ರಾಜ್ಯಾದ್ಯಂತ 667 ಬಾಲ ಹಾಗೂ ಕಿಶೋರ ಕಾರ್ಮಿಕರ ರಕ್ಷಣೆ

ಬೆಂಗಳೂರು: ರಾಜ್ಯದಲ್ಲಿ ಬಾಲಕಾರ್ಮಿಕರ ಪತ್ತೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗಳಿಗೆ ಕರ್ನಾಟಕ ರಾಜ್ಯ ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿ(Child and Adolescent Labour System) ನಿರ್ಮೂಲನಾ ಯೋಜನಾ ಸೊಸೈಟಿ (ಕಾರ್ಮಿಕ ಇಲಾಖೆ)(Department of Labour) ಸ್ಪಷ್ಟೀಕರಣ ನೀಡಿದೆ.

ಮಾನ್ಯ ಮುಖ್ಯಮಂತ್ರಿಗಳು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ್ದಾಗ, ಅಲ್ಲಿ ಮಕ್ಕಳು ಕೆಲಸ ಮಾಡುತ್ತಿರುವುದನ್ನು ಸ್ವತಃ ಗಮನಿಸಿ ತಕ್ಷಣವೇ ಸೂಕ್ತ ಪೊಲೀಸ್ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಿನಾಂಕ 12-09-2026ರಂದು ರಾಜ್ಯಾದ್ಯಂತ ಬಾಲ ಹಾಗೂ ಕಿಶೋರ ಕಾರ್ಮಿಕರ ನಿಷೇಧಕ್ಕೆ ಸಂಬಂಧಿಸಿದಂತೆ ಅನಿರೀಕ್ಷಿತ ತಪಾಸಣೆಗಳನ್ನು ಕೈಗೊಳ್ಳಲಾಗಿತ್ತು.

ರಾಜ್ಯಾದ್ಯಂತ ಒಟ್ಟು 7,030 ಸ್ಥಳಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಲಾಗಿದ್ದು, ಕಾರ್ಯಾಚರಣೆಯ ವೇಳೆ ಒಟ್ಟು 667 ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ರಕ್ಷಿಸಲಾಗಿದೆ.

ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ (CWC) ಒಪ್ಪಿಸಲಾಗಿದ್ದು, ಅವರ ಪುನರ್ವಸತಿ ಮತ್ತು ಶಿಕ್ಷಣ ಮುಂದುವರಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಜಿಲ್ಲಾ ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಪಡೆ ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಕಾರ್ಯಪಡೆಗಳನ್ನು ರಚಿಸಲಾಗಿದೆ. ಅಲ್ಲದೆ, ಸರ್ಕಾರದ 11 ಇಲಾಖೆಗಳ ಸಹಯೋಗದೊಂದಿಗೆ ನಿರಂತರ ದಾಳಿಗಳನ್ನು ನಡೆಸಲಾಗುತ್ತಿದೆ.

ಬಾಲ ಹಾಗೂ ಕಿಶೋರ ಕಾರ್ಮಿಕರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಲು ಕೇಂದ್ರ ಸರ್ಕಾರದ Pencil Portal, N.C.P.C.R Portal, ಸಾಮಾಜಿಕ ಜಾಲತಾಣಗಳು ಹಾಗೂ ಉಚಿತ ಸಹಾಯವಾಣಿಗಳಾದ, ಮಕ್ಕಳ ಸಹಾಯವಾಣಿ: 1098, ಕಾರ್ಮಿಕ ಸಹಾಯವಾಣಿ: 155214, ಪೋಲಿಸ್ ಸಹಾಯವಾಣಿ: 112 ಗಳ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ಜಂಟಿ ಕಾರ್ಮಿಕ ಆಯುಕ್ತರಾದ ಡಾ. ಎಸ್.ಬಿ. ರವಿಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಅರ್ಜಿ ಆಹ್ವಾನ

Hot this week

ಕರ್ನಾಟಕದ ಸರ್ಕಾರಿ ಸೇವೆಗಳಿಗೆ ಬಹುಭಾಷಾ ಮತ್ತು ಧ್ವನಿ ಆಧಾರಿತ ಪ್ರವೇಶದ ಯೋಜನೆ

ಕರ್ನಾಟಕ ಸರ್ಕಾರವು ಸಾರ್ವಜನಿಕ ಸೇವೆಗಳನ್ನು ಜನರಿಗೆ ಅವರ ಆಯ್ಕೆಯ ಭಾಷೆಯಲ್ಲಿ ಸುಲಭವಾಗಿ...

ಕೆನಡಾದ ಲೇಖಕಿ ಆನ್ ಕಾರ್ಸನ್‌ಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ

ಕೆನಡಾದ ಕವಯಿತ್ರಿ, ಪ್ರಬಂಧಕಾರ್ತಿ ಮತ್ತು ಅನುವಾದಕಿ ಆನ್ ಕಾರ್ಸನ್ ಅವರಿಗೆ ಸಾಹಿತ್ಯ...

ಕರ್ನಾಟಕದಲ್ಲಿ ಬರ ಪರಿಹಾರದ ವೆಚ್ಚ ಹೆಚ್ಚಳ: ಸರ್ಕಾರದ ಹಣಕಾಸಿಗೆ ಒತ್ತಡ

ಕರ್ನಾಟಕದಲ್ಲಿ ಬರ ಪರಿಹಾರದ ವೆಚ್ಚ ಹೆಚ್ಚಳ: ಸರ್ಕಾರದ ಹಣಕಾಸಿಗೆ ಒತ್ತಡ ಕರ್ನಾಟಕದಲ್ಲಿ ಬರ...

ಆಂಧ್ರಪ್ರದೇಶದಲ್ಲಿ ತೀವ್ರ ಬರ: 21 ಜಿಲ್ಲೆಗಳ 388 ಮಂಡಲಗಳು ಬಾಧಿತ

ಆಂಧ್ರಪ್ರದೇಶ ಸರ್ಕಾರವು 21 ಜಿಲ್ಲೆಗಳ 388 ಮಂಡಲಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ...

ಹಿರಿಯ ನಟ ನಾನಾ ಪಾಟೇಕರ್ ನಿಧನ: ಚಿತ್ರರಂಗದಲ್ಲಿ ಶೋಕ

ಮುಂಬೈ: ಭಾರತೀಯ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ಸಾಂಸ್ಕೃತಿಕ ಐಕಾನ್...

Topics

ಜಿಎಸ್‌ಟಿ ಅಧಿಕಾರಿಗಳ ಬಂಧನಾಧಿಕಾರ ರದ್ದು; ಪ್ರಾಸಿಕ್ಯೂಷನ್ ಮಿತಿ ₹1 ಕೋಟಿಯಿಂದ ₹5 ಕೋಟಿಗೆ ಏರಿಕೆ!

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ...

ನಿತ್ಯ ಪಂಚಾಂಗ 09.10.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.10.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA.. ಆಯಣ: ದಕ್ಷಿಣಾಯನ AYANA:...

ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (KSTA) ವತಿಯಿಂದ "ಆಹಾರ ಮತ್ತು...

Related Articles