ಮಾಜಿ ಸಚಿವೆ ರಾಣೀ ಸತೀಶ್- ಕಲಾ ಪರಂಪರೆಯನ್ನು ಉಳಿಸಿ ಬೆಳೆಸಲು ಸೂಕ್ತ ರೀತಿಯಲ್ಲಿ ನೆರವಾಗೇಕು

ಬೆಂಗಳೂರು,ನ.29 ; ರವೀಂದ್ರ ಕಲಾಕ್ಷೇತ್ರದಲ್ಲಿ ಶಿವಲೀಲಾ ಕಲ್ಚರಲ್ (Shivaleela Cultural) ಮತ್ತು ಚಾರಿಟೇಬಲ್ ಟ್ರಸ್ಟ್ (Charitable Trust) ನಿಂದ ಸಿರಿಗನ್ನಡಂ ಗೆಲ್ಗೆ ಶ್ರೀ ಗಂಧದ ನಾಡಿನ ಗತವೈಭವ ಸಾರುವ ನೃತ್ಯರೂಪಕ ಆಯೋಜಿಸಲಾಗಿತ್ತು.ಪ್ರಥಮವಾಗಿ ಕಟ್ಟಿದ ಮಯೂರ ವರ್ಮ ಕನ್ನಡ ನಾಡನ್ನು ಬಗೆ, ಗಂಗರ (Gangas) ಕಾಲ ಘಟ್ಟ, ವೈರಾಗ್ಯ ಮೂರ್ತಿಯ ಪ್ರತಿರೂಪವಾಗಿ ಹೊರಹೊಮ್ಮಿದ ಶ್ರವಣಬೆಳಗೊಳದ ಬಾಹುಬಲಿ, (Bahubali) ಚಾಲುಕ್ಯ ದೊರೆ (Chalukyas) ಇಮ್ಮಡಿ ಪುಲಿಕೇಶಿಯ (Immadi Pulikeshi) ಶೌರ್ಯ ಪರಾಕ್ರಮ, ಹೊಯ್ಸಳ ರಾಜ ವಿಷ್ಣುವರ್ಧನನಿಗೆ “ತಲಕಾಡುಗೊಂಡ” ಬಿರುದು ಬಂದದ್ದು, ಶರಣ ಸಂಸ್ಕೃತಿಯ ಬೀಡು ನಮ್ಮ ನಾಡು ಎಂಬ ರೂಪಕವನ್ನು ಕಲಾವಿದರು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದರು. 

ಮಾಜಿ ಸಚಿವೆ ರಾಣಿ ಸತೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕಲೆ, ಸಂಸ್ಕೃತಿ, ರಂಗಭೂಮಿ ಚಟುವಟಿಕೆ ನಶಿಸುತ್ತಿದ್ದು, ಸರ್ಕಾರ ನಮ್ಮ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಲು ಸೂಕ್ತ ರೀತಿಯಲ್ಲಿ ನೆರವಾಗೇಕು. ಕಲಾವಿದರಿಂದ ಕಲೆ ಉಳಿಯುತ್ತದೆ, ಬೆಳೆಯುತ್ತದೆ ಎಂದರು. 

ಟ್ರಸ್ಟ್ ಅಧ್ಯಕ್ಷರಾದ ಎಂ.ಎಸ್. ಶಾಂತಲ ಮಾತನಾಡಿ, 2014ರಲ್ಲಿ ಪ್ರಾರಂಭವಾದ ಸಂಸ್ಥೆ ನೂರಾರು ಕಲಾವಿದರು ನಮ್ಮಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಕಲೆ, ಸಂಸ್ಕೃತಿ ಉಳಿಸಲು ಪ್ರಯತ್ನಿಸುತ್ತಿದ್ದೇವೆ. ಸಿರಿಗನ್ನಡಂಗೆಲ್ಗೆ ಎಂಬ ನೃತ್ಯರೂಪಕ ಪ್ರದರ್ಶನಕ್ಕೆ ಇದಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದರು. 

ಖ್ಯಾತ ಚಿತ್ರ ಸಾಹಿತಿ ಸಿ.ವಿ ಶಿವಶಂಕರ್ ಸಾಹಿತ್ಯ ರಚಿಸಿದ್ದು, ಎರಡು ಗಂಟೆಗಳ ನೃತ್ಯರೂಪಕದಲ್ಲಿ ನೂರಾರು ಕಲಾವಿದರು ತಮ್ಮ ಕಲೆಯನ್ನು ಪ್ರಸ್ತುತಪಡಿಸಿದ್ದಾರೆ. ಮಯೂರವರ್ಮ, ಬಾಹುಬಲಿ, ನಾಡಪ್ರಭು ಕೆಂಪೇಗೌಡರು, ಮೈಸೂರು ಮಹಾರಾಜರು, ಕಿತ್ತೂರು ರಾಣಿ ಚೆನ್ನಮ್ಮ ಅವರ ಇತಿಹಾಸದ ಮೇಲೆ ಬೆಳಕು ಚಲ್ಲುವ ಗತವೈಭವ ಇದಾಗಿದೆ. ಇದರ ಜೊತೆಗೆ ಶ್ರೀರಾಮಚರಣಂ, ನೃತ್ಯಭಾರತ, ಪ್ರಕೃತಿ, ಸತ್ಯವೇ ಭಗವಂತ, ಸಿರಿಗನ್ನಡಂ ಗೆಲ್ಗೆ, ಶ್ರೀಕೃಷ್ಣಂ ಒಂದೇ ಜಗದ್ಗುರು, ಬುದ್ದಂ ಶರಣಂ ಗಚ್ಚಾಮಿ ಯಂತಹ ನೃತ್ಯರೂಪಕ ಪ್ರಸ್ತುತಪಡಿಸಿದ್ದೇವೆ ಎಂದು ಹೇಳಿದರು.

ಕಾರ್ಯದರ್ಶಿ ಪರಿಮಳ ಎಸ್. ಮಾತನಾಡಿ, ನಮ್ಮ ನೃತ್ಯರೂಪಕಗಳು ದೇಶ, ವಿದೇಶಗಳಲ್ಲಿ ಪ್ರದರ್ಶನ ಕಂಡಿದೆ. ನಾಡಿನ ಕಲೆ, ಸಂಸ್ಕೃತಿ ವಿಶ್ವ ಮಟ್ಟದಲ್ಲಿ ಪಸರಿಸಬೇಕು ಎಂಬ ಬಯಕೆ ಹೊಂದಿದ್ದೇವೆ. ಇಂದಿನ ಮಕ್ಕಳಿಗೆ ನಾಡಿನ ಇತಿಹಾಸದ ಅರಿವು ಮೂಡಿಸುವ ರೂಪಕ ಇದಾಗಿದೆ ಎಂದರು. 
 
ಹಿರಿಯ ನಟ ಶ್ರೀನಾಥ್, ಅಧ್ಯಕ್ಷರಾದ ಎಂ.ಎಸ್. ಶಾಂತಲರವರು, ಕಾರ್ಯದರ್ಶಿ ಪರಿಮಳ ಎಸ್.ರವರು, ಗಾಯಕಿ ಲಕ್ಷ್ಮಿನಾಗರಾಜ್ ಉಪಸ್ಥಿತರಿದ್ದರು.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles