ಕರ್ನಾಟಕ ರಾಜ್ಯ ಅಂತ ಹೇಳಿದ್ರೆ ಇವತ್ತು ಡ್ರಗ್ ಮಾಫಿಯಾ ತಾಣವಾಗಿದೆ ಎಂದು ದೂರಿದರು.
ಒಂದು ಕಡೆ ಈ ಮುಖ್ಯಮಂತ್ರಿಗಳಿಗೆ, ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಬಗ್ಗೆ ಯಾವುದೇ ಒಂದು ಒಳ್ಳೆ ಯೋಜನೆ ಕೊಡಲಿಲ್ಲ, ಕಾರ್ಯಕ್ರಮಗಳನ್ನ ಕೊಡಲಿಲ್ಲ. ರೈತರು ಭೀಕರ ಬರಗಾಲದ ಸಂಕಷ್ಟದಲ್ಲಿದ್ದಾರೆ, ರೈತರ ಕೃಷಿ ಸಾಲವನ್ನ ಮನ್ನಾ ಮಾಡಿ ಅಂತ ಹೇಳಿದ್ರೆ, ದುಡ್ಡಿಲ್ಲ, ಡೆಲ್ಲಿಗೆ ಹೋಗೋಣ ಅಂತ ಹೇಳಿ ಮುಖ್ಯಮಂತ್ರಿಗಳು ಹೇಳ್ತಾರೆ. ಮತ್ತೊಂದು ಕಡೆ ಇವತ್ತು ಗ್ರಾಮೀಣ ಭಾಗದಲ್ಲಿ ಬಸ್ ಗಳು ಓಡಾಡ್ತಾ ಇಲ್ಲ. ಗ್ರಾಮೀಣ ಭಾಗದಲ್ಲಿ ಇರತಕ್ಕಂತ ಮಕ್ಕಳು ಶಾಲಾ-ಕಾಲೇಜಿಗೆ ಹೋಗ್ಬೇಕು ಅಂತ ಹೇಳಿದ್ರೆ ಬಸ್ ಗಳ ವ್ಯವಸ್ಥೆಗಳು ಕೂಡ ನಿಂತು ಹೋಗಿರತಕ್ಕಂತದ್ದನ್ನ ನೋಡುತ್ತಿದ್ದಾರೆ ಎಂದು ವಿವರಿಸಿದರು.
ಭ್ರμÁ್ಟಚಾರದಲ್ಲಿ ಮುಳುಗಿರತಕ್ಕಂತ ಕಾಂಗ್ರೆಸ್ ಸರ್ಕಾರ, ದಲಿತರ ಹಣಕೊಂಡು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಲೂಟಿ ಮಾಡಿ, ಮತ್ತೆ ಭ್ರಷ್ಟರಿಗೆ ಸಚಿವ ಸಂಪುಟದಲ್ಲಿ ಅವಕಾಶವನ್ನು ಕೊಟ್ಟಾಗ ನಮ್ಮ ಹೋರಾಟಕ್ಕೆ ಮಣಿದು ಸಚಿವರ ರಾಜೀನಾಮೆಯನ್ನು ಕೂಡ ತೆಗೆದುಕೊಂಡಿದ್ದಾರೆ. ಇವತ್ತು ಎಸ್‍ಸಿಪಿ, ಟಿಎಸ್‍ಪಿ ಹಣ, 45,000 ಕೋಟಿ ರೂಪಾಯಿಗಳನ್ನು ದಲಿತರಿಗೆ ಮೀಸಲಿಟ್ಟಿರತಕ್ಕಂತ ಹಣವನ್ನು ಬೇರೆ ಬೇರೆ ಯೋಜನೆಗಳಿಗೂ ಕೂಡ ಬಳಸಿಕೊಂಡಿರತಕ್ಕಂತದ್ದು ತಾವು ನೋಡ್ತಾ ಇದ್ದೀರಿ. ದಲಿತರ ಬಗ್ಗೆ ಯಾವುದೇ ಒಂದು ಕಾಳಜಿ ಇಲ್ಲ ಈ ಸರ್ಕಾರಕ್ಕೆ. ರೈತರ ಪರವಾಗಿ ಯಾವುದೇ ಒಂದು ಕಾರ್ಯಕ್ರಮಗಳನ್ನ ಕೊಡಲಿಲ್ಲ ಎಂದು ಆಕ್ಷೇಪಿಸಿದರು. ರಸ್ತೆ ದುರವಸ್ಥೆಯಿಂದ ಅಪಘಾತಗಳು ಹೆಚ್ಚಾಗಿವೆ ಎಂದು ಗಮನ ಸೆಳೆದರು.
ನಗರಗಳ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಸಮಗ್ರ ಸಾರಿಗೆ ವ್ಯವಸ್ಥೆ ರೂಪಿಸಲು TOD ನೀತಿ ಅನುಷ್ಠಾನ: ಸಭೆ –
ನಗರಗಳ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಸಮಗ್ರ ಸಾರಿಗೆ ವ್ಯವಸ್ಥೆ ರೂಪಿಸಲು TOD ನೀತಿ ಅನುಷ್ಠಾನ: ಸಭೆ

