ಶಿಕ್ಷಣದ ಕಲಿಕೆ ಜೊತೆಗೆ ಕೌಶಲ್ಯ ಕೂಡಿದರೆ ಇನ್ನಷ್ಟು ಪ್ರಗತಿ: ಶ್ರೀಮತಿ ಕಾಂತಾನಾಯಕ್

ಶಿಕ್ಷಣದ ಕಲಿಕೆ ಜೊತೆಗೆ ಕೌಶಲ್ಯ ಕೂಡಿದರೆ ಇನ್ನಷ್ಟು ಪ್ರಗತಿ ಸಾಧಿಸಬಹುದು. ವಿದ್ಯಾರ್ಥಿಗಳು ವೈಫಲ್ಯಕ್ಕೆ ಹೆದರದೆ ನಾವೀನ್ಯತೆ, ಕ್ರಿಯಾಶೀಲತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕರ್ನಾಟಕ ಕೌಶಲ್ಯಾಭಿವೃದ್ದಿ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಕಾಂತಾನಾಯಕ್ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ 45 ದಿನಗಳ ಕಾಲ ಆಯೋಜಿಸಲಾಗಿದ್ದ ಕೆ-ಸೆಟ್ ಮತ್ತು ಯುಜಿಸಿ ನೆಟ್ ಪರೀಕ್ಷಾ  ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೌಶಲ್ಯ ಮಹತ್ವವಾದುದ್ದು, ಅದು ಯಾವುದಾದರೂ ಸರಿಯೇ, ನಿಮ್ಮ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ಅಗತ್ಯ ಕೌಶಲ್ಯಗಳನ್ನು ಪಡೆದು ಗುರಿಮುಟ್ಟಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಉದ್ಯೋಗಕ್ಕೆ ಅಗತ್ಯವಾದ ತರಬೇತಿ ನೀಡಲು ಸರ್ಕಾರ, ಕೈಗಾರಿಕೆ ಮತ್ತು ಶಿಕ್ಷಣ ತಜ್ಞರ ನಡುವೆ ಚರ್ಚೆಗಳಾಗಿ ನೂತನ ಯೋಜನೆಗಳು ಅನುμÁ್ಠನಗೊಂಡಿವೆ. ಈ ಮೂಲಕ ಕ್ಯಾಂಪಸ್ನೇರ ನೇಮಕಾತಿಗಳಲ್ಲಿ ಕೌಶಲ್ಯವಿರುವ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುತ್ತಿವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಜೊತೆಗೆ ಕೌಶಲ್ಯ ಕೂಡ ವೃತ್ತಿಯಾಧಾರಿತ ಬದುಕು ನಡೆಸಲು ಮನುಷ್ಯನಿಗೆ ಸಹಾಯಕವಾಗುತ್ತಿವೆ. ವಿದೇಶಗಳಲ್ಲಿ ಇರುವ ಕೌಶಲ್ಯ ನಮ್ಮಲ್ಲಿ ಇಲ್ಲ. ಇದನ್ನು ನಾವು ಪ್ರಶ್ನಿಸಿಕೊಂಡು, ಓದಿ ಉದ್ಯೋಗ ಪಡೆಯುವುದೇ ಮುಖ್ಯವಲ್ಲ ಇದರ ಜೊತೆ ಕೌಶಲ್ಯ ಬೆಳೆಸಿಕೊಳ್ಳಬೇಕು. ಕೌಶಲ್ಯ ಒಲಿಂಪಿಕ್ಸ್ನಲ್ಲಿ ನೀವೆಲ್ಲಾ ಭಾಗವಹಿಸಿ ಇಲ್ಲಿ ಎಲ್ಲಾ ತರಹದ ವೃತ್ತಿಪರ ಕೌಶಲ್ಯ ಪ್ರದರ್ಶಿಸಲು ಅವಕಾಶವಿರುತ್ತದೆ. ಇದಕ್ಕೆ ಸರ್ಕಾರ ಶಿಷ್ಯವೇತನವನ್ನು ಸಹ ನೀಡುತ್ತಿದೆ ಎಂದು ತಿಳಿಸಿದರು.

ಶಿಕ್ಷಕ ವೃತ್ತಿ ಆರಿಸಿಕೊಂಡು ಇಲ್ಲಿಗೆ ಬಂದಿದ್ದರು ನೀವುಗಳು ಎಐ (ಕೃತಕ ಬುದ್ದಿಮತ್ತೆ) ನ ಚಾಟ್ ಜಿಪಿಟಿ, ಗ್ರೊಕ್, ಜೆಮಿನಿ ಅಂತಹವುಗಳನ್ನು ಬಳಸಿಕೊಂಡು ಕಲಿಕೆ ಗುಣಮಟ್ಟ ಹೆಚ್ಚಿಕೊಂಡು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಿಳಿಹೇಳಬೇಕು. ಹೀಗಾಗಿ ಕಲಿಕೆ ಒಟ್ಟಿಗೆ ಕೌಶಲ್ಯ ಸಹ ನಿಮ್ಮಲ್ಲಿ ಇರಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಲೋಕನಾಥ್ ಅವರು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನ ಜೀವನ ಅವಿಭಾಜ್ಯ ಅಂಗವಾಗಿದೆ. ಇಂದಿನ ಅಧುನಿಕಯುಗಕ್ಕೆ ತಂತ್ರಜ್ಞಾನ ಅತ್ಯಗತ್ಯವಾಗಿದೆ. ತಂತ್ರಜ್ಞಾನದ ಜೊತೆಗೆ ನಾವು ಸಾಗಬೇಕೆ ವಿನಃ ಅದನ್ನು ವಿರೋಧಿಸಬಾರದು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡುವವರಲ್ಲಿ ಯುನಿಕ್ ನೆಸ್ ಇರಬೇಕು. ಇದರ ಜೊತೆಗೆ ತಂತ್ರಜ್ಞಾನ ಅಳವಡಿಸಿಕೊಂಡರೆ ನಾವು ಬೇಗ ಗುರಿಮುಟ್ಟುತ್ತೇವೆ. ಸ್ಮರ್ಧಾತ್ಮಕ ಯುಗದಲ್ಲಿ ಪ್ರಶ್ನೆಪತ್ರಿಕೆ ತಯಾರಿಸುವವರು ತುಂಬಾ ಕಠಿಣವಾದ ಪ್ರಶ್ನೆಗಳನ್ನೆ ಸಿದ್ದಪಡಿಸುತ್ತಾರೆ. ಅದನ್ನು ವಿದ್ಯಾರ್ಥಿಗಳು ಸುಲಭವಾಗಿ ಉತ್ತರಿಸುವ ಹಾಗೆ ಸಿದ್ದವಾಗಿರಬೇಕು ಎಂದು ಹೇಳಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ. ಲಿಂಗರಾಜಗಾಂಧಿ ಅವರು ಮಾತನಾಡಿ, ಕೌಶಲ್ಯವಿಲ್ಲದಿದ್ದರೆ ಯಾವುದೇ ರೀತಿ ಸಬಲೀಕರಣ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಶಿಕ್ಷಣದಲ್ಲಿ ಕೌಶಲ್ಯವು ಅತ್ಯಂತ ಅವಶ್ಯಕ ಪೂರಕವಾದದ್ದು. ಕೌಶಲ್ಯ ಕೇಂದ್ರವು ಗ್ರಾಮೀಣ ಭಾಗದಿಂದ ಬಂದ ಯುವಜನರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸುವವರಿಗೆ ಒಂದು ರೀತಿಯ ಆಶಾಕಿರಣ ಹಾಗೂ ಬೆನ್ನಲುಬಾಗಿ ನಿಂತಿದೆ. ಶಿಕ್ಷಣದಿಂದ ಮಾತ್ರ ಎಲ್ಲೆ ಮೀರಲು ಸಾಧ್ಯ ಎಂದು ಹೇಳಿದರು.

ಮೈಸೂರು ಒಂದು ಶೈಕ್ಷಣಿಕ ರಾಜಧಾನಿ. ಶೈಕ್ಷಣಿಕವಾಗಿ ದೊಡ್ಡ ಇತಿಹಾಸ ಪರಂಪರೆಯಿದೆ. ಅದನ್ನು ಸಂರಕ್ಷಿಸಿಕೊಂಡು ಯುವಜನಾಂಗಕ್ಕೆ ಪಸರಿಸುವಲ್ಲಿ, ಪೂರೈಸುವಲ್ಲಿ ದೊಡ್ಡ ಕೆಲಸಗಳಾಗುತ್ತಿವೆ. ಮೈಸೂರಿನ ಮಾಧ್ಯಮ ಬೇರೆಲ್ಲ ಕ್ಷೇತ್ರಕ್ಕಿಂತ ಶಿಕ್ಷಣಕ್ಕೆ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತಾ ಬಂದಿದೆ ಎಂದರು.

ದೇಶದಲ್ಲಿ ಈ ರೀತಿಯ ಉಚಿತವಾಗಿ ಅವಕಾಶಗಳನ್ನು ಒದಗಿಸುವ ವಿಶ್ವವಿದ್ಯಾನಿಲಯಗಳು ಅತ್ಯಂತ ವಿರಳ. ಅವಕಾಶ ವಂಚಿತರಿಗೆ, ಉನ್ನತ ಶಿಕ್ಷಣವನ್ನು ವಿಸ್ತರಿಸುವ, ಒದಗಿಸುವ ಕೆಲಸವಾಗುತ್ತಿದೆ. ಸಮಾಜ, ಸಮುದಾಯ, ಕೈಗಾರಿಗಳ, ಸಂಸ್ಥೆಗಳ ನಡುವೆ ನಂಟು ಬೆಳೆಸುವುದು ಅತ್ಯಂತ ಅವಶ್ಯಕ. ವಿದ್ಯಾರ್ಥಿಗಳ ಕಲಿಕೆಯು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗಬೇಕಿದೆ. ಇವತ್ತು ತಂತ್ರಜ್ಞಾನದಲ್ಲಿ ಬದುಕುತಿದ್ದು, ಕೃತಕಬುದ್ಧಿಮತ್ತೆಯು ನಮ್ಮೆಲ್ಲರ ಬದುಕನ್ನು, ಕ್ಷೇತ್ರವನ್ನು ಆವರಿಸಿದೆ. ಎಲ್ಲ ವಿಚಾರ, ವಿಷಯಗಳು ಅಂಗೈನಲ್ಲೆ ಸಿಗುವ ಅವಕಾಶ ಒದಗಿಸಿದೆ. ಈ ಯುಗದಲ್ಲಿ ಭೋದನೆ, ಸಂಶೋಧನೆ, ಕಲಿಕೆ ಎಲ್ಲವೂ ದೊಡ್ಡ ಸವಾಲಾಗಿದೆ. ಆದ್ದರಿಂದ ತಂತ್ರಜ್ಞಾನವನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಮುಂದುವರೆಯಬೇಕಾಗಿದೆ. ಇದೆಲ್ಲದರ ನಡುವೆ ಬದುಕಿನಲ್ಲಿ ಮಾನವೀಯತೆ, ನೈತಿಕ ಮೌಲ್ಯ, ಸಮಾಜದ ಸಾಮರಸ್ಯ, ಜವಬ್ದಾರಿಗಳನ್ನು ಸ್ಥಾಪಿಸುವಲ್ಲಿ, ಕೂಡಿಸುವಲ್ಲಿ ಶಿಕ್ಷಕರ ಪಾತ್ರ, ಶಿಕ್ಷಣದ ಪಾತ್ರ ಹೆಚ್ಚಿದೆ ಎಂದರು.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶರಣಪ್ಪ ವಿ.ಹಲಸೆ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಗುರಿ ಜೊತೆಗೆ ಸಮಯಪರಿಪಾಲನೆ ಮಾಡುವ ಕೌಶಲ್ಯ ಕೂಡ ಇರಬೇಕು. ನಿಮ್ಮ ಶ್ರಮದ ಮೇಲೆ ನಿಮಗೆ ನಂಬಿಕೆಯಿರಲಿ ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಪೆÇ್ರ. ರಾಮನಾಥಂ ನಾಯ್ಡು, ಅಧ್ಯಯನ ಕೇಂದ್ರದ ಡೀನ್ ಡಾ. ಎನ್.ಆರ್. ಚಂದ್ರೇಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಬಿ. ಗಣೇಶ್ ಕೆ.ಜಿ. ಕೊಪ್ಪಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles