ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್, ಬಾಗಲಕೋಟೆ ತೃತೀಯ, ಚಿಕ್ಕಬಳ್ಳಾಪುರ ಚತುರ್ಥ ಸ್ಥಾನ

ಕೊಡಗು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUDWJ) ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು(Kodagu) ಹಾಗೂ ಮಂಡ್ಯ ತಂಡಗಳು(Mandy Team) ಜಂಟಿ ಚಾಂಪಿಯನ್(Joint Champion) ಆಗಿ ಹೊರಹೊಮ್ಮಿವೆ.

ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕೊಡಗು ಹಾಗೂ ಮಂಡ್ಯ ತಂಡಗಳು ಜಂಟಿ ಚಾಂಪಿಯನ್ ಪ್ರಶಸ್ತಿಯನ್ನು ಹಂಚಿಕೊಂಡವು. ಪ್ರಥಮ ಮತ್ತು ದ್ವಿತೀಯ ಬಹುಮಾನಕ್ಕೆ ನಿಗಧಿಯಾಗಿದ್ದ ₹1.50 ಲಕ್ಷ ನಗದು ಬಹುಮಾನವನ್ನು ಎರಡು ತಂಡಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಯಿತು.

ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಕ್ರೀಡಾಕೂಟದಲ್ಲಿ ಕೊಡಗು ಹಾಗೂ ಮಂಡ್ಯ ತಂಡಗಳು ಜಂಟಿಯಾಗಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಪಂದ್ಯಾವಳಿಗೆ ಮೆರುಗು ನೀಡಿದ್ದು ವಿಶೇಷ. ಮಳೆಯ ಕಾರಣದಿಂದ ೈನಲ್ ಪಂದ್ಯ ಆಡಿಸಲು ಸಾಧ್ಯವಾಗಲಿಲ್ಲ. ಫೀಲ್ಡ್ ಸುತ್ತಲೂ ಕಾರುಗಳನ್ನು ನಿಲ್ಲಿಸಿ ಅವುಗಳ ಲೈಟ್‌ನಲ್ಲಿ ಬಾಲ್ ಔಟ್ ಪ್ರಕ್ರಿಯೆ ಮೂಲಕ ಚಾಂಪಿಯನ್ ನಿರ್ಧರಿಸಲಾಯಿತು. ಒಂದು ಬಾಲ್ ಔಟ್ ಮಾಡಿದ ಮಂಡ್ಯ ತಂಡಕ್ಕೆ ಛಾಂಪಿಯನ್ ಟ್ರೋಪಿ ನೀಡಲಾಯಿತು.

ಬಾಗಲಕೋಟೆ ತಂಡವು ತೃತೀಯ ಹಾಗೂ ಚಿಕ್ಕಬಳ್ಳಾಪುರ ಚತುರ್ಥ ಬಹುಮಾನವನ್ನು ಪಡೆದುಕೊಂಡವು. ಸರಣಿ ಶ್ರೇಷ್ಠ, ಶ್ರೇಷ್ಠ ಬೋಲರ್, 6 ಮ್ಯಾನ್ ಆ್ ದಿ ಮ್ಯಾಚ್ ಪ್ರಶಸ್ತಿಗಳು ಬಾಗಲಕೋಟೆ ತಂಡದ ಪಾಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ, ಶಾಸಕರಾದ ಡಾ.ಮಂತರ್ ಗೌಡ, ನಿಕಟಪೂರ್ವ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ರಿಪಬ್ಲಿಕ್ ನೆಟ್ ವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ, ಉದ್ಯಮಿಗಳಾದ ಎಡಿಕೇರಿ ಪ್ರಸನ್ನ ಮಾತನಾಡಿ, ರಾಜ್ಯ ಮಟ್ಟದ ಕ್ರೀಡಾಕೂಟ ಸಂಘಟಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಕೆಯುಡಬ್ಲೂೃಜೆ ರಾಜ್ಯ ಪದಾಧಿಕಾರಿಗಳಾದ ಅಜ್ಜಮಾಡ ಕುಟ್ಟಪ್ಪ, ಮತ್ತಿಕೆರೆ ಜಯರಾಂ, ಜಿ.ಸಿ.ಲೋಕೇಶ, ಸೋಮಶೇಖರ ಕೆರಗೋಡು, ಪುಂಡಲೀಕ ಬಾಳೋಜಿ, ವಾಸುದೇವ ಹೊಳ್ಳ, ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಅನು ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ರಾಕೇಶ್, ರಾಜ್ಯ ಸಮಿತಿ ಸದಸ್ಯೆ ಸವಿತಾ ರೈ ಮತ್ತಿತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು, ತಂಡಗಳ ಆಟಗಾರರು ಹಾಗೂ ವಿವಿಧ ಜಿಲ್ಲೆಗಳ ಪತ್ರಕರ್ತರು ಭಾಗವಹಿಸಿದ್ದರು.

 

 

Hot this week

BIG News : ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಬಸ್ತರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ; ನಕ್ಸಲಿಸಂ ಬಹುತೇಕ...

ವೈದ್ಯಕೀಯ ಉಪಕರಣಗಳಿಂದ ಗಂಭೀರ ಅನಾಹುತ ಪ್ರಕರಣ ಹೆಚ್ಚಳ: 2020ರಲ್ಲಿ 808 – 2025ರಲ್ಲಿ 2,176ಪ್ರಕರಣ

ನವದೆಹಲಿ: ಭಾರತದಲ್ಲಿ ವೈದ್ಯಕೀಯ ಉಪಕರಣಗಳ ಬಳಕೆಗೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳ...

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರಗೊಳ್ಳುವ ಆತಂಕ...

ವೋಲ್ಟಾಸ್ ಕಂಪನಿಯ ನೂತನ ಅಧ್ಯಕ್ಷರಾಗಿ ಸುನಿಲ್ ಡಿ’ಸೋಜಾ ನೇಮಕ: ಅಧ್ಯಕ್ಷ ಸ್ಥಾನದಿಂದ ನೋಯೆಲ್ ಟಾಟಾ ನಿರ್ಗಮನ!

ಮುಂಬೈ: ಟಾಟಾ ಸಮೂಹದ ಪ್ರಮುಖ ಕಂಪನಿಗಳಲ್ಲಿ ಒಂದಾದ ವೋಲ್ಟಾಸ್ (Voltas) ಸಂಸ್ಥೆಯಲ್ಲಿ...

Topics

BIG News : ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಬಸ್ತರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ; ನಕ್ಸಲಿಸಂ ಬಹುತೇಕ...

ವೈದ್ಯಕೀಯ ಉಪಕರಣಗಳಿಂದ ಗಂಭೀರ ಅನಾಹುತ ಪ್ರಕರಣ ಹೆಚ್ಚಳ: 2020ರಲ್ಲಿ 808 – 2025ರಲ್ಲಿ 2,176ಪ್ರಕರಣ

ನವದೆಹಲಿ: ಭಾರತದಲ್ಲಿ ವೈದ್ಯಕೀಯ ಉಪಕರಣಗಳ ಬಳಕೆಗೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳ...

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರಗೊಳ್ಳುವ ಆತಂಕ...

ಜೆರುಸಲೇಂ: ಇಸ್ರೇಲ್‌ನಲ್ಲಿ(Isral) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ರಾಜಕೀಯ ಮೈತ್ರಿಕೂಟಕ್ಕೆ ಸ್ಪಷ್ಟ...

ಸ್ವಾಮಿ ವಿವೇಕಾನಂದರ ಪೋಸ್ಟರ್‌ಗೆ ಅವಹೇಳನ: ಇಬ್ಬರು ವಿದ್ಯಾರ್ಥಿನಿಯರನ್ನು ವಿಶ್ವವಿದ್ಯಾಲಯದಿಂದ ಹೊರಹಾಕಿದ ಪ್ರೆಸಿಡೆನ್ಸಿ!

ಕೋಲ್ಕತ್ತಾ: ಸ್ವಾಮಿ ವಿವೇಕಾನಂದರ(Swamy Vivekanand) ಭಾವಚಿತ್ರವಿರುವ ಪೋಸ್ಟರ್‌ಗೆ ಅವಹೇಳನಕಾರಿ ಬರಹಗಳನ್ನು ಬರೆದ...

Related Articles