ಬೆಂಗಳೂರು : ಭಾರತ ಸರ್ಕಾರದ (Government of India)ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಉದ್ಯೋಗ ಮಹಾನಿರ್ದೇಶನಾಲಯದ ಅಡಿಯಲ್ಲಿರುವ ‘ವಿಕಲಚೇತನರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ’ವು ವಿಕಲಚೇತನ/ದಿವ್ಯಾಂಗ ನಿರುದ್ಯೋಗಿ ಯುವಕ-ಯುವತಿಯರಿಗಾಗಿ 2026 ನೇ ಸೆಪ್ಟೆಂಬರ್ 10 ರ ಗುರುವಾರ ವಿಶೇಷ “ಉದ್ಯೋಗ ಮೇಳ-2026″(Job Fair – 2026) ಅನ್ನು ಆಯೋಜಿಸಿದೆ.
ಈ ಉದ್ಯೋಗ ಮೇಳವು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಪೀಣ್ಯದಲ್ಲಿರುವ ವಿಕಲಚೇತನರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ, ನಂ. 417, 1ನೇ ಕ್ರಾಸ್, 1ನೇ ಸ್ಟೇಜ್, ಪೀಣ್ಯ ಪೊಲೀಸ್ ಸ್ಟೇಷನ್ ಹಿಂದುಗಡೆ, ಪೀಣ್ಯ, ಬೆಂಗಳೂರು – 560058 ಇಲ್ಲಿ ನಡೆಯಲಿದೆ.
ಈ ಉದ್ಯೋಗ ಮೇಳದಲ್ಲಿ ಬಿಗ್ ಬಾಸ್ಕೆಟ್ (Big Basket – Tata Enterprises), ಮಾಡೆನಿಕ್ ಲೈಫ್‌ಸ್ಟೈಲ್ (Modenik Lifestyle) ಹಾಗೂ ಎ ಟಿಪಿಕಲ್ ಅಡ್ವಾಂಟೇಜ್ (A Typical Advantage) ನಂತಹ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳುತ್ತಿದ್ದು, 100ಕ್ಕೂ ಅಧಿಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿವೆ.
ಈ ಉದ್ಯೋಗ ಮೇಳಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳ ನಡೆಯುವ ದಿನದಂದೇ ನೇರವಾಗಿ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು.
ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಸ್ವ ವಿವರ /ರೆಸ್ಯೂಮ್ (Resume) ಹಾಗೂ ಅಗತ್ಯ ಶೈಕ್ಷಣಿಕ ಮತ್ತು ಇತರ ದಾಖಲೆಗಳೊಂದಿಗೆ (Certificates) ಹಾಜರಾಗುವುದು ಎಂದು ಕೇಂದ್ರದ ಮುಖ್ಯಸ್ಥರಾದ ಶ್ರೀ ಶಿವಶಾಂತವೀರ ದಿವಾಕರ (ಕೇ.ಸಾ.ಸೇ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
