ಡೆಡ್‍ಲೈನ್ ಸಾಯುತ್ತಿದೆಯೇ ಹೊರತು ಅಭಿವೃದ್ಧಿ ಆಗುತ್ತಿಲ್ಲ: ಶೋಭಾ ಕರಂದ್ಲಾಜೆ ಆಕ್ಷೇಪ

ಬೆಂಗಳೂರು: ರಸ್ತೆ ಗುಂಡಿಗಳನ್ನು (Potholes) ಮುಚ್ಚುವ ವಿಷಯದಲ್ಲಿ ಸರಕಾರ ಹಲವಾರು ಡೆಡ್‍ಲೈನ್ ಕೊಟ್ಟಿದೆ. ಡೆಡ್‍ಲೈನ್ (Deadline) ಸಾಯುತ್ತಿದೆಯೇ ಹೊರತು ಅಭಿವೃದ್ಧಿ ಆಗುತ್ತಿಲ್ಲ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ (Shobha Karandlaje) ಅವರು ಟೀಕಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಬೆಂಗಳೂರಿನ ರಸ್ತೆಗಳಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ಆರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಾವಿಗೆ ಯಾರು ಹೊಣೆ? ಮೃತರ ಕುಟುಂಬಕ್ಕೆ ಯಾರು ಜವಾಬ್ದಾರರು? ಎಂದ ಅವರು, ಇದರಲ್ಲಿ ಯಾರಿಗೂ ಜವಾಬ್ದಾರಿ ಇಲ್ಲ ಎಂದು ಟೀಕಿಸಿದರು.
ರಾಜ್ಯ ಸರಕಾರ, ಸಚಿವರು ಅತ್ಯಂತ ದುವ್ರ್ಯವಹಾರ ಮಾಡುತ್ತಿದ್ದಾರೆ. ಜನರ ಮೂಲಸೌಕರ್ಯಗಳ ವಿಚಾರದಲ್ಲಿ ಅವರಿಗೆ ಗೌರವ ಇಲ್ಲ; ಕೇವಲ ಹಣ ಮಾಡುವುದು, ಪ್ರಚಾರ ಪಡೆಯುವುದು, ಕುರ್ಚಿ ಹಿಡಿಯುವುದರ ಬಗ್ಗೆ ಚರ್ಚೆ ಆಗುತ್ತಿದೆ ಎಂದು ದೂರಿದರು.
ಸಚಿವರು ಜಿಲ್ಲೆಗಳಿಗೆ ಹೋಗುತ್ತಿಲ್ಲ; ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿಲ್ಲ. ಬೆಂಗಳೂರಿನ ಗುಂಡಿಗಳಿಂದ ಇಲ್ಲಿನ ನಾಗರಿಕರು, ಉದ್ಯೋಗಿಗಳು, ಉದ್ಯಮಿಗಳು – ಇವರೆಲ್ಲ ಬೇಸತ್ತಿದ್ದಾರೆ. ಇಲ್ಲಿ ಇರಬೇಕೇ ಬೇಡವೇ ಎಂದು ಉದ್ಯಮಿಗಳು ಯೋಚಿಸುವಂತಾಗಿದೆ. ಉದ್ಯಾನಗಳ ನಗರ ಬೆಂಗಳೂರು ಈಗ ಗುಂಡಿಗಳ ಬೆಂಗಳೂರಾಗಿದೆ ಎಂದು ಟೀಕಿಸಿದರು.
ಎಲ್ಲಿ ಕಸ ಹಾಕುತ್ತಾರೋ ಅಂಥವರ ಮನೆ ಮುಂದೆ ಜಿಬಿಎ ವತಿಯಿಂದ ಕಸ ಸುರಿಯುವ, ದಂಡ ಹಾಕುವ ಕೆಲಸ ನಡೆದಿದೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಯಾರು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲವೋ ಅಂಥವರು ಇಂಥ ದುಷ್ಕøತ್ಯ ಮಾಡುತ್ತಾರೆ. ಕಸ ಎತ್ತುವುದು, ವಿಂಗಡಿಸುವುದು, ಅದನ್ನು ಸಂಸ್ಕರಿಸುವ ಕೆಲಸದ ವಿಚಾರದಲ್ಲಿ ಯಾವ ಲಾಬಿ ನಡೆಯುತ್ತಿದೆ ಎಂದು ಗೊತ್ತಿಲ್ಲ ಎಂದು ಆಕ್ಷೇಪಿಸಿದರು.
ಇದರಿಂದ ಬೆಂಗಳೂರಿನ ಎಲ್ಲ ರಸ್ತೆಗಳಲ್ಲಿ ಕಸ ಬೀಳುತ್ತಿದೆ. ಕಸ ಸುರಿಯುವುದು, ದಂಡ ಹಾಕುವುದು ಪರಿಹಾರವೇ? ಎಂದು ಕೇಳಿದರು. ಕಸದ ಸಮಸ್ಯೆ ಬಗೆಹರಿಸಲು ಬೆಂಗಳೂರಿನಲ್ಲಿ ಸಚಿವರು, ಅಧಿಕಾರಿಗಳು ಯೋಚಿಸುತ್ತಿಲ್ಲ ಎಂದು ನುಡಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ಸಿನಲ್ಲಿ ಯಾರು ಮುಖ್ಯಮಂತ್ರಿ ಆಗುತ್ತಾರೆಂಬುದು ನಮ್ಮ ಪ್ರಶ್ನೆಯಲ್ಲ; ಕರ್ನಾಟಕದ ಅಭಿವೃದ್ಧಿ ಆಗಬೇಕು. ಗುಂಡಿಗಳನ್ನು ಮುಚ್ಚಬೇಕಿದೆ. ಅತಿವೃಷ್ಟಿಯಿಂದ ತೊಂದರೆಗೆ ಸಿಲುಕಿದವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಹೆಣ್ಮಕ್ಕಳ ಮೇಲಿನ ಅತ್ಯಾಚಾರ, ಅಪಹರಣದ ವಿರುದ್ಧ ಕ್ರಮ ಅಗತ್ಯವಿದೆ. ನಾಪತ್ತೆ ಆಗುವವರಿಗೆ ರಕ್ಷಣೆ ಸಿಗಬೇಕು. ನೂರಾರು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದರ ಬಗ್ಗೆ ಗಮನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles