ಸಿಗಾ ಗಾರ್ಮೆಂಟ್ಸ್ ಬಿ2ಬಿ ಮೇಳ ಯಶಸ್ವಿ; ₹100 ಕೋಟಿಗೂ ಅಧಿಕ ವ್ಯವಹಾರ ಬುಕ್ಕಿಂಗ್, ವ್ಯಾಪಕ ಪ್ರಶಂಸೆ

ಮೂರು ದಿನಗಳ ಮೇಳಕ್ಕೆ ಅಭೂತಪೂರ್ವ ಸ್ಪಂದನೆ – ಪ್ರಮುಖ ಗಾರ್ಮೆಂಟ್ ಉದ್ಯಮಿಗಳಿಗೆ ಸನ್ಮಾನ;
ಸಿಗಾ ಅಧ್ಯಕ್ಷ ಅನುರಾಗ್ ಸಿಂಗ್ಲಾ ನೇತೃತ್ವದ ತಂಡದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

ನಗರದ ಅರಮನೆ ಮೈದಾನದ ಪ್ರಿನ್ಸ್ ಶ್ರೈನ್‌ನಲ್ಲಿ (Prince Shine) ಮೂರು ದಿನಗಳ ಕಾಲ ನಡೆದ ದೇಶದ ಪ್ರತಿಷ್ಠಿತ 31ನೇ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ (SIGA) ಬಿ2ಬಿ ಗಾರ್ಮೆಂಟ್ಸ್ ಮೇಳ (Garments Mela) ಗುರುವಾರ ಯಶಸ್ವಿಯಾಗಿ ಸಮಾರೋಪಗೊಂಡಿತು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರಮುಖ ಗಾರ್ಮೆಂಟ್ ತಯಾರಕರು, ಬ್ರ್ಯಾಂಡ್ ಮಾಲೀಕರು, ವಿತರಕರು ಹಾಗೂ ಸಾವಿರಾರು ಜವಳಿ ವ್ಯಾಪಾರಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಮೇಳವು ಅಭೂತಪೂರ್ವ ಯಶಸ್ಸು (Success) ಕಂಡಿತು.

ಮೂರು ದಿನಗಳ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 150ಕ್ಕೂ ಅಧಿಕ ಪ್ರಮುಖ ಬ್ರ್ಯಾಂಡ್‌ಗಳು, 90ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು ಹಾಗೂ ಸಾವಿರಾರು ಖರೀದಿದಾರರು ಭಾಗವಹಿಸಿ ವ್ಯಾಪಾರ ವಹಿವಾಟು ನಡೆಸಿದರು. ಮೇಳದಲ್ಲಿ ₹100 ಕೋಟಿಗೂ ಅಧಿಕ ಮೌಲ್ಯದ ವ್ಯವಹಾರ ಬುಕ್ಕಿಂಗ್ ನಡೆದಿರುವುದು ಈ ಬಾರಿಯ ಪ್ರಮುಖ ಸಾಧನೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಗಾರ್ಮೆಂಟ್ಸ್ ಮತ್ತು ಜವಳಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರಮುಖ ಗಾರ್ಮೆಂಟ್ ಉದ್ಯಮಿಗಳು ಹಾಗೂ ವಿವಿಧ ಬ್ರ್ಯಾಂಡ್‌ಗಳ ಮಾಲೀಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ (SIGA) ಅಧ್ಯಕ್ಷ ಅನುರಾಗ್ ಸಿಂಗ್ಲಾ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಮೇಳದ ಯಶಸ್ವಿ ಆಯೋಜನೆಗಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ SIGA ಉಪಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಂಪೂರ್ಣ SIGA ತಂಡದ ಸೇವೆಯನ್ನು ವೇದಿಕೆಯಲ್ಲಿ ಶ್ಲಾಘಿಸಿ ಗೌರವಿಸಲಾಯಿತು.

ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆಯಾಗಿ ಸುಮಾರು 30 ವೃತ್ತಿಪರ ಫ್ಯಾಷನ್ ಮಾಡೆಲ್‌ಗಳು ದೇಶದ ವಿವಿಧ ಹೆಸರಾಂತ ಬ್ರ್ಯಾಂಡ್‌ಗಳ ನೂತನ ಉಡುಪು ಸಂಗ್ರಹಗಳನ್ನು ವಾಕ್ ಮೂಲಕ ಪ್ರದರ್ಶಿಸಿದರು. ಮಹಿಳೆಯರ ಉಡುಪುಗಳು, ಹಬ್ಬ ಹಾಗೂ ಮದುವೆ ವಿಶೇಷ ವಸ್ತ್ರಗಳು, ಕ್ಯಾಶುಯಲ್, ಫಾರ್ಮಲ್, ಎಥ್ನಿಕ್ ಹಾಗೂ ಫ್ಯಾಷನ್ ಉಡುಪುಗಳ ಪ್ರದರ್ಶನ ವ್ಯಾಪಾರಿಗಳು ಮತ್ತು ಸಂದರ್ಶಕರಿಂದ ಉತ್ತಮ ಮೆಚ್ಚುಗೆ ಪಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ SIGA ಅಧ್ಯಕ್ಷ ಅನುರಾಗ್ ಸಿಂಗ್ಲಾ, ದೇಶದ ಗಾರ್ಮೆಂಟ್ಸ್ ಮತ್ತು ಜವಳಿ ಉದ್ಯಮಕ್ಕೆ ಬಲ ತುಂಬುವ ಉದ್ದೇಶದಿಂದ ಆಯೋಜಿಸಲಾದ ಈ ಮೇಳಕ್ಕೆ ದೇಶದ ವಿವಿಧ ರಾಜ್ಯಗಳಿಂದ ದೊರೆತ ಅಭೂತಪೂರ್ವ ಸ್ಪಂದನೆ ಸಂತಸ ತಂದಿದೆ. ಹೊಸ ಬ್ರ್ಯಾಂಡ್‌ಗಳು, ಹೊಸ ವಿನ್ಯಾಸಗಳು ಹಾಗೂ ವ್ಯಾಪಾರಾವಕಾಶಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ಈ ಮೇಳವು ಉದ್ಯಮದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.

ಮೇಳದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಪ್ರದರ್ಶಕರು, ಬ್ರ್ಯಾಂಡ್‌ಗಳು, ವ್ಯಾಪಾರಿಗಳು, ಖರೀದಿದಾರರು, ಪ್ರಾಯೋಜಕರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಮುಂದಿನ ವರ್ಷ ಇನ್ನಷ್ಟು ವೈಭವ, ಹೆಚ್ಚಿನ ಬ್ರ್ಯಾಂಡ್‌ಗಳು ಮತ್ತು ಅಂತರರಾಷ್ಟ್ರೀಯ ಮಟ್ಟದ ಭಾಗವಹಿಸುವಿಕೆಯೊಂದಿಗೆ SIGA ಗಾರ್ಮೆಂಟ್ಸ್ ಮೇಳವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಮೂರು ದಿನಗಳ ಈ ಮೇಳವು ಕರ್ನಾಟಕ ಸೇರಿದಂತೆ ದೇಶದ ಜವಳಿ ಮತ್ತು ಗಾರ್ಮೆಂಟ್ಸ್ ಉದ್ಯಮಕ್ಕೆ ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಿದ್ದು, ಭವಿಷ್ಯದ ವ್ಯವಹಾರ ವಿಸ್ತರಣೆಗೆ ಪರಿಣಾಮಕಾರಿ ವೇದಿಕೆಯಾಗಿ ಮತ್ತೊಮ್ಮೆ ತನ್ನ ಮಹತ್ವವನ್ನು ಸಾಬೀತುಪಡಿಸಿದೆ.

Hot this week

ವಿಧಾನಪರಿಷತ್ ಸಭಾಪತಿಗಳಾಗಿ ಸಲೀಂ ಅಹ್ಮದ್ ಆಯ್ಕೆ

ಬೆಂಗಳೂರು: ವಿಧಾನ ಪರಿಷತ್‍ನ(Legislative Council) ನೂತನ ಸಭಾಪತಿಗಳಾಗಿ ಸಲೀಂ ಅಹ್ಮದ್(Saleem Ahamed)...

ಮುಂದಿನ ದಿನಗಳಲ್ಲಿ ವಿಧಾನಸಭೆ ಕಾರ್ಯಕಲಾಪವನ್ನು ಕಾಗದ ರಹಿತ ಮಾಡಲಾಗುವುದು: ಜಿ.ಎಸ್.ಪಾಟೀಲ

ಬೆಂಗಳೂರು: ಆದಷ್ಟು ಬೇಗ ವಿಧಾನಸಭೆಯ ಕಾರ್ಯಕಲಾಪವನ್ನು(Proceeding/Activites) ಕಾಗದ ರಹಿತವನ್ನಾಗಿ ಮಾಡಲು ಇ-ಸಂವಿಧಾನ...

ವಿಧಾನಸಭೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ ಆಯ್ಕೆ

ಬೆಂಗಳೂರು: ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಜರುಗಿನ ಸಭಾಧ್ಯಕ್ಷರ ಚುನಾವಣೆಯಲ್ಲಿ ರೋಣ ವಿಧಾನಸಭಾ...

ಭಾರತ್ ಜೋಡೋ ಯುವ ಸಂಘ’ಕ್ಕೆ ಆಕರ್ಷಕ ಲೋಗೋ ವಿನ್ಯಾಸ ಸ್ಪರ್ಧೆ: ಸಾರ್ವಜನಿಕರು, ಕಲಾವಿದರಿಂದ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು...

Topics

ವಿಧಾನಪರಿಷತ್ ಸಭಾಪತಿಗಳಾಗಿ ಸಲೀಂ ಅಹ್ಮದ್ ಆಯ್ಕೆ

ಬೆಂಗಳೂರು: ವಿಧಾನ ಪರಿಷತ್‍ನ(Legislative Council) ನೂತನ ಸಭಾಪತಿಗಳಾಗಿ ಸಲೀಂ ಅಹ್ಮದ್(Saleem Ahamed)...

ಮುಂದಿನ ದಿನಗಳಲ್ಲಿ ವಿಧಾನಸಭೆ ಕಾರ್ಯಕಲಾಪವನ್ನು ಕಾಗದ ರಹಿತ ಮಾಡಲಾಗುವುದು: ಜಿ.ಎಸ್.ಪಾಟೀಲ

ಬೆಂಗಳೂರು: ಆದಷ್ಟು ಬೇಗ ವಿಧಾನಸಭೆಯ ಕಾರ್ಯಕಲಾಪವನ್ನು(Proceeding/Activites) ಕಾಗದ ರಹಿತವನ್ನಾಗಿ ಮಾಡಲು ಇ-ಸಂವಿಧಾನ...

ವಿಧಾನಸಭೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ ಆಯ್ಕೆ

ಬೆಂಗಳೂರು: ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಜರುಗಿನ ಸಭಾಧ್ಯಕ್ಷರ ಚುನಾವಣೆಯಲ್ಲಿ ರೋಣ ವಿಧಾನಸಭಾ...

ಕರ್ನಾಟಕದ ಇಬ್ಬರು ಅಧಿಕಾರಿಗಳಿಗೆ ‘ರಾಷ್ಟ್ರಪತಿಗಳ ಅಗ್ನಿಶಾಮಕ ಶ್ಲಾಘನೀಯ ಸೇವಾ ಪದಕ’ ಗೌರವ

ಬೆಂಗಳೂರು: 2026ನೇ ಸಾಲಿನ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪ್ರತಿಷ್ಠಿತ “ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ...

ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕರೆ

224 ಶಾಸಕರೂ ನನಗೆ ಒಂದೇ, ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು ಕೆಲಸ...

ತಂತ್ರಜ್ಞಾನ ಎಷ್ಟೇ ಬೆಳೆದರು ರಕ್ತ ತಯಾರಿಸಲು ಸಾಧ್ಯವಿಲ್ಲ – ನ್ಯಾಯಮೂರ್ತಿ ಎಸ್.ಜಿ. ಪಂಡಿತ್

ದಿವಂಗತ ನಿರ್ಮಲಾ ಬಾಳಿಗಾ ನೆನಪಿನಲ್ಲಿ ರಕ್ತದಾನ ಶಿಬಿರ ಸಂಪನ್ನಬೆಂಗಳೂರು: ರಕ್ತದಾನವನ್ನು(Blood Donation) "ಮಹಾದಾನ"...

Related Articles