ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಎರಡು ಬಣಗಳ ವಿಲೀನ ವಿಚಾರಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pavar) ಅವರ ನಿಧನದ ಬಳಿಕ ಎರಡೂ ಬಣಗಳು ಒಂದಾಗುವ ಮಾತುಕತೆಗೆ ಪೂರ್ಣವಿರಾಮ ಬಿದ್ದಿದೆ ಎಂದು ಎನ್‌ಸಿಪಿ (ಶರದ್‌ಚಂದ್ರ ಪವಾರ್) ಪಕ್ಷದ ಕಾರ್ಯಾಧ್ಯಕ್ಷೆ ಹಾಗೂ ಸಂಸದೆ ಸುಪ್ರಿಯಾ ಸುಳೆ(Supriya Sule) ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 14ರಂದು ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಜಿತ್ ಪವಾರ್ ಬದುಕಿದ್ದಾಗ ಎರಡೂ ಬಣಗಳ ವಿಲೀನದ ಕುರಿತು ಮಾತುಕತೆ ನಡೆದಿತ್ತು. ಅಷ್ಟೇ ಅಲ್ಲದೆ, ವಿಲೀನಕ್ಕೆ ಸಂಬಂಧಿಸಿದ ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಆದರೆ ಅಜಿತ್ ಪವಾರ್ ನಿಧನದ ಬಳಿಕ ಈ ವಿಚಾರವನ್ನು ತಮ್ಮ ಮನಸ್ಸಿನಲ್ಲಿ ಹಾಗೂ ಪಕ್ಷದ ಮಟ್ಟದಲ್ಲಿ ಅಂತ್ಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಅಜಿತ್ ಪವಾರ್ ಇದ್ದಾಗ ವಿಲೀನ ಮಾತುಕತೆ ನಡೆದಿತ್ತು

2023ರಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯಲ್ಲಿ (NCP) ಭಿನ್ನಾಭಿಪ್ರಾಯ ಉಂಟಾಗಿ ಪಕ್ಷ ಎರಡು ಬಣಗಳಾಗಿ ವಿಭಜನೆಯಾಗಿತ್ತು. ಅಜಿತ್ ಪವಾರ್ ತಮ್ಮ ಬೆಂಬಲಿಗ ಶಾಸಕರೊಂದಿಗೆ ಪ್ರತ್ಯೇಕ ಬಣ ರಚಿಸಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವನ್ನು ಸೇರಿದ್ದರು. ಮತ್ತೊಂದೆಡೆ ಶರದ್ ಪವಾರ್ ತಮ್ಮ ಬಣದ ನಾಯಕತ್ವ ಮುಂದುವರಿಸಿದ್ದರು.

ಬಳಿಕ ಎರಡೂ ಬಣಗಳು ಮತ್ತೆ ಒಂದಾಗುವ ಸಾಧ್ಯತೆಗಳ ಬಗ್ಗೆ ಹಲವು ಬಾರಿ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿದ್ದವು. ಅಜಿತ್ ಪವಾರ್ ಅವರಿದ್ದಾಗ ಈ ಕುರಿತು ಗಂಭೀರ ಮಾತುಕತೆ ನಡೆದಿತ್ತು. ಆದರೆ ಜನವರಿ 2026ರಲ್ಲಿ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ಬಳಿಕ ವಿಲೀನದ ಪ್ರಕ್ರಿಯೆ ಅನಿಶ್ಚಿತತೆಗೆ ಸಿಲುಕಿತ್ತು.

ಯಾವುದೇ ಸಂಪರ್ಕ ಬಂದಿಲ್ಲ: ಸುಪ್ರಿಯಾ ಸುಳೆ

ವಿಲೀನದ ಕುರಿತು ಅಜಿತ್ ಪವಾರ್ ಬಣದ ನಾಯಕರಿಂದ ತಮಗೆ ಯಾವುದೇ ಅಧಿಕೃತ ಸಂಪರ್ಕ ಬಂದಿಲ್ಲ ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ.

“ಅಜಿತ್ ಪವಾರ್ ಬಣದಿಂದ ನನಗೆ ಒಂದೇ ಒಂದು ಫೋನ್ ಕರೆ, ವಾಟ್ಸಾಪ್ ಸಂದೇಶ, ಎಸ್‌ಎಂಎಸ್, ಪತ್ರ ಅಥವಾ ಇಮೇಲ್ ಬಂದಿಲ್ಲ. ವಿಲೀನದ ಕುರಿತು ಯಾರೂ ನನ್ನನ್ನು ಸಂಪರ್ಕಿಸಿಲ್ಲ ಅಥವಾ ಭೇಟಿಯಾಗಿಲ್ಲ” ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಕಳೆದ ಹಲವು ತಿಂಗಳುಗಳಿಂದ ತಮ್ಮ ಪಕ್ಷದ ಯಾವುದೇ ವಕ್ತಾರರು ವಿಲೀನದ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎನ್‌ಡಿಎ ಸೇರುವ ಊಹಾಪೋಹಕ್ಕೂ ತಿರುಗೇಟು

ಸುಪ್ರಿಯಾ ಸುಳೆ ತಮ್ಮ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೇರುವ ಸಾಧ್ಯತೆಗಳ ಕುರಿತ ಊಹಾಪೋಹಗಳನ್ನೂ ತಳ್ಳಿಹಾಕಿದ್ದಾರೆ.

ಎನ್‌ಡಿಎ ಸೇರುವ ಕುರಿತು ಯಾವುದೇ ಮಾತುಕತೆ ಅಥವಾ ಪ್ರಸ್ತಾಪವೇ ಆರಂಭವಾಗಿಲ್ಲ. ಹೀಗಿರುವಾಗ ಅದಕ್ಕೆ ಪೂರ್ಣವಿರಾಮ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ವೈಯಕ್ತಿಕ ಸಂಬಂಧ ಮತ್ತು ರಾಜಕೀಯವನ್ನು ಬೆರೆಸಬೇಡಿ

ಅಜಿತ್ ಪವಾರ್ ಅವರೊಂದಿಗಿನ ಸಂಬಂಧ ರಾಜಕೀಯಕ್ಕಿಂತ ಹೆಚ್ಚಾಗಿ ಪ್ರೀತಿ ಮತ್ತು ಆತ್ಮೀಯತೆಯಿಂದ ಕೂಡಿತ್ತು ಎಂದು ಸುಪ್ರಿಯಾ ಸುಳೆ ಭಾವುಕರಾಗಿ ಹೇಳಿದ್ದಾರೆ.

“ನಿಮಗೆ ಇದು ರಾಜಕೀಯ ಚರ್ಚೆ ಅಥವಾ ವದಂತಿಯಾಗಿರಬಹುದು. ಆದರೆ ನಮಗೆ ಇದು ಭಾವನೆಗಳ ವಿಚಾರ. ನನ್ನ ಸಹೋದರನೊಂದಿಗಿನ ಸಂಬಂಧ ಪ್ರೀತಿ ಮತ್ತು ಆತ್ಮೀಯತೆಯಿಂದ ಕೂಡಿತ್ತು. ಅವರು ಈಗ ನಮ್ಮೊಂದಿಗಿಲ್ಲ. ಹೀಗಿರುವಾಗ ವಿಲೀನದ ಬಗ್ಗೆ ಚರ್ಚಿಸುವುದರಲ್ಲಿ ಏನು ಅರ್ಥ?” ಎಂದು ಪ್ರಶ್ನಿಸಿದ್ದಾರೆ.

ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಸೇರಿದಂತೆ ಕುಟುಂಬದವರೊಂದಿಗೆ ವೈಯಕ್ತಿಕ ಸಂಬಂಧಗಳನ್ನು ರಾಜಕೀಯ ವಿಚಾರಗಳೊಂದಿಗೆ ಬೆರೆಸಬಾರದು ಎಂದೂ ತಿಳಿಸಿದ್ದಾರೆ.

ಮತ್ತೆ ಒಂದಾಗುತ್ತಾರೆಯೇ ಪವಾರ್ ಕುಟುಂಬದ ರಾಜಕೀಯ ಬಣಗಳು?

ಇತ್ತೀಚಿನ ದಿನಗಳಲ್ಲಿ ಎನ್‌ಸಿಪಿಯ ಎರಡು ಬಣಗಳು ಮತ್ತೆ ಒಂದಾಗುವ ಕುರಿತು ಮಹಾರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅಜಿತ್ ಪವಾರ್ ಬಣದ ಹಿರಿಯ ನಾಯಕರಾದ ಪ್ರಫುಲ್ ಪಟೇಲ್, ಸುನಿಲ್ ತಟ್ಕರೆ ಮತ್ತು ಛಗನ್ ಭುಜಬಳ ಅವರು ನವೆಂಬರ್ 1ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಈ ಬೆಳವಣಿಗೆಯೂ ವಿಲೀನದ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿತ್ತು.

ಇದರ ನಡುವೆ ಸುನೇತ್ರಾ ಪವಾರ್ ಅವರು ತಮ್ಮ ಬಣದ ಶಾಸಕರೊಂದಿಗೆ ಸಭೆ ನಡೆಸಿದ್ದರು. ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದ ಸಂಜಯ್ ರಾವತ್ ಕೂಡ ಅಜಿತ್ ಪವಾರ್ ಬಣದ 20ರಿಂದ 22 ಶಾಸಕರು ಪಕ್ಷ ತೊರೆಯುವ ಸಾಧ್ಯತೆ ಇದೆ ಎಂಬ ಹೇಳಿಕೆ ನೀಡಿದ್ದರು.

ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆಯೂ ಸುಪ್ರಿಯಾ ಸುಳೆ ವಿಲೀನದ ವಿಚಾರಕ್ಕೆ ಸ್ಪಷ್ಟವಾಗಿ ಪೂರ್ಣವಿರಾಮ ಹಾಕಿದ್ದಾರೆ.

Hot this week

ಅಲ್ ಅಮೆರತ್:  ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ 2026ರ...

ಬೆಂಗಳೂರು: ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ(Andhra Government School) 10ನೇ ತರಗತಿ ವಿದ್ಯಾರ್ಥಿನಿ...

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ 2018ರಲ್ಲಿ ಭಾರೀ ಸಂಚಲನ ಮೂಡಿಸಿದ್ದ ‘ಸ್ಯಾಂಡ್‌ಪೇಪರ್ ಗೇಟ್’...

ನವದೆಹಲಿ: ಭಾರತದ ಪ್ರಮುಖ ಉದ್ಯಮ ಸಮೂಹಗಳಲ್ಲಿ ಒಂದಾದ ಟಾಟಾ ಗ್ರೂಪ್‌ನ ಮಾತೃಸಂಸ್ಥೆ...

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bangalore) ಹಾಡಹಗಲೇ ಮತ್ತೊಂದು ಭೀಕರ ಕೊಲೆ ನಡೆದಿದೆ....

Topics

ಅಲ್ ಅಮೆರತ್:  ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ 2026ರ...

ಬೆಂಗಳೂರು: ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ(Andhra Government School) 10ನೇ ತರಗತಿ ವಿದ್ಯಾರ್ಥಿನಿ...

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ 2018ರಲ್ಲಿ ಭಾರೀ ಸಂಚಲನ ಮೂಡಿಸಿದ್ದ ‘ಸ್ಯಾಂಡ್‌ಪೇಪರ್ ಗೇಟ್’...

ನವದೆಹಲಿ: ಭಾರತದ ಪ್ರಮುಖ ಉದ್ಯಮ ಸಮೂಹಗಳಲ್ಲಿ ಒಂದಾದ ಟಾಟಾ ಗ್ರೂಪ್‌ನ ಮಾತೃಸಂಸ್ಥೆ...

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bangalore) ಹಾಡಹಗಲೇ ಮತ್ತೊಂದು ಭೀಕರ ಕೊಲೆ ನಡೆದಿದೆ....

ನವದೆಹಲಿ: ಡಿಜಿಟಲ್ ಅರೆಸ್ಟ್(Digital Arrest) ಹೆಸರಿನಲ್ಲಿ ಸೈಬರ್ ವಂಚಕರು ನಡೆಸುತ್ತಿರುವ ಜಾಲಕ್ಕೆ...

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ...

ಹೈದರಾಬಾದ್: ಗಿಗ್ ಕಾರ್ಮಿಕರ (Gig Workers) ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ...

Related Articles