ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3191 ಪ್ರಥಮ ‘ರೋಟರಿ ಮೀಡಿಯಾ ಫಾಲ್ಕನ್ ಅವಾರ್ಡ್ಸ್–2026’ : ಜಲ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ಪ್ರಜಾತಂತ್ರದ ಯಶಸ್ಸಿನಲ್ಲಿ ಮಾಧ್ಯಮಗಳ ಪಾತ್ರ ಹಿರಿದು: ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು: ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮಾಧ್ಯಮದ ಪಾತ್ರ ಅತ್ಯಂತ ಮಹತ್ವದ್ದದ್ದಾಗಿದ್ದು, ಸಮಾಜದ ಹಿತಾಸಕ್ತಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಆರ್.ರಾಮಲಿಂಗಾ ರೆಡ್ಡಿ(R.Ramalinga Reddy) ಹೇಳಿದ್ದಾರೆ.
ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3191 ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ನಿಂದ ಪ್ರಥಮ ಬಾರಿಗೆ ಆಯೋಜಿಸಲಾದ ‘ರೋಟರಿ ಮೀಡಿಯಾ ಫಾಲ್ಕನ್ ಅವಾರ್ಡ್ಸ್–2026’ ಸಮಾರಂಭದಲ್ಲಿ ಮಾಧ್ಯಮ ಕ್ಷೇತ್ರದ ಗಣ್ಯರು ಹಾಗೂ ಕಾರ್ಪೊರೇಟ್ ಸಂವಹನ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸೇವೆಗೆ ಮತ್ತೊಂದು ಹೆಸರು ರೋಟರಿ ಸಂಸ್ಥೆ. ಪೊಲೀಯೋ ವಿಚಾರದಲ್ಲಿ ರೋಟರಿ ಸಂಸ್ಥೆ ಮಾಡಿದ ಕೆಲಸ ಬೇರೆ ಯಾವುದೇ ಸಂಸ್ಥೆ ಮಾಡಿಲ್ಲ. ಶಿಕ್ಷಣ ಕ್ಷೇತ್ರಕ್ಕೂ ಸಹ ಬಹುದೊಡ್ಡ ಕೊಡುಗೆ ನೀಡಿದೆ. ನೂರಾರು ವರ್ಷಗಳಿಂದ ರೋಟರಿ ಸಂಸ್ಥೆ ಸೇವೆ ಸಲ್ಲಿಸುತ್ತಿದ್ದು, ಜಗತ್ತಿನಲ್ಲಿ ಮಾದರಿಯಾಗಿದೆ ಎಂದರು.
ರೋಟರಿ ಜಿಲ್ಲಾ ಗವರ್ನರ್ ಡಾ.ಅನಿಲ್ ಗುಪ್ತ(Dr.Anil Gupta) ಮಾತನಾಡಿ, ರೋಟರಿ ಕೈಗೊಂಡ ಸೇವಾ ಕಾರ್ಯಗಳು ಜನರಿಗೆ ತಲುಪಿದಾಗ ಅದರ ಪ್ರಭಾವ ಸಾವಿರಾರು ಜನರ ಬದುಕಿನಲ್ಲಿ ಬದಲಾವಣೆ ತರುತ್ತಿದೆ. ಪೋಲಿಯೊ ನಿರ್ಮೂಲನೆ ಸೇರಿದಂತೆ ರೋಟರಿಯ ಅನೇಕ ಸಾಮಾಜಿಕ ಸೇವೆಗಳು ಮಾಧ್ಯಮದ ಬೆಂಬಲದಿಂದಲೇ ವಿಶ್ವದಾದ್ಯಂತ ಯಶಸ್ಸು ಕಂಡಿವೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಪತ್ರಕರ್ತರ ಪಾತ್ರ ಅಮೂಲ್ಯವಾಗಿದೆ ಎಂದು ತಿಳಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ ಮಾತನಾಡಿ, ಸತ್ಯನಿಷ್ಠೆ, ಜವಾಬ್ದಾರಿ ಮತ್ತು ಸಮಾಜಮುಖಿ ಪತ್ರಿಕೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ರೋಟರಿ ಜಿಲ್ಲೆ 3191ರೊಂದಿಗೆ ಕೈಜೋಡಿಸಿರುವುದು ಹೆಮ್ಮೆಯ ಸಂಗತಿ. ಮಾಧ್ಯಮ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ರೋಟರಿಯಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸಿದ ಹಿರಿಯ ರೋಟೇರಿಯನ್ ಆರ್‌ಟಿಎನ್.ಕೆ.ಎ.ಕುಂಜಾ ಅವರಿಗೆ “ಜೀವಮಾನ ಸಾಧನಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ‘ಕಲ್ ಕಾ ಸಪ್ನಾ – ಒನ್ ಬಿಲಿಯನ್ ಲೀಟರ್ ಪಾನಿ ಹೋ ಅಪ್ನಾ’ ಎಂಬ ರೋಟರಿ ಜಿಲ್ಲೆ 3191ರ ಮಹತ್ವಾಕಾಂಕ್ಷೆಯ ಜಲ ಸಂರಕ್ಷಣಾ ಯೋಜನೆಗೆ ಚಾಲನೆ ನೀಡಲಾಯಿತು. ರಾಜ್ಯದಲ್ಲಿ 100 ಕೋಟಿ ಲೀಟರ್ ನೀರು ಸಂರಕ್ಷಿಸುವ ಗುರಿಯೊಂದಿಗೆ, 20 ಕೆರೆಗಳ ಪುನಶ್ಚೇತನ, ಸುಸ್ಥಿರ ಜಲ ನಿರ್ವಹಣೆ ಹಾಗೂ ರೈತರಿಗೆ ನೀರಿನ ಭದ್ರತೆ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ರೋಟರಿ ಇಂಟರ್‌ನ್ಯಾಷನಲ್ ನಿರ್ದೇಶಕ ಆರ್‌ಟಿಎನ್. ಕೆ.ಪಿ. ನಾಗೇಶ್ ಮಾತನಾಡಿ, “ಸೇವೆ ಎಂದರೆ ಸಮಾಜದ ಭವಿಷ್ಯವನ್ನು ಸುರಕ್ಷಿತಗೊಳಿಸುವುದಾಗಿದೆ. ರಾಜ್ಯದಲ್ಲಿ ನೀರಿನ ಭದ್ರತೆ ಅತ್ಯಂತ ಪ್ರಮುಖ ಸವಾಲಾಗಿದ್ದು, ಈ ಯೋಜನೆ ರೈತರು ಹಾಗೂ ಮುಂದಿನ ಪೀಳಿಗೆಗೆ ಶಾಶ್ವತ ನೀರಿನ ಸಂರಕ್ಷಣೆ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ,” ಎಂದು ಹೇಳಿದರು.
ಚಲನಚಿತ್ರ ನಿರ್ದೇಶಕ, ಸಾಹಿತಿ ಹಾಗೂ ಅಂಕಣಕಾರ ಡಾ. ನಾಗತಿಹಳ್ಳಿ ಚಂದ್ರಶೇಖರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿ ತಟ್ಟೆ ಹಾಗೂ ರೋಟರಿ ಜಿಲ್ಲಾ 3191ರ ಜಿಲ್ಲಾ ಗವರ್ನರ್ ಆರ್‌ಟಿಎನ್. ಡಾ. ಅನಿಲ್ ಗುಪ್ತ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು
ಮೋಹನ್ ಜಿ.ಎನ್., ಡಾ. ವೆಂಕಟೇಶ್ ಎಂ. ರಾವ್, ಶ್ಯಾಮಸುಂದರ್ ವಟ್ಟಂ, ಚಿದಾನಂದ ಪಟೇಲ್, ವೀರೇಶ್ ಕೆ.ಎಂ., ವೀರಮಣಿ, ಶ್ರೀನಿವಾಸ್, ರಾಕೇಶ್ ಎಂ.ಆರ್., ಪುಣ್ಯಾವತಿ ಎಚ್.ಪಿ., ಪೀರ್ ಪಾಷಾ ಖಾದ್ರಿ, ರಾಮು ಪಾಟೀಲ್, ರಮೇಶ್ ಪಾಳ್ಯ, ವನಿತಾ, ಪ್ರಕಾಶ್ ಎಚ್.ಟಿ., ನಾ. ವಿನಯ್, ರಾಜಶೇಖರ್ ಮೂರ್ತಿ, ಚೇತನ ಬೆಳಗೆರೆ, ಮಿಶೆಲ್ ಕುಮಾರ್, ಕಿಶನ್ ಚೆರಂಡ, ಹಂಸವೇಣಿ ಎನ್., ಭಾರತೀಶ ಹೊನ್ನಾಳಿ, ಆರ್‌ಟಿಎನ್. ಎಂ. ಸುರೇಂದ್ರನ್ ಉಣ್ಣಿ, ಡಾ. ಅನುಭಾ ಜೈನ್, ಪಿ. ರಾಮಕೃಷ್ಣ ಉಪಾಧ್ಯ, ಅರ್ಚನಾ ರವಿಕುಮಾರ್, ರವಿ ಎಸ್. ಹಾಗೂ ಫೆಹ್ಮಿ ಮೊಹಮ್ಮದ್ ಮತ್ತು ಸೃಷ್ಟಿ ಕುಕ್ರೇಜಾ ಅವರಿಗೆ ರೋಟರಿ ಮೀಡಿಯಾ ಫಾಲ್ಕನ್ ಅವಾರ್ಡ್ಸ್–2026 ಪ್ರದಾನ ಮಾಡಲಾಯಿತು.